
19-10-2025ರಿಂದ 25-10-2025ರವರಗೆ ಅಕ್ಟೋಬರ್ ಮೂರನೇ ವಾರವಾಗಿದ್ದು, ಗ್ರಹಗಳ ಬದಲಾವಣೆಯಿಂದ ಉದ್ಯೋಗದಲ್ಲಿಯೂ ಏರುಪೇರುಗಳು ಸಹಜ. ಕೆಲವು ನಕಾರಾತ್ಮಕ ಅಂಶಗಳನ್ನು ಕೊಟ್ಟರೆ, ಇನ್ನೂ ಕೆಲವು ಸಕಾರಾತ್ಮಕ ಅಂಶಗಳನ್ನೇ ಕೊಟ್ಟು ನಿಮ್ಮ ದಿಕ್ಕನ್ನು ಬದಲಿಸಿ ಉನ್ನತ ಸ್ಥಾನಕ್ಕೆ ಒಯ್ಯುವುವು. ಆರ್ಥಿಕ ಸಂಕಟವೂ ನಿಮ್ಮನ್ನು ಇವೆಲ್ಲ ಕಾರಣದಿಂದ ಬಾಧಿಸಲಿದ್ದು ಒತ್ತಡಕ್ಕೆ ಸಿಕ್ಕಿದ ಅನುಭವ. ಕಷ್ಟ ಹಾಗೂ ಸುಖಗಳಲ್ಲಿ ಸಕಾರಾತ್ಮಕತೆ ಬಂದಾಗ ಯಾವ ಸ್ಥಿತಿಯನ್ನೂ ಸಂತೋಷದಿಂದ ಸ್ವೀಕರಿಸಲು ಸಾಧ್ಯ. ಈ ವಾರ ಎಲ್ಲ ಗ್ರಹರೂ ಏಕಾದಶ ಸ್ಥಾನದ ಫಲವನ್ನೇ ಕೊಡಲಿ.
ಮೇಷ ರಾಶಿ :ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಧೈರ್ಯ ಬರಲಿದೆ. ಯಾವುದನ್ನೂ ಆಲಸ್ಯದಿಂದಲೋ ಅಂಜಿಕೆಯಿಂದಲೋ ಮಾಡುವ ಪ್ರಸಕ್ತಿ ಇಲ್ಲ. ನೀವೇ ನಾಯಕತ್ವ ಪಡೆದುಕೊಳ್ಳಲು ಮುಂದಾಳುತ್ವ ವಹಿಸುವಿರಿ. ರಕ್ಷಣಾ ಕ್ಷೇತ್ರದವರಿಗೆ ಉತ್ತಮ ಅವಕಾಶ. ಉತ್ಸಾಹ ತರಿಸುವ ಚಟುವಟಿಕೆಯಲ್ಲಿ ಹೆಚ್ಚು ಭಾಗಿಯಾಗುವ ಮನಸ್ಸಿರುವುದು.
ವೃಷಭ ರಾಶಿ :ಈ ವಾರ ನಿಮಗೆ ಸ್ವಾಭಾವಿಕವಾದ ಸಹನೆಯಿದ್ದರೂ ಪರಿಸ್ಥಿತಿಗಳು ನಿಮ್ಮ ಕೈ ಮೀರುವುದು. ಹಣಕಾಸಿನ ವ್ಯವಹಾರ ನಡೆಸುವವರಿಗೆ ಉದ್ವೇಗದಿಂದ ಎಲ್ಲವೂ ವ್ಯತ್ಯಾಸ ಆಗಲಿದೆ. ಕಲಾಭಿರುಚಿ ಇರುವವರಿಗೆ ಹೆಚ್ಚಿನ ಪ್ರೊತ್ಸಾಹ ಹಾಗೂ ಕಲಾವಿದರಿಗೆ ವಿದೇಶಗಳಿಗೆ ಹೋಗುವ ಅವಕಾಶವೂ ಇದೆ. ಹೋಟೆಲ್ ಉದ್ಯಮ ವೃದ್ಧಿಯಾಗುವ ಸೂಚನೆ ನಿಮಗೆ ಗೊತ್ತಾಗುವುದು.
