AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರು ಹೆಚ್ಚು ಮೋಜು ಮಸ್ತಿ ಮಾಡುವಿರಿ, ಅದೃಷ್ಟವಂತರಾಗಿರುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್​ 9: ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ನೀವು ಕುಟುಂಬಕ್ಕೆ ಸಮಯವನ್ನು ಕೊಡುವುದು ಕಷ್ಟವಾದೀತು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುಕೇಳುವ ಸಂದರ್ಭವೂ ಬರಬಹುದು. ಹಾಗಾದರೆ ಸೆಪ್ಟೆಂಬರ್​ 8ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಹೆಚ್ಚು ಮೋಜು ಮಸ್ತಿ ಮಾಡುವಿರಿ, ಅದೃಷ್ಟವಂತರಾಗಿರುವಿರಿ
ಈ ರಾಶಿಯವರು ಹೆಚ್ಚು ಮೋಜು ಮಸ್ತಿ ಮಾಡುವಿರಿ, ಅದೃಷ್ಟವಂತರಾಗಿರುವಿರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 09, 2024 | 12:10 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್​ 9) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:37 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ ಸಂಜೆ 09:26, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ 12:30ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:02 ರಿಂದ 03:34ರ ವರೆಗೆ.

ಸಿಂಹ ರಾಶಿ: ಸಾಹಿತ್ಯಾಸಕ್ತಿಯುಳ್ಳವರಿಗೆ ಹೊಸ ದಿಕ್ಕು ತೋಚುವುದು. ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ. ನಿಮ್ಮ ಮೇಲಿನ ನಂಬಿಕೆಯು ನಷ್ಟವಾಗಬಹುದು. ಆಕಸ್ಮಿಕ ಸುದ್ದಿಯು ನಿಮ್ಮನ್ನು ವಿಚಲಿತ ಗೊಳಿಸಬಹುದು. ಕಾರ್ಮಿಕರಿಂದ ವೇತನ ಅಧಿಕ ಮಾಡಲು ಒತ್ತಡವು ಬರಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನೇ ಸಂದೇಹಪಡುವಂತೆ ಮಾಡುವುದು. ಸುಲಭವಾಗಿ ಮಾಡುವ ಕೆಲಸವನ್ನು ನೀವು ಕ್ಲಿಷ್ಟಕರ ಮಾಡಿಕೊಳ್ಳುವಿರಿ. ನಿಮ್ಮ ಪೂರ್ವನಿರ್ಧಾರನ್ನು ಬದಲಿಸಿಕೊಳ್ಳಲು ನೀವು ಒಪ್ಪುವುದಿಲ್ಲ. ಒತ್ತಾಯಕ್ಕೆ ಮಾಡುವ ಧಾರ್ಮಿಕ ಕಾರ್ಯದಿಂದ ನಿಮಗೆ ಸಂತೋಷವಿರದು, ಪುಣ್ಯವೂ ಇರದು. ಉತ್ತಮ‌ವಾದ ಭೂಮಿಯನ್ನು ನೀವು ಖರೀದಿಸಲು ಮುಂದಾಗುವಿರಿ. ಮನೋರಂಜನೆ ಕಡೆ ಹೆಚ್ಚು‌ಗಮನವು ಇರಬಹುದು. ಯಾರ‌ನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ಸರ್ಕಾರದ ಆರ್ಥಿಕ ತಜ್ಞರಿಗೆ ಪದೋನ್ನತಿ‌ ಸಿಗಲಿದೆ.

ಕನ್ಯಾ ರಾಶಿ: ಇಂದು ನಿಮ್ಮದೇ ಆದ ಒರಟುತನವು ಇತರರಿಗೆ ಕಷ್ಟಕೊಡುವುದು. ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಸಾಲಗಾರ ಬಾಧೆಯು ಕಡಿಮೆ ಇರುವುದರಿಂದ ಕೊಡಬೇಕಾದ ಹಣವನ್ನು ಯಾವುದಾರೂ ಮೂಲದಿಂದ ಸಂಗ್ರಹಿಸಿಕೊಳ್ಳಿ. ಯಾವುದಾದರೂ ಸಂಘ ಸಂಸ್ಥೆಯನ್ನು ಸೇರಿ ಕೆಲಸ ಮಾಡುವಿರಿ. ಮನೆಯಿಂದ ಇಂದಯ ದೂರವಿರಬೇಕಾಗುವುದು. ಮನೋರಂಜನೆಗೆ ಅವಕಾಶಗಳಿದ್ದರೂ ಯಾವದೋ ಆಲೋಚನೆಯನ್ನು ಮಾಡುತ್ತ ಇರುವಿರಿ. ನಿಮ್ಮ ಸಾಮರ್ಥ್ಯವನ್ನು ಪ್ರಕಟಿಸಲು ಸೂಕ್ತ ವೇದಿಕೆಯು ನಿಮಗೆ ಲಭ್ಯವಾಗಬಹುದು. ವಿವಾಹಯೋಗವು ಬಂದಿರುವುದರಿಂದ ಇನ್ನು ಹಿಂಜರಿಕೆ ಬೇಡ. ಯಾವುದೋ ಒಂದು ಕಾರ್ಯವನ್ನು ಮಾಡಿಕೊಂಡು ನಿರುದ್ಯೋಗದ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಿಕೊಳ್ಳುವಿರಿ. ಯಾವುದನ್ನಾದರೂ ಆಯ್ಕೆ ಮಾಡುವಾಗ ನಿಮ್ಮನೇ ನೀವು ಕೇಳಿಕೊಳ್ಳುವುದು ಉತ್ತಮ. ಆತ್ಮೀಯವಾಗಿ ಮಾತನಾಡುವವರು ಇಂದು ಸಿಗಬಹುದು.

