Horoscope Today May 31, 2024: ತಾಳ್ಮೆ ಕಳೆದುಕೊಳ್ಳದೇ ವ್ಯವಹರಿಸಿ, ದಾಂಪತ್ಯದಲ್ಲಿ ಸ್ವಪ್ರತಿಷ್ಠೆ ತೋರುವಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: May 30, 2024 | 6:43 PM

2024 ಮೇ 30ರ ದಿನ ಭವಿಷ್ಯ: ಶುಕ್ರವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope Today May 31, 2024: ತಾಳ್ಮೆ ಕಳೆದುಕೊಳ್ಳದೇ ವ್ಯವಹರಿಸಿ, ದಾಂಪತ್ಯದಲ್ಲಿ ಸ್ವಪ್ರತಿಷ್ಠೆ ತೋರುವಿರಿ
ತಾಳ್ಮೆ ಕಳೆದುಕೊಳ್ಳದೇ ವ್ಯವಹರಿಸಿ, ದಾಂಪತ್ಯದಲ್ಲಿ ಸ್ವಪ್ರತಿಷ್ಠೆ ತೋರುವಿರಿ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಮೇ​​​​​ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವಿಷ್ಕಂಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:54ರಿಂದ ಮಧ್ಯಾಹ್ನ 12:31ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:44 ರಿಂದ ಸಂಜೆ 05:21ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:41 ರಿಂದ 09:17ರ ವರೆಗೆ.

ಮೇಷ ರಾಶಿ: ಸಿಕ್ಕಿದಷ್ಟನ್ನೇ ಸ್ವೀಕರಿಸಿ ತೃಪ್ತಿಪಡಿ. ಆಪತ್ತಿನಲ್ಲಿ ಸಹಾಯ ಮಾಡಲಿಲ್ಲ ಎಲ್ಲರನ್ನೂ ಶಪಿಸುವ ಅವಶ್ಯಕತೆ ಇಲ್ಲ ವಿದ್ಯಾಭ್ಯಾಸದಿಂದ ಲಾಭವಿದೆ ಎಂದು ಅನ್ನಿಸಿ ಶ್ರಮವಹಿಸುವಿರಿ. ಏಕಾಗ್ರತೆಗೆ ನಾನಾ ಪ್ರಕಾರದಲ್ಲಿ ಪರೀಕ್ಷೆಗಳು ಆಗಬಹುದು. ಆರ್ಥಿಕವಾಗಿ ಇಂದು ಸ್ವಲ್ಪ ದುರ್ಬಲರಾಗುವಿರಿ. ಸಮೀಪದಲ್ಲಿದ್ದು ದೂರುವವರನ್ನು ದೂರ ಮಾಡಿಕೊಳ್ಳುವಿರಿ. ಆಗಿದ್ದನ್ನು ನೆನಪಿಸಿಕೊಳ್ಳುತ್ತ ಕುಳಿತುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಆಗಬೇಕಿರುವುದರ ಕಡೆ ಗಮನವಿರಲಿ. ನಿಮ್ಮನ್ನು ಸರಿದಾರಿಯಲ್ಲಿ ನಡೆಸುವನು. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ಬಹಳಷ್ಟು ಕಾರ್ಯಗಳಿದ್ದರೂ ಎಲ್ಲವನ್ನೂ ಬಿಟ್ಟು ಆರಾಮಾಗಿ ಇರುವಿರಿ. ಕಳೆದ ಸಮಯವನ್ನು ನೀವು ಮೆಲುಕು ಹಾಕಿ ಸಮಯ ವ್ಯರ್ಥವಾಗಬಹುದು. ಕಲಾವಿದರು ಉತ್ತಮ‌ ಅವಕಾಶವನ್ನು ಅನಿರೀಕ್ಷಿತವಾಗಿ ಪಡೆಯುವಿರಿ.

ವೃಷಭ ರಾಶಿ: ಇಂದಿನ ಕೆಲಸಗಳ ಯೋಜನೆ ಬಗ್ಗೆ ಸರಿಯಾದ ದೃಷ್ಟಿ ಇರಲಿ. ದೂರಪ್ರಯಾಣ ಸುಖಕರವಾಗಿ ಇರುವುದು.‌ ಧಾರ್ಮಿಕವಾದ ನಂಬಿಕೆ ಉಳ್ಳ ನೀವು ತೀರ್ಥಕ್ಷೇತ್ರಗಳೋ ದೇವಾಲಯಕ್ಕೋ ಭೇಟಿ ಕೊಡುವಿರಿ. ಕೆಲಸವಾಗಲಿಲ್ಲವೆಂದು ಹತಾಶವಾಗಬೇಡಿ. ಆಗುವ ಕಾಲಕ್ಕೆ ಆಗಿಯೇ ಆಗುವುದು ಎನ್ನುವ ದೃಢವಾದ ನಂಬಿಕೆಯನ್ನು ಇಟ್ಟಿರಿ. ಯಾರನ್ನೂ ಪರೋಕ್ಷವಾಗಿಯೂ ಟೀಕಿಸಬೇಡಿ. ಯಾರ ಮೇಲೂ ಅಸೂಯೆ ಬೇಡ. ಆರೋಪಗಳಿಂದ ಮುಕ್ತರಾಗುವುದು ಕಷ್ಟವಾಗುವುದು. ಇಂದು ಕುಟುಂಬದವರ ಮಾತುಗಳು ನಿಮ್ಮ ಮನಸ್ಸಿಗೆ ನಾಟಬಹುದು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಗೊಳ್ಳುವರು. ಸ್ಪರ್ಧಾತ್ಮಕ ವಿಚಾರದಲ್ಲಿ ಹಿಂದುಳಿಯಬೇಕಾಗುವುದು. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳುವಿರಿ. ಪೂರ್ವಪುಣ್ಯವು‌ ನಿಮ್ಮನ್ನು ಕಾಪಾಡುವುದು. ಧೈರ್ಯವಾಗಿರುವಿರಿ.

ಮಿಥುನ ರಾಶಿ: ಎಲ್ಲ ಕೆಲಸವನ್ನೂ ಬೇರೆಯವರೇ ಮಾಡಲಿ ಎಂಬ ಮಾನಸಿಕ ಸ್ಥಿತಿಯನ್ನು ಬಿಡುವುದು ಒಳ್ಳೆಯದು. ನಿಮಗೆ ಸಾಧ್ಯವಾದ ಕೆಲಸಗಳನ್ನು ಮಾಡಿ. ಸ್ವಂತ ಭೂಮಿಯನ್ನು ಮಾರುವ ಸ್ಥಿತಿಯು ಎದುರಾದೀತು. ಅತ್ಯಮೂಲ್ಯವಾದ ಸಂಪತ್ತುಗಳನ್ನು ರಕ್ಷಿಸಿಕೊಳ್ಳವುದು ಉತ್ತಮ. ಯಾರೂ ತನ್ನನ್ನು ರಕ್ಷಿಸರು, ಜೊತೆಗಾರರು ಇಲ್ಲ ಎಂದುಕೊಳ್ಳುವುದು ಬೇಡ. ದೈವವು ಇರುವುದು. ಹಗುರವಾದ ಮಾತುಗಳು ನಿಮ್ಮನ್ನು ಹಗುರ ಮಾಡುವುದು. ಅತಿಯಾದ ಹಸಿವು ನಿಮ್ಮನ್ನು ಬಾಧಿಸಬಹುದು. ಜವಾಬ್ದಾರಿಯುತ ಸ್ಥಾನದಲ್ಲಿದ್ದರೆ ನಿಮ್ಮ ಕೆಲಸಗಳು ಅಚ್ಚುಕಟ್ಟಾಗಿ ಇರಬೇಕಿದೆ. ನಿಮಗೆ ಬರುವ ಆಪತ್ತುಗಳು ನಿಮ್ಮನ್ನು ಗಟ್ಟಿಯಾಗಿಸುತ್ತವೆ. ವೈವಾಹಿಕ ಜೀವನದ ಬಗ್ಗೆ ಮಾತನಾಡುತ್ತಾ ಹಳೆಯದನ್ನು ನೆನಪಿಸಿಕೊಳ್ಳುವಿರಿ. ಶಿಸ್ತಿಗೆ ಹೆಚ್ಚು ಗಮನವನ್ನು ಇಂದು ಕೊಡುವಿರಿ. ಸಂಗಾತಿಯ ಮನೋರಥವನ್ನು ಈಡೇರಿಸುವುದು ಕಷ್ಟವಾಗುವುದು. ನಿಮ್ಮ ಪ್ರೇಮಪ್ರಕರಣವು ದುಃಖದಲ್ಲಿ ಕೊನೆಯಾಗಬಹುದು.

ಕಟಕ ರಾಶಿ: ತಪ್ಪನ್ನು ಒಪ್ಪಿಕೊಂಡು ಮುನ್ನಡೆದರೆ ಎಲ್ಲವೂ ಸುಖವಾಗುವುದು. ದಾಂಪತ್ಯದಲ್ಲಿ ಉಂಟಾದ ವೈಮನಸ್ಯವನ್ನು ಪ್ರಕಟಗೊಳಿಸಿದೇ ಅಲ್ಲಿಯೇ ಸರಿಮಾಡಿಕೊಳ್ಳಿ. ವಿದೇಶಕ್ಕೆ ಹೋಗಬೇಕಾಗಿಬರುವ ಸಾಧ್ಯತೆ ಇದೆ. ಯಂತ್ರಗಳ ಉದ್ಯಮವನ್ನು ಮಾಡುತ್ತಿದ್ದರೆ ಅಧಿಕಲಾಭವು ಆಗಬಹುದು‌ ಒತ್ತಡವು ನಿಮ್ಮನ್ನು ದಿಗ್ಭ್ರಾಂತರನ್ನಾಗಿ ಮಾಡುವುದು. ಸಾಲಬಾಧೆಯಿಂದ ಮುಕ್ತರಾಗುವ ತವಕದಲ್ಲಿರುವಿರಿ. ಯಾರಿಂದಲೂ ಅತಿಯಾದ ನಿರೀಕ್ಷಿಸದೇ ಕರ್ತವ್ಯ ಎಂದು ತಿಳಿದು ಕೆಲಸ ಮಾಡಿ. ಪ್ರಯಾಣವು ಆಯಾಸ ತರಿಸಬಹುದು. ಎಲ್ಲರ ಜೊತೆ ಜಗಳವಾಡುತ್ತ ಇರುವುದು ನಿಮಗೆ ಇಷ್ಟವಾಗಬಹುದು. ಆಸ್ತಿಯ ವಿಚಾರದಲ್ಲಿ ಆಸೆಯನ್ನು ಅತಿಯಾಗಿ ಇಟ್ಟುಕೊಳ್ಳುವಿರಿ. ಇದರಿಂದ‌ ನಿಮ್ಮ ಜೊತೆಗಾರ ಸ್ಥಿತಿಯೂ ಹದ ತಪ್ಪಬಹುದು. ಪ್ರೇಮ ಜೀವನದಲ್ಲಿ ಪ್ರೀತಿ ಹೆಚ್ಚಾಗಿ ಉತ್ಸಾಹದಿಂದ ಇರುವಿರಿ. ಯಾರಾದರೂ ತಪ್ಪು ತಿಳಿದಾರು ಎಂಬ ಭಾವವು ನಿಮ್ಮನ್ನು ಕಾಡಬಹುದು. ನೀವು ಹೊಸ ವಾಹನವನ್ನು ಸ್ನೇಹಿತರ ಸಹಾಯದಿಂದ ಖರೀದಿಸುವಿರಿ.

ಸಿಂಹ ರಾಶಿ: ಇಂದು ನಿಮ್ಮ ಹಳೆಯ ಕನಸಿಗೆ ಮೂರ್ತರೂಪ ಸಿಗುವುದು. ನಿಮ್ಮಿಂದ ಹೆತ್ತವರು ಸುಖಪಡುವರು. ಸ್ನೇಹಿತರಿಗೆ ಮಾಡಿದ ಸಹಾಯದಿಂದ ನಿಮಗೆ ಅನುಕೂಲವಗಲಿದೆ. ಸಾಮಾಜಿಕ ಕಾರ್ಯದಲ್ಲಿ ನಿಮಗೆ ಆಸಕ್ತಿಯು ಉಂಟಾಗುವ ಸಾಧ್ಯತೆ ಇದೆ. ಅತಿಯಾದ ಆಪ್ತತೆಯಿಂದ ನಿಮಗೆ ತೊಂದರೆಯಾಗಬಹುದು. ಕೆಲವು ಸಂದರ್ಭಗಳಲ್ಲಿ ಹಿನ್ನಡೆಯೂ ಕೂಡ ಪ್ರಯೋಜನಕಾರಿಯೇ ಆಗಿದೆ. ಯಾರದೋ ತಪ್ಪಿನಿಂದ ನೀವು ಕಷ್ಟವನ್ನು ಪಡಬೇಕಾದೀತು. ಸರ್ಕಾರಿ ಕೆಲಸವು ವಿಳಂಬವಾಗುವ ಸಾಧ್ಯತೆ ಇದೆ. ಸಿಕ್ಕ ಯಶಸ್ಸನ್ನು ಲಾಭವಾಗಿಸಿಕೊಳ್ಳುವಿರಿ. ಸಂಗಾತಿಯ ಪ್ರೀತಿಯು ನಿಮಗೆ ಅಚ್ಚರಿಯನ್ನು ಉಂಟುಮಾಡೀತು. ಮೋಹದಿಂದ ಸರಿ ತಪ್ಪುಗಳ ವಿವೇಚನೆ ದೂರಾಗುವುದು. ಯಾರಾದರೂ ನಿಮ್ಮನ್ನು ತೆಗಳಿದರೆ ಅದನ್ನು ನೀವು ಸಕಾರಾತ್ಮಕವಾಗಿ ಸ್ವೀಕರಿಸಿ. ಬಂಧುಗಳ ಚರಾಸ್ತಿಯು ಸಿಗಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳು ಹೆಚ್ಚಾಗುವುದು.‌

ಕನ್ಯಾ ರಾಶಿ: ಇಂದಿನ ನಿಮ್ಮ ಕೋಪವನ್ನು ಶಾಂತ ಮಾಡಲು ಸಂಗಾತಿಯು ಶ್ರಮಪಡಬಹುದು. ನಿಮ್ಮ ಮನಸ್ಸು ಅತಿ ಚಾಂಚಲ್ಯದಿಂದ ಇರಲಿದ್ದು, ಕೆಲಸವು ಹಾಳಾಗಬಹುದು. ಬಹಳ ಗೊಂದಲಗಳನ್ನು ಇಟ್ಟುಕೊಂಡಿರುವಿರಿ. ಮಾತನಿಂದ ಆಗದೇ ಇರುವ ಕೆಲಸವು ಮೌನದಿಂದ ಆಗಬಹುದು, ಪ್ರಯತ್ನಿಸಿ‌. ಇನ್ನೊಬ್ಬರ ಕುರಿತು ಕುತೂಹಲವನ್ನು ಇಟ್ಟುಕೊಂಡಿರುತ್ತೀರಿ. ಹಠವನ್ನು ನೀವು ಕಡಿಮೆ ಮಾಡದೇ ನಿಮ್ಮ ಯಾವ ಕಾರ್ಯಗಳು ಸರಿಯಾಗಿ ಮುಂದುವರಿಯದು. ಮಕ್ಕಳು ನಿಮ್ಮ ಜೊತೆ ಕಳೆಯಲು ಇಚ್ಛಿಸುವರು. ನಿಮ್ಮಿಂದ‌ ಕುಟುಂಬಕ್ಕೆ ಯಾವುದೇ ಸಲಹೆಯು ಇಲ್ಲದಂತೆ ಅನ್ನಿಸಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡುಕೊಳ್ಳುವಿರಿ. ಬಂಧುಗಳ ಜೊತೆ ಆತ್ಮೀಯ ಒಡನಾಟ ಮಾಡುವಿರಿ. ಅಚಾತುರ್ಯವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಇನ್ನೊಬ್ಬರ ಅಹಂಕಾರಕ್ಕೆ ಸೊಪ್ಪು ಹಾಕುವುದು ಬೇಡ. ನಿರ್ಲಕ್ಷ್ಯದಿಂದ ಎಲ್ಲವೂ ಸಾಧ್ಯ. ಹೂಡಿಕೆಯ ವಿಚಾರವಾಗಿ ಚರ್ಚಿಸುವಿರಿ.

