AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ಮಾತನಾಡುವಿರಿ

ಅಕ್ಟೋಬರ್ 04,​ 2024: ವೈವಾಹಿಕ ಜೀವನಕ್ಕೆ ಯಾರಿಂದಲೂ ಪೂರ್ಣ ಒಪ್ಪಿಗೆ ಸಿಗದು. ಸ್ಥಿರಾಸ್ತಿಯ ಉಳಿಸಿಕೊಳ್ಳಲು ನೀವು ಬಹಳ ಹೋರಾಟವನ್ನು ಮಾಡಬೇಕಾದೀತು. ಬಂಧುಗಳ ಬಳಿ ನೀವು ಸಾಲಕ್ಕೆ ಕೈ ಚಾಚಬೇಕಾಗಬಹುದು. ಹಾಗಾದರೆ ಅಕ್ಟೋಬರ್ 04ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ಮಾತನಾಡುವಿರಿ
ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ಮಾತನಾಡುವಿರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 04, 2024 | 12:05 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವೈಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:52 ರಿಂದ 12:21, ಯಮಘಂಡ ಕಾಲ ಮಧ್ಯಾಹ್ನ 03:20ರಿಂದ 04: 49ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ 09:22 ರವರೆಗೆ.

ಮೇಷ ರಾಶಿ: ನೀವು ತೊಡಗಿಕೊಳ್ಳುವ ವ್ಯವಹಾರದಲ್ಲಿ ಅನುಭವ ಅಥವಾ ಅನುಭವಿಗಳ ಮಾರ್ಗದರ್ಶನ ಇರಲಿ. ವೈವಾಹಿಕ ಜೀವನಕ್ಕೆ ಯಾರಿಂದಲೂ ಪೂರ್ಣ ಒಪ್ಪಿಗೆ ಸಿಗದು. ಸ್ಥಿರಾಸ್ತಿಯ ಉಳಿಸಿಕೊಳ್ಳಲು ನೀವು ಬಹಳ ಹೋರಾಟವನ್ನು ಮಾಡಬೇಕಾದೀತು. ಬಂಧುಗಳ ಬಳಿ ನೀವು ಸಾಲಕ್ಕೆ ಕೈ ಚಾಚಬೇಕಾಗಬಹುದು. ನಿಮ್ಮ ಕೆಲಸವನ್ನು ಬೇರೆಯವರು ಮಾಡಿ ಮುಗಿಸುವರು. ಇಂದು ಹೇಗಾದರೂ ಮಾಡಿ ಕಲಿತ ವಿಚಾರವನ್ನು ಪ್ರಯೋಗಕ್ಕೆ ತರುವಿರಿ. ಮಾತನ್ನು ನೀವು ಸಾವಧಾನವಾಗಿ ಹೇಳುವಿರಿ. ಉದ್ವೇಗಕ್ಕೆ ಒಳಗಾಗದೇ ಸಮಾಧಾನದಿಂದ ಇರಿ. ದುರಭ್ಯಾಸದಿಂದ ಆರೋಗ್ಯವು ಕೆಡಬಹುದು. ಹೆಚ್ಚು ಲಾಭವನ್ನು ಗಳಿಸುವ ತುಡಿತವು ಅಧಿಕವಾಗುವುದು. ಭೂಮಿಯ ಉತ್ಪನ್ನದಿಂದ ಕೃಷಿಯ ಉತ್ಪಾದನೆಯಿಂದ ಲಾಭ ಸಿಗಲಿದೆ. ನಿಮ್ಮ ಕಾರ್ಯಕ್ಕೆ ಸಮ್ಮಾನವು ಸಿಗಬಹುದು. ಯಾರನ್ನೂ ಇಂದು ಸುಲಭವಾಗಿ ಹತ್ತಿರ ಸೇರಿಸಿಕೊಳ್ಳಲಾರಿರಿ.

ವೃಷಭ ರಾಶಿ: ಇಂದು ಅಸ್ಥಿರತೆಯು ನಿಮ್ಮನ್ನು ಅಧಿಕವಾಗಿ ಕಾಡಬಹುದು. ನಿಮ್ಮ ಭಾವನೆಗೆ ಸರಿ ಹೊಂದುವವರ ಜೊತೆ ನಿಮ್ಮ ಮಾತುಕತೆ ಇರಲಿದೆ. ಬಂಧುಗಳಿಗೆ ಆರ್ಥಿಕವಾಗಿ ಸಹಾಯವನ್ನು ಮಾಡುವಿರಿ. ಕಳೆದುಕೊಂಡಿದ್ದನ್ನು ಮರೆಯುವುದು ಉತ್ತಮ. ಅಭಿವೃದ್ಧಿಯ ಕೆಲಸಗಳು ನಿಧಾನವಾಗಿ ಸಾಗುವುದು. ಪ್ರಯಾಣದಲ್ಲಿ ನೀವು ತೊಂದರೆಯನ್ನು ಅನುಭವಿಸುವಿರಿ. ಇಂದು ನಿಮ್ಮ ಆತುರದ ತೀರ್ಮಾನಗಳು ಹಲವು ಗೊಂದಲೆಗಳಿಗೆ ಕಾರಣವಾಗುವುದು. ಸ್ಥಿರಾಸ್ತಿಯ ಬಗ್ಗೆ ನಿಮಗೆ ಸರಿಯಾದ ಮಾಹಿತಿ ಇರಲಿ. ನಿಮ್ಮ ಸಾಲವು ಮರಳಿಬರಬಹುದು. ನಿಮ್ಮ ಮನೋಗತವನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಅನಗತ್ಯ ಖರ್ಚನ್ನು ಕಡಿಮೆ‌ ಮಾಡಲು ಸಂಗಾತಿಗೆ ಸೂಚಿಸುವಿರಿ. ನಕಾರಾತ್ಮಕ ಧೋರಣೆಗಳು ಅಧಿಕವಾಗಿ ಇರಬಹುದು. ನೂತನ ಗೃಹದ ಖರೀದಿಯಲ್ಲಿ ಆಸಕ್ತಿ ಇರುವುದು. ಇಂದು ನಿಮಗೆ ಚೆನ್ನಾಗಿ ಕಾಣಿಸಿಕೊಳ್ಳುವುದು ಇಷ್ಟವಾಗದು.

