ಪ್ರಜ್ವಲ್ ವಾಪಸಾಗಲು ರೇವಣ್ಣ ಇಟ್ಟ ಮುಹೂರ್ತಕ್ಕಿದೆ ವಿಶೇಷ ಶಕ್ತಿ! ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ

ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಪ್ರಜ್ವಲ್ ಭಾರತಕ್ಕೆ ಬರಲು ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಅವರೇ ಮುಹೂರ್ತ ಫಿಕ್ಸ್ ಮಾಡಿಸಿದ್ದಾರೆ ಎನ್ನಲಾಗಿದೆ. ಪ್ರಜ್ವಲ್ ಭಾರತಕ್ಕೆ ಬರುವ ದಿನಾಂಕ ಮತ್ತು ಮುಹೂರ್ತದಿಂದ ಜ್ಯೋತಿಷ್ಯ ಪ್ರಕಾರ ಪ್ರಜ್ವಲ್​ಗೆ ಏನು ಲಾಭವಾಗಲಿದೆ ಎಂಬ ಬಗ್ಗೆ ಖ್ಯಾತ ವೈದಿಕ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ವಿಶ್ಲೇಷಣೆ ಮಾಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಪ್ರಜ್ವಲ್ ವಾಪಸಾಗಲು ರೇವಣ್ಣ ಇಟ್ಟ ಮುಹೂರ್ತಕ್ಕಿದೆ ವಿಶೇಷ ಶಕ್ತಿ! ಜ್ಯೋತಿಷ್ಯ ವಿಶ್ಲೇಷಣೆ ಇಲ್ಲಿದೆ
ಖ್ಯಾತ ವೈದಿಕ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ವಿಶ್ಲೇಷಣೆ
Follow us
Ganapathi Sharma
|

Updated on:May 30, 2024 | 12:55 PM

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಕೊನೆಗೂ ಭಾರತಕ್ಕೆ ಬರಲು ದಿನಾಂಕ ನಿಗದಿಯಾಗಿದೆ. ಎಲ್ಲವೂ ಈವರೆಗಿನ ಲೆಕ್ಕಾಚಾರದಂತೆಯೇ ನಡೆದರೆ ಪ್ರಜ್ವಲ್ ಇಂದು ರಾತ್ರಿ 12ರ ನಂತರ ಬೆಂಗಳೂರಿಗೆ ತಲುಪಬೇಕು. ಅಂದಹಾಗೆ, ಈ ದಿನಾಂಕದಂದೇ ಪ್ರಜ್ವಲ್ ಭಾರತಕ್ಕೆ ಬರಲು ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ ಅವರೇ ಮುಹೂರ್ತ ಫಿಕ್ಸ್ ಮಾಡಿಸಿದ್ದಾರಂತೆ! ಕಾರಣವೇನೆಂದರೆ, ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಈ ಮುಹೂರ್ತ ಪ್ರಜ್ವಲ್​ ರೇವಣ್ಣಗೆ ಬಹಳ ಒಳ್ಳೆಯದು ಎಂಬ ನಂಬಿಕೆ ಹೊಂದಿರುವುದು.

ಪ್ರಜ್ವಲ್ ಭಾರತಕ್ಕೆ ಬರುವ ದಿನಾಂಕ ಮತ್ತು ಇದರಿಂದ ಜ್ಯೋತಿಷ್ಯ ಪ್ರಕಾರ ಪ್ರಜ್ವಲ್​ಗೆ ಏನು ಲಾಭವಾಗಲಿದೆ ಎಂಬ ಬಗ್ಗೆ ಖ್ಯಾತ ವೈದಿಕ ಜ್ಯೋತಿಷಿ ಡಾ. ಬಸವರಾಜ್ ಗುರೂಜಿ ವಿಶ್ಲೇಷಣೆ ಮಾಡಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಮೇ 31ರ ಶುಕ್ರವಾರ ಬೆಳಗ್ಗೆ 10-00 ಗಂಟೆಗೆ ಪ್ರಜ್ವಲ್ ರೇವಣ್ಣ ಎಸ್​​ಐಟಿ ಮುಂದೆ ವಿಚಾರಣೆಗೆ ಹಾಜರಾದರೆ ಅವರಿಗೆ ವಿಶೇಷ ಲಾಭವಿದೆ. ಶುಕ್ರವಾರ ಕರ್ಕ ಲಗ್ನ, ಕುಂಭರಾಶಿ ಇದೆ. ಲಾಭದಲ್ಲಿ ಗುರು, ರವಿ, ಶುಕ್ರ ಇದ್ದು, ಇದು ಮಹಿಳೆಯರಿಗೆ ಸಂಬಂಧಿಸಿಯೂ ಮಹತ್ವದ್ದಾಗಿದೆ. ಶುಕ್ರಬಲ, ಪೂರ್ವಾಭಾದ್ರ ನಕ್ಷತ್ರ ಗುರು ನಕ್ಷತ್ರ, ಶನಿರಾಶಿಯ ಪರಿಣಾಮ ಪ್ರಜ್ವಲ್​ಗೆ ಹಲವಾರು ಬದಲಾವಣೆಗಳ ದಿನವಾಗುವ ಸಾಧ್ಯತೆ ಇದೆ. ಶುಕ್ರವಾರದ ಪಂಚಾಗ ಪ್ರಕಾರ ಹಲವರಿಗೆ ಸಂಕಷ್ಟ, ಹಲವರಿಗೆ ಶುಭ ಆಗಲಿದೆ. ವಿಶೇಷವಾಗಿ ಪ್ರಜ್ವಲ್​​ ಜಾತಕದ ಪ್ರಕಾರ ನೋಡಿದರೆ, ಅವರಿಗೆ ಲಾಭವಾಗುವ ಸಾಧ್ಯತೆ ಹೆಚ್ಚಿದೆ ಎಂದು ಡಾ. ಬಸವರಾಜ್ ಗುರೂಜಿ ವಿಶ್ಲೇಷಿಸಿದ್ದಾರೆ.