ತುಲಾ ರಾಶಿ: ಇಂದು ನಿಮ್ಮ ಸಮಾಜಮುಖೀ ಕಾರ್ಯಗಳಿಗೆ ಗೌರವ, ಪ್ರಶಂಸೆಗಳು ಸಿಗಲಿವೆ. ನೆರೆ-ಹೊರೆಯವರನ್ನು ಚೆನ್ನಾಗಿ ಇಟ್ಟುಕೊಳ್ಳಿ. ನಿಮ್ಮ ಕಾರ್ಯಕ್ಕೆ ವಿದೇಶದಿಂದ ಕರೆ ಬರಬಹುದು. ಅದರಿಂದ ನಿಮ್ಮ ಯೋಜನೆಗಳು ಸ್ವಲ್ಪ ವ್ಯತ್ಯಾಸವಾಗಬಹುದು. ಸರಿಯಾಗಿ ಸಾಗುವ ಕಾರ್ಯಕ್ಕೆ ಅಡ್ಡಗಾಲು ಹಾಕುವುದು ಸರಿಯಾಗದು. ಯಾರಿಂದಲೂ ಏನನ್ನೂ ನಿರೀಕ್ಷಿಸದೇ ಕೆಲಸ ಮಾಡುವುದು ನಿಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ಗೌರವ ಸೇರ್ಪಡೆಯಾಗಲಿದೆ. ನಿಮ್ಮ‌ ಮಾತಿಗೆ ಬೆಲೆ ಇಲ್ಲವಾದೀತು. ದೈವದ ಮೇಲೆ‌ ಅಪನಂಬಿಕೆ ಬರಬಹುದು. ನಿಮ್ಮ ತಪ್ಪನ್ನು ಎಲ್ಲರೆದು ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಲಾವಿದರ ಜೊತೆ ನಿಮ್ಮ ನಂಟು ಬೆಳೆಯಬಹುದು. ನಿದ್ರೆಯಿಲ್ಲದೇ ಚಿಂತೆ ಆರಂಭವಾಗುವುದು. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಮಾಡಿ ಕಾಲಹರಣ ಮಾಡುವಿರಿ.

ವೃಶ್ಚಿಕ ರಾಶಿ: ನೀವು ಅಂದುಕೊಂಡಿದ್ದು ಮಾತ್ರ ಸತ್ಯವಾಗಲಾರದು. ಅದಕ್ಕಿರುವ ಮುಖವನ್ನು ಗಮನಿಸಿ ತೀರ್ಮಾನಕ್ಕೆ ಬನ್ನಿ. ಸಾಲವಾಧೆ ಎದುರಾಗಲಿದ್ದು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಹಣವು ನಿಮಗೆ ಸಿಗದೇ ಓಡಾಟವನ್ನು ನಡೆಸುವ ಸಾಧ್ಯತೆ ಇದೆ. ಅತಿಯಾದ ಆಲೋಚನೆಯಿಂದ ಮನಸ್ಸು ಹಾಳಾಗಬಹುದು. ನಿಮ್ಮ ಯೋಚನೆಗಳನ್ನು ಯಾರಮೇಲೂ ಹೇರಬೇಡಿ. ಶಿಸ್ತನ್ನು ಕಾಪಾಡಿಕೊಂಡು ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಸಂತಾನದ ಬಗ್ಗೆ ನಿಮಗೆ ಅತಿಯಾದ ಆಸೆಯಾಗುವುದು. ಆಪ್ತರ ವಿಯೋಗವು ನಿಮ್ಮನ್ನು ಕುಗ್ಗಿಸಬಹುದು. ಅಧಿಕಾರದ ಬಗ್ಗೆ ವ್ಯಾಮೋಹವು ಕಡಿಮೆಯಾಗುವುದು. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳುವಿರಿ. ಕಳೆದ ವಸ್ತುವನ್ನು ಯಾರದೋ ಮೂಲಕ ಪಡೆದುಕೊಳ್ಳುವಿರಿ.

ಧನು ರಾಶಿ: ಅಲ್ಪರ ಸಂಗದಿಂದ ಸ್ವಾಭಿಮಾನ ಧಕ್ಕೆ ಬರುವುದು. ಮುಜುಗರವನ್ನು ಎದುರಿಸ ಬೇಕಾಗಬಹುದು. ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ಬಯಸಿದರೆ ನಕಾರಾತ್ಮಕ ಉತ್ತರವನ್ನು ಕೊಡಬೇಡಿ. ಒಪ್ಪಿಕೊಂಡು ಸ್ವಲ್ಪ ದಿನದವರೆಗೆ ಕಾಯಿರಿ. ಸಾಧ್ಯವಾದಷ್ಟು ತಾಳ್ಮೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಮನೆಯ ಕಡೆಯಿಂದ ಅನಿರೀಕ್ಷಿತ ಅಶುಭವಾರ್ತೆಯು ಬರಬಹುದು. ಉತ್ತಮ ಬಾಂಧವ್ಯವು ಕ್ಷುಲ್ಲಕ ಕಾರಣಕ್ಕೆ ಕೆಟ್ಟುಹೋಗಬಹುದು. ನಿಮಗೆ ಕೆಲಸವು ಭಾರವೆನಿಸಿದರೆ ಅದನ್ನು ತಿಳಿಸಿ. ಹೊತ್ತುಕೊಂಡು ಇರುವುದು ಕಷ್ಟ. ಉದ್ಯೋಗದ ನಿಮಿತ್ತ ಬೇರೆ ಕಡೆಗೆ ಹೋಗಬಹುದು. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನೀವು ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು. ನಿಮ್ಮ ಮಾತಿಗೆ ಬೆಂಬಲವಿರುವುದು. ಹಳೆಯ ನೆನಪುಗಳು ನಿಮ್ಮ ಕಾಡುವುವು. ನಿಮ್ಮ ಚೌಕಟ್ಟಿನೊಳಗೆ ಎಲ್ಲವೂ ಬರಬೇಕು ಎಂಬ ಧೋರಣೆ ಸರಿಯಾಗದು.

ಮಕರ ರಾಶಿ: ಮೇಲಧಿಕಾರಿಗಳ ಮಾತನ್ನು ಲಘುವಾಗಿ ತೆಗೆದುಕೊಂಡು ಕೆಂಗಣ್ಣಿಗೆ ಗುರಿಯಾಗುವಿರಿ. ಕಾರ್ಯದ ಒತ್ತಡ ನಿಮ್ಮನ್ನು ಇಂದು ಬಂಧಿಸಿ ಇಡಲಿದೆ. ಹೊಸ ವಸ್ತ್ರದ ಖರೀದದಿಯಾಗಲಿದೆ‌. ಅನಿರೀಕ್ಷಿತ ಬಂಧುಗಳ ಆಗಮನವು ಮನೆಯಲ್ಲಿ ಹಬ್ಬದಂತಾಗುವುದು. ಇನ್ನೊಬ್ಬರನ್ನು ನೋಡಿ ಅಸೂಯೆ ಪಡುವುದನ್ನು ಬಿಟ್ಟರೆ ಒಳ್ಳೆಯದು. ನಿಮ್ಮ ಯಶಸ್ಸಿನ ದಾರಿಯನ್ನು ನೀವೇ ಕಂಡುಕೊಳ್ಳಬೇಕು. ವೃತ್ತಿಪರರು ನಿರಾಳರತೆಯಲ್ಲಿ ಇರುವಿರಿ. ಬೇಕಾದುದನ್ನು ಪಡೆಯದೇ ಮನಸ್ಸಿಗೆ ಸಂಕಟವಾಗುವುದು. ಕಲಾಸಕ್ತಿಯು ನಿಮ್ಮನ್ನು ಕಲಿಕೆಗೆ ಜೋಡಿಸಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಸಂಶೋಧನೆಯಲ್ಲಿ ಹೊಸ ಮಾರ್ಗವು ಕಾಣಿಸಿಕೊಳ್ಳುವುದು. ಸಮಯವೂ ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ಆತ್ಮಿಯರ ಜೊತೆ ಮಾತುಕತೆಗೆ ಇಳಿಯುವಿರಿ. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ನಾಯಕರ ವ್ಯಕ್ತಿತ್ವದಲ್ಲಿ ಬದಲಾವಣೆ ಆಗುವುದು.

