AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವಂತೆ ಯಾರಾದರೂ ಒತ್ತಾಯ ಮಾಡಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್​ 04: ಎಲ್ಲರನ್ನೂ ನೀವು ಸಮಾನಭಾವದಿಂದ ಕಾಣಬೇಕಾಗುವುದು. ಮಹಿಳೆಯರನ್ನು ಸಿಕ್ಕ ಗೌರವವನ್ನು ಅತಿಯಾಗಿ ಭಾವಿಸುವುದು ಬೇಡ. ಪ್ರಯಾಣದಲ್ಲಿ ಸುಖವಿರಲಿದೆ. ನಿಮಗೆ ಇಂದು ನೇರವಾಗಿ ಕೆಲಸಗಳನ್ನು ಮಾಡಲು ಕಷ್ಟವಾದೀತು. ಹಾಗಾದರೆ ಅಕ್ಟೋಬರ್​ 04ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರಿಗೆ ವಾಹನ ಖರೀದಿಸುವಂತೆ ಯಾರಾದರೂ ಒತ್ತಾಯ ಮಾಡಬಹುದು
ಈ ರಾಶಿಯವರಿಗೆ ವಾಹನ ಖರೀದಿಸುವಂತೆ ಯಾರಾದರೂ ಒತ್ತಾಯ ಮಾಡಬಹುದು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 04, 2024 | 12:10 AM

Share

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವೈಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 18 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:52 ರಿಂದ 12:21, ಯಮಘಂಡ ಕಾಲ ಮಧ್ಯಾಹ್ನ 03:20ರಿಂದ 04: 49ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ 09:22 ರವರೆಗೆ.

ಸಿಂಹ ರಾಶಿ: ರಾಜಕಾರಣದ ದಿಕ್ಕು ನಿಮಗೆ ಅರ್ಥವಾಗುವುದು ಕಷ್ಟ. ಇಂದು ನೀವು ಯಾರ ಮಾತನ್ನೂ ಕೇಳದೇ ನಿಮ್ಮಷ್ಟಕ್ಕೆ ನಿರ್ಧಾರಕ್ಕೆ ಬರುವಿರಿ. ನಿಮ್ಮ ಅಸಹಜ ವರ್ತನೆಯು ನಿಮ್ಮರಿಗೆ ಸಿಟ್ಟನ್ನು ತರಿಸಬಹುದು. ಎಲ್ಲರನ್ನೂ ನೀವು ಸಮಾನಭಾವದಿಂದ ಕಾಣಬೇಕಾಗುವುದು. ಮಹಿಳೆಯರನ್ನು ಸಿಕ್ಕ ಗೌರವವನ್ನು ಅತಿಯಾಗಿ ಭಾವಿಸುವುದು ಬೇಡ. ಪ್ರಯಾಣದಲ್ಲಿ ಸುಖವಿರಲಿದೆ. ನಿಮಗೆ ಇಂದು ನೇರವಾಗಿ ಕೆಲಸಗಳನ್ನು ಮಾಡಲು ಕಷ್ಟವಾದೀತು. ಇನ್ನೊಬ್ಬರ ಮೂಲಕ ಎಲ್ಲ ಕೆಲಸಗಳನ್ನು ಮಾಡಿಸುವಿರಿ. ಅಪರಿಚಿತರ ಸಂಪರ್ಕದಿಂದ ನಿಮ್ಮ ಸ್ನೇಹಿತರ ನಡುವಿನ ಆತ್ಮೀಯತೆ ದೂರಾಗುವುದು. ಬೇರೆಯವರ ಜೊತೆ ನಿಮ್ಮ ವರ್ತನೆಯು ಸರಿಯಾಗಿರಲಿ. ಯಾರ ಮೇಲೂ ಅತಿಯಾಗಿ ಸಿಟ್ಟಾಗುವುದು ಬೇಡ. ಶುದ್ಧ ವಸ್ತ್ರಕ್ಕೆ ಸಣ್ಣ ಚುಕ್ಕೆಯೂ ದೊಡ್ಡದೇ. ನಿಮ್ಮ ಗೆಳತಿಯ ಜೊತೆ ಅಸಭ್ಯವಾಗಿ ನಡೆದುಕೊಂಡು ಅವರಿಂದ ದೂರವೂ ಆಗಬಹುದು. ವಾಹನ ಖರೀದಿಸಲು ನಿಮಗೆ ಯಾರಾದರೂ ಒತ್ತಾಯಮಾಡಬಹುದು. ಅಸಹಾಯಕರಾಗಿ ಕುಳಿತು ಮತ್ತಷ್ಟು ಹತಾಶರಾಗುವ ಅವಶ್ಯಕತೆ ಇಲ್ಲ.

