Astrology: ಯಾರದೋ ಮೇಲಿನ ಬೇಸರವನ್ನು ಬೇರೆಯವರ ಮೇಲೆ ವ್ಯಕ್ತಪಡಿಸುವಿರಿ

ರಾಶಿ ಭವಿಷ್ಯ ಸೋಮವಾರ(ಸೆ. 9): ಮಕ್ಕಳ ವಿದ್ಯಾಭ್ಯಾಸದಲ್ಲಿ ವೇಗವನ್ನು ಹೆಚ್ಚಿಸುವಿರಿ. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ಹಾಗಾದರೆ ಸೆಪ್ಟೆಂಬರ್​ 9ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಯಾರದೋ ಮೇಲಿನ ಬೇಸರವನ್ನು ಬೇರೆಯವರ ಮೇಲೆ ವ್ಯಕ್ತಪಡಿಸುವಿರಿ
ಯಾರದೋ ಮೇಲಿನ ಬೇಸರವನ್ನು ಬೇರೆಯವರ ಮೇಲೆ ವ್ಯಕ್ತಪಡಿಸುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 09, 2024 | 12:15 AM

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ವೈಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:37 ಗಂಟೆ, ರಾಹು ಕಾಲ ಬೆಳಿಗ್ಗೆ 07:54 ರಿಂದ ಸಂಜೆ 09:26, ಯಮಘಂಡ ಕಾಲ ಬೆಳಿಗ್ಗೆ 10:58 ರಿಂದ 12:30ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:02 ರಿಂದ 03:34ರ ವರೆಗೆ.

ಧನು ರಾಶಿ: ವ್ಯಾಪಾರಕ್ಕೆ ಬೇಕಾದ ಹಣಕಾಸಿನ ಸಂಗ್ರಹವನ್ನು ನಾಲ್ಕಾರು ಜನರಿಂದ ಪಡೆಯುವಿರಿ. ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆಯು ಎದ್ದು ತೋರುವುದು.‌ ಮನೆಯವರ‌ ಮೇಲಿನ ಕೋಪಕ್ಕೆ ಏನೂ ಮಾಡಲಾಗದ ಸ್ಥಿತಿ. ಹಲ್ಲುಕಿತ್ತ ಹಾವಿನಂತಹ ಸ್ಥಿತಿ ಬರುವುದು. ಯಾರದೋ ಮೇಲಿನ ಬೇಸರವನ್ನು ಮತ್ಯಾರದೋ ಮೇಲೆ ಸಿಟ್ಟಾಗಿ ವ್ಯಕ್ತೊಡಿಸುವಿರಿ. ದ್ವೇಷವನ್ನು ನೀವು ಬೆಳೆಸಿಕೊಳ್ಳುವುದು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಬಹುದು. ಸಾಲದ ವಿಚಾರವು ಮನೆಯಲ್ಲಿ ಕಲಹವಾಗುವಂತೆ ಮಾಡಬಹುದು. ಹಳೆಯ ಘಟನೆಗಳು ನಿಮಗೆ ಸಂತೋಷವನ್ನು ಕೊಡುವುದು. ಮಾನಸಿಕ ಒತ್ತಡದಿಂದ ನೀವು ಬೇಗ ವಿಶ್ರಾಂತಿಗೆ ತೆರಳಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ನ್ಯಾಯಸಮ್ಮತವಾದ ನಿಮ್ಮ ನಿಲುವು ಅನ್ಯರ ಕಾರಣದಿಂದ ಬದಲಾಗುವುದು. ನಿಮ್ಮ ಅಹಂಕಾರವೇ ನಿಮಗೆ ಪಾಠವಾಗಬಹುದು.

