Horoscope: ಈ ರಾಶಿಯವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಂಕೋಚ ಪಡುವರು, ನಕಾರಾತ್ಮ ವಿಚಾರ ಬೇಡ

ಇಂದಿನ ದಿನಭವಿಷ್ಯ: ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಡಿಸೆಂಬರ್ 22, 2023ರ ನಿಮ್ಮ ರಾಶಿಭವಿಷ್ಯ ಹೇಗಿದೆ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಶುಭ-ಅಶುಭ ಇದೆಯಾ ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

Horoscope: ಈ ರಾಶಿಯವರು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಂಕೋಚ ಪಡುವರು, ನಕಾರಾತ್ಮ ವಿಚಾರ ಬೇಡ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Dec 22, 2023 | 12:10 AM

ನಿತ್ಯ ಎದ್ದ ಕೂಡಲೇ ನಿತ್ಯ ಪಂಚಾಂಗ ಮತ್ತು ರಾಶಿಭವಿಷ್ಯ ನೋಡುವ ಅಭ್ಯಾಸ ಕೆಲವರಲ್ಲಿ ಇರುತ್ತದೆ. ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಲಾಭ ಕಾದಿದೆಯಾ? ನಷ್ಟು ಉಂಟಾಗಬಹುದಾ? ಶುಭ, ಅಶುಭ? ಇದೆಯಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಹಾಗಾದರೆ, ಇಂದಿನ (ಡಿಸೆಂಬರ್ 22) ನಿಮ್ಮ ರಾಶಿಭವಿಷ್ಯ (Horoscope) ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನು ಮಾಸ, ಮಹಾನಕ್ಷತ್ರ: ಮೂಲಾ, ಮಾಸ: ಮಾರ್ಗಶೀರ್ಷ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಭರಣೀ, ಯೋಗ: ಪರಿಘ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 54 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 07 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 11:07 ರಿಂದ 12:31 ರವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:20 ರಿಂದ 04:44ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 08:18 ರಿಂದ 09:43ರ ವರೆಗೆ.

ಮೇಷ ರಾಶಿ: ಎಲ್ಲವನ್ನೂ ನೀವು ಸಮಾನ ದೃಷ್ಟಿಯಿಂದ ಕಾಣುವುದು ನಿಮಗೆ ಧನಾತ್ಮಕ ಅಂಶವಾಗಲಿದೆ. ಮಾತಿನ ಘರ್ಷಣೆಯನ್ನು ಮುಂದುವರಿಸಲು ನಿಮಗೆ ಇಷ್ಟವಾಗದು. ಹೂಡಿಕೆಯನ್ನು ಇತರರ ಒತ್ತಾಯದ ಮೇಲೆ ಮಾಡಬೇಕಾದೀತು. ಮನೆಯ ಖರೀದಿಯ ಬಗ್ಗೆ ಆಲೋಚನೆಗಳು ಬರಲಿವೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು. ನೀವು ಇಂದು ಸೌಂದರ್ಯಕ್ಕೆ ಬೆಲೆ ಕೊಡುವಿರಿ. ನಿಮ್ಮಿಂದ ಉಪಕಾರವನ್ನು ಪಡೆದವರೇ ನಿಮ್ಮ ಶತ್ರಗಳಾದಾರು. ಸಂಗಾತಿಯು ನಿಮ್ಮನ್ನು ನಿರ್ಲಕ್ಷಿಸಬಹುದು. ನಿಮ್ಮ ಬಗ್ಗೆ ನಿಮಗೇ ನಂಬಿಕೆ ಕಡಿಮೆ ಆಗಬಹುದು. ಮುದುವಾದ ಮಾತು ಕೃತಕತೆಯಂತೆ ತೋರಬಹುದು. ನೀವೊಬ್ಬ ಸುಳ್ಳುಗಾರರೆನ್ನುವಂತೆ ಇತರರು ಬಿಂಬಿಸುವರು. ಭಯವು ನಿಮ್ಮ ಮನಸ್ಸನ್ನು ಕಟ್ಟಿಹಾಕುವುದು.

