These 4 zodiac signs become rich: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ

ಅದೃಷ್ಟ ಯಾರ ಸ್ವತ್ತು ಹೇಳಿ? ಜ್ಯೋತಿಷ ಪ್ರಕಾರ, ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗುತ್ತಾರೆ. ಹಾಗೆ ಚಿಕ್ಕ ವಯಸ್ಸಿನಲ್ಲಿ ಶ್ರೀಮಂತರಾಗಲು ಕಾರಣ ಆಗುವ ಅಂಶಗಳು ಯಾವುವು, ಆ ರಾಶಿಗಳು ಯಾವುವು ಎಂಬ ವಿವರ ಇಲ್ಲಿದೆ.

These 4 zodiac signs become rich: ಈ ನಾಲ್ಕು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗ್ತಾರೆ
ರಾಶಿ ಚಕ್ರ
Follow us
Srinivas Mata
| Updated By: Skanda

Updated on: Apr 08, 2021 | 6:17 AM

ಅದೃಷ್ಟ ಯಾರಪ್ಪನ ಮನೆ ಸ್ವತ್ತು ಅನ್ನೋ ಮಾತನ್ನು ನೀವು ಆಗಾಗ ಕೇಳಿರಬಹುದು ಅಥವಾ ನೀವೇ ಆಡಿರಬಹುದು ಅಥವಾ ಅದೇನು ಅದೃಷ್ಟ ನಾನೂ ನೋಡಿಬಿಡ್ತೀನಿ, ಪ್ರಯತ್ನದ ಮುಂದೆ ಯಾವುದೂ ಲೆಕ್ಕಕ್ಕೆ ಇಲ್ಲ ಎಂದು ಸನ್ನಿವೇಶಕ್ಕೆ ಸೆಡ್ಡು ಹೊಡೆಯೋಣ ಅಂತಲೂ ಅನಿಸಿರಬಹುದು. ಆದರೆ ಎಲ್ಲರ ಪ್ರಯತ್ನವೂ ಯಶ ಕಾಣಬೇಕಲ್ಲ! ಜ್ಯೋತಿಷ ಶಾಸ್ತ್ರದ ರೀತಿಯಾಗಿ ಈ ನಾಲ್ಕು ರಾಶಿಯವರು ಮಹಾನ್ ಅದೃಷ್ಟಶಾಲಿಗಳು. ತಮ್ಮ ಕುಶಾಗ್ರ ಬುದ್ಧಿಯ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲೇ ತಾವು ತೊಡಗಿಕೊಳ್ಳುವ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಂಪಾದಿಸಿ, ಹಣ ಕೂಡ ಗಳಿಸುತ್ತಾರೆ. ಇವರಿಗೆ ಜೀವನವಿಡೀ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ. ಅಂದ ಹಾಗೆ ಯಾವುವು ಆ ನಾಲ್ಕು ರಾಶಿಗಳು ಎಂಬುದನ್ನು ತಿಳಿಯಿರಿ.

ವೃಷಭ ರಾಶಿ ಈ ನಾಲ್ಕು ರಾಶಿಗಳ ಪಟ್ಟಿಯಲ್ಲಿ ಬರುವ ಮೊದಲ ಹೆಸರು ವೃಷಭ ರಾಶಿ. ಈ ರಾಶಿಯ ಜನರು ಭಾಗ್ಯಶಾಲಿಗಳಾಗಿ ಇರುತ್ತಾರೆ. ಜತೆಗೆ ಭಾರೀ ಪರಿಶ್ರಮವನ್ನು ಹಾಕುತ್ತಾರೆ. ಈ ರಾಶಿಯವರ ಅಧಿಪತಿ ಶುಕ್ರನಾದ್ದರಿಂದ ಧನ, ಸಂಪತ್ತು, ವಿಲಾಸಿ ಜೀವನದ ಅನುಗ್ರಹ ಮಾಡುತ್ತಾನೆ. ಆದ್ದರಿಂದ ಇವರ ಜೀವನದಲ್ಲಿ ಐಷಾರಾಮಿಗೆ ಏನೂ ಕೊರತೆ ಇರುವುದಿಲ್ಲ. ಇನ್ನು ವೃಷಭ ರಾಶಿಯವರು ಸ್ವಲ್ಪ ಶ್ರಮ ಪಟ್ಟರೂ ಎತ್ತರವನ್ನು ತಲುಪಿಕೊಂಡು ಬಿಡುತ್ತಾರೆ. ನಿಮಗೆ ಗೊತ್ತಿರಲಿ, ಬಹಳ ಚಿಕ್ಕ ವಯಸ್ಸಿನಲ್ಲೇ ಇವರು ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ.

ಕಟಕ ರಾಶಿ ಕಟಕ ರಾಶಿಯವರು ಈ ವಿಷಯದಲ್ಲಿ ಬಹಳ ಅದೃಷ್ಟವಂತರಾಗಿರುತ್ತಾರೆ. ಈ ರಾಶಿಯವರ ಅಧಿಪತಿ ಚಂದ್ರ ಆಗಿರುತ್ತದೆ. ಆ ಕಾರಣಕ್ಕೆ ಇವರು ಯಾವುದೇ ಕೆಲಸದಲ್ಲಿ ತೊಡಗಿಕೊಂಡರೂ ಮನಸಾರೆ ಅದರಲ್ಲಿ ಭಾಗವಹಿಸುತ್ತಾರೆ. ಜತೆಗೆ ಭಾರಿ ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಇವರ ಪರಿಶ್ರಮವೇ ಫಲಿತಾಂಶ ತಂದುಕೊಡುತ್ತದೆ. ತಾವು ತಲುಪಲು ಬಯಸಿದ ಸ್ಥಾನಮಾನವನ್ನು ಶೀಘ್ರವಾಗಿ ಮುಟ್ಟುತ್ತಾರೆ. ಹಣ ಮಾಡುವ ಯಾವ ಸಂದರ್ಭ ಸಿಕ್ಕರೂ ಸುಮ್ಮನೆ ಬಿಡುವ ಪೈಕಿ ಇವರಲ್ಲ. ಇನ್ನು ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿ ಬರುವ ಸಾಧ್ಯತೆ ಹೆಚ್ಚು. ಈ ಎಲ್ಲವೂ ಸೇರಿಕೊಂಡು ಕಟಕ ರಾಶಿಯವರು ಬಹಳ ಚಿಕ್ಕ ವಯಸ್ಸಿನಲ್ಲೇ ಹೆಚ್ಚು ಕೆಲಸ ಮಾಡುವ ಮತ್ತು ಹಣ ಗಳಿಸುವ ಕ್ಷಮತೆ ಬರುತ್ತದೆ.

ಸಿಂಹ ರಾಶಿ ಈ ರಾಶಿಯವರು ಗುಣ ಮತ್ತು ಪ್ರತಿಭೆಯ ಆಗರವಾಗಿರುತ್ತಾರೆ. ಈ ರಾಶಿಯ ಅಧಿಪತಿ ಸೂರ್ಯ. ಅಂದ ಹಾಗೆ ಈ ರಾಶಿಯ ಅಧಿಪತಿಯಾದ ರವಿಯು ಅಪಾರವಾದ ಯಶಸ್ಸು, ಸಫಲತೆ ಮತ್ತು ಧನ ಗಳಿಸಲು ಸಹಾಯ ಮಾಡುತ್ತದೆ. ಈ ರಾಶಿಯವರಲ್ಲಿ ನಾಯಕತ್ವ ಗುಣ ಬಹಳ ಚೆನ್ನಾಗಿ ಇರುತ್ತದೆ. ಇವರಲ್ಲಿನ ನಾಯಕತ್ವ ಗುಣವೇ ಬಹಳ ವೇಗವಾಗಿ ಬೆಳೆಸುತ್ತದೆ. ಹತ್ತಾರು ಜನರ ಮಧ್ಯೆ ಇರುವಾಗ ಉಳಿದವರಿಗಿಂತ ಭಿನ್ನವಾಗಿ ಕಾಣುತ್ತಾರೆ.

ವೃಶ್ಚಿಕ ರಾಶಿ ಈ ರಾಶಿಯವರು ಪರಿಶ್ರಮಿಗಳು. ಅಧಿಪತಿ ಕುಜ. ಇವರು ಏನನ್ನಾದರೂ ಪಡೆದುಕೊಳ್ಳಬೇಕು ಎಂದು ಬಯಸಿದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಕೆಲಸ ಮಾಡುತ್ತಾರೆ. ವೃಶ್ಚಿಕ ರಾಶಿಯವರ ಶ್ರಮವೇ ಭಾಗ್ಯವಾಗಿ ಪರಿಣಮಿಸುತ್ತದೆ. ಈ ಜನರು ಬಹಳ ಶೀಘ್ರವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಸಾಗುತ್ತಾರೆ. ಭೌತಿಕ ವಸ್ತುಗಳ ಕಡೆಗೆ ಶೀಘ್ರವಾಗಿ ಆಕರ್ಷಿತರಾಗುವ ಇವರು, ತಮ್ಮ ಪರಿಶ್ರಮದ ಮೂಲಕ ಅವುಗಳನ್ನು ಪಡೆದುಕೊಳ್ಳುವಲ್ಲೂ ಸಫಲರಾಗುತ್ತಾರೆ.

ಇದನ್ನೂ ಓದಿ: Jupiter Transit 2021: ಕುಂಭ ರಾಶಿಗೆ ಗುರು ಗ್ರಹ ಪ್ರವೇಶ; ಮೇಷದಿಂದ ಮೀನದ ತನಕ ಏನು ವಿಶೇಷ?

(Taurus, Cancer, Leo, and Scorpio zodiac sign natives become rich at an early age, according to astrology.)

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್