ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:36 ಗಂಟೆ, ರಾಹು ಕಾಲ ಮಧ್ಯಾಹ್ನ 03:33 ರಿಂದ ಸಂಜೆ 05:05, ಯಮಘಂಡ ಕಾಲ ಬೆಳಿಗ್ಗೆ 09:26 ರಿಂದ 10:58ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:01ರ ವರೆಗೆ.
ಧನು ರಾಶಿ: ಇಂದು ನೀವು ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ನಿಮಗೆ ತೃಪ್ತಿ ಸಿಗದು. ಒಳ್ಳೆಯ ಸೇವೆಯಿಂದ ಯಶಸ್ಸು ಸಿಗುವುದು. ಏನು ಮಾಡುತ್ತಿದ್ದೇನೆ ಎಂಬುದು ಮರೆತುಹೋಗಲಿದೆ. ತಲೆಯ ನೋವು ಅತಿಯಾಗಬಹುದು. ಬೆರೆಯುವ ಒಳ್ಳೆಯ ಸ್ವಭಾವದಿಂದ ಅಪವಾದ ಬರಬಹುದು. ಸದಾ ಕಾಲ ಹೊಸತನ್ನು ನೀವು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರಬಹುದು. ಭೂಮಿಯ ಉತ್ಪನ್ನದಿಂದ ಲಾಭವಾಗಕಿದೆ. ನಿಮಗೆ ಇಂದು ಒಂದುಕಡೆ ಕುಳಿತು ಕೆಲಸ ಮಾಡಲು ಆಗದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಸ್ವಂತ ಕೆಲಸಕ್ಕೆ ಸಮಯವು ಸಿಗದೇ ಎಲ್ಲವನ್ನೂ ಉಳಿಸಿಕೊಳ್ಳುವಿರಿ. ಆರ್ಥಿಕ ವಿಚಾರದಲ್ಲಿ ಸರಿಯಾದ ಹೊಂದಾಣಿಕೆ ಸಿಗದೇ ಕಷ್ಟವಾಗಬಹುದು.
ಮಕರ ರಾಶಿ: ಇಂದು ನೀವು ಸಂಗಾತಿಯ ಮೇಲೆ ಕೋಪವನ್ನು ತೀರಿಸಿಕೊಂಡರೂ ಆ ಕಡೆಯಿಂದ ಯಾವ ಪ್ರತಿಕ್ರಿಯೆ ಬಾರದು. ಪ್ರೀತಿಯಿಂದ ನಿಮಗೆ ಖುಷಿ ಸಿಗಲಿದೆ. ನಿಮ್ಮ ಸಂಗಾತಿಗೆ ಅನ್ಯ ಸ್ಥಳವನ್ನು ನೋಡುವ ಬಯಕೆ ಉಂಟಾಗುವುದು. ಇಂದು ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಪ್ರೇಮವನ್ನು ಹೇಳಿಕೊಳ್ಳುವಿರಿ. ಇದರಿಂದ ನಿಮಗೆ ಗೊಂದಲವು ಬರಬಹುದು. ಎಲ್ಲರನ್ನೂ ನಿಮ್ಮ ವಶದಲ್ಲಿ ಇಟ್ಟುಕೊಂಡು ಕಾರ್ಯವನ್ನು ಸಾಧಿಸುತ್ತೇನೆ ಎಂಬುದು ಕಷ್ಟವಾದೀತು. ಮನೆಯಬಕೆಲಸವನ್ನು ಬೇಗನೆ ಮುಕ್ತಾಗೊಳಿಸುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದವರೇ ಹೊರಗೆ ಹೋಗಲು ಇಚ್ಛಿಸುವಿರಿ. ಯಾರೂ ನಿಮ್ಮ ಆಜ್ಞೆಯನ್ನು ಮೀರದಂತೆ ನೋಡಿಕಳ್ಳಬಹುದು. ನಿದ್ರೆಯನ್ನು ಕಡಿಮೆ ಮಾಡುವಿರಿ. ಹಂಚಿಕೊಳ್ಳುವ ಬಗ್ಗೆ ಸಮಾಧಾನ ಇರದು. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ. ಎಲ್ಲವೂ ಇದ್ದರೂ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕಾಗುವುದು.