ಕುಂಭ ರಾಶಿ: ಇಂದು ನಿಮ್ಮನ್ನು ಕಾಳಜಿ ಮಾಡುವವರ ಜೊತೆ ಸಮಯವನ್ನು ಕಳೆಯುವುದು ಉತ್ತಮ ಎನಿಸಬಹುದು. ದೂರದ ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಿ. ಯಾರ ಮೇಲೂ ದ್ವೇಷವನ್ನು ಸಾಧಿಸಿ ಆಗುವುದೇನಿಲ್ಲ. ಸಮಯ ಹಾಳು ಅಷ್ಟೇ. ಸಂಗಾತಿಯ ಜೊತೆ ಹಣಕಾಸಿನ ವಿಚಾರದಲ್ಲಿ ಕಲಹವಾಗಬಹುದು. ಅದಕ್ಕೆ ತುಪ್ಪವನ್ನು ಸುರಿಯದೇ ಇದ್ದರೆ ಸ್ವಲ್ಪ ಸಮಯಕ್ಕೆ ಶಾಂತವಾಗಲಿದೆ. ಕಾರಣವಿಲ್ಲದೆ ಸಂತೋಷವಾಗಿರುವುದನ್ನು ಅಭ್ಯಾಸ ಮಾಡಿ. ಆಕಸ್ಮಿಕವಾಗಿ ಆಗಿವ ಘಟನೆಗಳನ್ನು ಮನಸಾರೆ ಸ್ವೀಕರಿಸಿ. ನಿಮ್ಮನ್ನು ನೀವು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದು ಶ್ರೇಯಸ್ಕರ. ನಿಮ್ಮ ತಂದೆಯ ಜೊತೆ ಸ್ನೇಹದ ಸಂಬಂಧವನ್ನು ಇಟ್ಟುಕೊಳ್ಳುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಆಡಿದ ಮಾತಿಗೆ ಪಶ್ಚಾತ್ತಾಪಪಡಬೇಕಾದೀತು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗುವಿರಿ.

ಮೀನ ರಾಶಿ: ನಿಮ್ಮ ಸಂಕೋಚದ ಸ್ವಭಾವದಿಂದ ಹೇಳಬೇಕಾದ ವಿಚಾರವನ್ನು ಹೇಳದೇ ಸುಮ್ಮನಾಗುವಿರಿ.‌ ಉದ್ಯೋಗ ಸೃಷ್ಟಿಗೆ ಬೇಕಾದ ಬಂಡವಾಳವು ಸಿಗಲಿದೆ. ಸಾಲ ಪಡೆದವರು ಮರಳಿ ನೀಡಲಿದ್ದಾರೆ. ಈ ಅನಿರೀಕ್ಷಿತ ಧನಾಗಮನದ ನಿರೀಕ್ಷೀತ ಧನಾಗಮನ ನೆಮ್ಮದಿ ಕೊಡಲಿದೆ. ವಿದ್ಯಾರ್ಥಿಗಳು ಉನ್ನತಿಯನ್ನು ಸಾಧಿಸಲು ಯೋಜನೆಯನ್ನು ಹಾಕಿಕೊಳ್ಳುವುದು ಒಳ್ಳೆಯದು. ತಾಳ್ಮೆಯನ್ನು ಕಳೆದುಕೊಳ್ಳದೇ ವ್ಯವಹರಿಸಿ. ವಿವೇಚನೆಯಿಂದ ಕೆಲಸಗಳನ್ನು ಮಾಡಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಾಲಕ್ಕೆ ಏನನ್ನಾದರೂ ಅಡವಿಡಬೇಕಾಗಬಹುದು. ವಾಹನಕ್ಕಾಗಿ ಖರ್ಚು ಮಾಡಬೇಕಾಗುವುದು. ತಿರುಗಾಟದಲ್ಲಿರುವ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ ವ್ಯಕ್ತಪಡಿಸಬಹುದು. ನಿಮಗೆ ಅಧಿಕ‌ ಖರ್ಚು ಎಂದು ಕಂಡರೆ ಅದನ್ನು ಮಾಡದೇ ಇರುವುದು ಉತ್ತಮ. ಇಷ್ಟವಿಲ್ಲದಿದ್ದರೂ ನೀವು ಹಿರಿಯರ ಮಾತನ್ನು ಕೇಳಬೇಕಾಗುವುದು. ಪ್ರೇಮಜೀವನವು ನಿಮಗೆ ಬಂಧನವಾದೀತು.

ಲೋಹಿತ ಹೆಬ್ಬಾರ್-8762924271 (what’s app only)