Horoscope 26 March: ದಿನಭವಿಷ್ಯ; ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ, ಸಂಗಾತಿ ಆಯ್ಕೆಯಲ್ಲಿ ಅನೇಕ ಗೊಂದಲ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 26, 2024 | 12:02 AM

Nitya Bhavishya: 2024 ಮಾರ್ಚ್​ 26 ಮಂಗಳವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ. ಯಾವ ರಾಶಿಯವರು ಇಂದು ಜಾಗೃಕರಾಗಿರಬೇಕು ಎಂದು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 26 March: ದಿನಭವಿಷ್ಯ; ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ, ಸಂಗಾತಿ ಆಯ್ಕೆಯಲ್ಲಿ ಅನೇಕ ಗೊಂದಲ
ಪ್ರಾತಿನಿಧಿಕ ಚಿತ್ರ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಪ್ರತಿಪತ್, ನಿತ್ಯನಕ್ಷತ್ರ : ಹಸ್ತಾ, ಯೋಗ : ಧ್ರುವ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:41 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:36 ರಿಂದ 11:07ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:38 ರಿಂದ 02:09

ಮೇಷ ರಾಶಿ: ಇಂದು ಪ್ರೀತಿಯಿಂದ ದುಃಖವು ಸಂಭವಿಸಬಹುದು. ಸಣ್ಣ ವಿಷಯಕ್ಕೆ ಸಂಗಾತಿ ಜೊತೆ ಭಿನ್ನಾಭಿಪ್ರಾಯ ಬೇಡ. ನಿಮ್ಮ ದೇಹ ಹೆಚ್ಚು ವಿಶ್ರಾಂತಿಯನ್ನು ಬಯಸಬಹುದು. ನಕಾರಾತ್ಮಕ ಆಲೋಚನೆಗಳು ನಿಮ್ಮ ಮನಸ್ಸನ್ನು ಕೆಡಿಸುವುದು. ಅಸಾಧ್ಯವಾದುದನ್ನು ಸಾಧಿಸುವ ಭ್ರಮೆಯಿಂದ ಹೊರಬನ್ನಿ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆದರೂ ಮನಸ್ಸಿಗೆ ನೆಮ್ಮದಿ ಸಿಗದು. ಖರೀದಿಸುವ ಎಲ್ಲದಕ್ಕೂ ಹೆಚ್ಚುವರಿ ಹಣವನ್ನು ಕೊಡಬೇಕಾದೀತು‌. ನೀವು ಇಂದು ಅಸಹಾಯಕರಂತೆ ತೋರುವಿರಿ. ಆರ್ಥಿಕವಾಗಿ ಸಬಲರಾಗಲು ವಿವಿಧ ಆರ್ಥಿಕ ಮೂಲವನ್ನು ಅನ್ವೇಷಿಸಬೇಕಾದೀತು. ನಿಮಗೆ ಬೇಕಾದವರನ್ನು ಭೇಟಿಯಾಗಲು ಸಂತೋಷಪಡುವಿರಿ. ವಾಹನದ ಅವಶ್ಯಕತೆ ಬೇಕು ಎನಿಸಬಹುದು.

ವೃಷಭ ರಾಶಿ: ಸಂಗಾತಿಯು ನೋವಿಗೆ ಸ್ಪಂದಿಸದೇ ಇರುವುದು ಬೇಸರವಾಗುವುದು. ವಾಹನಾಪಘಾತದ ಭಯವಿರುವುದು. ಇಷ್ಟವಾದ ವಸ್ತುವನ್ನು ಬಿಟ್ಟುಕೊಡಲು ಮನಸ್ಸಾಗದು. ದ್ವೇಷವನ್ನು ಸಾಧಿಸಲು ನಿಮಗೆ ಇಂದು ಸರಿಯಾದ ಕಾರಣ ಸಿಗಬಹುದು. ಮಾತಿನಿಂದ ಯಾರಾದರೂ ನಿಮ್ಮನ್ನು ಕಟ್ಟಿಹಾಕಬಹುದು. ಅನುಭವವು ಸುಳ್ಳಾದಂತೆ ಕಾಣಿಸುವುದು. ಕೃತಜ್ಞತೆಯನ್ನು ಬೆಳೆಸಿಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಬದಲಿಸಬಹುದು. ಪ್ರೇಮದಲ್ಲಿ ಹಿನ್ನಡೆಯಾಗಲಿದೆ. ತಾಳ್ಮೆಯಿಂದ ಮುಖ್ಯ ಆಯುಧವಾಗಿರಲಿ. ವ್ಯಾಪಾರಸ್ಥರಿಗೆ ಸ್ವಲ್ಪ ಆಲಸ್ಯವು ಇರುವುದು. ಒಂದೇ ವಿಚಾರವನ್ನು ಮನನ‌ ಮಾಡುವಿರಿ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಲಿದೆ. ಪ್ರಯಾಣದಿಂದ ಆಯಾಸವಾಗಬಹುದು. ಉನ್ನತ ಅಭ್ಯಾಸದಿಂದ ಹಿಂದೇಟುಹಾಕುವ ಸ್ಥಿತಿ ಬರಬಹುದು. ನಿಮ್ಮ ಬಗ್ಗೆ ನಿಮಗೇ ಅಭಿಮಾನ ಇರುವುದು.

