ಬದಲಾಗುವ ಕೆಲಸದ ಶಿಪ್ಟ್​ಗಳು ಆರೋಗ್ಯಕ್ಕೆ ಆಪತ್ತು-ಅಧ್ಯಯನ

| Updated By: Pavitra Bhat Jigalemane

Updated on: Mar 15, 2022 | 1:16 PM

ಆಗಾಗ ಶಿಪ್ಟ್​ ಬದಲಾಗುತ್ತಿದ್ದರೆ ಮನಸ್ಸು ಕೂಡ ವಿಚಲಿತವಾಗಿ ಜಾಗರೂಕತೆಯನ್ನು  ಕಳೆದುಕೊಳ್ಳುವ ಸಂಭವವಿರುತ್ತದೆ. ಕಣ್ಣಿನ ಕಾರ್ಯ ಕ್ಷಮತೆಯೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.

ಬದಲಾಗುವ ಕೆಲಸದ ಶಿಪ್ಟ್​ಗಳು ಆರೋಗ್ಯಕ್ಕೆ ಆಪತ್ತು-ಅಧ್ಯಯನ
ಪ್ರಾತಿನಿಧಿಕ ಚಿತ್ರ
Follow us on

ಉದ್ಯೋಗದಲ್ಲಿ ಕೆಲಸದ ಒತ್ತಡ (Work Pressure) ಸಾಮಾನ್ಯವಾಗಿದೆ. ಆದರೆ ಈಗಿನ ಉದ್ಯೋಗದಲ್ಲಿ ಶಿಪ್ಟ್ ​ ಕೆಲಸಗಳು (Work Shift) ಹೆಚ್ಚಾಗಿವೆ.  ಆಗಾಗ ಬದಲಾಗುವ ಕೆಲಸದ ಪಾಳಿಗಳು ಜೀವನ ಶೈಲಿಯ ಮೇಲೆ, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ.  ಶಿಪ್ಟ್​ನಲ್ಲಿ ಕೆಲಸ ಮಾಡುವುದು ಗಂಭೀರವಾದ ಆರೋಗ್ಯ (Health) ಸಮಸ್ಯೆಗಳಿಗೆ  ಕಾರಣವಾಗುತ್ತದೆ ಎಂದು ಇತ್ತೀಚೆಗೆ ಅಧ್ಯಯನವೂ ಹೇಳಿದೆ. ಇವುಗಳಲ್ಲಿ ನಿದ್ರಾಹೀನತೆ, ಹೃದಯರಕ್ತನಾಳದ ಕಾಯಿಲೆ, ಸ್ಥೂಲಕಾಯತೆ, ಮಧುಮೇಹ, ಮನಸ್ಥಿತಿ ಅಸ್ವಸ್ಥತೆ ಸೇರಿದಂತೆ ಮಾದಕ ದ್ರವ್ಯ ವ್ಯಸನಿಗಳಾಗುವ ಸಾಧ್ಯತೆಗಳಿರುತ್ತವೆ.

ಅಲ್ಲದೆ ಆಗಾಗ ಶಿಪ್ಟ್​ ಬದಲಾಗುತ್ತಿದ್ದರೆ ಮನಸ್ಸು ಕೂಡ ವಿಚಲಿತವಾಗಿ ಜಾಗರೂಕತೆಯನ್ನು  ಕಳೆದುಕೊಳ್ಳುವ ಸಂಭವವಿರುತ್ತದೆ. ಕಣ್ಣಿನ ಕಾರ್ಯ ಕ್ಷಮತೆಯೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಎಂದು ಅಧ್ಯಯನ ಹೇಳಿದೆ. ಇದೇ ಕಾರಣದಿಂದ ವೈದ್ಯರು ಆಗಾಗ ಶಿಪ್ಟ್​ ಬದಲಾಯಿಸುವ ಕೆಲಸಗಳ ಬಗ್ಗೆ ಹೆಚ್ಚಿನ ಗಮನ ನೀಡಿ ಎಂದು ಹೇಳುತ್ತಾರೆ.

ಆಂತರಿಕ ದೇಹದ ಗಡಿಯಾರ (ಸಿರ್ಕಾಡಿಯನ್ ರಿದಂ) ಸಾಮಾನ್ಯವಾಗಿ ಹಗಲು ಮತ್ತು ರಾತ್ರಿ ಚಕ್ರದೊಂದಿಗೆ ಸರಿಯಾಗಿ ಹೊಂದಾಣಿಕೆ ಆಗದ ಕಾರಣ ಶಿಫ್ಟ್ ಕೆಲಸ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.  ಇವುಗಳಲ್ಲಿ ನಿದ್ರೆಯ ಅಸ್ವಸ್ಥತೆಗಳು, ಹೃದಯ ರಕ್ತನಾಳದ ಕಾಯಿಲೆ, ಬೊಜ್ಜು, ಮಧುಮೇಹದಂತಹ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

2005 ರಿಂದ 2020ರವರೆಗೆ ಈ ಬಗ್ಗೆ ಅಧ್ಯಯಯನ ನಡೆಸಲಾಗಿದ್ದು, ಕೊನೆಯಲ್ಲಿ ಕೆಲಸ ಮಾಡುವ ವೇಗ, ಸ್ಮರಣೆ, ಜಾಗರೂಕತೆ, ಸನ್ನಿವೇಶದ ಪ್ರತಿಕ್ರಿಯೆ, ಕೆಲಸದ ಬಗೆಗೆ ಗಮನ ಕಡಿಮೆಯಾಗುತ್ತದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ.

ಅದರಲ್ಲಿಯೂ ನೈಟ್​ ಶಿಪ್ಟ್​ನಲ್ಲಿ ಕೆಲಸ ಮಾಡುವವರ ಆರೋಗ್ಯ ಹದಗೆಡುವ ಪ್ರಕರಣಗಳು ದಿನದಿಂದ  ದಿನಕ್ಕೆ ಹೆಚ್ಚುತ್ತಿವೆ ಎಂದು ಹೇಳಲಾಗುತ್ತಿದೆ. ಮೆದುಳಿಗೆ ಸಂಬಂಧಿಸಿದ ಅನಾರೋಗ್ಯ, ಸರಿಯಾಗಿ ನಿದ್ರೆಯಿಲ್ಲದೆ ಸಂಭವಿಸುವ ಹೃದಯಾಘಾತಗಳ ಪ್ರಕರಣಗಳು ಹೆಚ್ಚುತ್ತಿವೆ. ಆದ್ದರಿಂದ ಪಾಳಿ ಕೆಲಸಗಳು ಆರೋಗ್ಯವನ್ನು ಹದಗೆಡಿಸುತ್ತವೆ ಎನ್ನುತ್ತದೆ ಅಧ್ಯಯನದ ವರದಿ.

ಇದನ್ನೂ ಓದಿ:

ಧ್ಯಾನ ಮಾಡುವ ಮೊದಲು ಈ ವಿಚಾರಗಳನ್ನು ತಿಳಿದುಕೊಳ್ಳಿ: ಮಾನಸಿಕ ನೆಮ್ಮದಿ ಕಂಡುಕೊಳ್ಳಿ

ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಅಪಾಯಗಳು ಕಾಡಬಹುದು ಎಚ್ಚರಿಕೆ

Published On - 1:14 pm, Tue, 15 March 22