ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 17ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ನೀವು ಈಗಾಗಲೇ ಕೆಲಸ ಮಾಡಿ ಆಗಿದೆ, ನಿಮಗೆ ಬರಬೇಕಾದ ಹಣ ಹಾಗೇ ಬಾಕಿ ಉಳಿದುಹೋಗಿದೆ ಅಂತಾದಲ್ಲಿ ಈ ದಿನ ಪ್ರಯತ್ನವನ್ನು ಪಟ್ಟರೆ ಅದು ಬರುವಂಥ ದಿವಸವಾದರೂ ಗೊತ್ತಾಗುತ್ತದೆ ಅಥವಾ ಈ ದಿನ ಬಂದರೂ ಬಂದುಬಿಡಬಹುದು. ನಿಮ್ಮಲ್ಲಿ ಕೆಲವರು ಮನೆಗೆ ರೆಫ್ರಿಜರೇಟರ್ ನಂಥ ಗೃಹೋಪಯೋಗಿ ವಸ್ತುಗಳನ್ನು ತರುವಂತಹ ಯೋಗ ಇದೆ. ಈ ದಿನ ಸಣ್ಣ ಸಣ್ಣ ವಿಚಾರಕ್ಕೂ ನಿಮಗೆ ಸಿಕ್ಕಾಪಟ್ಟೆ ಸಿಟ್ಟು ಬರಲಿದೆ. ಸಾಧ್ಯವಾದಷ್ಟು ನಿಮ್ಮ ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಪ್ರಯತ್ನಿಸಿ. ಹಾಲು ಅಥವಾ ಹಾಲಿನಿಂದ ಮಾಡಿದ ಪದಾರ್ಥಗಳಿಂದ ದೂರವಿದ್ದಲ್ಲಿ ಕ್ಷೇಮ.
ಮನೆಗೆ ಸಂಬಂಧಿಕರು ಬರುವಂತಹ ಯೋಗ ಈ ದಿನ ಇದೆ. ಅವರ ಜೊತೆಗೆ ಕೆಲವು ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಲಿದ್ದೀರಿ. ನಿಮ್ಮ ತಂದೆ ಅಥವಾ ತಂದೆ ಸಮಾನರಾದವರು ಸಣ್ಣ ಮಟ್ಟಿಗಾದರೂ ನಿಮಗೆ ದುಡ್ಡು ನೀಡುವ ಸಾಧ್ಯತೆಗಳಿವೆ. ವ್ಯಾಸಂಗವೋ ಅಥವಾ ಉದ್ಯೋಗವೋ ವಿದೇಶಕ್ಕಾಗಿ ತೆರಳಬೇಕು ಎಂದು ಪ್ರಯತ್ನ ನಡೆಸುತ್ತಿರುವವರಿಗೆ ಈ ತನಕ ಇದ್ದಂತ ಅಡೆತಡೆಗಳು ನಿವಾರಣೆಯಾಗಲಿವೆ. ಯಾರು ಧಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೀರೋ ಅಂತಹವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಗಡುವಿನೊಳಗೆ ಮುಗಿಸುವುದಕ್ಕೆ ಆದ್ಯತೆ ಕೊಡಿ.
ದೇವತಾ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಸ್ನೇಹಿತರು ಅಥವಾ ಸಂಬಂಧಿಕರು ಆಹ್ವಾನ ನೀಡಿದಲ್ಲಿ ಹೋಗಿ ಬಂದರೆ ಉತ್ತಮ. ಬಹಳ ಸಮಯದ ಹಿಂದೆ ಹೂಡಿಕೆ ಮಾಡಿದ್ದ ಷೇರು ಅಥವಾ ಮ್ಯೂಚುವಲ್ ಫಂಡ್ ಬಹಳ ಬೆಲೆ ಕಡಿಮೆ ಆಗಿ, ನಿಮಗೆ ಬೇಸರಕ್ಕೆ ಕಾರಣ ಆಗಿದ್ದಲ್ಲಿ ಈ ದಿನ ಅದರ ಬೆಲೆ ಏರುವುದಕ್ಕೆ ಅವಕಾಶಗಳಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಪದೋನ್ನತಿ ನೀಡುವ ಮುಂಚೆ ಕೆಲವು ಜವಾಬ್ದಾರಿಗಳನ್ನು ನೀಡುವುದರ ಬಗ್ಗೆ ಚರ್ಚೆಗಳಾಗಬಹುದು. ಆದ್ದರಿಂದ ಹೊಸ ಜವಾಬ್ದಾರಿಗಳೇನಾದರೂ ನಿಮಗೆ ನೀಡಲು ಮ್ಯಾನೇಜ್ ಮೆಂಟ್ ಕಡೆಯಿಂದ ಸೂಚನೆ ಬಂದಲ್ಲಿ ಯಾವುದೇ ಕಾರಣಕ್ಕೂ ನಿರಾಕರಿಸುವುದಕ್ಕೆ ಹೋಗಬೇಡಿ.