ಕನ್ಯಾ ರಾಶಿ: ಸ್ನೇಹಿತರ ಜೊತೆ ಸಂತೋಷದ ಕೂಟದಲ್ಲಿ ಭಾಗಿಯಾಗುವಿರಿ. ವಿನ್ಯಾಸಕಾರರಿಗೆ ಪೂರಕವಾದ ಕಾರ್ಯವು ಸಿಗುವುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಪ್ರಶ್ನಿಸಲಾರರು. ಹಣದ ವ್ಯವಹಾರವನ್ನು ಒಬ್ಬರೇ ಮಾಡುವುದು ಬೇಡ. ನಂಬಿಕಸ್ಥರನ್ನು ನಿಮ್ಮ ಜೊತೆ ಇಟ್ಟುಕೊಳ್ಳಿ. ಇನ್ನೊಬ್ಬರನ್ನು ಹಗುರಾಗಿ ಕಾಣುವುದು ನಿಮಗೆ ಅಭ್ಯಾಸವಾಗಿದ್ದು, ಅದನ್ನು ಬಿಡುವುದು ಒಳ್ಳೆಯದು. ನಿಮ್ಮ ಆರ್ಥಿಕ ಸ್ಥಿತಿಯನ್ನು‌ ಕಂಡು ಯಾರೂ ಸಾಲವನ್ನು ಕೊಡಲಾರರು. ನಿಮ್ಮ ಮಾತುಗಳು ಕುಟುಂಬದ ಗೌರವವನ್ನು ಕಡಿಮೆ ಮಾಡೀತು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಮನಸ್ಸು ಇಲ್ಲವಾಗಬಹುದು. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ಯಾವುದಾದರೂ ಕಲೆಯು ನಿಮ್ಮನ್ನು ಸೆಳೆಯಬಹುದು. ವಿದೇಶದಲ್ಲಿ ಉನ್ನತ ಅಭ್ಯಾಸಕ್ಕೆ ಅವಕಾಶ ಸಿಗುವುದು. ನಿಮ್ಮ ಅಯ್ಕೆಯ ಉದ್ಯೋಗವೇ ನಿಮ್ಮನ್ನು ಪ್ರಯಾಣ ಮಾಡಿಸೀತು.

