Astrology: ಈ ರಾಶಿಯವರು ಇಂದು ಪ್ರಯಾಣವನ್ನು ಮುಂದೂಡುವುದು ಉಚಿತ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 04, 2024 | 12:12 AM

ರಾಶಿ ಭವಿಷ್ಯ, ಶುಕ್ರವಾರ(ಅಕ್ಟೋಬರ್: 04): ಅಸಭ್ಯ ಮಾತುಗಳು ನಿಮ್ಮ ನಡವಳಿಕೆಯನ್ನು ಹೇಳೀತು. ಅಧಿಕಾರವು ಬರುವಹಾಗೆ ಇದ್ದರೂ ಅದನ್ನು ತಪ್ಪಿಸಬಹುದು. ಸರಿಯಾದ ಆಲೋಚನೆಯನ್ನು ಮಾಡದೇ ಕೆಲಸವನ್ನು ಮಾಡಿದ ಕಾರಣ ತೊಂದರೆಗಳು ಬರಬಹುದು. ಹಾಗಾದರೆ ಅಕ್ಟೋಬರ್: 04ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ಈ ರಾಶಿಯವರು ಇಂದು ಪ್ರಯಾಣವನ್ನು ಮುಂದೂಡುವುದು ಉಚಿತ
ರಾಶಿ ಭವಿಷ್ಯ
Follow us on

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವೈಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:52 ರಿಂದ 12:21, ಯಮಘಂಡ ಕಾಲ ಮಧ್ಯಾಹ್ನ 03:20ರಿಂದ 04: 49ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ 09:22 ರವರೆಗೆ.

ಧನು ರಾಶಿ: ಯೋಜಿತವಾದ ಪ್ರಯಾಣವನ್ನು ಮುಂದೂಡುವುದು ಉಚಿತ. ದುರಭ್ಯಾಸವಿಲ್ಲದೇ ಇರುವುದೇ ದೊಡ್ಡ ಯೋಗ್ಯತೆ. ಅವರನ್ನು ಕಳೆದುಕೊಳ್ಳುವುದು ಬೇಡ. ಎಲ್ಲರಿಂದ ಹೊಗಳಿಸಿಕೊಳ್ಳಬೇಕು ಎನಿಸಬಹುದು. ಕೆಲಸದಲ್ಲಿ ನಿಮಗೆ ಬೆಂಬಲವು ಕಡಿಮೆ ಸಿಗಬಹುದು. ನಿಮ್ಮ ದುರಾಲೋಚನೆಗೆ ನೀವೇ ಪೂರ್ಣವಿರಾಮವನ್ನು ಹಾಕಿಕೊಳ್ಳಬಹುದು. ಅಸಭ್ಯ ಮಾತುಗಳು ನಿಮ್ಮ ನಡವಳಿಕೆಯನ್ನು ಹೇಳೀತು. ಅಧಿಕಾರವು ಬರುವಹಾಗೆ ಇದ್ದರೂ ಅದನ್ನು ತಪ್ಪಿಸಬಹುದು. ಸರಿಯಾದ ಆಲೋಚನೆಯನ್ನು ಮಾಡದೇ ಕೆಲಸವನ್ನು ಮಾಡಿದ ಕಾರಣ ತೊಂದರೆಗಳು ಬರಬಹುದು. ನಿಮ್ಮನ್ನು ಹೊಗಳಿಕೊಳ್ಳುವುದು ಸರಿ ಕಾಣಿಸದು. ‌ಮೇಲ್ನೋಟಕ್ಕೇ ನಿಮ್ಮ ಸ್ವಭಾವದ ಅರಿವಾಗಬಹುದು. ತಾಳ್ಮೆಯನ್ನು ನೀವು ಪ್ರಯತ್ನಪೂರ್ವಕವಾಗಿ ತಂದುಕೊಳ್ಳಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.

ಮಕರ ರಾಶಿ: ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗಲಿದೆ. ನಿಮ್ಮದಾದ ಪ್ರಖರವಾದ ಯೋಚನೆಯನ್ನು ಪ್ರಸ್ತುತ ಪಡಿಸುವಿರಿ. ನಿಮ್ಮ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆ ಸಿಗಲಿದೆ. ವಿದ್ಯಾರ್ಥಿಗಳು ತಮ್ಮ ಅಸ್ತಿತ್ವವನ್ನು ತೋರಿಸುವರು. ಸಾಮಾಜಿಕ ಕಾರ್ಯಗಳನ್ನು ಮಾಡಲು ನೀವು ಬಹಳ ಉತ್ಸಾಹದಿಂದ ಇರುವಿರಿ. ಮನಸ್ಸಿನಲ್ಲಿ‌ ಒಂದಿಲ್ಲೊಂದು ಭೀತಿಯು ಕಾಡಬಹುದು. ಅತಿಯಾದೆ ಆಸೆಯಿಂದ ನಿಮಗೆ ದುಃಖವು ಬರಬಹುದು. ನಿಮ್ಮ ಆದಾಯವನ್ನು ಯಾರಿಗೂ ಬಿಟ್ಟುಕೊಡಲಾರಿರಿ. ನಿಮ್ಮ ಬಗ್ಗೆ ನೀವು ಅವಲೋಕನ‌ ಮಾಡಿಕೊಳ್ಳುವ ಅಗತ್ಯ ಇರಲಿದೆ. ಎಲ್ಲವನ್ನೂ ನೀವು ಅತಿಯಾಗಿ ವೈಭವೀಕರಿಸುವಿರಿ. ಅದರಷ್ಟಕ್ಕೆ ಬಿಡುವುದು ಒಳ್ಳೆಯದು. ವ್ಯಕ್ತಿಗತವಾದ ಭಾವವನ್ನು ಇಟ್ಟುಕೊಳ್ಳುವುದು ಬೇಡ. ಯಾರೋ‌ ಮಾಡಿದ ತಪ್ಪಿಗೆ ನೀವು ಶಿಕ್ಷೆಯನ್ನು ಅನುಭವಿಸಬೇಕಾದೀತು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ಆರ್ಥಿಕತೆಯ ಬೆಳವಣಿಗೆಯಿಂದ ನಿಮಗೆ ಸಂತೋಷವಿದೆ.