ಮಕರ ರಾಶಿ: ಅಪರಿಚಿತ ಮಹಿಳೆಯರಿಗೆ ಸಹಾಯ ಮಾಡಿ ಸಂಕಷ್ಟಕ್ಕೆ ಸಿಲುಕುಬಿರಿ. ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ಕಛೇರಿಯಲ್ಲಿ ಒತ್ತಡವು ಇದ್ದರೂ ಅದೆನ್ನೆಲ್ಲ ಮರೆತು ಆರಾಮಾಗಿ ಇರುವಿರಿ. ನಿಮ್ಮ ಮಾತು ಎಲ್ಲರಿಗೂ ಇಷ್ಟವಾದೀತು. ಮಕ್ಕಳ ವಿದ್ಯಾಭ್ಯಾಸದಲ್ಲಿ ವೇಗವನ್ನು ಹೆಚ್ಚಿಸುವಿರಿ. ಸಹೋದರರು ನಿಮ್ಮ ಸಹಾಯವನ್ನು ಕೇಳುವರು. ಇನ್ನೊಬ್ಬರನ್ನು ನಿಂದಿಸುವುದು ನಿಮಗೆ ಶೋಭೆ ತರದು. ಮನೆಯ ನಿರ್ಮಾಣಕ್ಕೆ ಕುಟುಂಬದ ಜೊತೆ ಚರ್ಚಿಸುವಿರಿ. ಯಾರ ಮಾತನ್ನೋ ಅನುಸರಿಸಿ ನೀವು ಕಾರ್ಯ ಪ್ರವೃತ್ತರಾಗುವುದು ಬೇಡ. ಇಂದು ನಿಮ್ಮ ಮೇಲೆ ಬರುವ ಯಾವ ಅಪವಾದವನ್ನೂ ಮನಸ್ಸಿಗೆ ತೆಗೆದುಕೊಳ್ಳದೇ ನೆಮ್ಮದಿಯಿಂದ ಇರುವಿರಿ. ನಿಮ್ಮ ಇಂದಿನ ಅಸಹಾಯಕ‌ ಸ್ಥಿತಿಯನ್ನು ಯಾರಲ್ಲಿಯೂ ಹೇಳಿಕೊಳ್ಳುವುದು ಕಷ್ಟ. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ವೈವಾಹಿಕ ಸಂಬಂಧಗಳನ್ನು ಬಂಧುಗಳಲ್ಲಿ ಬೆಳೆಸುವಿರಿ. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ.

ಕುಂಭ ರಾಶಿ: ಕೂಡಿಟ್ಟ ಹಣದಿಂದ ವಾಹನ ಖರೀದಿ ಮಾಡುವ ಯೋಚನೆ ಬರುವುದು. ನಿಮ್ಮ ವ್ಯಾಪಾರದಲ್ಲಿ ಲಾಭವು ಕಡಿಮೆ ಕಾಣಿಸುವುದು. ಧಾರ್ಮಿಕ ಆಚರಣೆಯಲ್ಲಿ ಆಸಕ್ತಿಯು ಹೆಚ್ಚು ಇರಲಿದೆ. ಕೆಲಸಕ್ಕೆ ಸಂಬಂಧಿಸಿದಂತೆ ಗೊಂದಲವು ಇರಬಹುದು. ಹೆಚ್ಚು ಒತ್ತಡುವು ನಿಮ್ಮ ಆರೋಗ್ಯವನ್ನು ಕೆಡಿಸಬಹುದು. ಭೂಮಿಯ ವ್ಯವಹಾರವು ಮಕ್ಕಳ ಸಹಾಯದಿಂದ ಕೈಗೂಡುವುದು. ನಿಮ್ಮ ಕಾರ್ಮಿಕರ ಜೊತೆ ವಾಗ್ವಾದವನ್ನು ಮಾಡುವಿರಿ. ನಿಮ್ಮ ಸಂತೋಷವನ್ನು ಕಂಡು ಕರುಬುವವರಿಗೆ ನೀವು ಯಾವ ಪ್ರತಿಕ್ರಿಯೆಯನ್ನು ನೀಡಬೇಕಾಗಿಲ್ಲ. ಅನಗತ್ಯ ವಿಚಾರಗಳ ನಡುವೆ ಪ್ರವೇಶವನ್ನು ಪಡೆಯುವುದು ಬೇಡ. ಆಂತರಿಕ ವ್ಯವಹಾರದಲ್ಲಿ ನಿಷ್ಣಾತರಾಗುವಿರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಉದ್ಯೋಗದಲ್ಲಿ ಅಭಿವೃದ್ಧಿ ಕಾಣಿಸುವುದು. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಡುವುದು ಬೇಡ.

ಮೀನ ರಾಶಿ: ಕೃಷಿಯಲ್ಲಿ ಇಂದು ನಷ್ಟ. ಮಾನಿಸಕವಾಗಿ ಕುಗ್ಗುವ ಸಾಧ್ಯತೆ ಇದೆ. ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಸಾಮಾಜಿಕವಾಗಿ ಮನ್ನಣೆ ಸಿಕ್ಕರೂ ಅದನ್ನು ನೀವು ನಿರಾಕರಿಸುವಿರಿ. ಯಾರ ಪ್ರಶಂಸೆಯನ್ನು ನೀವೂ ನಂಬಲಾರಿರಿ. ನಿಮ್ಮ ಸಂಪತ್ತಿಗೆ ಇತರರ ದೃಷ್ಟಿಯು ಬೀಳಬಹುದು.‌ ಬರಬೇಕಾದ ಹಣವು ವಿಳಂಬವಾಗಬಹುದು.‌ ನೀವು ಇಂದು ಎಲ್ಲ ಜವಾಬ್ದಾರಿಗಳಿಂದ ಹೊರಬರುವಿರಿ. ಯಾರಿಂದಲೂ ನೀವು ಸಹಾಯವನ್ನು ಪಡೆಯಲು ಇಚ್ಛಿಸುವುದಿಲ್ಲ. ವ್ಯಾಪರವು ನಿಮಗೆ ಲಾಭದಾಯಕವಾದುದು. ಅತಿಯಾದ ಪ್ರೀತಿಯೇ ನಿಮಗೆ ತೊಂದರೆ ಕೊಟ್ಟೀತು‌ ಹೆಚ್ಚಿದ ಕುಟುಂಬದ ಜವಾಬ್ದಾರಿಗಳಿಂದ ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಗಮನ ಕಡಿಮೆ ಆಗುವುದು. ನಿರ್ಧಾರಗಳು ಅಸ್ಪಷ್ಟವಾಗಿ ಇರುವುದು ಬೇಡ. ಅನಗತ್ಯ ಹಸ್ತಕ್ಷೇಪದಿಂದ ನಿಮ್ಮ ಗೌರವ ಕಡಿಮೆ ಆಗಬಹುದು. ನಿಮ್ಮಿಂದಾಗದ ಕಾರ್ಯವನ್ನು ಅನ್ಯರಿಂದ ಮಾಡಿಸುವಿರಿ. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು.

ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ನೂತನ ಎಐಸಿಸಿ ಕಟ್ಟಡಕ್ಕೆ ಇಂದಿರಾ ಗಾಂಧಿ ಭವನ್ ಎಂದು ಹೆಸರಿಡಲಾಗಿದೆ
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಜಾತ್ರೆಗೆ ನುಗ್ಗಿದ ಕಾರು: ಯುವತಿ ಸಾವು, 8 ಜನರಿಗೆ ಗಂಭೀರ ಗಾಯ..!
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸರ್ಕಾರದ ಅಸ್ಥಿಪಂಜರ ಮಾತ್ರ ಉಳಿದಿದೆ, ಸುಟ್ಟುಹೋಗೋದು ನಿಶ್ಚಿತ: ಸೋಮಣ್ಣ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮನೆಗೆ ನುಗ್ಗಿದ ಚಿರತೆ, ವಿಡಿಯೋ ನೋಡಿ
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