ತುಲಾ ರಾಶಿ: ನಿಮ್ಮ ಪದಾಧಿಕಾರವು ತಪ್ಪುವ ಸಾಧ್ಯತೆ ಇದೆ. ನೀವು ನಿರೀಕ್ಷಿಸುತ್ತಿರುವ ಸಮಯವು ಇನ್ನೂ ಬಾರದೆಂದು ನಿಮಗೆ ಸಂಕಟವಾಗಬಹುದು. ಸತ್ಯವನ್ನು ನೀವು ಬಿಡುವ ಸಾಧ್ಯತೆ ಇದೆ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ನೆಮ್ಮದಿಯ ಕೊರತೆ ಅಧಿಕವಾಗಿ ಇರಿಲಿದೆ. ನೀವು ಕೃತಜ್ಞತೆಯನ್ನು ಮರೆತುವಿರಿ. ಕೈಲಾದ ಸಹಾಯವನ್ನು‌ ಮಾಡಿ. ಸಂಬಂಧಗಳ ಮಹತ್ತ್ವವನ್ನು ನೀವು ಕಳೆದುಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಲಾಗದು. ಅಧಿಕಾರವರ್ಗದಿಂದ ನಿಮಗೆ ಮಾನಸಿಕ‌ ಕಿರಿಕಿರಿ ಆಗಬಹುದು. ಉಡುಗೊರೆಯನ್ನು ನೀವು ಆಪ್ತರಿಂದ ಪಡೆಯುವಿರಿ. ನಿಮ್ಮ ಬಗ್ಗೆ ಸರಿಯಾದ ಪರಿಚಯವನ್ನು ಇತರರಿಗೆ ಕೊಡಿ. ನಿಮ್ಮ ಮಾತುಗಳನ್ನು ನಿರ್ಲಕ್ಷ್ಯ ಮಾಡಬಹುದು. ನಿಮ್ಮ ವಿವಾಹವು ದೈವದ ಇಚ್ಛೆಯಂತೆ ಆಗಿದ್ದು ಅದನ್ನು ನಂಬಿ ನಡೆಯಿರಿ. ಆರ್ಥಿಕ ವಹಿವಾಟಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ವಿಶ್ವಾಸಕ್ಕೆ ಉಳಿಸಿಕೊಳ್ಳುವುದು ಕೆಲಸವನ್ನು ಮಾಡುವುದು ಸೂಕ್ತ.

ವೃಶ್ಚಿಕ ರಾಶಿ: ನೋವಾಗುವಂತೆ ಇಂದು ಮಾತನಾಡಿ ಅನಂತರ ಕ್ಷಮೆಯನ್ನು ಕೇಳುವ ನಟನೆ ಮಾಡುವಿರಿ. ದುಸ್ಸಾಹಸಗಳು ನಿಮ್ಮ ಧೈರ್ಯವನ್ನು ಕೆಡಿಸಬಹುದು. ಎಷ್ಟೇ ಪ್ರಯತ್ನಪಟ್ಟರೂ ನೀವು ಮಕ್ಕಳನ್ನು ಸರಿಮಾಡಲು ಆಗಲು ಎಂಬ ಹಂತಕ್ಕೆ ಬರುವಿರಿ. ಆರ್ಥಿಕ ವ್ಯವಹಾರದವರಿಗೆ ಅಲ್ಪ ಬಿಡುವು ಸಿಗಬಹುದು. ಉದ್ಯೋಗದ ಕಾರಣಕ್ಕೆ ನೀವು ಯಾರಿಗೋ ಕಾದು ಸಮಯವನ್ನು ವ್ಯರ್ಥ ಮಾಡಿಕೊಳ್ಳುವಿರಿ. ನೀವು ಮಾತನ್ನು ಕಡಿಮೆ ಮಾಡುವುದು ಒಳ್ಳೆಯದು. ಯಾವ ಕಾರ್ಯವನ್ನೂ ನೀವು ನೀರಸವಾಗಿ ಮಾಡುವುದು ಬೇಡ. ಕೂಡಿಬರುವ ವಿವಾಹಭಾಗ್ಯವನ್ನು ನೀವು ನಿರಾಕರಿಸುವುದು ಬೇಡ. ಆತುರದಿಂದ ಏನಾದರೂ ಅಚಾತುರ್ಯವನ್ನು ಮಾಡಿಕೊಳ್ಳಬಹುದು. ಅಂದಾಜಿನ ವ್ಯವಹಾರದಲ್ಲಿ ಸೋಲಾಗುವುದು. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಸೇವಾ ಮನೋಭಾವದಿಂದ ಕೆಲಸವನ್ನು ಮಾಡುವಿರಿ. ನಿಮಗೆ ಅಧಿಕಾರಿಗಳಿಂದ ಅಪಮಾನವೂ ಆದೀತು.

‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