ಮಿಥುನ ರಾಶಿ: ಸ್ತ್ರೀಯರಿಗೆ ಆರ್ಥಿಕತೆ ಬಗ್ಗೆ ಗಾಂಭೀರ್ಯ ಬರಬಹುದು. ಕಛೇರಿಯಲ್ಲಿ ನೀವು ಇಂದು ವಿಳಂಬ ನೀತಿಯನ್ನು ಅನುಸರಿಸುವಿರಿ. ಶುಭಸೂಚನೆಯನ್ನು ಗುರುತಿಸಿಕೊಳ್ಳಲು ಇಂದು ಸೋಲುವಿರಿ. ನಿಮಗೆ ತಿಳಿದ ವಿಚಾರದ ಬಗ್ಗೆ ಹುಡುಕಾಟ ನಡೆಸುವಿರಿ. ವಿದ್ಯಾರ್ಥಿಗಳು ಸಂಶೋಧನೆಯತ್ತ ಗಮನವನ್ನು ಕೊಡುವರು. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಇರುವುದು. ಆನಾರೋಗ್ಯ ಸರಿಯಾದ ಹಂಚಿಕೊಂಡು ಕೆಲಸವನ್ನು ಮಾಡುವುದು ಸೂಕ್ತ. ಕಛೇರಿಯ ಕೆಲಸವನ್ನು ಮನೆಗೂ ತಂದುಕೊಳ್ಳುವಿರಿ. ಇಂದು ಮಾನಸಿಕವಾಗಿ ನೀವು ಕುಗ್ಗುವಿರಿ. ಕೆಲಸದಿಂದ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಭೂಮಿಯ ವ್ಯವಹಾರವು ಸುಲಭಕ್ಕೆ ಕೈ ಹಿಡಿಯದು. ವೇತನವನ್ನು ಹೆಚ್ಚಿಸಿಕೊಳ್ಳಲು ಅನ್ಯ ಮಾರ್ಗವನ್ನು ಹುಡುಕುವ ಅವಶ್ಯಕತೆ ಬರಬಹುದು. ಮನೆಗೆ ಬೇಕಾದ ವಸ್ತುಗಳನ್ನು ಹೆಚ್ಚು ವ್ಯಯ ಮಾಡಿ ಖರೀದಿಸುವಿರಿ.

ಕಟಕ ರಾಶಿ: ನ್ಯಾಯದ ವಿಷಯದಲ್ಲಿ ನೀವು ಹೆಚ್ಚು ಹೋರಾಟ ಮಾಡಬೇಕಾಗುವುದು. ಅಧಿಕಾರ ಪಡೆಯಲು ಓಡಾಟ ಮಾಡುವಿರಿ.‌ ಕುಟುಂಬದ ಸುಖವನ್ನು ಕಾಯ್ದಿಟ್ಟುಕೊಳ್ಳಲು ಕೆಲವು ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುವುದು. ನಿಮ್ಮನ್ನು ಯಾವುದೋ ಕಾರಣಕ್ಕೆ ಹೊಗಳಬಹುದು. ಉದ್ವೇಗದಲ್ಲಿ ನೀವು ಏನನ್ನಾದರೂ ಹೇಳಬಹುದು. ಕೆಲವು ವಿಚಾರದಲ್ಲಿ ನೀವು ಆತುರರಾಗುವಿರಿ. ಭವಿಷ್ಯದ ಬಗ್ಗೆ ಪತಿಯಾದ ಚಿಂತನೆ ಇರಲಿದೆ. ನಿಮ್ಮರನ್ನು ನೀವು ಕಳೆದುಕೊಳ್ಳುವ ಭೀತಿಯು ಇರುವುದು. ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ಆಲಸ್ಯದಿಂದ ನಿಮ್ಮ ಅನೇಕ ಕಾರ್ಯಗಳು ಹಿಂದುಳಿಯಬಹುದು. ಮಕ್ಕಳು ನಿಮ್ಮ ಕೆಲಸಕ್ಕೆ ತೊಂದರೆ ಕೊಡಬಹುದು. ಬೇಡದ ವಸ್ತುಗಳನ್ನು ಇನ್ನೊಬ್ಬರಿಗೆ ಕೊಡುವಿರಿ. ಮನೆಯ ವಾತಾರಣದಲ್ಲಿ ಇರಲು ಖುಷಿಯಾಗುವುದು.‌