ಕುಂಭ ರಾಶಿ: ಯಾರನ್ನೂ ನೀವು ಒಮ್ಮೆಲೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ ಆದೀತು. ಇಂದು ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಕಾರ್ಯವು ಸಿದ್ಧಿಯಾಗುವ ತನಕವಾದರೂ ಮೌನವಾಗಿರುವುದು ಉತ್ತಮವೆಂದು ಹಿರಿಯರಿಂದ ಉಪದೇಶ ಸಿಗುವುದು.. ನೀವು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಲು ಬಯಸುವಿರಿ. ಕೆಲವು ನಿಮಿತ್ತಗಳು ನಿಮಗೆ ಭವಿಷ್ಯದ ಸೂಚನೆಯನ್ನು ಕೊಡಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೂ ಇರಬಹುದು. ಹಳೆಯ ಕಡತಗಳ ಪರಿಶೀಲನೆ ಮಾಡಿ ಅಮೂಲ್ಯ ದಾಖಲೆಯನ್ನು ಪಡೆಯುವಿರಿ. ಇನ್ನೊಬ್ಬರ ಇಚ್ಛೆಯಂತೆ ನಡೆಯಲಿದ್ದು ನೀವು ಎಲ್ಲದಕ್ಕೂ ಸಾಕ್ಷಿಯಾಗಿರುವಿರಿ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ. ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ.
ಮೀನ ರಾಶಿ; ಇಂದು ನೀವು ಯಾರಾದರೂ ಏನನ್ನಾದರೂ ಕೇಳಿದರೆ ಮಾತ್ರ ಹೇಳಬೇಕೇ ವಿನಹ ನಿಮಗೆ ಗೊತ್ತಿದೆ ಎಂದು ಮೂಗುತೂರಿಸಲು ಹೋಗಿ, ಮೂಗು ಜಜ್ಜಿಕೊಳ್ಳಬೇಕಾದೀತು. ಇಂದು ಕುಟುಂಬದಲ್ಲಿ ನಿಮ್ಮ ಯಶಸ್ಸಿಗೆ ಎಲ್ಲರೂ ಖುಷಿಪಡುವರು. ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಹಾಯವಾಗಬಹುದು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಿರಿ. ಅತಿಯಾದ ಪ್ರಶಂಸೆಯಿಂದ ದಾರಿ ತಪ್ಪುತ್ತದೆ ಎಂದು ಗೊತ್ತಾಗುವ ಮೊದಲೇ ನಿಮ್ಮನ್ನು ದಾರಿ ತಪ್ಪಿಸಿ ಅನ್ಯ ಮಾರ್ಗವೇ ಇಲ್ಲದಂತೆ ಆಗುವುದು. ಇಂದು ಗೋವುಗಳ ಸಹವಾಸವನ್ನು ಮಾಡಲಿದ್ದೀರಿ. ಕೆಲವು ಸಮಯದ ಅಧ್ಯಾತ್ಮದ ಚಿಂತನೆಯನ್ನು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಹೆಸರನ್ನು ಗಳಿಸಲು ನಿಮಗೆ ನಾನಾ ದಾರಿಗಳು ಸಿಗಬಹುದು. ತಾಯಿಯ ಆರೋಗ್ಯವು ಸುಧಾರಿಸಬಹುದು. ಆಪ್ತರ ಜೊತೆಗಿದ್ದು ವ್ಯವಹಾರದ ಚಾತುರ್ಯವನ್ನು ನೀವು ಇಂದು ಅರಿತುಕೊಳ್ಳುವಿರಿ. ಯಾರದೋ ಬೇಸರವನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ಸುಮ್ಮನೇ ಆಪ್ತರ ಮೇಲೆ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ.