Venus astrology: ಜನ್ಮ ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿದ್ದರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಜನ್ಮ ಜಾತಕದಲ್ಲಿ ಕನ್ಯಾ ರಾಶಿಯಲ್ಲಿ ಶುಕ್ರ ಗ್ರಹ ಇದ್ದರೆ ಅದು ನೀಚ ಸ್ಥಿತಿ ಆಗುತ್ತದೆ. ಹಾಗೊಂದು ವೇಳೆ ನಿಮ್ಮ ಜಾತಕದಲ್ಲಿ ಇದೆಯಾ ನೋಡಿಕೊಳ್ಳಿ. ಜ್ಯೋತಿಷ ಪ್ರಕಾರ ಅದಕ್ಕೆ ಏನು ಫಲಗಳನ್ನು ಹೇಳಲಾಗಿದೆ ಎಂದು ತಿಳಿದುಕೊಳ್ಳಿ.

Venus astrology: ಜನ್ಮ ಜಾತಕದಲ್ಲಿ ಶುಕ್ರ ಗ್ರಹ ನೀಚ ಸ್ಥಾನದಲ್ಲಿದ್ದರೆ ಏನಾಗುತ್ತೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಶುಕ್ರಗ್ರಹ (ಸಂಗ್ರಹ ಚಿತ್ರ)
Follow us
TV9 Web
| Updated By: Skanda

Updated on: Jun 25, 2021 | 6:50 AM

ಶುಕ್ರ ಗ್ರಹ ಅಂದಾಕ್ಷಣ ಬಹುತೇಕರಿಗೆ ಕಿವಿ ನೆಟ್ಟಗಾಗುತ್ತದೆ. ಇನ್ನು ಶುಕ್ರ ದಶೆ ಅನ್ನೋ ಮಾತಂತೂ ಜ್ಯೋತಿಷದ ಗಂಧ- ಗಾಳಿ ಇಲ್ಲದವರಿಗೂ ಚಿರ ಪರಿಚಿತವಾಗಿರುತ್ತದೆ. ಹಾಗಂತ ಶುಕ್ರ ಗ್ರಹ ಎಲ್ಲರಿಗೂ ಒಳಿತನ್ನೇ ಮಾಡುತ್ತದೆಯೇ ಅಂತ ನೋಡಿದರೆ, ಅದಕ್ಕೆ ಇಲ್ಲ ಎಂಬ ಉತ್ತರವನ್ನು ನೀಡಬೇಕಾಗುತ್ತದೆ. ನಿಮಗೆ ಗೊತ್ತಿರಲಿ, ಯಾರ ಜನ್ಮ ಜಾತಕದಲ್ಲಿ ಶುಕ್ರ ಗ್ರಹವು ಕನ್ಯಾ ರಾಶಿಯಲ್ಲಿ ಇರುತ್ತದೋ ಅಂಥವರಿಗೆ ಶುಕ್ರ ನೀಚ ಸ್ಥಾನದಲ್ಲಿದ್ದಾನೆ ಎಂದರ್ಥ. ಆಗ ಅವರಿಗೆ ಶುಕ್ರನ ಅನುಗ್ರಹ ಸಿಗುವುದಿಲ್ಲ. ಇನ್ನು ಶುಕ್ರನ ಕಾರಕತ್ವಕ್ಕೆ ಸಂಬಂಧಿಸಿದಂತೆ ನಾನಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಲಗ್ನದಿಂದ ಆರಂಭಗೊಂಡು, ಯಾವ ಮನೆಯಲ್ಲಿ ಶುಕ್ರ ನೀಚನಾಗಿದ್ದರೆ ಏನು ಫಲ ಎಂದು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ.

