Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ

ಜ್ಯೋತಿಷ ಪ್ರಕಾರ ಯಾವ ರಾಶಿಗೆ ಯಾವ ಗ್ರಹ ಅಧಿಪತಿ ಹಾಗೂ ಯಾವ ಗ್ರಹವು ಎಲ್ಲಿ ಉಚ್ಚ ಸ್ಥಿತಿಯನ್ನು ತಲುಪುತ್ತದೆ ಮತ್ತು ಎಲ್ಲಿ ನೀಚ ಸ್ಥಿತಿಯನ್ನು ತಲುಪುತ್ತದೆ ಎಂಬ ಮಾಹಿತಿ ಇಲ್ಲಿದೆ.

Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ
ರಾಶಿ ಚಕ್ರ

ಇಂದಿನ ಲೇಖನದಲ್ಲಿ ಯಾವ ಗ್ರಹಗಳು ಯಾವ ರಾಶಿಯ ಅಧಿಪತಿ ಹಾಗೂ ಯಾವ ಗ್ರಹಕ್ಕೆ ಯಾವ ರಾಶಿಯು ನೀಚ ಸ್ಥಾನವಾಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದರಿಂದ ಆಗುವ ಲಾಭ ಏನು ಅಂದರೆ, ನೀವು ಜ್ಯೋತಿಷಕ್ಕೆ ಸಂಬಂಧಿಸಿದ ಲೇಖನವನ್ನು ಓದುವಾಗಲೋ ಅಥವಾ ಕೇಳುವಾಗಲೋ ಅಥವಾ ಕಾರ್ಯಕ್ರಮಗಳನ್ನು ನೋಡುವಾಗಲೋ ಜನ್ಮ ಜಾತಕದಲ್ಲಿ ಇಂಥ ಗ್ರಹ ಉಚ್ಚವಾಗಿದ್ದಲ್ಲಿ ಅಥವಾ ನೀಚವಾಗಿದ್ದಲ್ಲಿ ಅಂದಾಗ ನಿಮ್ಮ ಜಾತಕವನ್ನು ನೋಡಿಕೊಂಡರೆ ತಿಳಿದುಕೊಳ್ಳಬಹುದು. ಅದಕ್ಕೂ ಮುಂಚೆ ಜನ್ಮ ಜಾತಕದಲ್ಲಿ ಹನ್ನೆರಡು ರಾಶಿಯ ಲೆಕ್ಕಾಚಾರ ಹೇಗೆ ಎಂಬುದನ್ನು ಕಲಿತುಕೊಳ್ಳಬೇಕು. ಅಥವಾ ತತ್ಕಾಲ ಗ್ರಹ ಸಂಪತ್ತಿ ಅಂತ ಹುಟ್ಟುವ ಸಂದರ್ಭದಲ್ಲಿ ಯಾವ ಗ್ರಹ- ಯಾವ ನಕ್ಷತ್ರ ಮತ್ತು ರಾಶಿಯಲ್ಲಿ ಇತ್ತು ಎಂಬ ಮಾಹಿತಿಯನ್ನು ಓದಿಕೊಂಡು, ನೋಡಿಕೊಂಡು ಅರ್ಥ ಮಾಡಿಕೊಳ್ಳಬಹುದು. ಆದರೆ ಯಾವುದೇ ಗ್ರಹದ ನೀಚ ಸ್ಥಾನವನ್ನು ಭಂಗ ಮಾಡುವಂತಹ ನೀಚ ಭಂಗ ರಾಜಯೋಗ ಎಂಬುದು ಇರುತ್ತದೆ. ಹಾಗೆಯೇ ಎಂಥ ಉತ್ತಮ ಯೋಗವನ್ನೂ ದೊರೆಯದಿರುವಂತೆ ಮಾಡುವ ಗ್ರಹ ಸ್ಥಿತಿಯೂ ಇರುತ್ತದೆ. ಅದನ್ನು ಜ್ಯೋತಿಷಿಗಳ ಮೂಲಕ ತಿಳಿಯಬಹುದು. ಮೊದಲಿಗೆ ಯಾವ ರಾಶಿಗೆ ಯಾವ ಗ್ರಹ ಅಧಿಪತಿ ಮತ್ತು ಯಾವ ಗ್ರಹವು ಎಲ್ಲಿ ನೀಚ ಸ್ಥಿತಿ ತಲುಪುತ್ತದೆ ಎಂಬುದನ್ನು ತಿಳಿಯಿರಿ.

ರಾಶಿಗಳು                 ಅಧಿಪತಿ
ಮೇಷ- ವೃಶ್ಚಿಕ            ಕುಜ

ವೃಷಭ- ತುಲಾ            ಶುಕ್ರ

ಮಿಥುನ- ಕನ್ಯಾ          ಬುಧ

ಕರ್ಕಾಟಕ                   ಚಂದ್ರ

ಸಿಂಹ                            ರವಿ

ಧನುಸ್ಸು- ಮೀನ       ಗುರು

ಮಕರ- ಕುಂಭ            ಶನಿ

ಗ್ರಹಗಳು             ಉಚ್ಚ ರಾಶಿ      ನೀಚ ರಾಶಿ
ರವಿ                        ಮೇಷ                 ವೃಷಭ

ಚಂದ್ರ                   ವೃಷಭ               ವೃಶ್ಚಿಕ

ಕುಜ                      ಮಕರ                ಕರ್ಕಾಟಕ

ಬುಧ                     ಕನ್ಯಾ                  ಮೀನ

ಗುರು                     ಕರ್ಕಾಟಕ          ಮಕರ

ಶುಕ್ರ                       ಮೀನ                ಕನ್ಯಾ

ಶನಿ                         ತುಲಾ               ಮೇಷ

ರಾಹು                     ಮಿಥುನ          ಧನುಸ್ಸು

ಕೇತು                      ಧನುಸ್ಸು        ಮಿಥುನ

ಇದನ್ನೂ ಓದಿ: These 4 zodiac signs become rich: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ

ಇದನ್ನೂ ಓದಿ: Money management: ಈ 5 ರಾಶಿಯವರು ದುಡ್ಡು- ಕಾಸಿನ ನಿರ್ವಹಣೆಯಲ್ಲಿ ಬಲು ಗಟ್ಟಿಗರು

(Which planet rules which zodiac sign and which planet exalted in which zodiac sign according to vedic astrology explained here)