Venus Transit in Capricorn 2024: ಶುಕ್ರನ ಸ್ಥಾನ ಬದಲಾವಣೆ… ಯಾವ್ಯಾವ ರಾಶಿಯ ಜನರಿಗೆ ಹಣದ ಹೊಳೆ?

ಇಷ್ಟು ದಿನ ಶುಕ್ರನು ಧನೂ ರಾಶಿಯಲ್ಲಿ ಇದ್ದು ಡಿಸೆಂಬರ್​ 2 ರಂದು ಸ್ಥಾನವನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಇದು ಪರಸ್ಪರ ಮಿತ್ರರ ಸ್ಥಾನವಾದ ಕಾರಣ ಇಲ್ಲಿ ಶುಕ್ರನು ಶನಿಯ ಜೊತೆಗೂಡಿ ಒಂದಿಷ್ಟು ಶುಭವನ್ನು ಕೆಲವು ರಾಶಿಯವರಿಗೆ ನೀಡುತ್ತಾನೆ.

Venus Transit in Capricorn 2024: ಶುಕ್ರನ ಸ್ಥಾನ ಬದಲಾವಣೆ... ಯಾವ್ಯಾವ ರಾಶಿಯ ಜನರಿಗೆ ಹಣದ ಹೊಳೆ?
ಶುಕ್ರನ ಸ್ಥಾನ ಬದಲಾವಣೆ
Edited By:

Updated on: Dec 06, 2024 | 1:37 PM

ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಮುಖ ಗ್ರಹಗಳಲ್ಲಿ ಶುಕ್ರನೂ ಒಬ್ಬ. ಐಹಿಕ ಸುಖಗಳನ್ನು ನೀಡುವವನು ಈತನೇ. ಜನನದ ಸಂದರ್ಭದಲ್ಲಿ ಶುಕ್ರ ಉತ್ತಮ‌ ಸ್ಥಾನದಲ್ಲಿ ಇರದಿದ್ದರೆ ಸುಖಭೋಗಗಳನ್ನು ಅನುಭವಿಸಲಾರ. ಆಸಕ್ತಿಯೂ ಕಡಿಮೆ ಅಂತಹ ಸಂದರ್ಭವು ಬಾರದು.

ಇಷ್ಟು ದಿನ ಶುಕ್ರನು ಧನೂ ರಾಶಿಯಲ್ಲಿ ಇದ್ದು ಡಿಸೆಂಬರ್​ 2 ರಂದು ಸ್ಥಾನವನ್ನು ಬದಲಿಸಿ ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ. ಇದು ಪರಸ್ಪರ ಮಿತ್ರರ ಸ್ಥಾನವಾದ ಕಾರಣ ಇಲ್ಲಿ ಶುಕ್ರನು ಶನಿಯ ಜೊತೆಗೂಡಿ ಒಂದಿಷ್ಟು ಶುಭವನ್ನು ಕೆಲವು ರಾಶಿಯವರಿಗೆ ನೀಡುತ್ತಾನೆ.

ಮೇಷ ರಾಶಿ :
ಈ ರಾಶಿಯವರಿಗೆ ಔದ್ಯೋಗಿಕ ಪ್ರಗತಿ ಕಾಣಿಸುವುದು. ಉದ್ಯೋಗವನ್ನು ಬದಲಿಸುವ ಮನಸ್ಸಿದ್ದರೆ, ಈ ವಾರದಲ್ಲಿ ಮುಗಿಸಿಕೊಂಡರೆ ಒಳ್ಳೆಯ ಉದ್ಯೋಗ ಸಿಗಲಿದೆ ಮತ್ತು ಮನಸ್ಸಿಗೆ ನೆಮ್ಮದಿ ಪ್ರಾಪ್ತವಗುವುದು.

ವೃಷಭ ರಾಶಿ :
ಇದು ಶುಕ್ರನ ಸ್ಥಾನವಾದ ಕಾರಣ ಬರಬೇಕಾದ ಹಣವು ಕೈ ಸೇರುವುದು. ಅದೃಷ್ಟದ ಯಾವುದಾದರೂ ಕೆಲಸವನ್ನು ಮಾಡಿದರೆ ಅದರಿಂದ ಹಣ ಸಿಗುವುದು. ಹೂಡಿಕೆ ಮಾಡಿ ಹೆಚ್ಚು ಸಂಪಾದನೆ ಮಾಡುವ ಆಸೆ ಇದ್ದವರಿಗೆ ಸೂಕ್ತ ಸಮಯ.

ಕರ್ಕಾಟಕ ರಾಶಿ :
ವೈವಾಹಿಕ ಕಾರ್ಯಗಳಿಗೆ ಮುನ್ನಡೆಯಬಹುದು. ಕಾರಣಾಂತರಗಳಿಂದ ವಿಳಂಬವಾಗಬಹುದು. ಅದನ್ನು ಮಾನಸಿಕ ಮಾಡಿಕೊಳ್ಳದೇ ಮುನ್ನಡೆದರೆ ಫಲಪ್ರಾಪ್ತಿಯಾಗುವುದು. ಸಂಬಂಧವು ಸ್ಥಿರವಾಗುವುದು.

ತುಲಾ ರಾಶಿ :
ಇವರಿಗೆ ವಿದೇಶ ಪ್ರವಾಸ ಸುತ್ತಾಟದ ಮನಸ್ಸು ಅಧಿಕವಾಗಿರಲಿದೆ. ದೂರದ ಊರಿಗೆಲ್ಲ ಹೋಗಿ ಮೋಜು ಮಸ್ತಿ ಮಾಡಬೇಕೆನಿಸುವುದು. ಜಾಗರೂಕತೆಯ ಜೊತೆ ಇದ್ದರೆ ಉತ್ತಮ.

ಮಕರ ರಾಶಿ :
ಈ ರಾಶಿಯವರಿಗೆ ಹೊಸ ಹೊಸ ಆಲೋಚನೆಗಳು ಬರುವುದು. ಯೋಜನೆಗಳನ್ನು ಕಾರ್ಯಗತಕ್ಕೆ ತರುವ ಪ್ರಯತ್ನ ಮಾಡುವರು. ಸಮಯವನ್ನು ಪಡೆಯುವುದು. ತಾಳ್ಮೆಯನ್ನು ಬಿಡದೇ ಮಾಡಬೇಕಾದ ಕಾರ್ಯ.

ಹೀಗೆ ಶುಕ್ರನು ನಾನಾ ರೀತಿಯಲ್ಲಿ ಸುಖ ಸಂಪತ್ತನ್ನು ಕೊಡುವನು. ಎಲ್ಲವೂ ಮಂಗಲಕರವಾಗಿ ಆಗಲು ಮಹಾಲಕ್ಷ್ಮಿಯ ಕೃಪಾಕಟಾಕ್ಷ ಬೇಕು. ಅದನ್ನು ಮನಸ್ಸಿನಲ್ಲಿ ಇರಿಸಿಕೊಂಡು ಸುಖ, ಸಂಪತ್ತನ್ನು ಅನುಭವಿಸಿ.

– ಲೋಹಿತ ಹೆಬ್ಬಾರ್ – 8762924271