ಕುಂಭ ರಾಶಿ: ಆಹಾರವನ್ನು ಕೇಳಿದರಿಗೆ ಏನು ಕೊಟ್ಟರೂ ಆಗುತ್ತದೆ ಎಂದು ಏನಾದರೂ ಕೊಟ್ಟುಬಿಡಬೇಡಿ. ಇಂದು ಉದ್ಯೋಗದಲ್ಲಿ ಒತ್ತಡವು ಅಧಿಕವಾಗುವುದು. ಅಸಂತೋಷದಿಂದ ನೀವು ಹೆಚ್ಚು ದಿನವನ್ನು ಕಳೆಯುವಿರಿ. ಬಂಧುಗಳ ಮಾತಿನಿಂದ ನಿಮಗೆ ಬೇಸರವಾಗಬಹುದು. ಸಂಗಾತಿಯ ಜೊತೆ ವಾದಕ್ಕೆ ಇಳಿಯುವಿರಿ. ಕಛೇರಿಯಲ್ಲಿ ಆದ ಜಗಳವು ಉದ್ಯೋಗವನ್ನು ಕಳೆದುಕೊಳ್ಳುವ ಹಂತಕ್ಕೆ ಹೋಗಬಹುದು.‌ ಸಂಗಾತಿಯನ್ನು ನೀವು ಹಳೆಯ ಘಟನೆಗಳ ಜೊತೆಗೆ ಟೀಕಿಸಬಹುದು. ನಿಮಗೆ ಪ್ರೀತಿಯ ಕೊರತೆ ಕಾಣಿಸುವುದು. ಜೀವನೋಪಾಯಕ್ಕಾಗಿ ಹೆಚ್ಚು ದುಡಿಮೆಯನ್ನು ಮಾಡಬೇಕಾದೀತು. ಇಷ್ಟವಿಲ್ಲದ ಕಾರ್ಯವನ್ನು ಮಾಡಲು ನೀವು ಹಿಂಜರಿಯುವಿರಿ. ತಾಯಿಯ ಜೊತೆ ಎಲ್ಲವನ್ನೂ ಹೇಳಬೇಕು ಎನಿಸಬಹುದು. ವ್ಯವಹಾರಕ್ಕೆ ಬೇಕಾದ ಬಂಡವಾಳವನ್ನು ಇಟ್ಟುಕೊಂಡೇ ಹೊರಡಿ. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು.

ಮೀನ ರಾಶಿ; ಹಲವು ದಿನಗಳ ಹೋರಾಟದ ಫಲವಾಗಿ ನಿಮ್ಮ ಸ್ಥಳವನ್ನು ಪುನಃ ಪಡೆದುಕೊಳ್ಳುವಿರಿ. ಇಂದು ನಿಮ್ಮ ಜ್ಞಾನದ ಜೊತೆ ನಿಮ್ಮ ಪ್ರಯತ್ನವೂ ಇದ್ದರೆ ಬಯಸಿದ ಯಶಸ್ಸನ್ನು ಪಡೆಯಬಹುದು. ಏಕಾಂಗಿಯಾಗಿ ಇರಲು ನೀವು ಬಯಸಬಹುದು. ವಿದ್ಯಾಭ್ಯಾಸದಿಂದ ಸ್ವಲ್ಪ ಬಿಡುಗಡೆಯನ್ನು ಬಯಸುವಿರಿ. ಬಯಸಿದ್ದನ್ನು ಪಡೆಯಲು ಹೆಚ್ಚು ಪ್ರಯತ್ನ ಪಡಬೇಕಾದೀತು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಸಿಗಬಹುದು. ಮೋಜಿಗಾಗಿ ಹಣವನ್ನು ವ್ಯಯಿಸುವಿರಿ. ಪುಣ್ಯಸ್ಥಳಗಳಿಗೆ ಹೋಗುವ ಮನಸ್ಸಿದ್ದರೂ ಕಾರ್ಯದ ಒತ್ತಡಕ್ಕೆ ಹೋಗಲಾಗದು. ಕಳೆದುಕೊಂಡಿದ್ದನ್ನು ಪಡೆದುಕೊಳ್ಳಲು ನೀವು ಬೇರೆ ಮಾರ್ಗಗಳನ್ನು ಅನುಸರಿಸುವಿರಿ. ಮಕ್ಕಳಿಂದ ನಿಮಗೆ ಸಂತೋಷವು ಸಿಗುವುದು. ಸಿಕ್ಕ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ಮುಳುಗುವಿರಿ.