ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 11ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮಲ್ಲಿ ಕೆಲವರಿಗೆ ಈ ದಿನ ಆಭರಣಗಳನ್ನು ಖರೀದಿಸುವಂತಹ ಯೋಗ ಇದೆ. ಅದರಲ್ಲೂ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನಾಭರಣ ಅಥವಾ ವಜ್ರಾಭರಣಗಳನ್ನು ಖರೀದಿ ಮಾಡಲಿದ್ದೀರಿ. ಚಿನ್ನದ ಚೀಟಿಯನ್ನು ಕಟ್ಟುವುದಕ್ಕೆ ಆರಂಭ ಮಾಡುವ ಅಥವಾ ಈಗಾಗಲೇ ಕಟ್ಟುತ್ತಿದ್ದಲ್ಲಿ ಇನ್ನೂ ಒಂದು ಹೆಚ್ಚುವರಿಯಾಗಿ ಆರಂಭಿಸುವ ಸಾಧ್ಯತೆಗಳಿವೆ. ಉದ್ಯೋಗಸ್ಥ ಮಹಿಳೆಯರಿಗೆ ಭವಿಷ್ಯದಲ್ಲಿ ಸಿಗುವಂತಹ ಅತಿ ದೊಡ್ಡ ಅವಕಾಶ ಒಂದರ ಬಗ್ಗೆ ಸುಳಿವು ಅಥವಾ ಸೂಚನೆ ದೊರೆಯಲಿದೆ. ಇನ್ನೂ ಯಾರು ಈಗಾಗಲೇ ಪ್ರೇಮ ನಿವೇದನೆ ಮಾಡಿಕೊಂಡಿರುತ್ತೀರೋ ಅಂಥವರಿಗೆ ಸಮ್ಮತಿ ದೊರೆಯುವ ಸಾಧ್ಯತೆಗಳು ಹೆಚ್ಚಿವೆ.
ಕೆಲವು ಕಿರುಕುಳ ಅಥವಾ ಹಿಂಸೆಗೆ ನಿಧಾನವಾಗಿ ಒಗ್ಗಿಕೊಂಡು ಬಿಟ್ಟಿರೇನೋ ಎಂದು ನಿಮಗೆ ಅನಿಸಲು ಶುರುವಾಗುತ್ತದೆ. ಹೀಗೆ ಅನಿಸುವ ಕಾರಣದಿಂದಲೇ ನಿಮಗೆ ಸಿಟ್ಟು ಹೆಚ್ಚಾಗಿ ಸಹೋದ್ಯೋಗಿಗಳೊಂದಿಗೆ ಅಥವಾ ಮೇಲಧಿಕಾರಿಗಳೊಂದಿಗೆ ಜೋರು ಧ್ವನಿಯ ವಾದ- ವಾಗ್ವಾದಗಳು ಆಗಬಹುದು. ಈ ದಿನ ನೀವು ಕೆಲಸಕ್ಕೆ ಹೋಗುವ ಮುನ್ನ ಅಥವಾ ಹೋಗುವ ದಾರಿಯಲ್ಲಿ ಗಣಪತಿ ಅಥರ್ವಶೀರ್ಷ ಶ್ರವಣ ಮಾಡುವುದು ಒಳ್ಳೆಯದು. ನಿಮ್ಮ ಕೈಕೆಳಗೆ ಕೆಲಸ ಮಾಡುವವರ ಸಣ್ಣ ಸಣ್ಣ ತಪ್ಪುಗಳನ್ನು ತುಂಬಾ ದೊಡ್ಡ ಮಟ್ಟದಲ್ಲಿ ಬಿಂಬಿಸುವುದಕ್ಕೆ ಹೋಗಬೇಡಿ. ಇನ್ನು ರಾತ್ರಿಯ ವೇಳೆ ಯಾರು ದ್ವಿಚಕ್ರ ವಾಹನವನ್ನು ತಾವೇ ಚಲಾಯಿಸುತ್ತಾರೋ ಅಂತಹವರು ಇದೊಂದು ದಿನದ ಮಟ್ಟಿಗೆ ಸಾರ್ವಜನಿಕ ಸಾರಿಗೆ ಅಥವಾ ಬೇರೆ ಯಾವುದಾದರೂ ವಾಹನವನ್ನು ಬಳಸುವುದು ಕ್ಷೇಮ. ನೀವು ವಾಹನ ಚಾಲನೆ ಮಾಡಬಾರದು.
