ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಸೆಪ್ಟೆಂಬರ್ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಸೌಭಾಗ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 10:50 ರಿಂದ 12:23, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:59ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:46 ರಿಂದ 09:18ರ ವರೆಗೆ.
ಮೇಷ ರಾಶಿ: ಇಂದು ನಿಮ್ಮ ಇಚ್ಛೆಯನ್ನು ಕಾಪಾಡಿಕೊಳ್ಳಲ ಕೆಲವು ನಿರ್ಣಯಗಳನ್ನು ಮಾಡುವಿರಿ. ನಿಮ್ಮ ಆಕರ್ಷಕ ವರ್ತನೆಯಿಂದ ಎಲ್ಲರ ಗಮನವನ್ನು ಸೆಳೆಯುವಿರಿ. ಇಂದು ನೀವು ಸಹೋದ್ಯೋಗಿಗಳು ಅಚ್ಚರಿಯ ಕಾರ್ಯ ಸಾಧನೆ ಮಾಡಲಿದ್ದೀರಿ. ಕೆಲಸವನ್ನು ವಹಿಸಿಕೊಂಡು ಮಾಡುವ ಗುತ್ತಿಗೆದಾರರಿಗೆ ಇಂದು ಸಕಾಲವಾಗಿದೆ. ಹೆಚ್ಚು ಪ್ರಯತ್ನದಿಂದ ಅಧಿಕ ಲಾಭವನ್ನು ಪಡೆಯಬಹುದಗಿದೆ. ಸಮಾಜದಲ್ಲಿ ಅನೇಕ ಸಾಮಾಜಿಕ ಕಾರ್ಯವನ್ನು ಮಾಡುವವರಿಗೆ ಯೋಗ್ಯ ಗೌರವ, ಸಮ್ಮಾನಗಳು ಸಿಗಲಿದೆ. ಮಿತ್ರರ ಸಹಕಾರದಿಂದ ಹೊಸತನ್ನು ಸಾಧಿಸಬಹುದು. ಸುಲಭವಾಗಿ ಯಾವುದೂ ಸಾಧ್ಯವಿಲ್ಲ ಎಂಬ ಸತ್ಯ ನಿಮ್ಮ ಅರಿವಿಗೆ ಬರುವುದು. ಆದರೂ, ಕೆಲಸದಲ್ಲಿ ನಿರ್ಲಕ್ಷ್ಯವು ನಿಮಗೆ ಭಾರೀ ನಷ್ಟವನ್ನು ಉಂಟುಮಾಡಬಹುದು. ನೂರಾರು ಕೆಲಸಗಳ ನಡುವೆ ಪ್ರಮುಖ ಅಗತ್ಯತೆಗಳಿಗೆ ಆದ್ಯತೆ ನೀಡಿ. ಸಮಾನ ಮನಸ್ಕರ ಜೊತೆ ಸಮಯ ಕಳೆಯುವುದು ನಿಮಗೆ ಸಕಾರಾತ್ಮಕ ದೃಷ್ಟಿಕೋನವನ್ನು ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಮುಂದ್ರಿಯಬೇಕು. ಇಂದು ಸಾಲಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಬೇಡಿ.
ವೃಷಭ ರಾಶಿ: ಇಂದು ಆಸ್ತಿ ಖರೀದಿಯ ಯೋಜನೆ ಯಶಸ್ವಿಯಾಗಬಹುದು. ಆದ್ದರಿಂದ ನಿಮ್ಮ ಗಮನವು ಪೂರ್ಣವಾಗಿ ಅತ್ತಕಡೆಗೆ ಇರಲಿ. ಎಲ್ಲರಿಗೂ ಸಲ್ಲುವಂತಾಗಬೇಕು ಎನ್ನುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಮುಖ್ಯವಾಗಿ ಬೇಕಾಗುವುದು. ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳುವಿರಿ. ಉದ್ಯಮದ ಲಾಭಾಂಶವನ್ನು ಸತ್ಕಾರ್ಯಕ್ಕೆ ವಿನಿಯೋಗಿಸುವ ಬಗ್ಗೆ ಆಲೋಚನೆ ಬರುವುದು. ಅನಿರೀಕ್ಷಿತ ಧನ ಲಾಭದಿಂದ ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸುವಿರಿ. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳೇ ನಿಮಗೆ ಹಿತವೆನಿಸುವುದು. ಸಂತೋಷವನ್ನು ಹರಡುವ ಮೂಲಕ ನಿಮ್ಮ ಆರೋಗ್ಯವನ್ನು ಬೆಳೆಸಿಕೊಳ್ಳಿ. ನಿಮ್ಮ ಕೆಲದಲ್ಲಿ ಸರಿಯಾದ ಮಾರ್ಗದರ್ಶನ ಬೇಕು. ನಿಮ್ಮ ಶತ್ರುಗಳ ಚಲನವಲನಗಳನ್ನು ನಿರ್ಲಕ್ಷಿಸಿ ಸಮಯವನ್ನು ಹಾಳುಮಾಡುವುದು ಬೇಡ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಹಣಕಾಸಿನ ಹೂಡಿಕೆಯ ಬಗ್ಗೆ ಬುದ್ಧಿವಂತಿಕೆಯಿಂದ ತೀರ್ಮಾನಿಸಿ.
ಮಿಥುನ ರಾಶಿ: ನಿಮ್ಮ ಮನಸ್ಸಿನಲ್ಲಿ ಹೊಸ ಯೋಜನೆಗಳಿಗೆ ರೂಪಕೊಡುವಿರಿ. ಅವುಗಳನ್ನು ಕಾರ್ಯಗತಗೊಳಿಸಲು ಇದು ಸರಿಯಾದ ಸಮಯ. ಕುಟುಂಬದಲ್ಲಿ ಯಾರಾದರೂ ಒಬ್ಬರೂ ತಲೆಬಾಗಲೇಬೇಕಾದೀತು. ಇನ್ನೊಬ್ಬರಿಗಾಗಿ ಕಾಯುವುದು ಬೇಡ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವರು. ಕೆಲಸಕ್ಕಾಗಿ ಬಹಳ ಹುಡುಕುತ್ತಿದ್ದರೆ ನಿಮಗೆ ಅನುಗುಣವಾಗಿ ಉದ್ಯೋಗವು ಪ್ರಾಪ್ತಿಯಾಗುವುದು. ಧಾರ್ಮಿಕಕ್ಷೇತ್ರಗಳ ದರ್ಶನವನ್ನು ಪಡೆಯುವ ಸದವಕಾಶ ಸಿಗಲಿದೆ. ಆರೋಗ್ಯವು ಸುಧಾರಿಸಿದ್ದರಿಂದ ತೃಪ್ತಿ ಇರುವುದು. ದುರಭ್ಯಾಸದಿಂದ ನೀವು ಎಲ್ಲರ ಕಡೆಯಿಂದ ಮುಖಭಂಗವಾಗಲಿದೆ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು. ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸ್ನೇಹಿತರ ಸಲಹೆ ಪಡೆದು ನೀವು ನಿರ್ಧರಿಸಿ. ಸಂಬಂಧಿಕರ ಆಗಮನದಿಂದ ಮನೆಯ ವಾತಾವರಣ ಸಂತೋಷದಿಂದ ಇರಲಿದೆ. ಸಹೋದರರ ಜೊತೆ ಯಾವುದೋ ವಿಚಾರದಲ್ಲಿ ಜಗಳ ಉಂಟಾಗಬಹುದು.
ಕರ್ಕಾಟಕ ರಾಶಿ: ಇಂದು ನಿಮ್ಮ ಭರವಸೆಯ ಕನಸುಗಳು ನನಸಾಗುವ ಸಾಧ್ಯತೆ ಇದೆ. ಇಂದು ನಿಮ್ಮ ಇಚ್ಛಾಶಕ್ತಿಯ ಕೊರತೆಯ ಕಾರಣಕ್ಕೆ ಭಾವನಾತ್ಮಕವಾದ ಸವಾಲುಗಳಿಗೆ ಒಳಗಾಗುವಿರಿ. ವಿವೇಕಪೂರ್ಣವಾದ ಮಾತುಗಳಿಂದ ನಿಮ್ಮನ್ನು ಸರಿದಾರಿಗೆ ತರುವುದು ಕಷ್ಟವಾದೀತು. ಬಹುದಿನಗಳಿಂದ ವಿವಾಹದ ಸಿದ್ಧತೆಯಲ್ಲಿ ಇದ್ದವರಿಗೆ ಕಂಕಣ ಬಲ ಕೂಡಿ ಬರಲಿದೆ. ಕುಟುಂಬದಲ್ಲಿ ಕಿರಿಕಿರಿಯಾದರೂ ಸಮಾಧಾನದಿಂದ ಹೋಗುವುದು ಒಳಿತು. ಕಛೇರಿಯ ಕೆಲಸದಲ್ಲಿ ಆಕಸ್ಮಿಕ ಬದಲಾವಣೆಯಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯವನ್ನು ಕೇಳಿವಿರಿ. ಅಸಮಾಧಾನವನ್ನು ಅಸಭ್ಯವಾಗಿ ಹೊರಹಾಕುವಿರಿ. ಆರ್ಥಿಕ ವಹಿವಾಟುಗಳು ದಿನವಿಡೀ ನಡೆಯುತ್ತವೆ. ದಿನದ ಅಂತ್ಯವು ಸಂತೋಷದಲ್ಲಿ ಮುಕ್ತಾಯವಾಗಲಿದೆ. ಕುಟುಂಬದ ಸದಸ್ಯರಲ್ಲಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಬರಲಿವೆ. ಕೆಲಸದ ಕ್ಷೇತ್ರದಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು ಯಶಸ್ವಿಯಾಗುವುದು.