ಮಿಥುನ ರಾಶಿ: ವ್ಯವಹಾರದ ಮಧ್ಯದಲ್ಲಿ ನೀವು ಕಳೆದುಹೋಗಬಹುದು. ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ಆರ್ಥಿಕತೆಯು ಅಭಿವೃದ್ಧಿಯ ಕಡೆಗೆ ಸಾಗುವುದು ನಿಮಗೆ ಸಂತೋಷವನ್ನು ಕೊಡಲಿದೆ. ಕುಟುಂಬದಿಂದ ನಿಮಗೆ ಶುಭ ವಾರ್ತೆಯು ಬರಬಹುದು. ಜಾಣತನವೂ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ನಿಮ್ಮ ಸಹೋದರನಿಂದ ಹೊಸ ಉದ್ಯೋಗಕ್ಕೆ ಸೇರಿಕೊಳ್ಳಲು ಸಹಾಯವಾಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಇಟ್ಟ ಹಣವು ಸಾಕಾಗದು.‌ ಇಂದು ನೀವು ಅಂದುಕೊಂಡಷ್ಟು ಕೆಕಸವು ಆಗುವತನಕ ನಿಮ್ಮ ಹಠವು ಇರಲಿದೆ. ದೈವವನ್ನು ನಂಬಿ ನಿಮ್ಮ ಕಾರ್ಯವನ್ನು ಮುನ್ನಡಸುವಿರಿ. ಚಿತ್ರಕಾರರಿಗೆ ಉತ್ತಮ ಅವಕಾಶಗಳು ಸಿಗಬಹುದು. ಭವಿಷ್ಯದ ಬಗ್ಗೆ ನಿಮಗೆ ಹತ್ತಾರು ಕನಸುಗಳನ್ನು ಇಟ್ಟುಕೊಳ್ಳುವಿರಿ. ಧಾರ್ಮಿಕ ಕರ್ಮಗಳನ್ನು ಶ್ರದ್ಧೆಯಿಂದ ಪೂರೈಸುವಿರಿ.

ಕರ್ಕಾಟಕ ರಾಶಿ: ಹೂಡಿಕೆಯಿಂದ ಆದ ಲಾಭವನ್ನು ಪರೀಕ್ಷಿಸಿಕೊಂಡು ಮುಂದುವರಿಯುವುದು ಒಳ್ಳೆಯದು. ನಿಮ್ಮ ಉದ್ಯಮಕ್ಕೆ ಯಾರಾದರೂ ಬೆನ್ನೆಲುಬಾಗಿ ಬರಬಹುದು. ವಿಳಂಬವಾಗಿಯಾದರೂ ವಿವಾಹವು ನಡೆಯಲಿದ್ದು, ನಿಮಗೆ ಸಂತೋಷವಾಗಲಿದೆ. ಮಕ್ಕಳ ವಿವಾಹಕ್ಕಾಗಿ ಓಡಾಟ ಮಾಡುವಿರಿ. ಯಾವುದು ಎಷ್ಟು ಪ್ರಾಮುಖ್ಯ ಎಂಬ ತಿಳಿವಳಿಕೆಯ ಕೊರತೆ ಕಾಣಿಸುವುದು.‌ ನಾಚಿಕೆಯ ಸ್ವಭಾವದಿಂದ ನೀವು ಹಲವು ವಿಚಾರವನ್ನು ಕಳೆದುಕೊಳ್ಳುವಿರಿ. ಕೆಲವರ ಮಾತುಗಳನ್ನು ನೀವು ವಿರೋಧಿಸುವಿರಿ. ನಿಮಗೆ ಆಗದವರ ಬಗ್ಗೆ ನಿಮ್ಮ ನಿಲುವು ಹಾಗೆಯೇ ಇರಲಿದೆ. ಸಾಮಾಜಿಕ ಗೌರವವನ್ನು ನೀವು ಬಯಸುವಿರಿ. ಸಂಗಾತಿಯ ಇಂಗಿತವನ್ನು ಅರಿಯಲು ಅಸಮರ್ಥರಾಗಬಹುದು. ಹಳೆಯ ಪ್ರೇಮವು ನಿಮಗೆ ತೊಂದರೆಯನ್ನು ಕೊಡಬಹುದು. ಚಾಲಕವೃತ್ತಿಯರಿಗೆ ಶುಭ ಸುದ್ದಿಯು ಇರಲಿದೆ. ಅನಗತ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಅದೇ ಉತ್ತಮವಾದುದೂ ಕೂಡ. ವ್ಯವಸ್ಥೆಯ ಕಾರಣಕ್ಕೆ ವ್ಯಕ್ತಿಯನ್ನು ದ್ವೇಷಿಸುವಿರಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