Horoscope: ರಾಶಿ ಭವಿಷ್ಯ; ಈ ರಾಶಿಯವರು ವೈರಿಗಳನ್ನು ನೀವೇ ಸ್ವತಃ ಸೃಷ್ಟಿಸಿಕೊಳ್ಳುವಿರಿ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 11 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿ ಭವಿಷ್ಯ; ಈ ರಾಶಿಯವರು ವೈರಿಗಳನ್ನು ನೀವೇ ಸ್ವತಃ ಸೃಷ್ಟಿಸಿಕೊಳ್ಳುವಿರಿ
ದಿನಭವಿಷ್ಯ
Updated By: ಕಿರಣ್ ಹನುಮಂತ್​ ಮಾದಾರ್

Updated on: May 11, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ಮೃಗಶಿರಾ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:18 ರಿಂದ 10:54ರ ವರೆಗೆ, ಯಮಘಂಡ ಕಾಲ 14:05 ರಿಂದ 15:40ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:07 ರಿಂದ 07:43ರ ವರೆಗೆ.

ಸಿಂಹ ರಾಶಿ :ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ‌ ಅವಕಾಶಗಳು ಇರಲಿದ್ದು ಅದನ್ನು ಬಳಸಿಕೊಳ್ಳುವಿರಿ. ನೀವು ತುಂಬಾ ಆರೋಗ್ಯ ಪ್ರಜ್ಞೆ ಹೊಂದಿರುತ್ತೀರಿ ಮತ್ತು ಆರೋಗ್ಯ ಸಂಬಂಧಿತ ಪ್ರಯತ್ನಗಳು ಯಶಸ್ವಿ ಫಲಿತಾಂಶಗಳನ್ನು ನೀಡುತ್ತವೆ. ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಲ್ಲ. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗದು. ನಿಮ್ಮ ಕೆಲವು ಜೀವನದಲ್ಲಿ ಪ್ರೀತಿ ಬರಬಹುದು. ನಿಮಗೆ ತುಂಬಾ ಅದೃಷ್ಟಶಾಲಿ ಎಂದು ಸಾಬೀತುಪಡಿಸುತ್ತದೆ, ಅಲ್ಲಿ ನೀವು ಅಂತಿಮವಾಗಿ ನಿಮ್ಮ ದಾರಿಯನ್ನು ಮಾಡಲು ಸಾಧ್ಯವಾಗುತ್ತದೆ. ಇಂದು ಸಮಯವನ್ನು ಕಳೆಯುವುದು ಕಷ್ಟವಸದೀತು. ಮಾತಿನ‌ ಮೇಲೆ ಹಿಡಿತ ತಪ್ಪಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಹೆಚ್ಚು ಮಾತನಾಡುವಿರಿ.

ಕನ್ಯಾ ರಾಶಿ :ವೃತ್ತಿಯಲ್ಲಿ ಹಾಗೆಯೇ ಉಳಿದ ಕಾರ್ಯಗಳ ಗಮನ ಹೆಚ್ಚಾಗುವುದು. ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಅನಂತರ ತೊಂದರೆ ತಪ್ಪಿಸಲು, ಯಾವುದೇ ಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೊದಲು ಯೋಚಿಸಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾಗುವುದು. ಮನೆಯಲ್ಲಿ ಕೆಲಸ ಮಾಡುವಾಗ ಕೆಲಸಕ್ಕೆ ಆದ್ಯತೆ ನೀಡಿ, ಇದರಿಂದ ಯಾವುದೇ ಪ್ರಮುಖ ಕೆಲಸವು ತಪ್ಪಿಸಿಕೊಳ್ಳುವುದಿಲ್ಲ. ಪ್ರೇಮ ಸಂಬಂಧಗಳು ಮಿಶ್ರವಾಗಿರುತ್ತದೆ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ನಿಮ್ಮನ್ನು ಬೇರೆ ಕಾರ್ಯಗಳಿಗೆ ಕರೆದುಕೊಂಡು ಹೋಗಿ, ನಿಮ್ಮ ಯೋಜನೆಯನ್ನು ಹಾಳುಮಾಡುವರು. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ಹಳೆಯ ಉದ್ಯೋಗಕ್ಕೆ ಪುನಃ ಮರಳುವಿರಿ. ನಿರಂತರ ಕೆಲಸವನ್ನು ಮಾಡುವುದು ಇಷ್ಟವಾಗಲಿದೆ.