ಸಿಂಹ ರಾಶಿ: ನಿಮಗೆ ಸಾಲದಿಂದ ಬಿಡುಗಡೆಯಾಗುವ ಸೂಚನೆ ಸಿಗುವುದು. ನಿಮ್ಮ ಶ್ರಮಕ್ಕೆ ಯೋಗ್ಯವಾದ ಆದಾಯವು ಸಿಗದೇ ಬೇಸರವಾಗಬಹುದು. ಆಹಾರದ ಸಮಯವು ಅನಿವಾರ್ಯ ಕಾರಣದಿಂದ ಬದಲಾಗುವುದು. ಉದ್ಯೋಗದಲ್ಲಿ ಬದಲಾವಣೆಯನ್ನು ನೀವು ನಿರೀಕ್ಷಿಸುತ್ತ ಇರುವಿರಿ. ಊಹಿಸದೇ ಇರುವ ಕಡೆಯಿಂದ ನಿಮಗೆ ಬೇಕು ಎನಿಸಿದ ಸಂಪತ್ತು ದೊರೆಯುವುದು. ಇದು ನಿಮಗೆ ಇಂದಿನ ಅಚ್ಚರಿಯ ವಿಚಾರವೇ ಆಗಲಿದೆ. ಉದ್ಯೋಗದಲ್ಲಿ ಹೆಚ್ಚುಗಾರಿಕೆ ಇರುವುದು. ತಾಳ್ಮೆಯಿಂದ ಕಾರ್ಯವನ್ನು ಮಾಡಿ. ನೂತನ‌ ಸ್ನೇಹವನ್ನು ಬೆಳೆಸಿಕೊಳ್ಳುವಿರಿ. ಒತ್ತಡಕ್ಕೆ ಮಣಿದು ನಿಮ್ಮ ಕೆಲಸ ಹಾಗೂ ನಿರ್ಧಾರವನ್ನು ಬದಲಿಸುವಿರಿ. ವಿದೇಶದ ಪ್ರಯಾಣಕ್ಕೆ ಆಯಾಸವು ಆಯಾಸವು ಅಡ್ಡಿಬರಬಹುದು. ನಿಮ್ಮ ಜಾಣತನದಿಂದ ಕೆಲವನ್ನು ಕಳೆದುಕೊಳ್ಳಬೇಕಾಗುವುದು.