ನಿಮ್ಮ ಜಾತಕವನ್ನು ಒಮ್ಮೆ ನೋಡಿಕೊಳ್ಳಿ, ಒಂದು ವೇಳೆ ನೀಚ ಸ್ಥಾನದಲ್ಲಿ ಇದ್ದರೆ ವ್ಯಾಪಾರ, ವ್ಯವಹಾರ, ಉದ್ಯಮ, ಸಿನಿಮಾ ಕ್ಷೇತ್ರಗಳಿಗೆ ಕಾಲಿಡದೆ ಇರುವುದು ಉತ್ತಮ. ಷೇರು ವ್ಯವಹಾರವಂತೂ ಬೇಡವೇ ಬೇಡ. ಕೆಲವರಿಗೆ ವಿವಾಹ ವಿಳಂಬ ಆಗುತ್ತದೆ. ಇನ್ನು ಸಂತಾನ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಶುಕ್ರ ಗ್ರಹ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. ಆದರೆ ಅದಕ್ಕೂ ಮೊದಲು ಜಾತಕದಲ್ಲಿ ಉಳಿದ ಗ್ರಹಗಳ ಸ್ಥಿತಿ ಹಾಗೂ ಶುಕ್ರ ಗ್ರಹದ ಸ್ಥಿತಿಯನ್ನು ನೋಡಿಕೊಳ್ಳಬೇಕು. ಅದಕ್ಕಾಗಿ ಜ್ಯೋತಿಷಿಗಳ ಬಳಿ ಜಾತಕದ ಪರಾಮರ್ಶೆ ಮಾಡಿಸಿ.

ಜನ್ಮ ಜಾತಕದ ಪ್ರಕಾರವಾಗಿ ಲಗ್ನದಲ್ಲೇ, ಅಂದರೆ ಕನ್ಯಾ ಲಗ್ನವಾಗಿದ್ದು, ಅಲ್ಲೇ ಶುಕ್ರನಿದ್ದರೆ ಒಂದನೇ ಮನೆಯಲ್ಲಿ ನೀಚ ಸ್ಥಿತಿಯಲ್ಲಿ ಇದೆ ಎಂದರ್ಥ. ಅದೇ ರೀತಿ ತುಲಾ ಲಗ್ನವಾಗಿದ್ದಲ್ಲಿ ಹನ್ನೆರಡನೇ ಮನೆಯಲ್ಲಿ ನೀಚ ಸ್ಥಾನದಲ್ಲಿದೆ ಎಂದರ್ಥ. ಹೀಗೆ ಯಾವ ಸ್ಥಾನದಲ್ಲಿ ನೀಚವಾಗಿದ್ದರೆ ಏನು ಫಲ ಅಂತ ತಿಳಿಯಲು ಮುಂದೆ ಓದಿ.

ಕನ್ಯಾ ಲಗ್ನ- ಕನ್ಯಾ ರಾಶಿಯಲ್ಲಿ ಶುಕ್ರ ಅಭದ್ರತೆ ಬಹಳ ಕಾಡುತ್ತದೆ. ತಾವು ಹೇಗೆ ಕಾಣಿಸುತ್ತೇವೋ ಹಾಗೂ ತಮ್ಮ ವ್ಯಕ್ತಿತ್ವ, ರೂಪನ ಬಗ್ಗೆ ಸದಾ ನಕಾರಾತ್ಮಕ ಚಿಂತನೆ ಇರುತ್ತದೆ. ಇದರ ಜತೆಗೆ ಆತ್ಮವಿಶ್ವಾಸದ ಕೊರತೆ ಇರುತ್ತದೆ.

ಸಿಂಹ ಲಗ್ನ- ಕನ್ಯಾದಲ್ಲಿ ಶುಕ್ರ ಸಾಮಾನ್ಯವಾದ ಗಳಿಕೆ ಆಗಬೇಕೆಂದರೂ ವಿಪರೀತವಾದ ಶ್ರಮ ಹಾಕಬೇಕಾಗುತ್ತದೆ. ವಿಪರೀತ ವಾಸ್ತವವಾದಿಗಳಾಗಿರುತ್ತಾರೆ. ಮೌಲ್ಯಗಳ ಬಗ್ಗೆ ನಂಬಿಕೆ ಇರೋದಿಲ್ಲ.

