ಈ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ 5 ನಿಮಿಷಗಳಲ್ಲಿ ಕಡಿಮೆಯಾಗುತ್ತೆ
ಹೊಟ್ಟೆ ಉಬ್ಬರ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿದೆ. ಆದರೆ ಇದರಿಂದ ಮುಕ್ತಿ ಪಡೆಯಲು ಹಲವಾರು ರೀತಿಯ ಔಷಧಿಗಳ ಸೇವನೆ ಮಾಡುವ ಬದಲು, ಮನೆಯಲ್ಲಿಯೇ ಸಿಗುವ ನಾಲ್ಕು ಪದಾರ್ಥಗಳಿಂದ ಮುಕ್ತಿ ಕಂಡುಕೊಳ್ಳಬಹುದು. ಹೌದು, ಒಂದು ನೈಸರ್ಗಿಕ ವಿಧಾನಗಳ ಮೂಲಕ, ಇಂತಹ ಸಮಸ್ಯೆಗೆ ನಿಮಿಷಗಳಲ್ಲಿ ಮುಕ್ತಿ ನೀಡಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ನೇಹಾ ಸಹಾಯ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು ಈ ಕುರಿತು ಮತ್ತಷ್ಟು ಮಾಹಿತಿ ಪಡೆಯಲು ಸ್ಟೋರಿ ಓದಿ.

ಇತ್ತೀಚಿನ ದಿನಗಳಲ್ಲಿ, ಹೆಚ್ಚಿನವರಲ್ಲಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು (Digestive problem) ಹೆಚ್ಚುತ್ತಿದೆ. ಅದರಲ್ಲಿಯೂ ಹೊಟ್ಟೆ ಉಬ್ಬರ (Bloating) ಹಲವರಲ್ಲಿ ಕಂಡುಬರುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕೆಲವೊಮ್ಮೆ ಈ ಸಮಸ್ಯೆ ಎಷ್ಟು ಹೆಚ್ಚಾಗುತ್ತದೆ ಎಂದರೆ ಇದರಿಂದ ಉಸಿರಾಟದ ತೊಂದರೆಯೂ ಉಂಟಾಗುತ್ತದೆ. ಹಾಗಾಗಿ ಇದನ್ನು ನಿಯಂತ್ರಿಸುವ ಸಲುವಾಗಿ ವಿವಿಧ ರೀತಿಯ ಔಷಧಿಗಳ ಸೇವನೆ ಮಾಡುತ್ತಾರೆ. ಆದರೆ ಕೆಲವು ಮನೆಮದ್ದುಗಳ ಮೂಲಕ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಹೌದು, ಒಂದು ನೈಸರ್ಗಿಕ ವಿಧಾನಗಳ ಮೂಲಕ, ಇಂತಹ ಸಮಸ್ಯೆಗೆ ನಿಮಿಷಗಳಲ್ಲಿ ಮುಕ್ತಿ ನೀಡಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ನೇಹಾ ಸಹಾಯ್ (Neha Sahaya) ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಒಂದನ್ನು ಹಂಚಿಕೊಂಡಿದ್ದು ಮತ್ತಷ್ಟು ಮಾಹಿತಿ ಪಡೆಯಲು ಈ ಸ್ಟೋರಿ ಓದಿ.
ಹೊಟ್ಟೆ ಉಬ್ಬರ ಸಮಸ್ಯೆಗೆ ಮನೆಮದ್ದು
ಆಹಾರ ಸೇವನೆ ಮಾಡಿದ ನಂತರ ಹೊಟ್ಟೆ ಉಬ್ಬರ ಉಂಟಾಗುವುದು ಸಾಮಾನ್ಯ. ಆಗಾಗ ತಿಂದರೆ ಹೊಟ್ಟೆ ಊದಿಕೊಂಡಂತೆ, ಬಿಗಿಯಾದಂತೆ ಅನಿಸುತ್ತದೆ. ಆದರೆ ಕೇವಲ ನಾಲ್ಕು ಪದಾರ್ಥಗಳ ಸಹಾಯದಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಹೌದು, 1- 2 ಸಣ್ಣ ಚಮಚ ಸಕ್ಕರೆ, 1 ತುಂಡು ಶುಂಠಿ, 4- 5 ಪುದೀನ ಎಲೆಗಳು ಸ್ವಲ್ಪ ನಿಂಬೆ ರಸ ಇವಿಷ್ಟು ಪದಾರ್ಥಗಳನ್ನು ಒಟ್ಟಿಗೆ ತೆಗೆದುಕೊಂಡು, ಒಂದು ಲೋಟ ಬಿಸಿ ನೀರಿಗೆ ಹಾಕಿ. ಬಳಿಕ ಆ ನೀರನ್ನು 5 ನಿಮಿಷಗಳ ಕಾಲ ಒಂದು ಕಡೆ ಮುಚ್ಚಿಡಿ. ಬಳಿಕ ನೀರನ್ನು ಸೋಸಿಕೊಂಡು ನಿಧಾನವಾಗಿ ಕುಡಿಯಿರಿ. ನೆನಪಿರಲಿ ನೀರು ತುಂಬಾ ಬಿಸಿಯಾಗಿರಬಾರದು.
ಆರೋಗ್ಯಕ್ಕೆ ಹೇಗೆ ಸಹಕಾರಿ?
ಈ ನಾಲ್ಕು ಪದಾರ್ಥಗಳಲ್ಲಿರುವ ಅಂಶಗಳು ಅನಿಲವನ್ನು ಹೊರಹಾಕಲು ಸಹಾಯ ಮಾಡುತ್ತವೆ. ಶುಂಠಿ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಎದೆಯುರಿ ಕಡಿಮೆ ಮಾಡುತ್ತದೆ. ಇನ್ನು ಪುದೀನ ದೇಹವನ್ನು ತಂಪಾಗಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಂಬೆ ದೇಹದಿಂದ ಹೆಚ್ಚುವರಿ ಸೋಡಿಯಂ ಮತ್ತು ಹಾನಿಕಾರಕ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಆದ್ದರಿಂದ, ಬೆಚ್ಚಗಿನ ನೀರಿನೊಂದಿಗೆ ಈ ಎಲ್ಲಾ ಪದಾರ್ಥಗಳನ್ನು ಬೆರೆಸಿ ಆ ಬಳಿಕ ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರ ಸೇರಿದಂತೆ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