ತುಲಾ ರಾಶಿ: ಇಂದು ನೀವು ವ್ಯವಸ್ಥೆಯನ್ನು ಸರಿ ಮಾಡುವ ಯೋಜನೆ ಹಾಕಿಕೊಳ್ಳುವಿರಿ. ಮಾತನ್ನು ಕೇಳಿ, ತೊಂದರೆಯನ್ನು ತಪ್ಪಿಸಿಕೊಳ್ಳುವಿರಿ. ಇಷ್ಟ ವಸ್ತುಗಳನ್ನು ಖರೀದಿಸುವ ಸುದಿನ ಇಂದು. ವಿದ್ಯಾರ್ಥಿಗಳು ಅಭ್ಯಾಸದಿಂದ ವಿಮುಖರಾಗುವಿರಿ. ಸಹನೆಯ ಮಿತಿಯು ಬೀರಬಹುದು. ಹದತಪ್ಪಿದ ಮಾತು ನಿಮಗೆ ಕಷ್ಟಕೊಡುವುದು. ನಿಮ್ಮ ಹಠದ ಸ್ವಭಾವವು ಇತರರಿಗೆ ಕಷ್ಟವಾದೀತು. ಅಗೌರವ ಸಿಗುವ ಕಡೆ ನೀವು ಹೋಗಲಾರಿರಿ. ಸಾಲ ತೀರಿಸುವ ನಿಮ್ಮ ಯೋಜನೆ ಪೂರ್ಣ ಸಫಲವಾಗದು. ದಾನವನ್ನು ಹೆಚ್ಚು ನಿಮ್ಮ‌ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ಅಪಮಾನವನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾದೀತು. ಹಣ ಸಂಪಾದನೆಗೆ ಉತ್ತಮವಾದ ಮಾರ್ಗವು ನಿಮಗೆ ಗೊತ್ತಾಗಲಿದೆ. ಬಾಕಿ ಉಳಿದ ಕೆಲಸಗಳ ಕಡೆ ಇಂದು ಗಮನಕೊಟ್ಟು ಮುಗಿಸಬೇಕಾದ ಒತ್ತಡ ಇರುವುದು. ನಿಮ್ಮ ಅಮೂಲ್ಯ ವಸ್ತುಗಳು ನಷ್ಟವಾಗಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದು ದಾರಿಯಾದರೆ ನಿಮ್ಮದೇ ಒಂದು ದಾರಿ.

ವೃಶ್ಚಿಕ ರಾಶಿ: ವಿಳಂಬವಾದ ಕಾರ್ಯಕ್ಕೆ ದಂಡಕಟ್ಟುವ ಸಂದರ್ಭ ಬರಲಿದೆ. ಇಂದು ಹಿತಶತ್ರುಗಳಿಂದ ಧನವು ನಷ್ಟವಾಗಲಿದೆ. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಉದ್ಯೋಗದಲ್ಲಿ ಹೆಚ್ಚಿದ ಜವಾಬ್ದಾರಿಯಿಂದ ನೀವು ಕುಟುಂಬಕ್ಕೆ ಸಮಯವನ್ನು ಕೊಡುವುದು ಕಷ್ಟವಾದೀತು. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುಕೇಳುವ ಸಂದರ್ಭವೂ ಬರಬಹುದು. ಅಂದುಕೊಂಡ ಸಮಯಕ್ಕೆ ನಿಮ್ಮ ಕೆಲಸಗಳು ಮುಕ್ತಾಯ ಆಗದೇ ಹೋಗಬಹುದು. ಬಂಧುಗಳಿಗೆ ನಿಮ್ಮ ಕಡೆಯಿಂದ ಸಹಾಯವು ಸಿಗಲಿದೆ. ಅಧಿಕಾರವನ್ನು ನೀವು ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವಿರಿ. ನಿಮ್ಮ ಮೇಲೆ ಬರುವ ಆಪಾದನೆಯನ್ನು ಮೆಲ್ಲಗೆ ತಪ್ಪಿಸಿಕೊಳ್ಳುವಿರಿ. ರಕ್ಷಣಾ ವ್ಯವಸ್ಥೆಯಲ್ಲಿ ಇರುವವರಿಗೆ ತೊಂದರೆಗಳು ಆಗಬಹುದು. ನಿಯಮವನ್ನು ಮೀರಿ ವರ್ತಿಸುವುದು ಬೇಡ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ನಿಮ್ಮ ಮಾತಿಗೆ ಯಾರದ್ದಾದರೂ ಸಜಾಯಿಷಿ ಸಿಕ್ಕರೆ ನಿಮಗೆ ಸಂತೋಷವಾಗುವುದು.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!