ಯಾರಿಗೂ ಹೇಳಬೇಡಿ ಎಂದು ಬೇರೆಯವರು ನಿಮ್ಮ ಬಳಿ ಹೇಳಿರುವಂತಹ ರಹಸ್ಯವನ್ನು ಕಾಪಾಡಿಕೊಳ್ಳಿ. ಒಂದು ವೇಳೆ ನಿಮ್ಮ ಅತ್ಯುತ್ಸಾಹದ ಕಾರಣಕ್ಕೋ ಅಥವಾ ಬೇರೆ ಯಾವುದಾದರೂ ಕಾರಣದಿಂದ ಅದನ್ನು ಸಾರ್ವಜನಿಕವಾಗಿ ಹೇಳಿದಿರೋ ಇದರಿಂದ ಬಹಳ ದೊಡ್ಡ ಮಟ್ಟದ ನಷ್ಟವನ್ನು ಅನುಭವಿಸಲಿದ್ದೀರಿ. ಬ್ಯಾಂಕ್ ನಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸ್ವಲ್ಪ ಮಟ್ಟಿಗೆ ಅಡೆತಡೆಗಳು ಎದುರಾಗಬಹುದು. ಇದರಿಂದ ಬೇಸರಗೊಂಡು ಬೇರೆ ಒಂದು ಬ್ಯಾಂಕಿನಲ್ಲಿ ಮತ್ತೆ ಸಾಲಕ್ಕಾಗಿ ಪ್ರಯತ್ನ ಮಾಡಿದಿರೋ ನಿಮ್ಮ ಕೆಲಸ ಇನ್ನೂ ಬಹಳ ಮುಂದಕ್ಕೆ ಹೋಗುತ್ತದೆ. ಹೋಟೆಲ್ ಉದ್ಯಮಿಗಳು ಇದ್ದಲ್ಲಿ ಆದಾಯದಲ್ಲಿ ಕುಂಠಿತ ಆಗಬಹುದು. ಆದರೆ ಇದು ತಾತ್ಕಾಲಿಕ ಮಾತ್ರ ಎಂಬುದು ನೆನಪಿನಲ್ಲಿರಲಿ.
ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಹೆಚ್ಚಿಸುವಂತಹ ಏನಾದರೂ ವಸ್ತು ಖರೀದಿ ಮಾಡಲೇಬೇಕು ಎಂದು ನಿಮಗೆ ಬಲವಾಗಿ ಅನಿಸಲು ಶುರುವಾಗುತ್ತದೆ. ಆದರೆ ಈ ವಿಚಾರವನ್ನು ಯಥಾವತ್ತಾಗಿ ಹೊರಗಡೆ ಹೇಳದೇ ಕಾರು ಅಥವಾ ಇನ್ಯಾವುದಾದರೂ ಖರೀದಿ ಮಾಡುವುದಕ್ಕೆ ಮುಂದಾದರೆ ವಿರೋಧವನ್ನು ಎದುರಿಸಬೇಕಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ನೀರಿಗೆ ಸಂಬಂಧಿಸಿದಂತಹ ಅಲರ್ಜಿ ಆಗಬಹುದು ಅಥವಾ ಸೋಂಕು ಕಾಡಬಹುದು. ಆದ್ದರಿಂದ ಮನೆಯಿಂದ ಹೊರಗೋ ಅಥವಾ ಮನೆಯಲ್ಲಿಯೇ ನೀವು ಸೇವಿಸುವಂತಹ ನೀರಿನ ಗುಣಮಟ್ಟದ ಬಗ್ಗೆ ಗಮನವನ್ನು ನೀಡಿ. ತಂದೆ- ತಾಯಿ ಈ ದಿನ ಮಾಡಬೇಡ ಎಂದು ಹೇಳಿದ ಕೆಲಸವನ್ನು ಯಾವ ಕಾರಣಕ್ಕೂ ಮಾಡುವುದಕ್ಕೆ ಹೋಗಬೇಡಿ.
