ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಸರಿಯಾದ ನಿದ್ದೆಯಿಲ್ಲದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇಂದಿನ ಆಧುನಿಕ ಕಾಲಮಾನದಲ್ಲಿನ ಒತ್ತಡ, ಮನಸ್ಸಿನಲ್ಲಿ ನಡೆಯುತ್ತಿರುವ ನಕಾರಾತ್ಮಕತೆ, ಅತಿಯಾಗಿ ಮೊಬೈಲ್ ಬಳಕೆ, ಅಸಮರ್ಪಕ ಆಹಾರ ಪದ್ಧತಿ ಮತ್ತು ಅನಿಯಮಿತ ಜೀವನಶೈಲಿಯಿಂದ (Lifestyle) ಯುವಜನತೆ ಮತ್ತು ಮಕ್ಕಳಲ್ಲಿ ನಿದ್ರಾಹೀನತೆ ಕಂಡುಬರುತ್ತಿದೆ. ಆದರೆ ನಿದ್ದೆಯ ಕೊರತೆಯು ಆರೋಗ್ಯಕ್ಕೆ ಒಳ್ಳೆಯದಲ್ಲ. ಒಂದು ದಿನ ನಿದ್ರಾಹೀನತೆ ಬಳಲಿಕೆಯ ನಂತರ ನಿಮ್ಮ ಆರೋಗ್ಯದಲ್ಲಿ ಅನೇಕ ರೋಗಗಳು ಉಂಟುಮಾಡುತ್ತದೆ. ನಮ್ಮ ದೇಹಕ್ಕೆ ಕನಿಷ್ಠ 7 ರಿಂದ 8 ಗಂಟೆಗಳ ನಿದ್ದೆ ಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉತ್ತಮ ರಾತ್ರಿ ನಿದ್ರೆಯು(Sleeping) ದಿನವಿಡೀ ನಮ್ಮನ್ನು ತಾಜಾ ಮತ್ತು ಶಕ್ತಿಯುತವಾಗಿರಿಸುತ್ತದೆ.
ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿರುವ ಜನರನ್ನು ಸ್ಲೀಪ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಹೀಗಾಗಿ ಜೀವನಶೈಲಿಯಲ್ಲಿ ನಾವು ಕೆಲವು ಅಭ್ಯಾಸಗಳನ್ನು ಸೇರಿಸಿದರೆ, ಅದರ ಸಕಾರಾತ್ಮಕ ಪರಿಣಾಮವು ಖಂಡಿತವಾಗಿಯೂ ನಿದ್ದೆ ಸರಿಯಾಗಿಸುತ್ತದೆ. ಹಾಗಾದರೆ ತ್ವರಿತ ನೆಮ್ಮದಿಯ ನಿದ್ದೆಗೆ ಏನು ಮಾಡಬೇಕೆಂದು ತಿಳಿಯುವುದು ಸೂಕ್ತ.
ಯೋಗ
ನಿದ್ದೆ ಬಾರದಿದ್ದಾಗ ಹಾಸಿಗೆಯ ಮೇಲೆ ಮಲಗಿ ಸ್ವಲ್ಪ ಯೋಗ ಮಾಡಬಹುದು. ಭ್ರಮರಿ, ಪ್ರಾಣಾಯಾಮ ಮತ್ತು ಶವಾಸನ ಮಾಡುವುದರಿಂದ ನಿದ್ರೆಗೆ ದಾರಿ ಮಾಡಿಕೊಡುತ್ತದೆ. ಕೆಲವು ಯೋಗಗಳು ಉತ್ತಮ ನಿದ್ರೆಯನ್ನು ತರಲು ಉಪಯುಕ್ತವಾಗಿವೆ.
ಆಕ್ಯುಪ್ರೆಶರ್ ಚಿಕಿತ್ಸೆ
ನಿದ್ರೆ ಬರದಿದ್ದರೆ, ಆಕ್ಯುಪ್ರೆಶರ್ ಚಿಕಿತ್ಸೆಯ ಸಹಾಯವನ್ನು ತೆಗೆದುಕೊಳ್ಳಿ. ಮಲಗುವ ಮೊದಲು ಈ ಅಭ್ಯಾದ ಮಾಡಿ. ಇದು ನಿದ್ರಾಹೀನತೆಯನ್ನು ನಿಗ್ರಹಿಸಬಹುದು. ನಿಮ್ಮ ಕೈಯ ಹೆಬ್ಬೆರಳನ್ನು ನಿಮ್ಮ ಹುಬ್ಬುಗಳ ನಡುವೆ 30 ಸೆಕೆಂಡುಗಳ ಕಾಲ ಇರಿಸಿ ಮಸಾಜ್ ಮಾಡಿ. ಈ ಪ್ರಕ್ರಿಯೆಯನ್ನು 4 ರಿಂದ 5 ಬಾರಿ ಮಾಡಿ ನಿದ್ದೆ ಚೆನ್ನಾಗಿ ಬರುತ್ತದೆ.
ನೇರವಾಗಿ ಮಲಗಿ
ನೇರವಾಗಿ ಮಲಗಿ ಮತ್ತು ನಿಮ್ಮ ಕಣ್ಣುರೆಪ್ಪೆಗಳನ್ನು ಆಗಾಗ್ಗೆ ಮಿಟುಕಿಸಿ. ನಿರಂತರವಾಗಿ ಕಣ್ಣಿನ ರೆಪ್ಪೆಯನ್ನು ಮಿಟುಕಿಸುವುದರಿಂದ ಸುಸ್ತಾಗುವಂತೆ ಭಾಸವಾಗುತ್ತದೆ ಮತ್ತು ನಿದ್ರೆ ಪ್ರಾರಂಭವಾಗುತ್ತದೆ.
ಇಡೀ ದಿನದ ಚಟುವಟಿಕೆ ನೆನಪಿಸಿ
ಇಡೀ ದಿನದ ಘಟನೆಗಳನ್ನು ಅಥವಾ ನಿಮ್ಮ ಚಟುವಟಿಕೆಗಳನ್ನು ನೆನಪಿಸಿಕೊಳ್ಳಿ. ಹೀಗೆ ಮಾಡುವುದರಿಂದ ಮನಸ್ಸಿನ ಮೇಲೆ ಒತ್ತಡ ಬೀಳುತ್ತದೆ ಮತ್ತು ನಿದ್ರೆ ಬರುತ್ತದೆ.
ವ್ಯಾಯಾಮ
ನೀವು ವ್ಯಾಯಾಮ, ಜಾಗಿಂಗ್, ವಾಕಿಂಗ್ ಮತ್ತು ಈಜುವುದನ್ನು ಮಾಡುತ್ತೀರಿ. ಇದು ರಾತ್ರಿಯಲ್ಲಿ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಅದಾಗಿಯೂ ನಿದ್ರಾಹೀನತೆ ದೂರವಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ.
Asthma: ಚಳಿಗಾಲದ ಸಮಯದಲ್ಲಿ ಅಸ್ತಮಾ ರೋಗಿಗಳೇ ಎಚ್ಚರ! ನಿಮ್ಮ ಆರೋಗ್ಯಕ್ಕಾಗಿ ಈ ಕೆಲವು ಸಲಹೆಗಳು ನೆನಪಿನಲ್ಲಿರಲಿ