ಕರ್ಕಾಟಕ ಲಗ್ನ- ಕನ್ಯಾದಲ್ಲಿ ಶುಕ್ರ ಹೊರಗಿನ ವಸ್ತುಗಳ ಮೂಲಕವೇ ತಮ್ಮ ಜೀವನದ ಸಂತೋಷ ಹಾಗೂ ಶಾಂತಿಯನ್ನು ಕಂಡುಕೊಳ್ಳಲು ಯತ್ನಿಸುತ್ತಾರೆ. ಆದರೆ ಇದರಿಂದಲೇ ಬಹಳ ಅಸಮಾಧಾನ ಇರುತ್ತದೆ. ಸಮಾಧಾನ, ಸುಖ ಎಂಬುದರ ಕೊರತೆ ಸದಾ ಇರುತ್ತದೆ.

ಮಿಥುನ ಲಗ್ನ- ಕನ್ಯಾ ಶುಕ್ರ ಸದಾ ಇವರನ್ನು ತಾವು ಒಬ್ಬಂಟಿ ಎಂಬ ಆತಂಕ ಕಾಡುತ್ತಲೇ ಇರುತ್ತದೆ. ಪ್ರಣಯ ಸಂಬಂಧಗಳಲ್ಲಿ ಹಿನ್ನಡೆ ಆಗುತ್ತದೆ. ಖರ್ಚು- ವೆಚ್ಚಗಳು ಕಡಿಮೆ ಆಗುತ್ತವೆ. ಆದರೆ ಇವರಿಗೆ ಪೂರ್ಣ ಪ್ರಮಾಣದ ಲೈಂಗಿಕ ಸುಖ ಸಿಗುವುದಿಲ್ಲ.

ವೃಷಭ ಲಗ್ನ- ಕನ್ಯಾ ಶುಕ್ರ ಇವರಿಗೂ ಪ್ರಣಯ ಸಂಬಂಧದಲ್ಲಿ ಹಿನ್ನಡೆ ಆಗುತ್ತದೆ ಮತ್ತು ಸಟ್ಟಾ ವ್ಯವಹಾರದಲ್ಲಿ ನಷ್ಟ ಕಾಣುತ್ತಾರೆ. ಈ ಸ್ಥಾನದಲ್ಲಿ ಶುಕ್ರನಿಂದ ಅಷ್ಟೊಂದು ಸಮಸ್ಯೆ ಆಗಲ್ಲ. ಆದರೆ ನೈತಿಕವಾಗಿ ವ್ಯಕ್ತಿತ್ವ ಹಾಳಾಗುವ ಅವಕಾಶ ಹೆಚ್ಚಿರುತ್ತದೆ ಹಾಗೂ ಉಡಾಫೆ ಹೆಚ್ಚಾಗಿರುತ್ತದೆ.

ಮೇಷ ಲಗ್ನ- ಕನ್ಯಾ ಶುಕ್ರ ಸಂಗಾತಿಯಲ್ಲಿ ತಪ್ಪು ಹುಡುಕುವುದರಲ್ಲೇ ಹೆಚ್ಚಿನ ಸಮಯವನ್ನು ಇವರು ಕಳೆಯುತ್ತಾರೆ. ಧಾರ್ಮಿಕ ಚಿಂತನೆ ಇರುವುದಿಲ್ಲ.

ಮೀನ ಲಗ್ನ- ಕನ್ಯಾ ಶುಕ್ರ ಪಾರ್ಟನರ್​ಷಿಪ್ ವ್ಯವಹಾರಗಳಲ್ಲಿ ಸಮಸ್ಯೆಗಳಾಗುತ್ತವೆ. ಲಂಪಟತನದ ಕಾರಣಕ್ಕೆ ಸಂಗಾತಿಯೊಂದಿಗೆ ಮನಸ್ತಾಪ ಆಗುತ್ತದೆ. ಇದರ ಜತೆಗೆ ಆಲಸ್ಯ ಹೆಚ್ಚಿರುತ್ತದೆ.

