AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಅಪಾಯಗಳು ಕಾಡಬಹುದು ಎಚ್ಚರಿಕೆ

ದೇಹಕ್ಕೆ ಅತಿಯಾದ ಬಳಲಿಕೆಯಾದಾಗ ಗೊರಕೆ ಬರುವುದು ಸಾಮಾನ್ಯ.ಅದು ನಿರಂತರವಾಗಿದ್ದರೆ ಅಪಾಯದ ಮುನ್ಸೂಚನೆಯಾಗಿರುತ್ತದೆ. ಆದ್ದರಿಂದ ಕೊಂಚ ಗೊರಕೆಯೆಡೆಗೆ ಗಮನಹರಿಸುವುದು ಮುಖ್ಯವಾಗಿರುತ್ತದೆ.

ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಅಪಾಯಗಳು ಕಾಡಬಹುದು ಎಚ್ಚರಿಕೆ
ಗೊರಕೆ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on:Mar 15, 2022 | 10:24 AM

Share

ಇಡೀ ದಿನ ಕೆಲಸ ಮಾಡಿ ದಿನದ ಅಂತ್ಯಕ್ಕೆ ದೇಹದಲ್ಲಿ ಸುಸ್ತು, ಬಳಲಿಕೆ ಕಾಡುತ್ತದೆ. ಅದಕ್ಕೆ ನಿದ್ದೆ (Sleep)  ಒಂದೇ ಪರಿಹಾರ. ಹೀಗಾಗಿ ಪ್ರತೀ ವ್ಯಕ್ತಿ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಪ್ರತಿದಿನ ನಿದ್ದೆ ಅಗತ್ಯವಾಗಿರುತ್ತದೆ. ಆದರೆ ಈ ರೀತಿ ನಿದ್ದೆ ಮಾಡುವಾಗ ಕೆಲವರು ಗೊರಕೆ (Snoring) ಹೊಡೆಯುತ್ತಾರೆ. ದೇಹಕ್ಕೆ ಅತಿಯಾದ ಬಳಲಿಕೆಯಾದಾಗ ಗೊರಕೆ ಬರುವುದು ಸಾಮಾನ್ಯ. ಕೆಲವರಿಗೆ ಇದು ಆಗಾಗ ಕಾಡುತ್ತದೆ ಆದರೆ ಇನ್ನೂ ಕೆಲವರು ಯಾವಾಗ ಮಲಗಿದರೂ ಗಿರಕೆ ಹೊಡೆಯುತ್ತಾರೆ. ಅದು ನಿರಂತರವಾಗಿದ್ದರೆ ಅಪಾಯದ ಮುನ್ಸೂಚನೆಯಾಗಿರುತ್ತದೆ. ಆದ್ದರಿಂದ ಕೊಂಚ ಗೊರಕೆಯೆಡೆಗೆ ಗಮನಹರಿಸುವುದು ಮುಖ್ಯವಾಗಿರುತ್ತದೆ. ಹಾಗಾದರೆ ನಿರಂತರ ಗೊರಕೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರಬಹುದು ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ಮಾಹಿತಿ.

ಪಾರ್ಶವಾಯು: ನಿದ್ರೆಯ ಅಧ್ಯಯನದ ವಿಶ್ಲೇಷಣೆಯ ಪ್ರಕಾರ ಗೊರಕೆಯಿಂದ ಪ್ಲೇಕ್ ಶೇಖರಣೆಯಾಗುತ್ತದೆ, ಇದರಿಂದ ಕುತ್ತಿಗೆಯಲ್ಲಿ ಅಪಧಮನಿಗಳ ಕಿರಿದಾಗುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವ  ಸಾಧ್ಯತೆಗಳಿರುತ್ತದೆ. ಆದ್ದರಿಂದ ನಿರಂತರ  ಗೊರಕೆಯ ಸಮಸ್ಯೆ ಇದ್ದರೆ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳಿತು.