ತುಲಾ ರಾಶಿ :ಇಂದು ನೀವು ಅನ್ಯರಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಆದ್ದರಿಂದ ಅವರ ಅಭಿಪ್ರಾಯವನ್ನು ಗೌರವಿಸಿ ಮತ್ತು ಅವರಿಗೆ ಸ್ವಲ್ಪ ಜಾಗವನ್ನು ನೀಡಿ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಸಲಹೆಯು ನಿಮಗೆ ಪ್ರಯೋಜನಕಾರಿಯಾಗಿದೆ. ಕೆಲಸದ ಸ್ಥಳದಲ್ಲಿ ಕಾಳಜಿಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಹುಂಬುತನ ಸ್ವಭಾವದಿಂದ ಸಮಸ್ಯೆಗಳು ಉಂಟಾಗಬಹುದು. ನೌಕರರನ್ನು ಚೆನ್ನಾಗಿ ಇಟ್ಟುಕೊಳ್ಳುವುದು ಮುಖ್ಯವಾಗುವುದು. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ನಿಮ್ಮ ವೇತನದ ಬಗ್ಗೆ ಹೇಳಬೇಕಾಗಿಬರಬಹುದು. ಬಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು.

ವೃಶ್ಚಿಕ ರಾಶಿ :ಯಾವುದನ್ನಾದರೂ ಒಪ್ಪಿಕೊಳ್ಳುವ ಮೊದಲು ನಿಮ್ಮ ಒತ್ತಡವನ್ನು ಗಮನಿಸಿಕೊಳ್ಳಿ. ನೀವು ಪ್ರೇಮ ಸಂಬಂಧದಲ್ಲಿ ಬೇಸರವನ್ನು ಅನುಭವಿಸಬಹುದು, ಆದ್ದರಿಂದ ಪ್ರೀತಿಯ ಸಂಬಂಧವನ್ನು ಕೇಂದ್ರೀಕರಿಸಿ ಮತ್ತು ನಿಮ್ಮ ಸಂಗಾತಿಯ ಜೊತೆ, ಮಕ್ಕಳ ಜೊತಡ ಸಮಯ ಕಳೆಯಲು ಆಗದು. ವೈಯಕ್ತಿಕ ಸಮಸ್ಯೆಯನ್ನು ತಕ್ಷಣವೇ ಪರಿಹರಿಸಿ, ತಪ್ಪಿಸಿಕೊಳ್ಳಬೇಡಿ. ವೈರಿಗಳನ್ನು ನೀವೇ ಸ್ವತಃ ಸೃಷ್ಟಿಸಿಕೊಳ್ಳುವಿರಿ. ಆದಾಯದಿಂದ ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಮನೆಯ ಮುಂದೆ ಬಂದವರನ್ನು ಖಾಲಿ ಕೈಯಲ್ಲಿ ಕಳುಹಿಸುವುದು ಬೇಡ. ಏನಾದರೂ ಕೊಟ್ಟು ಕಳುಹಿಸಿ. ಹಣಕಾಸಿನ ಉದ್ಯೋಗದಲ್ಲಿ ಇರುವವರಿಗೆ ಉತ್ತಮ ಅವಕಾಶವು ಸಿಗುವುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಭಕ್ತಿಯು ಕಡಿಮೆ ಆದಂತೆ ನಿಮಗೆ ಅನ್ನಿಸುವುದು.