AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Men’s Day 2021: ಪುರುಷರು ಉತ್ತಮ ಆರೋಗ್ಯ ಹೊಂದಲು, ರೋಗಗಳ ಅಪಾಯವನ್ನು ತಡೆಗಟ್ಟಲು ಇಲ್ಲಿವೆ ಮಾರ್ಗಸೂಚಿಗಳು

ಮಾನಸಿಕ ನೆಮ್ಮದಿ ಮತ್ತು ಸಂತೋಷವು ನಿಮ್ಮ ಒಟ್ಟಾರೆ ಆರೋಗ್ಯವನ್ನು ನಿರ್ವಹಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಿರುವಾಗ ನಿಮ್ಮ ಆರೋಗ್ಯದ ಸುಧಾರಣೆಗೆ ನೀವು ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಈ ಕೆಳಗಿನಂತಿವೆ.

International Men's Day 2021: ಪುರುಷರು ಉತ್ತಮ ಆರೋಗ್ಯ ಹೊಂದಲು, ರೋಗಗಳ ಅಪಾಯವನ್ನು ತಡೆಗಟ್ಟಲು ಇಲ್ಲಿವೆ ಮಾರ್ಗಸೂಚಿಗಳು
Exercise
TV9 Web
| Updated By: shruti hegde|

Updated on:Nov 19, 2021 | 2:57 PM

Share

ಕಳೆದ ಕೆಲವು ವರ್ಷಗಳಿಂದ ಪುರುಷರು ಹೆಚ್ಚಿನ ಕೆಲಸದ ಒತ್ತಡ, ಪ್ರಯಾಣ ಮತ್ತು ಶ್ರಮದಿಂದ ತಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸುತ್ತಿದ್ದಾರೆ. ಇಂದು ಆಚರಿಸುತ್ತಿರುವ ಅಂತಾಷ್ಟ್ರೀಯ ಪುರುಷರ ದಿನವು (International Men’s Day), ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ- ಜೀವನ ಶೈಲಿಯಲ್ಲಿನ (Lifestyle) ಕೆಲವು ಬದಲಾವಣೆಗಳು ಆರೋಗ್ಯವಾಗಿರಲು (Health) ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂಬುದನ್ನು ಪುರುಷರಿಗೆ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ. ಮಾನಸಿಕ ನೆಮ್ಮದಿ (Mental health) ಮತ್ತು ಸಂತೋಷವು ನಿಮ್ಮ ಒಟ್ಟಾರೆ ಆರೋಗ್ಯವನ್ನು ನಿರ್ವಹಿಸಲು ಮತ್ತು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಿರುವಾಗ ನಿಮ್ಮ ಆರೋಗ್ಯದ ಸುಧಾರಣೆಗೆ ನೀವು ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಈ ಕೆಳಗಿನಂತಿವೆ;

7 ರಿಂದ 8 ಗಂಟೆಯ ಅವಧಿಯಲ್ಲಿ ರಾತ್ರಿ ಊಟವನ್ನು ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಹೊಟ್ಟೆಯ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೀವು ರಾತ್ರಿ ಊಟ ಮಾಡಿ 3 ತಾಸಿನ ಬಳಿಕ ನಿದ್ರೆ ಮಾಡಬಹುದು. ಇದು ನಿಮ್ಮ ತೂಕನಷ್ಟಕ್ಕೆ ಸಹಾಯ ಮಾಡುತ್ತದೆ ಜೊತೆಗೆ ಒಳ್ಳೆಯ ನಿದ್ರೆ ಪಡೆಯಲು ಸಹಾಯಕವಾಗಿದೆ.

ಸಮಯ ಪಾಲನೆಯನ್ನು ಎಂದಿಗೂ ಮರೆಯಬೇಡಿ. ಇದು ಕೆಲಸಕ್ಕೂ ಇರಬಹುದು ಇಲ್ಲವೇ ಊಟದ ವಿಚಾರದಲ್ಲಿಯೂ ಸಹ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಉಂಟು ಮಾಡುವ ದೇಹದಲ್ಲಿ ಆಮ್ಲ ಸಂಗ್ರಹವಾಗುವುದನ್ನು ತಪ್ಪಿಸಲು ಉಪಹಾರ, ಮಧ್ಯಾಹ್ನದ ಊಟ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿರಲಿ.