ಸಿನಿಮಾ ರಂಗ, ಜಾಹೀರಾತು ಕ್ಷೇತ್ರ, ಈವೆಂಟ್ ಮ್ಯಾನೇಜ್ ಮೆಂಟ್ ಈ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ದೊಡ್ಡ ಮಟ್ಟದಲ್ಲಿ ಆದಾಯ ಜಾಸ್ತಿ ಆಗುವಂಥ ಯೋಗ ಇದೆ. ಈ ಹಿಂದೆ ನೀವು ಮಾಡಿಕೊಟ್ಟಿದ್ದ ಕೆಲಸದಿಂದ ಬಹಳ ಖುಷಿಗೊಂಡ ಗ್ರಾಹಕರು ನಿಮ್ಮನ್ನು ಹುಡುಕಿಕೊಂಡು ಬರಲಿದ್ದಾರೆ. ಮಕ್ಕಳ ಸಾಧನೆ ಅಥವಾ ಯಶಸ್ಸಿನಿಂದ ನಿಮ್ಮ ಮನಸ್ಸಿಗೆ ಒಂದು ಬಗೆಯ ಸಮಾಧಾನ ಮೂಡಲಿದೆ. ಕೃಷಿ ಭೂಮಿಯನ್ನು ಹೊಂದಿದ್ದು, ಅಲ್ಲಿ ಬಹಳ ಸಮಯದಿಂದ ಯಾವುದೇ ಕೆಲಸವನ್ನು ಮಾಡಿಸಿಯೇ ಇಲ್ಲ ಎನ್ನುವಂತಹವರು ಅಲ್ಲಿ ದೊಡ್ಡ ಮಟ್ಟದ ಕೆಲಸವನ್ನು ಮಾಡಿಸುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಿದ್ದೀರಿ. ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ.
ಈ ದಿನ ನೀವೇ ಸಮಸ್ಯೆಯನ್ನು ಊಹಿಸಿಕೊಂಡು, ನೀವೇ ಆತಂಕಗೊಂಡು, ಆ ನಂತರ ಅದಕ್ಕೆ ನೀವೇ ಪರಿಹಾರ ಹುಡುಕಿಕೊಂಡು ಸಮಾಧಾನ ಕಾಣಲಿದ್ದೀರಿ. ಆರಂಭದಲ್ಲಿಯೇ ಹೇಳಿದಂತೆ ಎಲ್ಲವೂ ನಿಮ್ಮ ಊಹೆಯೇ ಆಗಿರುತ್ತದೆ. ಯಾರು ಸ್ವಯಂ ಉದ್ಯೋಗ ಮಾಡುತ್ತಿದ್ದೀರೋ ಅಂತಹವರಿಗೆ ಆದಾಯದಲ್ಲಿನ ಇಳಿಕೆ ಆತಂಕವನ್ನು ಉಂಟು ಮಾಡಲಿದೆ. ಪ್ರತಿ ತಿಂಗಳು ನೀವು ಕಟ್ಟಬೇಕಾದ ಸಾಲ, ಮನೆಗೆ ಆಗುವ ಖರ್ಚು ಇತ್ಯಾದಿಗಳನ್ನು ಲೆಕ್ಕ ಹಾಕಿಕೊಂಡು ಮುಂದಕ್ಕೆ ಹೆಜ್ಜೆ ಇಡುವುದು ಈ ಹಂತದಲ್ಲಿ ಒಳ್ಳೆಯದು ಎಂದು ನಿಮಗೆ ಅನಿಸುತ್ತದೆ. ನಿಮಗೆ ಎಷ್ಟೇ ಹತ್ತಿರದವರೇ ಆದರೂ ಆಪ್ತರೇ ಆದರೂ ಅವರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕಬೇಡಿ.
ಈ ದಿನ ಪ್ರತಿ ವಿಚಾರದಲ್ಲೂ ವಿಷಯದಲ್ಲೂ ವ್ಯವಹಾರದಲ್ಲೂ ಹಣಕಾಸಿನ ಲೆಕ್ಕಾಚಾರವನ್ನೇ ಹಾಕಲಿದ್ದೀರಿ. ಇದನ್ನು ಮಾಡುವುದರಿಂದ ನನಗೇನು ಲಾಭ ಎಂಬ ಧೋರಣೆ ಇರಲಿದೆ. ನಿಮ್ಮ ಈ ಸ್ವಭಾವ ಸ್ನೇಹಿತರು ಅಥವಾ ಸಂಬಂಧಿಕರನ್ನು ಗೊಂದಲಕ್ಕೆ ಸಿಲುಕಿಸಲಿದೆ. ನಿಮ್ಮಲ್ಲಿ ಕೆಲವರಿಗೆ ಐಷಾರಾಮಿ ಕಾರು ಖರೀದಿ ಮಾಡುವಂಥ ಯೋಗ ಇದೆ. ಕೆಲವರು ಈ ದಿನ ಅಡ್ವಾನ್ಸ್ ನೀಡಿ ಬುಕ್ ಸಹ ಮಾಡುವ ಸಾಧ್ಯತೆಗಳಿವೆ. ಒಂದು ವೇಳೆ ಹಣಕಾಸಿನ ಕೊರತೆ ಕಂಡುಬಂದರೂ ಬಹಳ ಸರಾಗವಾಗಿ ಹೊಂದಾಣಿಕೆ ಆಗಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಿ, ಜಿಮ್ ಅಥವಾ ಯೋಗ ಅಥವಾ ಪ್ರಾಣಾಯಾಮ ಇಂಥದ್ದಕ್ಕೆ ಸೇರ್ಪಡೆ ಆಗುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ.
ನಿಮ್ಮ ಪ್ರಭಾವ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ದಿನ ಇದು. ಬಹಳ ಮುಕ್ತವಾಗಿ ಮಾತನಾಡುವ ಮೂಲಕ ಇತರರನ್ನು ನಿಮ್ಮ ಕಡೆಗೆ ಸೆಳೆದುಕೊಳ್ಳಲಿದ್ದೀರಿ. ನಿಮ್ಮ ಸಿದ್ಧಾಂತ, ಆಲೋಚನೆ, ಯೋಜನೆ ಇವುಗಳ ಬಗ್ಗೆ ಇತರರು ಬೆರಗಿನಿಂದ ನೋಡಲಿದ್ದಾರೆ. ಗೃಹಾಲಂಕಾರ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನೀವು ಈಗಿರುವ ಹುದ್ದೆಗಿಂತ ಮೇಲಿನ ಹುದ್ದೆಗೆ ಜಾಬ್ ಆಫರ್ ದೊರೆಯುವಂತಹ ಅವಕಾಶಗಳಿವೆ. ಈ ಬಗ್ಗೆ ನಿಮಗೆ ಹಲವು ಪ್ರಶ್ನೆಗಳು ಉದ್ಭವಿಸಬಹುದು. ಆದರೆ ಇದನ್ನು ಒಪ್ಪಿಕೊಳ್ಳುವುದರಿಂದ ಭವಿಷ್ಯದಲ್ಲಿ ಅನುಕೂಲಗಳಿವೆ. ಮಕ್ಕಳ ಶಿಕ್ಷಣದ ಸಲುವಾಗಿ ತಿಂಗಳಾ ತಿಂಗಳು ಉಳಿತಾಯ ಮಾಡುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ.
ನಿಮ್ಮೆದುರು ಮಹತ್ತರವಾದ ಬದಲಾವಣೆಯೊಂದು ಕಾಣಿಸಲಿದೆ. ನಿರೀಕ್ಷೆಯೇ ಮಾಡದ ರೀತಿಯಲ್ಲಿ ಆಗುವಂತಹ ಸಕಾರಾತ್ಮಕವಾದ ಬೆಳವಣಿಗೆ ಇದು. ಇದರಿಂದ ನಿಮ್ಮ ಜೀವನಶೈಲಿಯಲ್ಲೂ ಬದಲಾವಣೆ ಆಗಲಿದೆ. ಈಗ ನಿಮಗೆ ಬರುತ್ತಿರುವ ಆದಾಯ ತುಂಬಾ ದೊಡ್ಡ ಮಟ್ಟದಲ್ಲಿ ಜಾಸ್ತಿ ಮಾಡಿಕೊಳ್ಳುವ ಮಾರ್ಗೋಪಾಯ ಹಾಗೂ ಅವಕಾಶ ಸಿಗಲಿದೆ. ನಿಮಗೆ ಬರುವಂತಹ ಫೋನ್ ಕರೆಗಳೇ ಇರಬಹುದು ಅಥವಾ ಇಮೇಲ್ ಇರಬಹುದು ಸರಿಯಾಗಿ ಪರೀಕ್ಷಿಸಿಕೊಳ್ಳಿ. ಒಟ್ಟಿನಲ್ಲಿ ಈ ದಿವಸ ಯಾವುದೇ ಅವಕಾಶಗಳು ಕೈ ತಪ್ಪದಂತೆ ನೋಡಿಕೊಳ್ಳಿ. ಇನ್ನು ಯಾರು ಕೃಷಿಕ ವೃತ್ತಿಯಲ್ಲಿ ಇರುತ್ತಾರೋ ಅಂಥವರಿಗೆ ಭೂಮಿ ಖರೀದಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ.