ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಧನಿಷ್ಠಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಶುಕ್ರ, ತಿಥಿ : ಚತುರ್ದಶೀ, ನಿತ್ಯನಕ್ಷತ್ರ : ಆಶ್ಲೇಷಾ, ಯೋಗ : ಶೋಭನ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 38 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:18 ರಿಂದ 12:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ 05:10ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:22 ರಿಂದ 09:50ರ ವರೆಗೆ.
ಧನು ರಾಶಿ : ಇಂದು ಮಹಿಳೆಯರು ಬೇಕಾಗಿದ್ದನ್ನು ಪಡೆದುಕೊಳ್ಳುವರು. ಶ್ರಮದ ಪರಿಣಾಮವು ಸ್ವಲ್ಪ ಸಂತೋಷ ತರುತ್ತದೆ. ನೀವು ನಿಮ್ಮನ್ನು ಶಕ್ತಿಯುತವಾಗಿ ಮಾಡಿಕೊಳ್ಳುವಿರಿ. ಸ್ಥಗಿತಗೊಂಡ ಕೆಲಸದಲ್ಲಿ ವೇಗವನ್ನು ಪಡೆಯಬೇಕಾಗುವುದು. ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗುತ್ತದೆ. ತಂದೆಯ ಜೊತೆ ವೈಮನಸ್ಯವಾಗಿದ್ದು ಇಂದು ಸಂಬಂಧವು ಸುಧಾರಿಸುವುದು. ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗಿರುವುದು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು. ಭೂಮಿಯ ವ್ಯವಹಾರವು ಪಾಲುದಾರರ ಸಹಕಾರದಿಂದ ಸುಗಮವಾಗಿ ಸಾಗಲಿದೆ. ನಿಮ್ಮ ಪ್ರಭಾವ ಹೆಚ್ಚಾಗಿ ಇರುವುದರಿಂದ ಶತ್ರುಗಳು ದೂರ ಹೋಗುತ್ತಾರೆ.
ಮಕರ ರಾಶಿ : ಇಂದು ನೀವು ಸಾಕಷ್ಟು ಪ್ರಶಂಸೆ ಪಡೆಯವಿರಿ. ಮಹತ್ವದ ಕೆಲಸವು ಹಲವು ದಿನಗಳವರೆಗೆ ಬಾಕಿಯಿದ್ದರೆ, ಅವುಗಳನ್ನು ಮುಗಿಸಿ ಬಿಡಿ. ನೀವು ಉತ್ತಮ ಹಣಕಾಸು ಯೋಜನೆಯನ್ನು ತಯಾರಿಸಿಕೊಳ್ಳಬಹುದು. ಪರಿಶ್ರಮದಿಂದ ಹೊಸ ಉದ್ಯೋಗಗಳನ್ನು ಪಡೆಯುವ ಸಾಧ್ಯತೆಯಿದೆ. ಮನೆಯ ವೆಚ್ಚದಲ್ಲಿ ಇಳಿಕೆಯಾಗಬಹುದು. ಪ್ರೀತಿ ಮತ್ತು ವಿಶ್ವಾಸ ಭದ್ರವಾಗಿರುವಂತೆ ನೋಡಿಕೊಳ್ಳಿ. ಇಂದು ವ್ಯಾಪಾರಿಗಳಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗಲಿದೆ. ಕಚೇರಿಯಲ್ಲಿ ಉತ್ತಮವಾದ ವಾತಾವರಣದ ಉತ್ಸಾಹದಿಂದ ಇರುವಿರಿ. ಜಾಣ್ಮೆಯಿಂದ ಮಾಡಿದ ವ್ಯವಹಾರಕ್ಕೆ ಪ್ರಶಂಸೆ ಸಿಗಲಿದೆ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ.
ಕುಂಭ ರಾಶಿ : ನಿಮ್ಮ ಇಂದಿನ ಆರಂಭವು ನಿರುತ್ಸಾಹದದಿಂದ ಇರಬಹುದು. ನೀವು ಹಣದ ಖರ್ಚನ್ನು ಬಹಳ ಜಾಣ್ಮೆಯಿಂದ ಮಾಡುವಿರಿ. ನೀವು ಕುಟುಂಬದ ಸದಸ್ಯರ ಜೊತೆ ವ್ಯಾಪಾರ ಮಾಡಲು ಯೋಚಿಸುತ್ತಿದ್ದರೆ ಒಳ್ಳೆಯದು. ಕೆಲಸದ ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆಯಿದೆ. ಸಂಘರ್ಷವು ನಿಮಗೆ ಪ್ರಯೋಜನವಾಗದು. ನೀವು ಮಾಡುವ ಕೆಲಸ ಕೆಲಸದಿಂದ ಲಾಭ ಪಡೆಯುವಿರಿ. ಕುಟುಂಬದಲ್ಲಿ ನಿಮ್ಮ ವಿವಾಹದ ಕುರಿತು ಚರ್ಚೆಯಾಗುವುದು. ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು. ಇಂದು ನಡೆಯುವ ತಪ್ಪಿಗೆ ನೀವೇ ಕಾರಣರಾಗುವಿರಿ. ಸಮಯದ ಹೊಂದಾಣಿಕೆಯಿಂದ ಕಾರ್ಯವನ್ನು ಸಾಧಿಸಬಹುದು. ಹೂಡಿಕೆಯನ್ನು ಅನೇಕ ಜನರು ಸೇರಿ ಮಾಡುವವರಿದ್ದೀರಿ. ನಿಮ್ಮ ಒರಟಾದ ಮಾತು ಇನ್ನೊಬ್ಬರಿಗೆ ಬೇಸರವನ್ನು ಕೊಡುವುದು.
ಮೀನ ರಾಶಿ : ಇಂದು ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಗುರಿಯನ್ನು ಸಾಧಿಸಬಹುದು. ವ್ಯಾಪಾರವನ್ನು ವಿಸ್ತರಿಸಲು ಸಾಲ ತೆಗೆದುಕೊಳ್ಳಬಹುದು. ಯಾರಿಗೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು. ಹೊಸ ಉದ್ಯೋಗದಿಂದ ನೀವು ಸಾಕಷ್ಟು ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಮನೆಯಲ್ಲಿ ಇರುವಂತಹವರ ಆರೋಗ್ಯದ ಬಗ್ಗೆ ಚಿಂತೆ ಮಾಡಬೇಡಿ. ಅವರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು. ಆದಾಯದ ಮೂಲವು ಬದಲಾಗಬಹುದು. ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನ ಓಡಾಟವಾಗಬಹುದು. ಆಸ್ತಿ ವ್ಯವಹಾರದಲ್ಲಿ ಹಿನ್ನಡೆಯಾದಂತೆ ಅನ್ನಿಸಬಹುದು. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)