World Leprosy Day 2026: ಜನವರಿ 30 ರಂದೇ ವಿಶ್ವ ಕುಷ್ಠ ರೋಗ ದಿನವನ್ನು ಆಚರಿಸುವುದು ಏಕೆ?

ಕುಷ್ಠರೋಗವು ರೋಗಪೀಡಿತ ವ್ಯಕ್ತಿಯನ್ನು ಮುಟ್ಟುವುದರಿಂದ ಹರಡುತ್ತದೆ. ಹೀಗೆ ಈ ರೋಗದ ಬಗ್ಗೆ ನಾನಾ ರೀತಿಯ ತಪ್ಪು ಕಲ್ಪನೆಗಳಿವೆ. ಆದರೆ ರೋಗ ಪೀಡಿತ ವ್ಯಕ್ತಿಯ ಜತೆಗೆ ದೀರ್ಘಕಾಲದ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದರೆ ಮಾತ್ರ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಈ ಕಾಯಿಲೆಯ ಲಕ್ಷಣಗಳು ಹಾಗೂ ಚಿಕಿತ್ಸಾ ವಿಧಾನ ಹೇಗೆ? ಈ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

World Leprosy Day 2026: ಜನವರಿ 30 ರಂದೇ ವಿಶ್ವ ಕುಷ್ಠ ರೋಗ ದಿನವನ್ನು ಆಚರಿಸುವುದು ಏಕೆ?
ವಿಶ್ವ ಕುಷ್ಠ ರೋಗ ದಿನ
Image Credit source: Pinterest

Updated on: Jan 30, 2026 | 10:10 AM

ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಬ್ಯಾಕ್ಟೀರಿಯಾದಿಂದ ಬರುವ ದೀರ್ಘಕಾಲದ ಸೋಂಕಾಗಿದೆ. ಇದು ಶಾಪವಲ್ಲ, ಸಾಂಕ್ರಾಮಿಕ ರೋಗವಲ್ಲ. ಚಿಕಿತ್ಸೆ ಆರಂಭಿಸಿದ ಕೆಲವೇ ದಿನಗಳಲ್ಲಿ ಸೋಂಕು ಹರಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಈ ರೋಗದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 30 ರಂದು ವಿಶ್ವ ಕುಷ್ಠ ರೋಗ ದಿನವನ್ನು (World Leprosy Day) ಆಚರಿಸಲಾಗುತ್ತದೆ.

 ವಿಶ್ವ ಕುಷ್ಠ ರೋಗದ ದಿನದ ಇತಿಹಾಸ ಹಾಗೂ ಮಹತ್ವವೇನು?

ವಿಶ್ವ ಕುಷ್ಠ ರೋಗ ದಿನದ ಇತಿಹಾಸವನ್ನು ನೋಡುವುದಾದರೆ ಈ ರೋಗದಿಂದ ಬಳಲುತ್ತಿರುವ ಜನರ ಬಗ್ಗೆ ಕರುಣೆ ಹೊಂದಿದ್ದ ಮಹಾತ್ಮ ಗಾಂಧೀಜಿಯವರು ಕುಷ್ಠ ರೋಗಿಗಳ ಅಭಿವೃದ್ಧಿಗೆ ಶ್ರಮಿಸಿದರು. ಈ ರೋಗ ಪೀಡಿತರಿಗೆ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಒದಗಿಸುವತ್ತ ಕಾರ್ಯಪ್ರವೃತ್ತರಾದರು. ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಕಾರಣದಿಂದಾಗಿ ಅವರ ಪುಣ್ಯತಿಥಿಯನ್ನು ವಿಶ್ವ ಕುಷ್ಠ ರೋಗ ದಿನ ಎಂದು ಆಚರಿಸಲಾಗುತ್ತದೆ. ಇದೆಲ್ಲದರ ಪರಿಣಾಮವಾಗಿ ಭಾರತದಲ್ಲಿ 2005 ರಲ್ಲಿ ಕುಷ್ಠರೋಗವು ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಘೋಷಣೆ ಮಾಡಲಾಯಿತು. ಈ ದಿನದ ಆಚರಣೆಯ ಮುಖ್ಯ ಉದ್ದೇಶವೇ ಕುಷ್ಠರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು. ರೋಗ ಪೀಡಿತರ ಮೇಲೆ ಬೆಳಕು ಚೆಲ್ಲುವುದು ಹಾಗೂ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.

ಕುಷ್ಠ ರೋಗ ಲಕ್ಷಣಗಳು:

ಈ ರೋಗದ ಬ್ಯಾಕ್ಟೀರಿಯಾ ಸೋಂಕು ತಗುಲಿದ ನಂತರ ಲಕ್ಷಣಗಳು ಕಾಣಿಸಿಕೊಳ್ಳಲು 5 ರಿಂದ 7 ವರ್ಷಗಳವರೆಗೆ ಇಲ್ಲವಾದರೆ 20 ವರ್ಷಗಳು ಬೇಕಾಗಬಹುದು. ರೋಗ ಲಕ್ಷಣಗಳು ಈ ಕೆಳಗಿನಂತಿರುತ್ತದೆ.

  • ಸಂವೇದನೆಯಿಲ್ಲದ ಚರ್ಮದ ತೇಪೆಗಳು
  • ಬಣ್ಣ ಕಳೆದುಕೊಂಡ ಹಾಗೂ ಕೆಂಪು ಕಲೆಯುಳ್ಳ ಚರ್ಮ
  •  ಕೈ-ಕಾಲುಗಳಲ್ಲಿ ಜುಮ್ಮೆನಿಸುವಿಕೆ
  •  ಸ್ನಾಯು ದೌರ್ಬಲ್ಯ
  •  ಕಣ್ಣು ಹಾಗೂ ಮೂಗಿನ ಸಮಸ್ಯೆಗಳು
  •  ಮುಖ ಅಥವಾ ಕಿವಿಗಳ ಮೇಲೆ ಗಂಟುಗಳು
  •  ಹುಬ್ಬುಗಳು ಹಾಗೂ ರೆಪ್ಪೆಗೂದಲು ಉದುರುವುದು

ಇದನ್ನೂ ಓದಿ: ಚರ್ಮರೋಗ ಇದ್ಯಾ? ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ಉಲ್ಬಣವಾಗುವುದು ಗ್ಯಾರೆಂಟಿ

ಕುಷ್ಠ ರೋಗವನ್ನು ಹೇಗೆ ಗುಣಪಡಿಸಬಹುದು?

ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಈ ಕುಷ್ಠರೋಗವನ್ನು ಬಹುಬೇಗನೇ ನಿಯಂತ್ರಿಸಬಹುದಾಗಿದೆ. ಈ ರೋಗ ಕಾಣಿಸಿಕೊಂಡ ತಕ್ಷಣವೇ ಆರಂಭಿಕ ಹಂತದಲ್ಲಿ ವೈದ್ಯಕೀಯ ಚಿಕಿತ್ಸೆ ಮಲ್ಟಿಡ್ರಗ್ ಥೆರಪಿ (ಎಂಡಿಟಿ) ಪಡೆಯುವುದರಿಂದ ಅಂಗವೈಕಲ್ಯವನ್ನು ತಡೆಗಟ್ಟಬಹುದಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