ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:37 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ ಸಂಜೆ 09:26, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ 12:30ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:02 ರಿಂದ 03:34ರ ವರೆಗೆ.
ಮೇಷ ರಾಶಿ: ಆರ್ಥಿಕ ವ್ಯವಹಾರವನ್ನು ಮಾಡುವವರಿಗೆ ಅವಕಾಶ, ಆದಾಯವೂ ಹೆಚ್ಚಾಗುವುದು. ಅವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ವಿರೋಧಿಗಳು ನಿಮ್ಮ ಬೆನ್ನು ಬಿಡದೇ ಪೀಡಿಸಬಹುದು. ಯಾವುದಕ್ಕೂ ಉಪಯೋಗವಾಗದೇ ಹಣವು ವ್ಯರ್ಥವಾಗಬಹುದು. ಸಾಲದ ಹೊರೆಯು ನಿಮಗೆ ದುಃಸ್ವಪ್ನದಂತೆ ಕಾಡಬಹುದು. ಪ್ರಯಾಣದ ಆಯಾಸದಿಂದ ಉತ್ಸಾಹ ಕಡಿಮೆ. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ಗೊಂದಲವಿರಬಹುದು. ಉದ್ಯೋಗದಲ್ಲಿ ಬದಲಾವಣೆಯನ್ನು ಬಯಸುವಿರಿ. ಸಾಹಿತ್ಯಾಸಕ್ತರು ಪ್ರಸಿದ್ಧಿಯನ್ನು ಹೆಚ್ಚು ಬಯಸುವರು. ಅಧ್ಯಾತ್ಮದ ಬಲವೇ ನಿಮ್ಮ ಸಂತೋಷಕ್ಕೆ ಕಾರಣ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ. ಹೇಳಬೇಕೆನಿಸಿದ ವಿಚಾರಗಳನ್ನು ಯಾರಲ್ಲಿ ಹೇಳಬೇಕು ಎಂದು ಅವರಲ್ಲಿಯೇ ಹೇಳಿ.
ವೃಷಭ ರಾಶಿ: ಪರಿಶ್ರಮದ ಗಳಿಕೆಯನ್ನು ಉಳಿಸಿಕೊಳ್ಳುವುದು ಉತ್ತಮ. ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ಸಮಾರಂಭಗಳಿಗೆ ಆಹ್ವಾನವು ಬರಬಹುದು. ಸಮಯ ಪಾಲನೆಯಲ್ಲಿ ನೀವು ಬಹಳ ನಿಷ್ಠುರರಾಗುವಿರಿ. ನಿಮ್ಮ ಚರಾಸ್ತಿಗಳೇ ನಿಮಗೆ ಆಧಾರವಾಗಬಹುದು. ಮನಸ್ಸು ಒತ್ತಡದಿಂದ ಆಚೆ ಬಂದಿದ್ದು ನಿಮಗೆ ನಿರಾಳ ಎನಿಸುವುದು. ನಿಮ್ಮವರಿಂದ ನಿಮಗೆ ಕಿರಿಕಿರಿ ಉಂಟಾಗಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು. ಮನೆಗೆ ಬೇಕಾದ ವಸ್ತುಗಳನ್ನು ಇಂದು ನೀವು ಖರೀದಿಸುವಿರಿ. ಅನಾರೋಗ್ಯವು ನಿಮ್ಮ ಅನ್ಯ ಚಟುವಟಿಕೆಗೆ ಮಾರಕವಾಗುವುದು. ಕುಟುಂಬದಲ್ಲಿ ಸಂತೋಷದ ವಾತಾವರಣವು ಇರಲಿದೆ. ನಿಮಗೆ ಸಮ್ಮಾನಗಳನ್ನು ಪಡೆದುಕೊಳ್ಳಲು ಆಸೆಯಾಗುವುದು. ವೃತ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇನ್ನೊಬ್ಬರ ದೋಷವೇ ನಿಮಗೆ ಬಲವನ್ನು ಕೊಡುವುದು.
