ಜನನ ಕಾಲದಲ್ಲಿನ ದೋಷಗಳ ಬಗ್ಗೆ ಜ್ಯೋತಿಷದಲ್ಲಿ ಏನನ್ನು ಹೇಳಲಾಗಿದೆ ಎಂದು ವಿವರಿಸುವುದಕ್ಕೆ ಇಂದಿನ ಲೇಖನವನ್ನು ಮೀಸಲಿಡಲಾಗುತ್ತಿದೆ. ಹಾಗಂತ ಎಲ್ಲವನ್ನೂ ತಿಳಿಸಲಾಗುತ್ತದೆಯಾ ಅಂದರೆ, ಉಹುಂ, ಅದು ಸಾಧ್ಯವಿಲ್ಲ. ಪ್ರಮುಖ ದೋಷಗಳನ್ನು ಮಾತ್ರ ಪ್ರಸ್ತಾವ ಮಾಡಲಾಗುವುದು. ಉಳಿದಂತೆ ಜ್ಯೋತಿಷಿಗಳು ಆ ಬಗ್ಗೆ ಹೇಳಿದಾಗ ಅನುಮಾನ ಪಡುವುದೋ ಅಥವಾ ಗಾಬರಿ ಪಡುವುದೋ ಅಗತ್ಯ ಇರುವುದಿಲ್ಲ. ಈ ಪೈಕಿ ಮೊದಲನೆಯದಾಗಿ ಅಮಾವಾಸ್ಯೆ ಜನನ ವಿಚಾರದಿಂದಲೇ ಶುರು ಮಾಡೋಣ. ಅಮಾವಾಸ್ಯೆ ಅಂದರೆ ಅದು ಕೃಷ್ಣಪಕ್ಷ. ಆ ದಿನ ಗಂಡುಮಕ್ಕಳ ಜನನವಾದಲ್ಲಿ ದೋಷ ಎಂದು ಪರಿಗಣಿಸಲಾಗುತ್ತದೆ. ಆದರೆ ನೆನಪಿನಲ್ಲಿಡಬೇಕಾದ ಸಂಗತಿ ಇನ್ನೂ ಒಂದಿದೆ. ಕೃಷ್ಣಪಕ್ಷದ ಚತುರ್ದಶಿಯಂದು ಜನನವಾದರೂ ದೋಷಪ್ರದವೇ. ಆ ಕಾರಣಕ್ಕೆ ಅದಕ್ಕೆ ಸೂಕ್ತವಾದ ಜನನ ಶಾಂತಿಯನನ್ನು ಮಾಡಿಸಿಕೊಳ್ಳಬೇಕು.
ಇನ್ನು ಮಗುವು ಭದ್ರ ಕರಣದಲ್ಲಿ ಜನನವಾದರೆ, ತಂದೆ- ತಾಯಿ, ಸೋದರನ ನಕ್ಷತ್ರದಲ್ಲೇ ಮಗುವಿನ ಜನನವಾದರೆ, ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಯನ್ನು ಪ್ರವೇಶ ಮಾಡುವ ಸಮಯದಲ್ಲಿ, ಸೂರ್ಯ ಅಥವಾ ಚಂದ್ರ ಗ್ರಹಣದ ವೇಳೆಯಲ್ಲಿ, ವ್ಯತೀಪಾತ ಯೋಗದಲ್ಲಿ, ಯಮಗಂಡ, ತಿಥಿಕ್ಷಯ, ದಗ್ಧ ಯೋಗದಲ್ಲಿ ಜನಿಸಿದರೆ ದೋಷಪ್ರದ ಎಂದು ಪರಿಗಣಿಸಲಾಗುತ್ತದೆ. ಅದೇ ರೀತಿ ಮೂವರು ಹೆಣ್ಣುಮಕ್ಕಳ ನಂತರ ಒಂದು ಗಂಡುಮಗು ಜನಿಸಿದರೆ, ಮೂವರು ಗಂಡು ಮಕ್ಕಳ ನಂತರ ಒಂದು ಹೆಣ್ಣುಮಗು ಹುಟ್ಟಿದರೆ ಅದು ಕೂಡ ದೋಷಪ್ರದ ಎನಿಸುತ್ತದೆ. ಆದರೆ ಈ ಎಲ್ಲ ದೋಷಗಳಿಗೂ ಜ್ಯೋತಿಷದಲ್ಲಿ ಪರಿಹಾರವನ್ನು ಸೂಚಿಸಲಾಗಿದೆ ಎಂಬುದು ಗಮನಿಸಬೇಕಾದ ಅಂಶ.
ಅಮಾವಾಸ್ಯೆಯಂದು ಜನಿಸಿದ ಗಂಡುಮಕ್ಕಳು ಬಡತನವನ್ನು ಅನುಭವಿಸಬೇಕಾಗುತ್ತದೆ. ಅವರಿಗೆ ಆರೋಗ್ಯ ಸ್ಥಿತಿಯಲ್ಲಿ ಏರುಪೇರುಗಳಿರುತ್ತವೆ. ಮಾನಸಿಕವಾದ ಸಮಸ್ಯೆಗಳು ಸಹ ಕಾಡಬಹುದು. ಆದ್ದರಿಂದ ಆ ಜನನ ದೋಷದ ನಿವಾರಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಹಾಗೆ ನಿವಾರಣೆ ಮಾಡಿಕೊಂಡರೆ ಅಮಾವಾಸ್ಯೆ ಜನನ ದೋಷವು ಹೋಗಿ, ಆ ಮಗುವಿಗೆ ಉತ್ತಮ ಫಲಗಳು ದೊರೆಯುತ್ತವೆ. ಕೃಷ್ಣ ಪಕ್ಷದ ಚತುರ್ದಶಿ ಜನನ ದೋಷದ ವಿಚಾರಕ್ಕೆ ಬಂದರೆ, ಆ ತಿಥಿಯ ಪ್ರಮಾಣವನ್ನು ಆರು ಭಾಗ ಮಾಡಿಕೊಳ್ಳಬೇಕು. ಮೊದಲ ಭಾಗದಲ್ಲಿ ಜನನ ಆಗಿದ್ದರೆ ಶುಭಪ್ರದ. ಅಂದರೆ ಒಳ್ಳೆ ಫಲಗಳನ್ನೇ ಪಡೆಯುತ್ತಾರೆ. ಎರಡನೇ ಭಾಗದಲ್ಲಿಯಾದರೆ ನಾಶವನ್ನು ಅಥವಾ ತಂದೆಗೆ ಕೆಡುಕನ್ನು ಸೂಚಿಸುತ್ತದೆ. ಮೂರನೇ ಭಾಗವು ತಾಯಿಗೆ ಕೆಡುಕನ್ನು ಸೂಚಿಸುತ್ತದೆ. ನಾಲ್ಕನೇ ಭಾಗದಲ್ಲಿ ಜನನವಾದರೆ ತಾಯಿಯ ಅಣ್ಣ- ತಮ್ಮಂದಿರಿಗೆ ಕೆಡುಕು, ಐದನೇ ಭಾಗದಲ್ಲಿಯಾದರೆ ಕುಟುಂಬವೇ ನಾಶ, ಆರರಲ್ಲಿ ಸ್ವತಃ ಆ ಮಗುವಿಗೇ ತೊಂದರೆಯಾಗುತ್ತದೆ.
ಇದನ್ನೂ ಓದಿ: Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ
ಇದನ್ನೂ ಓದಿ: Venus astrology: ಜನ್ಮ ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿದ್ದರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ
(Effect on Individual by birth day and time on the basis of Astrology. Here is an explainer