ಉತ್ತಮ ನಿದ್ರೆಯ ಸಮಯ ಮತ್ತು ನಿದ್ರೆಯಿಂದ ಏಳುವ ಸಮಯವನ್ನು ಸರಿಯಾಗಿ ಪಾಲಿಸಿ. ಏಕೆಂದರೆ ನೀವು ಉತ್ತಮ ನಿದ್ರೆ ಪಡೆದಾಗ ಮಾತ್ರ ನಿಮ್ಮ ದೇಹವು ಸರಿಯಾದ ಚಿಕಿತ್ಸೆ, ಚೇತರಿಕೆ ಪಡೆಯಲು ಸಹಾಯವಾಗುತ್ತದೆ. ಹೆಚ್ಚಿನ ದಿನಗಳಲ್ಲಿ ನೀವು ಚೆನ್ನಾಗಿ ನಿದ್ರೆ ಮಾಡಿದರೆ ನೀವು ಚಟುವಟಿಕೆಯಿಂದ ಕೂಡಿರುತ್ತೀರಿ.

ದೈಹಿಕ ಚಟುವಟಿಕೆ ಮತ್ತು ವ್ಯಾಯಾಮವನ್ನು ಎಂದಿಗೂ ಕಳೆದುಕೊಳ್ಳಬೇಡಿ. ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ಕೆಲಸ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಇದು ನೀವು ದಿನವಿಡಿ ಸಕ್ರಿಯರಾಗಿರಲು ಜೊತೆಗೆ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ.

ನಿಮ್ಮ ಪ್ರತಿನಿತ್ಯದ ಮುಂಜಾವನ್ನು ದೀರ್ಘ ಉಸಿರಾಟದ ಕ್ರಿಯೆಯಿಂದ ಆರಂಭಿಸಿ. ದೇಹದಲ್ಲಿ ಆಮ್ಲಜನಕವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊಬ್ಬನ್ನು ಸುಡುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತಾರೆ. ಹಾಗಾಗಿ ಪ್ರತಿನಿತ್ಯ ಬೆಳಗ್ಗೆ ಧ್ಯಾನ, ಪ್ರಾಣಾಯಾಮವನ್ನು ನೀವು ಅಭ್ಯಾಸ ಮಾಡಬಹುದು.

ಜೀವನಶೈಲಿಯಲ್ಲಿನ ಈ ಕೆಲವು ಬದಲಾವಣೆಗಳು ನಿಧಾನವಾಗಿ ಅಭ್ಯಾಸವಾಗುತ್ತದೆ. ನಿಮ್ಮ ಆರೋಗ್ಯ ಸುಧಾರಣೆಗೆ ಇವುಗಳು ಸಹಾಯಕವಾಗಿವೆ. ಒತ್ತಡದ ಜೀವನ, ಮಾನಸಿಕ ಸ್ಥಿತಿ ಏರು-ಪೇರು ಇವುಗಳನ್ನೆಲ್ಲಾ ನಿಭಾಯಿಸಲು ಈ ಕೆಲವು ಮಾರ್ಗಸೂಚಿಗಳು ಸಹಾಯ ಮಾಡುತ್ತವೆ. ಹಾಗಾಗಿ ಈ ಕೆಲವು ಟಿಪ್ಸ್​ಗಳನ್ನು ಪುರುಷರು ತಮ್ಮ ದಿನನಿತ್ಯದ ಅಭ್ಯಾಸದಲ್ಲಿ ರೂಢಿಸಿಕೊಳ್ಳುವ ಮೂಲಕ ದೇಹದ ಒಟ್ಟಾರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:

Skin Care: ಆರೋಗ್ಯಕರ ಚರ್ಮವನ್ನು ಪಡೆಯಲು ವ್ಯಾಯಾಮ ಸಹಾಯಕವೇ? ತಜ್ಞರ ಸಲಹೆಗಳಿವು

Asthma: ಚಳಿಗಾಲದ ಸಮಯದಲ್ಲಿ ಅಸ್ತಮಾ ರೋಗಿಗಳೇ ಎಚ್ಚರ! ನಿಮ್ಮ ಆರೋಗ್ಯಕ್ಕಾಗಿ ಈ ಕೆಲವು ಸಲಹೆಗಳು ನೆನಪಿನಲ್ಲಿರಲಿ

Published On - 12:32 pm, Fri, 19 November 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