ಮಿಥುನ ರಾಶಿ: ಮಕ್ಕಳ ಕ್ಷೇಮದ ಬಗ್ಗೆ ಅತಿಯಾದ ಕಾಳಜಿ ಇರುವುದು. ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಸ್ತ್ರೀಯರು ಖರೀದಿಯಲ್ಲಿ ಸಮಯವನ್ನು ಕಳೆಯುವರು. ಆಲಂಕಾರಿಕ ದ್ರವ್ಯಗಳಿಂದ ನಿಮಗೆ ನಷ್ಟ. ಪ್ರಯಾಣದಿಂದ ನಿಮಗೆ ಆಯಾಸವಾಗಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಬಂಧುಗಳಿಂದ ತೊಂದರೆ ಬತಬಹುದು. ಹೊಸತನ್ನು ಮಾಡಲು ನಿಮಗೆ ಇಚ್ಛಾಶಕ್ತಿಯ ಕೊರತೆ ಇರಲಿ. ಸಂಗಾತಿಯ ಕಾರಣದಿಂದ ನಿಮ್ಮ ಮರ್ಯಾದೆಗೆ ತೊಂದರೆ. ನಿಮಗೆ ಪ್ರೋತ್ಸಾಹದ ಕೊರತೆಯಿಂದ ಹಿಂದುಳಿಯಬೇಕಾಗುವುದು. ಸಹಾಯವನ್ನು ಕೇಳಿ ಬಂದರೆ ಇಲ್ಲ ಎನದೇ ಇರುವುದನ್ನು ಕೊಡಿ. ಪರೋಪಕರಾದಿಂದ ಸಂತೋಷವಂತೂ ಸಿಗುವುದು. ವಿವಾಹಕ್ಕೆ ಸಂಬಂಧಿಸಿದಂತೆ ತಾಯಿಯ ಜೊತೆ ಕಲಹವಾಗುವುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳುವಿರಿ. ನಿಮ್ಮನ್ನು ರೂಪಿಸಿಕೊಳ್ಳುವ ಬಗ್ಗೆ ಆಲೋಚಿಸುವಿರಿ.
ಕರ್ಕಾಟಕ ರಾಶಿ: ಅತಿಥಿ ಸತ್ಕಾರದಿಂದ ನಿಮಗೆ ಸಂತೋಷ. ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ನೀರಿನಿಂದ ನಿಮಗೆ ಆಪತ್ತು ಬರಬಹುದು. ಪ್ರಭಾವಿ ವ್ಯಕ್ತಿಗಳ ಒಡನಾಟ ಅನಿರೀಕ್ಷಿತವಾಗಿ ಲಭ್ಯ. ಆಧಿಕ ತಿರುಗಾಟವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಉದ್ಯೋಗದ ಸ್ಥಳದಲ್ಲಿ ಇಂದು ನಿಮ್ಮನ್ನೇ ಹೆಚ್ಚು ಗಮನಿಸಬಹುದು. ಹಿತಶತ್ರುಗಳಿಂದ ಹೆಚ್ಚು ವಿಘ್ನಗಳು ಬಂದರೂ ನಿಮಗೆ ಅದು ಗೊತ್ತಾಗದೇ ಇರಬಹುದು. ಉದ್ಯಮವು ಸ್ವಲ್ಪ ಹಿನ್ನಡೆಯನ್ನು ಪಡೆಯಬಹುದು. ಅಂದುಕೊಂಡಿದ್ದನ್ನು ಸಾಧಿಸುತ್ತೇನೆ ಎಂಬ ಉತ್ಸಾಹ ಇರುವುದು. ನಿಮ್ಮ ದುಃಖವನ್ನು ಇತರರ ಜೊತೆ ಹಂಚಿಕೊಳ್ಳಿ. ದೂರ ಬಂಧುಗಳ ಭೇಟಿಯಾಗುವುದು. ಕಲಹವಾಗುವ ಸಂದರ್ಭದಲ್ಲಿ ನೀವು ಜಾಣ್ಮೆಯನ್ನು ವಹಿಸಿ ಸುಮ್ಮನಿರುವಿರಿ. ಹಣದ ಹರಿವು ಇದ್ದರೂ ಖರ್ಚಿನ ದಾರಿಯೂ ತೆರೆದಿರುತ್ತದೆ. ನಿಮಗೆ ಬರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು.