AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Love Horoscope: ಅರಿತು ಮುನ್ನಡೆದರೆ ಶಾಶ್ವತ ಪ್ರೀತಿಯನ್ನು ಪಡೆಯಬಹುದು: ಇಲ್ಲಿದೆ ಈ ವಾರದ ಪ್ರೇಮ –ಪ್ರೀತಿ ಭವಿಷ್ಯ

ವಾರದ ಪ್ರೇಮ -ಪ್ರೀತಿ: ರಾಶಿ ಚಕ್ರದ ಮೂಲಕ ನಿಮ್ಮ ರಾಶಿಗೆ ಅನುಗುಣವಾಗಿ ಈ ವಾರ ಅಂದರೆ ಅಕ್ಟೋಬರ್ 19 ರಿಂದ ಅಕ್ಟೋಬರ್ 25 ವರೆಗೆ ಯಾವ ರಾಶಿಯವರಿಗೆ ಪ್ರೇಮ - ಪ್ರೀತಿ ಲಾಭ ಹಾಗೂ ನಷ್ಟಗಳು ಇದೆ ಎಂಬುದನ್ನು ಹೇಳಲಾಗಿದೆ. ಪ್ರೀತಿಯಲ್ಲಿ ಬರುವ ಸಂಕಷ್ಟಗಳು ಹಾಗೂ ಅದಕ್ಕೆ ಮಾಡಬೇಕಾದ ಪರಿಹಾರಗಳೇನು? ಯಾವ ರಾಶಿಯವರು ಈ ವಾರ ಪ್ರೀತಿಯಲ್ಲಿ ಬೀಳುತ್ತಾರೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

Weekly Love Horoscope: ಅರಿತು ಮುನ್ನಡೆದರೆ ಶಾಶ್ವತ ಪ್ರೀತಿಯನ್ನು ಪಡೆಯಬಹುದು: ಇಲ್ಲಿದೆ ಈ ವಾರದ ಪ್ರೇಮ –ಪ್ರೀತಿ ಭವಿಷ್ಯ
Love Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ|

Updated on: Oct 19, 2025 | 1:30 AM

Share

ಅಕ್ಟೋಬರ್ 19 ರಿಂದ ಅಕ್ಟೋಬರ್ 25 ವರೆಗೆ ನಿಮ್ಮ ಭಾವನಾತ್ಮಕ ಸಂಬಂಧಗಳು ಕಹಿಯಾಗಿಯೇ ಇರುವುದು. ಮುಖ್ಯ ಕಾರಣ ಶುಕ್ರನು ನೀಚಸ್ಥಾನಕ್ಕೆ ಹೋದ ಕಾರಣ ಕಲಹ, ಬೇಸರ, ವೈಮನಸ್ಯ, ಸಿಟ್ಟು, ವಾಗ್ವಾದ ಎಲ್ಲವೂ ಪ್ರೇಮದಲ್ಲಿ ಆಗಲಿದೆ. ಇದಕ್ಕೆ ಇಬ್ಬರೇ ಕಾರಣವಾಗಬೇಕೆಂದಿಲ್ಲ. ಸ್ನೇಹಿತರು, ಬಂಧುಗಳು, ಮನೆಯವರು, ಮಾತು, ಸಮಯ, ಉಡುಗೊರೆ ಎಲ್ಲವೂ ಆಗಿರುತ್ತದೆ. ಅದನ್ನು ಅರಿತು ಮುನ್ನಡೆದರೆ ಶಾಶ್ವತ ಪ್ರೀತಿಯನ್ನು ಪಡೆಯಬಹುದು. ಅದಿಲ್ಲದೇ ಹೋದರೆ ಎಲ್ಲವೂ ಭಗ್ನವಾಗಲಿದೆ.

ಮೇಷ ರಾಶಿ :ಅಕ್ಟೋಬರ್ ತಿಂಗಳ ಈ ವಾರ ಭಾವನಾತ್ಮಕವಾಗಿ ತುಂಬ ಉತ್ಸಾಹ ಇರುತ್ತದೆ. ನಿಮ್ಮ ಪ್ರೇಮ ಸಂಬಂಧದಲ್ಲಿ ಹೊಸತನವನ್ನು ರೂಢಿಸಿಕೊಳ್ಳುವಿರಿ. ಗೊತ್ತಿದ್ದೋ ಗೊತ್ತಿಲ್ಲದೆಯೋ ಹೊಸ ವ್ಯಕ್ತಿಯು ಅನಿರೀಕ್ಷಿತವಾಗಿ ಆಗಮಿಸುವರು. ಹಳೆಯದನ್ನು ಪುನಃ ನೆನಪಿಸಿಕೊಳ್ಳುವುದು ಬೇಡ.

ವೃಷಭ ರಾಶಿ :ಈ ರಾಶಿಯವರಿಗೆ ಈ ವಾರ ನಿಮ್ಮ ಪ್ರೀತಿಯ ಸಂಬಂಧದಲ್ಲಿ ಧೈರ್ಯ ಹಾಗೂ ನಂಬಿಕೆ ಅಗತ್ಯ. ಯಾವುದೋ ಕಾರಣಕ್ಕೆ ಆಡಿಕೊಂಡ ಅಸಮಾಧಾನದ ಅಸಮಾಧಾನಗಳು ಮಾಯವಾಗುವುದು. ಪ್ರೇಮಿಗಳು ನೆಮ್ಮದಿಗಾಗಿ ಎಲ್ಲಿಗಾದರೂ ಪ್ರವಾಸ ಮಾಡುವರು.

ಮಿಥುನ ರಾಶಿ :ಈ ವಾರ ನಿಮಗೆ ನಿಮ್ನ ಸಂಬಂಧದಲ್ಲಿ ಸ್ಪಷ್ಟತೆ ಇರಲಾರದು. ಮಾತುಗಳಿಂದ ಭಾವನೆಗಳನ್ನು ಸ್ಪಷ್ಟವಾಗಿ ಹೇಳಿದರೆ ತಪ್ಪು ಗ್ರಹಿಕೆಯಿಂದ ಹೊರಗುಳಿಯಬಹುದು. ಅನಿರೀಕ್ಷಿತ ಸಣ್ಣ ಪ್ರಯಾಣವೂ ಪ್ರೇಮಜೀವನವನ್ನು ಹಸಿರುಗೊಳಿಸುತ್ತದೆ.

ಕರ್ಕಾಟಕ ರಾಶಿ: ನಾಲ್ಕನೇ ರಾಶಿವಮಯವರಿಗೆ ಈ ವಾರ ಮಾತಿನಲ್ಲಿ ಹಲವು ದ್ವಂದ್ವಗಳಿದ್ದು ಪರಿಹರಿಸಿಕೊಳ್ಳಲೂ ಆಗದ ಸ್ಥಿತಿ. ಪ್ರೀತಿಗೆ ಸ್ನೇಹಿತರಿಂದ ಸಪೋರ್ಟ್ ಸಿಗುತ್ತದೆ. ಕುಟುಂಬದವರಿಂದಲೂ ನಿಮ್ಮ ಪ್ರೇಮಜೀವನಕ್ಕೆ ಒಪ್ಪಿಗೆ ದೊರಕಿಸಿಕೊಳ್ಳುವಿರಿ. ಸ್ತ್ರೀಯರಿಗೆ ಬೇಗ ವಿವಾಹ ಮಾಡಿಕೊಳ್ಳಲು ಇಷ್ಟವಿಲ್ಲದು.

ಸಿಂಹ ರಾಶಿ :ರವಿಯ ಆಧಿಪತ್ಯದ ಈ ರಾಶಿಗೆ ಪ್ರೇಮ ಸಂಬಂಧದಲ್ಲಿ ಅಹಂಕಾರ ತೋರಿಸಿ, ತೊಂದರೆಯನ್ನು ಎದುರಿಸುವಿರಿ. ಸಮಾಧಾನದಿಂದ ನಡೆದುಕೊಂಡರೆ ಬಾಂಧವ್ಯ ಬಲವಾಗುತ್ತದೆ. ಒಟ್ಟಾಗಿ ಸಮಯ ಕಳೆಯಿರಿ. ಸಿಕ್ಕ‌ ಸಮಯದಲ್ಲಿ ಆಕೆಗೆ ಸಹಾಯ ಮಾಡುವಿರಿ.

ಕನ್ಯಾ ರಾಶಿ :ಈ ವಾರದಲ್ಲಿ ಪ್ರೇಮದ ವಿಚಾರದಲ್ಲಿ ನಿಮಗೆ ಕಲಹ. ಹಳೆಯ ಪ್ರೇಮ ಪುನಃ ಜೀವಂತವಾಗುವ ಸೂಚನೆ ಸಂಗಾತಿಗೆ ಬರುವುದು. ಹೊಸ ಬೇಡಿಕೆಗೆ ಪ್ರಸ್ತಾಪ ಬರಲಿದೆ. ಪ್ರೀತಿಯಲ್ಲಿ ಸರಳತೆ ಹಾಗೂ ನಿಷ್ಠೆ ಮುಖ್ಯ. ಪ್ರೇಮದ ಉಳಿವಿಗೆ ಸಾಲ ಅನಿವಾರ್ಯ ಆಗಬಹುದು.

ತುಲಾ ರಾಶಿ :ಶುಕ್ರನ ಆಧಿಪತ್ಯದ ಈ ರಾಶಿಯವರು ರೋಮ್ಯಾಂಟಿಕ್ ಮೂಡಿನಲ್ಲಿ ಈ ವಾರ ಇರುವರು. ಸಂಗಾತಿಯ ಜಿತೆ ಸಮಯ ಕಳೆಯುವ ಅವಕಾಶ ಇದ್ದರೂ ಮನೆಯವರ ಕಾರಣದಿಂದ ಆಗದು. ಪ್ರೀತಿಯಿಂದ ನೀವು ನೀಡುವ ಚಿಕ್ಕ ಉಡುಗೊರೆಗಳು ಹೃದಯ ಗೆಲ್ಲುತ್ತವೆ. ಪ್ರೇಮ ಭಂಗದಿಂದ ಅನಾಹುತ ಮಾಡಿಕೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ :ಕುಜನ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ಭಾವನಾತ್ಮಕ ಏರುಪೇರಿನ ಸಮಯ. ಶಾಂತವಾಗಿ ನಡೆದುಕೊಂಡರೆ ಎಲ್ಲವೂ ಸರಿಯಾಗುತ್ತದೆ. ನಂಬಿಕೆಯು ಸಣ್ಣ ವಿಚಾರಕ್ಕೇ ಹಾಳಾಗುವ ಸಾಧ್ಯತೆ ಇದ್ದು, ತಿಳಿಸಿಕೊಂಡು ಅದನ್ನು ಕಾಪಾಡಿಕೊಳ್ಳಿ.

ಧನು ರಾಶಿ :ಒಂಭತ್ತನೇ ರಾಶಿಯವರಿಗೆ ಈ ವಾರ ಸಂಗಾತಿಯೊಂದಿಗೆ ಭವಿಷ್ಯದ ಹೊಸ ಯೋಜನೆಗಳನ್ನು ಹಂಚಿಕೊಳ್ಳುವಿರಿ. ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಸಮಾನ ರುಚಿಯವರ ನಡುವೆ ಪ್ರೇಮವು ನಿಮಗೆ ಇಷ್ಟವಾಗುವುದು. ಗೊತ್ತಿಲ್ಲದಂತೆ ಪರಸ್ಪರ ಪ್ರೇಮವಾಗಿರುವುದು ವಿಶೇಷ.

ಮಕರ ರಾಶಿ :ಶನಿಯ ಆಧಿಪತ್ಯದ ಈ ರಾಶಿಗೆ ಪ್ರೇಮಿಗಳ ಬಾಂಧವ್ಯದಲ್ಲಿ ಭದ್ರತೆ ಮತ್ತು ಸ್ಥಿರತೆ ಕಾಣಿಸುವುದು. ಹಳೆಯ ಕಲಹಗಳು ನಿವಾರಣೆಯಾಗುತ್ತವೆ. ಪ್ರೀತಿಗೆ ಆಳ ಸಿಗುವಾಗ ಕದಲು ಪ್ರಯತ್ನಮಾಡುವರು. ದೂರಾಗಬಾರದು ಎಂಬ ಕಾರಣಕ್ಕೆ ಇಬ್ಬರೂ ಗೌಪ್ಯ ಒಪ್ಪಂದ ಮಾಡಿಕೊಳ್ಳುವಿರಿ.

ಕುಂಭ ರಾಶಿ :ನಿಮಗೆ ಈ ವಾರ ಅನುಮಾನ ಹಾಗೂ ಅಸಮಾಧಾನ ಈ ಎರಡರಿಂದ ದೂರವಿದ್ದರೆ ಸಾಕು. ನಿಜವಾದ ಪ್ರೀತಿಗೆ ಸಮಯ ಬೇಕು. ಪ್ರಿಯರ ಮಾತುಗಳಿಗೆ ಗಮನ ಕೊಡಿ. ಆಕರ್ಷಣೆಯನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲಾಗದು. ನಿರೀಕ್ಷಿಸದೇ ಇರುವ ಉಡುಗೊರೆ ಸಿಗುವುದು.

ಮೀನ ರಾಶಿ :ರಾಶಿ ಚಕ್ರದ‌ ಕೊನೆಯ ರಾಶಿಗೆ ಈ ವಾರ ಪ್ರೇಮದಲ್ಲಿ ಭಾವನಾತ್ಮಕ ತೀವ್ರತೆ ಹಂಚಿಕೊಳ್ಳುವಿರಿ. ಪ್ರಿಯರ ಬೆಂಬಲದಿಂದ ಮನಸ್ಸಿಗೆ ಶಾಂತಿ. ವಿವಾಹ ನಿರ್ಣಯಕ್ಕೂ ಈ ವಾರ ಶುಭ ಕಾಲ. ಭೌತಿಕವಾಗಿ ದೂರಾಗುವ ಸಂದರ್ಭ ಬಂದರೂ ಮಾನಸಿಕವಾದ ಬಂಧನ ಮುರಿದುಹೋಗದು.

– ಲೋಹಿತ ಹೆಬ್ಬಾರ್ – 8762924271 (what’s app only)