ವೃಷಭ ರಾಶಿ: ಸೃಜನಶೀಲ ಕ್ಷೇತ್ರಗಳಲ್ಲಿ ಆಸಕ್ತಿಯು ಹೆಚ್ಚಿರುವುದು. ನಿಮ್ಮ ಖ್ಯಾತಿಯನ್ನು ಇತರರು ಸಹಿಸಲಾರರು. ದೂರಪ್ರಯಾಣದಲ್ಲಿ ಅಡೆತಡೆಗಳು ಉಂಟಾಗಬಹುದು. ಇಂದು ನಿಮ್ಮ ಕೆಲಸವು ನೀವಂದುಕೊಂಡಷ್ಟು ಸುಲಭವಾಗಿ ಇರದು. ಮಕ್ಕಳಿಂದ ಸಂತೋಷವು ಸಿಗುವುದು. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಆಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟರೂ ಬಿಡಲಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ. ಸಮಾಧಾನದ ಚಿತ್ತವು ಅನೇಕ ವಿಚಾರಕ್ಕೆ ಪೂರಕ. ನಿಮ್ಮ ಮನೋಬಲದ ಪ್ರದರ್ಶನವನ್ನು ತೋರಿಸಬೇಕಾದೀತು. ಸುಮ್ಮನೇ ವಾಗ್ವಾದವನ್ನು ಮಾಡಲು ಹೋಗಿ ಸಮಯವನ್ನು ಹಾಗೂ ಇತರರ ಸಮಯವನ್ನೂ ಹಾಳು ಮಾಡುವಿರಿ. ಹಲವರ ಕಾರಣದಿಂದ ನಿಮ್ಮ ಗುರಿಯು ಬದಲಾಗಬಹುದು.

ಮಿಥುನ ರಾಶಿ: ನಿಮ್ಮ ಸ್ವಭಾವದಲ್ಲಿ ಸ್ವಲ್ಪ ನಿಷ್ಠುರತೆಯು ಕಾಣಿಸುತ್ತದೆ. ವ್ಯವಹಾರದಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗುವುದು. ನೀವು ಇಂದು ಯಾವುದನ್ನೂ ತಕ್ಷಣ ಒಪ್ಪಿಕೊಳ್ಳುವುದಿಲ್ಲ. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ ಇದ್ದು ಬಂಧುಗಳು ನಿಮ್ಮ ಜೊತೆಗಿರುವರು. ಸರಳವಾದ ನಿಮ್ಮ ವ್ಯಕ್ತಿತ್ವಕ್ಕೆ ಯಾರೂ ಮನಸೋಲುವರು. ಕರ್ತವ್ಯವನ್ನು ನಿಷ್ಠೆಯಿಂದ ಮಾಡುವಿರಿ. ಗೆಳೆಯನನ್ನು ಆಪ್ತನನ್ನಾಗಿ ಮಾಡಿಕೊಳ್ಳುವಿರಿ. ಅಪೇಕ್ಷಿಸದಿದ್ದರೂ ನಿಮ್ಮ ಪರಿಶ್ರಮಕ್ಕೆ ಯೋಗ್ಯವಾದ ಗೌರವವು ಸಿಗುವುದು. ಕೆಟ್ಟ ಕೆಲಸಕ್ಕೆ ಯಾರಾದರೂ ಪ್ರೇರಣೆ ಕೊಡಬಹುದು. ದುರಭ್ಯಾಸವು ನಿಮಗೆ ಬೇಡವೆನಿಸುವುದು. ಪ್ರೇಮಿಗಳು ಪರಸ್ಪರ ಒಪ್ಪಂದವನ್ನು ಮಾಡಿಕೊಂಡು ಮುಂದುವರಿಯುವರು.

ಕರ್ಕ ರಾಶಿ: ನಿಮ್ಮ ಹಣಕಾಸಿನ ವ್ಯವಹಾರವು ಗೊಂದಲವಾಗಿರುವುದು. ಕೊಡಬೇಕಾದವರ ಹಣವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ನಿರಂತರ ಕೆಲಸದಿಂದ ಸಮಾಧಾನವು ಬೇಕಾಗುವುದು. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ವಾಹನದಲ್ಲಿ ಸಣ್ಣ ಅಪಘಾತವಾಗಲಿದೆ. ಆಕಸ್ಮಿಕವಾಗಿ ವಿವಾಹ ಮಾತುಕತೆಗೆ ತಯಾರಿಯಾಗಬಹುದು. ಇನ್ನೊಬ್ಬರ ಬಗ್ಗೆ ದೋಷವನ್ನೇ ಹುಡುಕುತ್ತ ಕುಳಿತುಕೊಳ್ಳುವ ಬದಲು ಗುಣಗಳನ್ನು ಸ್ವೀಕರಿಸಿ ಸಖ್ಯ ಮಾಡಿಕೊಳ್ಳುವುದು ಉತ್ತಮ. ಉಪಕಾರದ ಸ್ಮರಣೆಯನ್ನು ನೀವು ಮಾಡಿಕೊಳ್ಳುವುದಿಲ್ಲ. ವರ್ತನೆಯಲ್ಲಿ ಆಗುವ ಬದಲಾವಣೆಯನ್ನು ಯಾರೂ ಊಹಿಸಲಾರರು. ಎಲ್ಲದರ ಮೇಲೂ ನಂಬಿಕೆಯನ್ನು ಕಳೆದುಕೊಳ್ಳುವಿರಿ.