ಆರ್ಹೆತ್ಮಿಯಾ: ಆರ್ಹೆತ್ಮಿಯಾ ಅಥವಾ ಅನಿಯಮಿತ ಹೃದಯ ಬಡಿತಗಳು ದೀರ್ಘಕಾಲದ ಗೊರಕೆ ಅಥವಾ ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಒಳಗಾಗುವ ಜನರಲ್ಲಿ ಕಂಡುಬರುತ್ತದೆ . ನಿದ್ರಾವಸ್ಥೆಯಲ್ಲಿ ಉಸಿರುಕಟ್ಟುವಿಕೆ ಹೊಂದಿರುವ ರೋಗಿಗಳು, ಅವರು ನಿದ್ದೆ ಮಾಡುವಾಗ ಗೊರಕೆ ಹೊಡೆಯುವಂತೆ ಉಸಿರುಗಟ್ಟುವಿಕೆಯನ್ನು ಅನುಭವಿಸುತ್ತಾರೆ. ಅವುಗಳಲ್ಲಿ ಒಂದು ಆರ್ಹೆತ್ಮಿಯಾದ ಸಾಮಾನ್ಯ ರೂಪವಾಗಿದೆ ಎನ್ನುತ್ತಾರೆ ತಜ್ಞರು.

ಪದೇ ಪದೇ ಎಚ್ಚರವಾಗುವುದು: ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಗಾಗಿ ಎಚ್ಚರಗೊಳ್ಳುವ ಸ್ಥಿತಿಯನ್ನು ನೋಕ್ಟುರಿಯಾ ಎಂದು ಕರೆಯಲಾಗುತ್ತದೆ. 55 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ರಾತ್ರಿಯಲ್ಲಿ ಮೂತ್ರ ವಿಸರ್ಜಿಸಲು ಆಗಾಗ್ಗೆ ಎಚ್ಚರಗೊಳ್ಳುತ್ತಾರೆ, ಅವರು ಪ್ರತಿಬಂಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ಪ್ರಾಸ್ಟೇಟ್ ಹಿಗ್ಗುವಿಕೆಯನ್ನು ಹೊಂದಿರಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.

ಆತಂಕ, ಖಿನ್ನತೆ: ನಿರಂತರ ಗೊರಕೆಯಿಂದ ಸರಿಯಾಗಿ ನಿದ್ದೆ ಆಗಿಲ್ಲದೆ ಇರಬಹುದು. ಇಂತಹ ಸಂದರ್ಭಗಳಲ್ಲಿ ಒತ್ತಡ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಹಗಲು ಪ್ರಯಾಣದ ವೇಳೆ ನಿದ್ದೆ ಬಂದಂತಾಗಿ ಅಪಾಯದ ಭಯ ಕಾಡಬಹುದು,

ತಲೆನೋವು: ನಿದ್ದೆ ಮಾಡುವಾಗ ಗೊರಕೆ ಹೊಡೆಯುವ ಜನರಲ್ಲಿ ಬೆಳಗ್ಗೆ ಏಳುವಾಗ ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಗೊರಕೆಯ ಅಭ್ಯಾಸವನ್ನು ಹೊಂದಿರುವ 268 ಜನರನ್ನು ಒಳಗೊಂಡ ಇತ್ತೀಚೆಗೆ ಪ್ರಕಟವಾದ ಅಧ್ಯಯನವು ಈ ಜನರು ಬೆಳಗ್ಗೆ ತಲೆನೋವು ಮತ್ತು ನಿದ್ರಾಹೀನತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ.

ಅಧಿಕ ತೂಕ: ಅಧಿಕ ತೂಕ ಹೊಂದಿರುವ ಜನರು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ಗೊರಕೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಏಕೆಂದರೆ ರಾತ್ರಿಯಲ್ಲಿ ಸರಿಯಾಗಿ ಉಸಿರಾಡುವುದನ್ನು ತಡೆಯಲು ಕುತ್ತಿಗೆಯ ಸುತ್ತ ಹೆಚ್ಚುವರಿ ಕೊಬ್ಬು ಸಂಗ್ರಹವಾಗುತ್ತದೆ.

ಇದನ್ನೂ ಓದಿ:

ಕಲ್ಲು ಸಕ್ಕರೆ ಸೇವನೆಯಿಂದ ಪಡೆಯಿರಿ ಆರೋಗ್ಯ ಪ್ರಯೋಜನಗಳು

Published On - 10:17 am, Tue, 15 March 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