ಮಿಥುನ ರಾಶಿ :ಅಕ್ಟೋಬರ್ ತಿಂಗಳ ಈ ವಾರ ನಿಮ್ಮಲ್ಲಿ ಕಾರ್ಯ ಮಾಡುವ ಚುರುಕುತನವಿರಲಿದೆ. ನಿಮಗಿರುವ ಮಾತನಾಡುವ ಕಲೆಯನ್ನು ಸರಿಯಾದ ಮಾರ್ಗದಲ್ಲಿ ಪ್ರಯೋಗಿಸಿ. ಅದು ಯಶಸ್ಸು ಹಾಗೂ ಸಂಪತ್ತು ಎರಡನ್ನೂ ತಂದುಕೊಡುತ್ತದೆ. ಶಿಕ್ಷಣದಲ್ಲಿ ಬೋಧನೆಗಿಂತ ಆಡಳಿತ ವಿಭಾಗಕ್ಕೆ ನೀವು ಸೂಕ್ತವೆನಿಸುವಿರಿ. ರಚನಾತ್ಮಕ ಕಾರ್ಯಗಳನ್ನು ಸಂಯೋಜಿಸುವಿರಿ.
ಕರ್ಕಾಟಕ ರಾಶಿ :ಈ ತಿಂಗಳ ಮೂರನೇ ವಾರದಲ್ಲಿ ಈ ರಾಶಿಯವರಿಗೆ ಸಹೋದ್ಯೋಗಿಗಳ ಮೇಲೆ ಸಹಾನುಭೂತಿ ಬರಲಿದೆ. ಹಾಗಾಗಿ ಅವರ ಕಾರ್ಯಕ್ಕೆ ನಿಮ್ಮಿಂದಾಗುವ ಸಹಾಯವನ್ನು ಮಾಡುವಿರಿ. ಒತ್ತಡದ ಕಾರ್ಯಗಳು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ನೀಡುವುದು. ಪರರ ಭೂಮಿಯನ್ನು ನೋಡಿಕೊಳ್ಳುವ ಹೊಣೆಗಾರಿಕೆ ಬರಲಿದೆ.
ಸಿಂಹ ರಾಶಿ :ಐದನೇ ರಾಶಿಯವರಿಗೆ ಈ ವಾರ ಯಾವುದಾದರೂ ಸಣ್ಣ ಸಮೂಹದ ನಾಯಕತ್ವ ಸಿಗಲಿದ್ದು ನಿಭಾಯಿಸುವುದ ಕಷ್ಟಸಾಧ್ಯ. ಸರ್ಕಾರದ ಆಡಳಿತಾತ್ಮಕ ಹುದ್ದೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳುವುದು. ಈ ವಾರ ನೀವು ಹೋರಾಟದಂತ ಕಾರ್ಯದಲ್ಲಿ ಭಾಗವಹಿಸುವಿರಿ.
ಕನ್ಯಾ ರಾಶಿ :ರಾಶಿ ಚಕ್ರದ ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ ಈ ವಾ ಲೆಕ್ಕಪತ್ರಗಳ ಜೊಡಣೆ, ಪರಿಷ್ಕರಣ, ಸರ್ಕಾರಕ್ಕೆ ಸಲ್ಲಿಸಬೇಕಾದ ಕಾರ್ಯದಲ್ಲಿ ಓಡಾಟ, ತಲ್ಲೀನತೆ ಇರುವುದು. ಔಷಧ ಮಾರಾಟದಲ್ಲಿ ಲಾಭವಾಗಲಿದೆ. ಸಂಶೋಧನಾತ್ಮಕ ವಿಚಾರದಲ್ಲಿ ಮಹತ್ತ್ವದ ಮುನ್ನಡೆ ಕಾಣಿಸಿಕೊಳ್ಳುವುದು. ಪ್ರತಿಸ್ಪರ್ಧೆಯಲ್ಲಿ ಗೆಲುವಾಗುವುದು.
ತುಲಾ ರಾಶಿ : ಏಳನೇ ರಾಶಿಗೆ ಈ ವಾರ ನ್ಯಾಯಾಲಯದಲ್ಲಿ ಗೆಲುವಿಗೆ ಪ್ರಯತ್ನ, ಉದ್ಯೋಗದಲ್ಲಿ ಹಾಗೂ ಕುಟುಂಬದಲ್ಲಿ ಅಸಮತೋಲನವಿರಲಿದೆ. ದೇಹಾಲಂಕಾರದ ಉದ್ಯಮಕ್ಕೆ ಆದಾಯ ಬರಲಿದ್ದು, ವಿಸ್ತರಿಸುವ ಯೋಚನೆ ಬರುವುದು. ಕಾನೂನಿನ ವಿಚಾರದಲ್ಲಿ ಎಡವುವಿರಿ. ಪ್ರಾಮಾಣಿಕ ಶ್ರಮದ ಕಾರಣ ನಿರ್ಮಾಣದ ಯೋಜನೆಗಳು ನಿಮ್ಮತ್ತ ಬರುವುವು.
ವೃಶ್ಚಿಕ ರಾಶಿ : ಈ ವಾರ ನೀವು ರಹಸ್ಯವಾದ ಕಾರ್ಯಗಳನ್ನು ಮಾಡಲು ಅಥವಾ ರಹಸ್ಯ ಕಾರ್ಯಾಚರಣೆಯ ಭಾಗವಾಗಿರುವಿರಿ. ಸಂಶೋಧನೆಗೆ ಉತ್ತಮ ಬೆಂಬಲ ಸಿಗಲಿದೆ. ಮಾನಸಿಕ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಏಕಾಂಗಿಯಂತೆ ಇರುವುದು ಬೇಡ. ಎಲ್ಲರ ಜೊತೆ ಸೇರಲು ಪ್ರಯತ್ನಿಸಿ.
ಧನು ರಾಶಿ : ಅಕ್ಟೋಬರ್ ತಿಂಗಳ ಈ ರಾಶಿವರಿಗೆ ಈ ವಾರ ಸಾಹಸ ಕಾರ್ಯಗಳು ಬಹಳ ಇಷ್ಟವಾಗಲಿವೆ. ಆದರೆ ಮುಂದಾಲೋಚನೆಯ ಕೊರತೆಯಿಂದ ಅನಾಹುತ ಮಾಡಿಕೊಂಡು ಸುಮ್ಮನಿರಬೇಕಾಗುತ್ತದೆ. ಸಂಸ್ಥೆಯ ಪ್ರತಿನಿಧಿಯಾಗಿ ಕಾರ್ಯವನ್ನು ಮಾಡುವ ಸಂದರ್ಭ ಒದಗುವುದು. ಆಡಳಿತಗಾರರಿಗೆ ನಿಯಂತ್ರಣ ಸುಲಭಕ್ಕೆ ಸಿಗದು.
ಮಕರ ರಾಶಿ : ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಶಿಸ್ತಿನ ಪಾಠ ಅಧಿಕವಾಗಿ ಬೇಕಾಗುವುದು. ಎಲ್ಲ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಇದ್ದರೂ ಯಾವುದನ್ನು ಹೇಗೆ ಮಾಡಬೇಕೆಂಬ ಸ್ಪಷ್ಟತೆ ಇರದು. ಹಾಗಾಗಿ ಪರಿಶ್ರಮವಿದ್ದರೂ ಅಧಿಕಾರಿಗಳಿಂದ ನಿಂದನೆ ಸಹಜ. ನಿಮ್ಮನ್ನು ಪರಿಷ್ಕೃತ ಮಾಡಿಕೊಳ್ಳಲು ಹಿಂಜರಿಯದೇ ಸನ್ನದ್ಧರಾಗಿ.
ಕುಂಭ ರಾಶಿ : ಅಕ್ಟೋಬರ್ ತಿಂಗಳ ಮೂರನೇ ವಾರ ಟೆಕ್ನಾಲಜಿಗೆ ಸಂಬಂಧಿಸಿದ ಕಾರ್ಯ ಮಾಡುವವರಿಗೆ ಹೊಸ ಯೋಜನೆಗಳು ಕೈ ಸೇರುವುದು. ನೌಕರರಾಗಿದ್ದರೆ ಹೊಸ ಕೆಲಸದ ಆರಂಭ. ಸಾಮಾಜಿಕ ಸೇವೆಯಲ್ಲಿ ಭಾಗಿಯಾಗುವಿರಿ. ನಿಮ್ಮ ಮೌಲ್ಯಗಳನ್ನು ಬಿಟ್ಟು ವ್ಯವಹಾರ ಮಾಡದೇ ಇರುವುದು ನಿಮ್ಮ ವಿಶೇಷಗುಣ.
ಮೀನ ರಾಶಿ :ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ವಿಶೇಷತೆ ಇರಲಿದೆ. ನಿಮ್ಮ ಆಲೋಚನೆಗಳು ಇತರರಿಗೆ ಚಿಂತಿಸಲು ಸಾಧ್ಯವಾಗದೇ ಇರುವ ರೀತಿಯಲ್ಲಿ ಇರಲಿದೆ. ಉತ್ತಮ ಕಲ್ಪನೆಗಳಿಂದ ಮೆಚ್ಚುಗೆ ಗಳಿಸುವಿರಿ. ಯಾವುದನ್ನು ರೂಢಿಸಿಕೊಳ್ಳಬೇಕು ಎನ್ನುವ ಸ್ಪಷ್ಟತೆ ನಿಮಗಿರಿವುದು. ಅದನ್ನು ಮೈಗೂಡಿಸಿಕೊಳ್ಳುವ ಕಡೆ ನಿಮ್ಮ ವರ್ತನೆಗಳು ಇರುವುದು.
– ಲೋಹಿತ ಹೆಬ್ಬಾರ್ – 8762924271 (what’s app only)