ಕನ್ಯಾ ರಾಶಿ: ಇಂದು ಆಪ್ತರ ಜೊತೆ ಮಾಡುವ ಪ್ರಯಾಣದಿಂದ ಹಲವು ಸಂಗಾತಿಗಳ ಪರಿಚಯವಾಗುವುದು. ಹಳೆಯ ಸ್ನೇಹಿತರ ಜೊತೆ ಕಲಹವಾಗಿ ದೂರಾಗುವ ಸಾಧ್ಯತೆ ಇದೆ. ಎಷ್ಟೋ ದಿನಗಳ ಹಿಂದಿನ ಮನದ ಆಸೆಗಳನ್ನು ನೆರವೇರಿಸಿಕೊಳ್ಳುವಿರಿ. ಇಂದು ಸ್ವಂತ ಕಾರ್ಯಗಳಿಗೆ ಸಮಯವನ್ನು ಹೊಂದಿಸಿಕೊಳ್ಳುವುದು ಕಷ್ಟವಾಗುವುದು. ಮುಖವನ್ನು ಗಂಟು ಹಾಕಿಕೊಂಡು ಇರುವುದು ನಿಮ್ಮಿಂದ ಜನರನ್ನು ದೂರವಿರಿಸುವುದು. ಅತಿಯಾದ ಆಡಂಬರವು ನಿಮಗೆ ಇಷ್ಟವಾಗದು. ನಿಮ್ಮ ವಿದ್ಯಾಪ್ರಗತಿಯು ಬಹಳ ಯಶಸ್ವಿಯಾಗುವುದು. ನಿಮ್ಮಲ್ಲಿರುವ ಅಲ್ಪ ಹಣವನ್ನು ಸೇರಿಸಿ ಕೊಡಬೇಕಾದವರಿಗೆ ಹಣವನ್ನು ಕೊಡುವಿರಿ. ಇಂದಿನ ನಿಮ್ಮ ಮಾರಾಟದಿಂದ ಅಧಿಕಲಾಭವೂ ಆಗದು. ಸತ್ಪಾತ್ರರಿಗೆ ದಾನವನ್ನು ಮಾಡಿ. ನಿಮ್ಮ ವ್ಯಕ್ತಿತ್ವಕ್ಕೆ ಕಳಂಕವನ್ನು ಬಳಿಯಬಹುದು. ಬೆನ್ನಿನ ನೋವು ನಿಮ್ಮ ಕಾರ್ಯಗಳ‌ ಏಕಾಗ್ರತೆಯನ್ನು ಕೆಡಿಸೀತು. ನಿರುದ್ಯೋಗವು ನಿಮ್ಮ ಮನಸ್ಸಿಗೆ ಘಾಸಿಮಾಡಬಹುದು.

ತುಲಾ ರಾಶಿ: ನಿಮಗೆ ವಾಹನ ಚಾಲನೆಗೆ ಎರಡು ಮನಸ್ಸು ಇರಲಿದೆ. ಇನ್ನೊಬ್ಬರ ಮಾತನ್ನು ಸಹಿಸಲಾಗದೇ ಸಿಟ್ಟಾಗುವಿರಿ. ಇಂದು ನಿಮ್ಮ ವ್ಯಾಪರಕ್ಕೆ ಹೊಸ ಕಳೆ ಬರಬಹುದು. ಸಹೋದ್ಯೋಗಿಗಳು ಹಿರಿಯ ಅಧಿಕಾರಿಗಳ ಮುಂದೆ ನಿಮ್ಮನ್ನು ಪ್ರಶಂಸಿಸಬಹುದು. ಎಲ್ಲ ವಿಚಾರದಲ್ಲಿಯೂ ಅಸಮಾಧನವು ಇರಲಿದೆ. ಅತಿಯಾದ ಒತ್ತಡವು ನಿಮ್ಮ ದಕ್ಷತೆಯನ್ನು ಕಡಿಮೆ‌ ಮಾಡುವುದು. ಬಹಳ ದಿನಗಳ ಅನಂತರ ಮನೆಯರ ಜೊತೆ ಸಮಯವನ್ನು ಕಳೆಯುವಿರಿ. ಒಂದೇ ಕೆಲಸದಲ್ಲಿ ಮಗ್ನರಾಗಿ ಮಾಡಬೇಕಾದ ಕೆಲವು ಕೆಲಸವನ್ನು ಮರೆಯುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಬೇಕು ಎಂದು ಅನ್ನಿಸುವುದು. ನಿಮ್ಮ ಉತ್ತಮ ಹವ್ಯಾಸವು ಪ್ರಯೋಜನಕ್ಕೆ ಬಂದೀತು. ಇಂದು ಖರೀದಿಸಿದ ಹೊಸ ವಸ್ತುಗಳು ನಿಮಗೆ ಬಹಳ ಖುಷಿಯನ್ನು ಕೊಡುವುದು. ವೃತ್ತಿಯಲ್ಲಿ ನಿಮ್ಮನ್ನು ಗುರುತಿಸಿರುವುದು ಮನಸ್ಸನ್ನು ಹಿಗ್ಗಿಸಿರುವುದು. ಮನೆ ನಿರ್ಮಾಣದ ಕನಸು ನನಸಾಗಬಹುದು.