ಪ್ರಜ್ವಲ್​​​ಗೆ ಏನು ಪ್ರಯೋಜನ?

ಪ್ರಜ್ವಲ್ ಹುಟ್ಟಿದ ದಿನಾಂಕ 1990 ಆಗಸ್ಟ್​ 5. ಅವರ ಜನ್ಮ ಜಾತಕ ನೋಡಿದರೆ ತುಲಾ ಲಗ್ನ, ಮಕರ ರಾಶಿ, ಉತ್ತರಾಷಾಢ ನಕ್ಷತ್ರವಿದೆ. ಅವರು ಸೂರ್ಯ ಮಹಾ ದಶಾದಲ್ಲಿ ಜನಿಸಿದ್ದು, ಈಗಿನ ಯೋಗದ ಪ್ರಕಾರ ರಾಹು ನಡೀತಾ ಇದೆ. ಈ ಸಂದರ್ಭದಲ್ಲಿ ಅವರ ಜಾತಕ ಅಷ್ಟು ಚೆನ್ನಾಗಿರಲಿಲ್ಲ. ಅಂದರೆ, ಜಾತಕದಲ್ಲಿಯೇ ಅವರಿಗೆ ಗ್ರಹಣ ದೋಷ ಇತ್ತು. ಸದ್ಯ ಮಂಗಳ ಗ್ರಹ ನಾಳೆ ಸ್ವಂತ ಮನೆಗೆ ಬರಲಿದೆ. ಶುಕ್ರ ಗ್ರಹ ರವಿ ಹಾಗೂ ಗುರು ಜತೆ ವೃಷಭ ರಾಶಿಯಲ್ಲಿದೆ. ಇಂಥ ಸ್ಥಿತಿಯಲ್ಲಿ ಶುಕ್ರವಾರ 10 ಗಂಟೆಯ ಮುಹೂರ್ತದಲ್ಲಿ ಪ್ರಜ್ವಲ್ ವಿಚಾರಣೆಗೆ ಹಾಜರಾದರೆ ಶತ್ರುಗಳೂ ಮಿತ್ರರಾಗುವ ಸಾಧ್ಯತೆ ಇದೆ. ಈ ಉದ್ದೇಶವನ್ನಿಟ್ಟುಕೊಂಡೇ ಜಾತಕ ನೋಡಿ ಪ್ರಜ್ವಲ್ ವಾಪಸ್ ಬರಲು ಈ ಮುಹೂರ್ತ ಇಟ್ಟಿರುವ ಸಾಧ್ಯತೆ ಇದೆ ಎಂದು ಗುರೂಜಿ ತಿಳಿಸಿದ್ದಾರೆ.

ರಾತ್ರಿಯೇ ಬಂದರೆ ಏನಾಗುತ್ತದೆ?

ಶುಕ್ರವಾರ 10 ಗಂಟೆಯ ಮುಹೂರ್ತ ಚೆನ್ನಾಗಿರುವುದೇನೋ ನಿಜ. ಹಾಗೆಂದು ಅದೇ ಮುಹೂರ್ತಕ್ಕೆ ಅಲ್ಲದೆ ಒಟ್ಟಾರೆಯಾಗಿ ಇಂದು (ಗುರುವಾರ) ಸಂಜೆ 4 ಗಂಟೆಯ ನಂತರ ಶುಕ್ರವಾರ ರಾತ್ರಿ 9 ಗಂಟೆಯ ಒಳಗೆ ಯಾವ ಸಮಯದಲ್ಲಿ ಬಂದರೂ ಪ್ರಜ್ವಲ್​ಗೆ ಬಹಳಷ್ಟು ಪ್ರಯೋಜನ ಇದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಇದನ್ನೂ ಓದಿ: ಇಂದು ಮಧ್ಯರಾತ್ರಿ ಬೆಂಗಳೂರಿಗೆ ಪ್ರಜ್ವಲ್? ಬರುತ್ತಿದ್ದಂತೆ ಬಂಧನ, ನಾಳೆ ಜಾಮೀನು ಅರ್ಜಿ ವಿಚಾರಣೆ

ಈ ಅವಧಿಯಲ್ಲಿ ವಾಪಸ್ ಬಂದರೆ ಆತನಿಗೆ ಶತ್ರುಗಳು ಮಿತ್ರರಾಗುವ ಯೋಗ ಇದೆ. ಜತೆಗೆ, ಆತನ ಜಾತಕ ದೋಷದ ಪ್ರಕಾರ ಇರುವ ಋಣಾತ್ಮಕತೆ ಪ್ರಭಾವ ಶೇ 40ರಷ್ಟು ತಗ್ಗಲಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Thu, 30 May 24

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್