ಕುಂಭ ಲಗ್ನ- ಕನ್ಯಾ ಶುಕ್ರ ಕೌಟುಂಬಿಕ ಜೀವನ ತುಂಬ ಕಷ್ಟದಿಂದ ಕೂಡಿರುತ್ತದೆ. ಧಾರ್ಮಿಕ ನಂಬಿಕೆ ಕಡಿಮೆ ಆಗುತ್ತದೆ. ಲೈಂಗಿಕ ವಾಂಛೆ ಜಾಸ್ತಿಯಿರುತ್ತದೆ.

ಮಕರ ಲಗ್ನ- ಕನ್ಯಾ ಶುಕ್ರ ಮಕ್ಕಳ ಜತೆಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರೇಮ- ಪ್ರೀತಿ ಜೀವನದಲ್ಲಿ ನಾನಾ ಬಗೆಯ ತೊಂದರೆಗಳನ್ನು ಕಾಣುವಂತಾಗುತ್ತದೆ. ಹಣಕಾಸು, ವಸ್ತು ವಿಷಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ.

ಧನುಸ್ಸು ಲಗ್ನ- ಕನ್ಯಾ ಶುಕ್ರ ಸರಿಯಾದ ಗುರಿ ಇರುವುದಿಲ್ಲ. ಸಹೋದ್ಯೋಗಿಗಳು, ಅದರಲ್ಲೂ ಮಹಿಳಾ ಸಹೋದ್ಯೋಗಿಗಳಿಂದ ಸಮಸ್ಯೆಗಳು ಎದುರಾಗುತ್ತವೆ. ಇನ್ನು ಮಹಿಳೆಯರೇ ಆಗಿದ್ದಲ್ಲಿ ಉದ್ಯೋಗ ಸ್ಥಳದಲ್ಲಿ ತಮ್ಮ ಗೌರವ ಕಾಪಾಡಿಕೊಳ್ಳುವುದು ಸವಾಲಾಗಿ ಪರಿಣಮಿಸುತ್ತದೆ.

ವೃಶ್ಚಿಕ ಲಗ್ನ- ಕನ್ಯಾ ಶುಕ್ರ ಸಾಮಾಜಿಕವಾದ ಜೀವನ, ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಾಂಟ್ರ್ಯಾಕ್ಟ್​ಗಳು ಮತ್ತು ದೊಡ್ಡ ವ್ಯವಹಾರಗಳು ಸಮಸ್ಯೆಯಾಗಿ ಪರಿಣಮಿಸುತ್ತವೆ. ಇವರು ಸೋಮಾರಿಗಳಾಗುವಂತೆ ಮಾಡುತ್ತದೆ.

ತುಲಾ ಲಗ್ನ- ಕನ್ಯಾ ಶುಕ್ರ ಆರೋಗ್ಯದಲ್ಲಿ ಏರುಪೇರುಗಳು ಇರುತ್ತವೆ. ದೈಹಿಕ ಸಂಬಂಧದಲ್ಲಿ ಕೊರತೆ ಕಾಣಿಸುತ್ತದೆ. ಪೂರ್ಣ ಪ್ರಮಾಣದಲ್ಲಿ ಸುಖ- ಸಂತೋಷ ಸಿಗುವುದಿಲ್ಲ.

ಇದನ್ನೂ ಓದಿ: Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ

ಇದನ್ನೂ ಓದಿ: The Most Dangerous Zodiac Signs: ಈ ರಾಶಿಯ ಕ್ರಿಮಿನಲ್​ಗಳು ಬಹಳ ಅಪಾಯಕಾರಿ ಎನ್ನುತ್ತಿವೆ ಎಫ್​ಬಿಐ ಡೇಟಾ

(If Venus planet debilitated in Virgo at the time of birth of native what will be the impact on native according to astrology. Here is an explainer)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್