ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಸೌಭಾಗ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 10:50 ರಿಂದ 12:23, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:59ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:46 ರಿಂದ 09:18ರ ವರೆಗೆ.
ಧನು ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುತ್ತದೆ. ಆಶಾವಾದಿ ವರ್ತನೆ ಇಂದು ನಿಮ್ಮ ಸುತ್ತಲಿನವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು. ಹೊಸ ಯೋಜನೆಗಳಿಗೆ ಹಣವನ್ನು ಎಷ್ಟೇ ಕಷ್ಟವಾದರೂ ಪಡೆಯುವಿರಿ. ಇಂದು ಧಾರ್ಮಿಕ ಆಚಾರವಂತರಿಗೆ ಆಚರಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿದೆ. ಉನ್ನತ ಹುದ್ದೆಯಲ್ಲಿರುವ ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿ ವರ್ಗದಿಂದ ಆಪಾದನೆಗಳು ಬರಬಹುದು. ಪ್ರಯಾಣವನ್ನು ನೀವು ಧಾವಂತದಲ್ಲಿ ಮಾಡುವುದು ಬೇಡ. ಪತ್ನಿಯಿಂದ ಮನೆಯಲ್ಲಿ ಕಿರಿಕಿರಿಯಾದೀತು. ಆಪ್ತ ಮಿತ್ರರ ಭೇಟಿಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಇದ್ದರೂ ಉತ್ಸಾಹದಿಂದ ಹೆಚ್ಚಿನ ಕೆಲಸವನ್ನು ಮಾಡಬೇಡಿ. ನಿಮ್ಮ ಸಂಪರ್ಕದ ಗಡಿಯೂ ವಿಸ್ತರಿಸುತ್ತದೆ. ವೈಯಕ್ತಿಕ ಕೆಲಸಗಳ ಜೊತೆಗೆ ಕುಟುಂಬದೊಂದಿಗೆ ಸಮಯ ಕಳೆಯುವಿರಿ.
ಮಕರ ರಾಶಿ: ಇಂದಿನ ಆರಂಭವು ತುಂಬಾ ಆಹ್ಲಾದಕರವಾಗಿರುತ್ತದೆ. ಶಾಂತವಾಗಿ ಮತ್ತು ಚಿಂತನಶೀಲವಾಗಿ ಕೆಲಸ ಮಾಡಿ. ಇಂದು, ನೀವು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಕಾನೂನು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರಿ. ಇದು ಹಣಕಾಸಿನ ಲಾಭಕ್ಕೆ ಕಾರಣವಾಗುತ್ತದೆ. ಮನಶ್ಚಾಂಚಲ್ಯವಿದ್ದರೆ ಧ್ಯಾನವನ್ನು ಮಾಡಬೇಕಾದೀತು. ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬಂದೀತು. ಆರೋಗ್ಯವು ಹದ ತಪ್ಪಬಹುದು. ನಿರ್ಲಕ್ಷ್ಯ ಮಾಡದೇ ಇರುವುದು ಉತ್ತಮ. ಸಜ್ಜನರ ವಿಚಾರದಲ್ಲಿ ನೀವು ಅನಾದರ ತೋರಿಸಬಹುದು. ಉತ್ಪಾದನಾ ವಲಯದ ಉದ್ಯಮದಲ್ಲಿ ಹಿನ್ನಡೆಯಾಗಲಿದೆ. ಬಾಕಿಯಿರುವ ಮನೆಯ ಕಾರ್ಯಗಳಿಗೆ ಸಮಯ ಬೇಕಾಗಬಹುದು. ಕೆಲವು ಯೋಜನೆಗಳು ಮಕ್ಕಳ ಭವಿಷ್ಯದ ಬಗ್ಗೆಯೂ ಫಲಪ್ರದವಾಗುತ್ತದೆ. ನೀವು ಭಾವನಾತ್ಮಕವಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು, ಬೇರೆಯವರು ಇದರ ಪ್ರಯೋಜನೆಯನ್ನು ತೆಗೆದುಕೊಳ್ಳಬಹುದು.