ವೃಶ್ಚಿಕ ರಾಶಿ: ಇಂದು ಮನೋರಂಜನೆಗೆ ಹೆಚ್ಚು ಸಮಯ ಕೊಡಬೇಕಾಗುವುದು. ಹಣಕಾಸಿನ ವಿಚಾರವನ್ನು ಮಾತನಾಡುವಾಗ ಎಚ್ಚರಿಕೆ ಬೇಕು. ಸಂಗಾತಿ ನಿಮ್ಮಿಂದ ಒತ್ತಡವಾಗಬಹುದು. ಇಂದು ಉದ್ಯಮದಲ್ಲಿ ಬರುವ ಸವಾಲುಗಳನ್ನು ಸುಲಭವಾಗಿ ಗೆಲ್ಲುವಿರಿ. ತಂದೆಗೆ ಬೇಕಾದ ಹಣವನ್ನು ನೀವು ಕೊಟ್ಟು ಮುನ್ನಡೆಸುವಿರಿ. ಮೇಲಿಂದ ಮೇಲೆ‌ ಬೀಳುವ ಪೆಟ್ಟಿನಿಂದ ಮನಸ್ಸು ದುರ್ಬಲವಾಗಬಹುದು. ಎಲ್ಲ ವಿಚಾರಕ್ಕೂ ನಿಮ್ಮ ಮೌನಮುದ್ರೆಯು ಒತ್ತಿರುವುದು. ಹೂಡಿಕೆಯನ್ನು ಹಿಂಪಡೆಯುವ ಸಾಧಿಸುವಿರಿ ಇದೆ. ವೈಯಕ್ತಿಕ ವಿಚಾರಕ್ಕೆ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಆದಾಯಕ್ಕೆ ಯಾರಿಂದಲಾದರೂ ಅಡ್ಡಿಯಾಗಿ, ಸಿಟ್ಟುಗೊಳ್ಳುವಿರಿ. ವಿವಾಹಕ್ಕೆ ಸಂಬಂಧಿಸಿದಂತೆ ಮಾತುಕತೆ ಸ್ಪಂದನ ಇರದು. ಅಶುಭವಾದ ಕೆಲಸಕ್ಕೆ ಗೊತ್ತಿಲ್ಲದೇ ನೀವು ಹಣವನ್ನು ನೀಡುವಿರಿ. ಪುತ್ರನಿಂದ ನಿಮಗೆ ಸಂತೋಷವು ಸಿಗಲಿದೆ.

ಧನು ರಾಶಿ: ನಿಮ್ಮ ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಯಾರ ಜೊತೆಯೂ ಬೆರೆಯುವುದು ನಿಮಗೆ ಇಷ್ಟವಾಗದು. ಉದ್ಯೋಗದಲ್ಲಿ ಬಡ್ತಿಯ ನಿರೀಕ್ಷೆ ಇರುವುದು. ಬಂಧುಗಳು ನಿಮ್ಮ ಆರೋಗ್ಯವನ್ನು ವಿಚಾರಿಸಿಕೊಳ್ಳುವರು. ದುಡುಕಿನಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಉದ್ಯಮಕ್ಕೆ ಸಂಬಂಧಿಸಿದ ಸರಿಯಾದ ನಿರ್ಧಾರವನ್ನು ಯಾರಿಂದಲಾದರೂ ಪಡಡಸುಕೊಳ್ಳಿ. ಹಿರಿಯ ಅಧಿಕಾರಿಗಳ ಜೊತೆ ಸ್ನೇಹದಿಂದ ಮಾತನಾಡಿ ವಿಶ್ವಾಸ ಗಳಿಸುವಿರಿ. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು‌‌. ಉದ್ಯೋಗಕ್ಕೆ ಅಲೆಯಬೇಕಾಗುವುದು.

ಮಕರ ರಾಶಿ: ಇಂದು ನಿಮಗೆ ಎಂದೋ‌ ಮಾಡಿದ ತಪ್ಪಿನ‌ ಬಗ್ಗೆ ತಿಳಿವಳಿಕೆ ಬರಬಹುದು. ಅಲ್ಪ ಲಾಭದಿಂದ ಇನ್ನಷ್ಟು ಉತ್ಸಾಹ ಹೆಚರಚಾಗುವುದು. ಉದ್ಯೋಗದಲ್ಲಿ ಸವಾಲಿನ ಕೆಲಸ ಕಾರ್ಯಗಳು ದೊರೆತರೂ ಸಾಧಿಸಬಲ್ಲಿರಿ. ಸಮಯೋಚಿತ ಸಲಹೆಯಿಂದ ಬರುವ ತೊಂದರೆಯು ದೂರಾಗುವುದು. ಪಾಲುದಾರಿಕೆಯಲ್ಲಿ ಕಲಹವಾಗುವ ಸಾಧ್ಯತೆ ಇದೆ. ನಿಮ್ಮ ಉದ್ಯೋಗವನ್ನು ನೀವು ಪ್ರೀತಿಸುವಿರಿ. ಕೇಳಿಕೊಂಡು ಬಂದವರಿಗೆ ನಿಮ್ಮಿಂದ ಅಲ್ಪ ಸಹಾಯ ಸಿಗುವುದು. ಅನವಶ್ಯಕವಾಗಿ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಭೋಗವಸ್ತುಗಳನ್ನು ಖರೀದಿ ಮಾಡುವಿರಿ. ಇವತ್ತಿಗೆ ತುರ್ತಾಗಿ ಬೇಕಾದುದನ್ನು ಸ್ನೇಹಿತರಿಂದ ಪಡೆದುಕೊಳ್ಳುವಿರಿ. ಸಹೋದರರ ನಡುವೆ ಸಂಬಂಧವು ಚೆನ್ನಾಗಿರುತ್ತದೆ.

ಕುಂಭ ರಾಶಿ: ಇಂದು ನೀವು ಪ್ರಯಾಣ ಮಾಡುವಾಗ ಹಳೆಯ ಮಿತ್ರರ ಭೇಟಿಯಾಗಬಹುದು. ಸಾಲದ ವಿಚಾರವಾಗಿ ಚಿಂತೆ ಕಾಣಿಸಿಕೊಳ್ಳುವುದು. ಉದ್ಯಮದ ವಿಚಾರದಲ್ಲಿ ಸಂಗಾತಿಯ ನಡುವೆ ವಾಗ್ವಾದ ನಡೆಯುವುದು. ಕೌಟುಂಬಿಕ ವಾತಾವರಣವು ನೀರಸ ಎನಿಸಬಹುದು. ಆದಾಯದ ಭಾಗವನ್ನು ಭವಿಷ್ಯಕ್ಕೆ ತೆಗೆದಿಡುವಿರಿ. ಬಂಧುಗಳಿಂದ ನೀವು ದೂರವಾಗುವಿರಿ. ಸದಾ ಅನ್ಯರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ನಿಮ್ಮ ಕಾರ್ಯವು ನಿಮಗೆ ಭಯವನ್ನು ಕೊಡುವುದು. ಇದರಿಂದ ಅಪಮಾನವು ಆಗುವುದು. ನಿಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಮಸ್ಯೆಯಾಗಬಹುದು. ಹಾಸ್ಯಪ್ರಜ್ಞೆಯಿಂದ ಯಾರಾದರೂ ಹತ್ತಿರವಾಗಬಹುದು.

ಮೀನ ರಾಶಿ: ಪ್ರಭಾವವು ಯಾವುದೂ ನಿಮ್ಮ ಕೆಲಸಕ್ಕೆ ಬಾರದೇ ಸ್ವಸಾಮರ್ಥ್ಯದಿಂದ ಯಶಸ್ಸು, ಸ್ಥಾನ ಸಿಗುವುದು. ಖರೀದಿಸುವ ವಾಹನದ ಬಗ್ಗೆ ಬಹಳ ಕುತೂಹಲವಿರಲಿದೆ. ಮನಃಶಾಂತಿನ್ನು ಏಕಾಂತವಾಗಿದ್ದು ಪಡೆಯುವಿರಿ. ವಿದೇಶದಲ್ಲಿ ಇರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತೊಂದರೆ ಆಗಲಿದ್ದು ಮನಸ್ಸು ವಿಚಲಿತವಗಲಿದೆ. ಮಿತ್ರರು ನಿಮಗೆ ಸಹಕಾರ ನೀಡಲಾರರು. ಸಾಲ ಮಾಡುವ ಸಂದರ್ಭವನ್ನು ತಂದುಕೊಳ್ಳುವುದು ಬೇಡ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು‌. ಆಪ್ತರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು. ನಿಮಗೆ ಇಂದು ಸಂಗಾತಿಯ ಮೇಲೆ ಪ್ರೀತಿ ಹೆಚ್ಚಾಗಿದ್ದು ದೂರದ ಊರಿನಿಂದ ನೋಡಲು ಹೋಗುವಿರಿ. ಪ್ರೇಮವು ಯಾರಿಂದಲೋ ಬಹಿರಂಗವಾಗುವುದು. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ.

ಲೋಹಿತ ಹೆಬ್ಬಾರ್-8762924271 (what’s app only)