ಕುಂಭ ರಾಶಿ: ನಿಮ್ಮ ಕಾರ್ಯ ಕೌಶಲದ ಮೂಲಕ ಯಾವುದೇ ರೀತಿಯ ಕೆಲಸವನ್ನು ಮಾಡಲು ಸಾಧ್ಯವಾಗುತ್ತದೆ. ಇಂದು ನಿಮ್ಮ ಆಹಾರ ಪದ್ದತಿ, ತೂಕ ಹೆಚ್ಚಳದ ಬಗ್ಗೆ ವಿಶೇಷ ಗಮನಹರಿಸಿ. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾದೀತು. ಹೆಚ್ಚು ಮಾತುಕತೆಗಳು ತಂದೆಯ ಜೊತೆ ಆಡಬಹುದು. ವಿದ್ಯಾಭ್ಯಾಸ ಹಿನ್ನಡೆಯಿಂದ ನಿಮ್ಮಲ್ಲಿ ಆತಂಕವು ಹೆಚ್ಚಾಗುವುದು. ಸಹಾಯವನ್ನು ಕೇಳಿ ಬಂದವರಿಗೆ ಇರುವುದನ್ನು ಕೊಟ್ಟು ಸಂತೋಷಪಡಿಸಿ. ಅಪರಿಚಿತರನ್ನು ನಂಬಿ ಮೋಸಹೋಗಬೇಕಾದೀತು. ಹೂಡಿಕೆಯಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡುವಿರಿ. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮಕ್ಕಳಿಗೆ ಗಮನ ಬೇಕಾಗಬಹುದು ಆದರಿದು ನಿಮ್ಮ ಜೀವನಕ್ಕೆ ಸಂತೋಷವನ್ನು ತರುತ್ತದೆ. ನಿಮ್ಮ ಪ್ರೀತಿಯ ಜೀವನವು ಇಂದು ಅದ್ಭುತವಾಗಿದೆ. ನಿಮ್ಮ ಯಾವುದೇ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಮತ್ತೊಮ್ಮೆ ಯೋಚಿಸಿ. ಕೆಲವೊಮ್ಮೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆ ಬರಬಹುದು. ಅನುಭವಿ ಜನರು ಮತ್ತು ಪ್ರಕೃತಿಯ ಸಹವಾಸದಲ್ಲಿ ಸ್ವಲ್ಪ ಸಮಯವನ್ನು ಕಳೆಯಿರಿ.
ಮೀನ ರಾಶಿ: ಇಂದು ಮನೆ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳಲ್ಲಿ ನಿಮಗೆ ವಿಶೇಷ ಬೆಂಬಲವಿದೆ ಸಿಗಲಿದೆ. ನಿಮ್ಮ ಕುಟುಂಬ ಸದಸ್ಯರ ಹರ್ಷಚಿತ್ತದ ವರ್ತನೆ ನಿಮ್ಮ ಮನೆಗೆ ಧನಾತ್ಮಕ ಕಂಪನ್ನು ತರುತ್ತದೆ. ನಿಮ್ಮ ಆತ್ಮವಿಶ್ವಾಸವು ಹೆಚ್ಚುತ್ತದೆ. ಮನೆಯಲ್ಲಿ ಮತ್ತು ಸಮಾಜದಲ್ಲಿ ನಿಮ್ಮ ಯಾವುದೇ ವಿಶೇಷ ಯಶಸ್ಸಿನ ಬಗ್ಗೆ ಚರ್ಚೆಗಳು ಸಹ ನಡೆಯುತ್ತವೆ. ಇನ್ನೊಬ್ಬರಿಗೆ ಅಪಮಾನವಾಗುವಂತೆ ಇಂದಿನ ನಿಮ್ಮ ಮಾತು ಇರಬಹುದು. ಮರದ ವೃತ್ತಿಯನ್ನು ಮಾಡುವವರಗೆ ಲಾಭ ಕಡಿಮೆ ಇದ್ದೀತು. ಸ್ನೇಹಿತರು ನಂಬಿಕೆಗೆ ದ್ರೋಹ ಬಗೆಯಬಹುದು. ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಪತ್ರವು ಸಿಗಲಿದೆ. ನಿರೀಕ್ಷಿಸಿದ ಗೌರವವು ಕಡಿಮೆಯಾದಂತೆ ಅನ್ನಿಸಬಹುದು. ಖರೀದಿಯ ವೇಳೆ ಅಸಲಿ ನಕಲಿಗಳ ಬಗ್ಗೆ ಅರಿವು ಇರಲಿ. ಮಕ್ಕಳ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸುವುದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನಿಮ್ಮ ಯಶಸ್ಸಿನ ಕಾರಣದಿಂದಾಗಿ, ಕೆಲವು ಜನರು ನಿಮ್ಮ ಬಗ್ಗೆ ಅಸೂಯೆ ಹೊಂದಬಹುದು. ಕೆಲಸದ ಕ್ಷೇತ್ರದಲ್ಲಿ, ನಿಮ್ಮ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.