ನಿಮ್ಮಲ್ಲಿ ಕೆಲವರಿಗೆ ತೀವ್ರತರವಾದ ಚರ್ಮ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ವಿಚಾರಗಳನ್ನು ಯಾಕಾದರೂ ಮಾತನಾಡಿದೆನೋ ಎಂದು ಅಂದುಕೊಳ್ಳುವಂಥ ಸನ್ನಿವೇಶ ಮನೆಯಲ್ಲಿ ಸೃಷ್ಟಿಯಾಗಲಿದೆ. ನವ ವಿವಾಹಿತರಿಗೆ ಖರ್ಚಿನ ಪ್ರಮಾಣ ತುಂಬಾ ಹೆಚ್ಚಾಗಿ, ಆತಂಕಕ್ಕೆ ಕಾರಣವಾಗಬಹುದು ಅಥವಾ ಅದನ್ನು ಸಂಭಾಳಿಸಲು ಸಾಲ ಮಾಡಬೇಕಾಗುತ್ತದೆ. ನೀವು ಒಬ್ಬರೇ ಮಾಡಿ ಮುಗಿಸಬಹುದು ಅಂದುಕೊಂಡ ಕೆಲಸವು ವ್ಯಾಪ್ತಿ ದೃಷ್ಟಿಯಿಂದ ತುಂಬಾ ದೊಡ್ಡದಾಗಿ, ಯಾಕಾದರೂ ಈ ಕೆಲಸವನ್ನು ಒಪ್ಪಿಕೊಂಡೆನು ಎಂದು ಅನಿಸುವುದಕ್ಕೆ ಆರಂಭವಾಗುತ್ತದೆ. ಮುಖ್ಯ ಕೆಲಸಕ್ಕಾಗಿ ಮನೆಯಿಂದ ಹೊರಡುತ್ತಿದ್ದೀರಿ ಎಂದಾದರೆ ಮನಸಲ್ಲಿ ಶಿರಡಿ ಸಾಯಿಬಾಬಾರನ್ನು ನೆನಪಿಸಿಕೊಳ್ಳಿ.
ಮಾತಿನಲ್ಲಿ, ನಡವಳಿಕೆಯಲ್ಲಿ ನಿಮ್ಮಲ್ಲೊಂದು ಆಕರ್ಷಣಾ ಶಕ್ತಿ ಕಾಣಿಸಿಕೊಳ್ಳಲಿದೆ. ನೀವು ಇಡುವ ಹೆಜ್ಜೆಗಳಿಂದ ಭವಿಷ್ಯದಲ್ಲಿ ಎಂಥ ಅನುಕೂಲ ಆಗಲಿದೆ ಎಂಬ ಬಗ್ಗೆ ಸ್ಪಷ್ಟತೆ ದೊರೆಯಲಿದ್ದು, ಯಾವುದೇ ನಿರ್ಧಾರ ಅಥವಾ ಕೆಲಸದಲ್ಲೂ ಗೊಂದಲ ಇರುವುದಿಲ್ಲ. ರಾಜಕಾರಣದಲ್ಲಿ ಇರುವಂತಹವರಿಗೆ ಪದೋನ್ನತಿ ಅಥವಾ ಪ್ರಮುಖ ಜವಾಬ್ದಾರಿಗಳು ಸಿಗಬಹುದು. ನಿಮ್ಮ ಸಹೋದ್ಯೋಗಿಗಳಿಗೆ ಕೆಲವು ಕೆಲಸಗಳು ಕಷ್ಟ ಎನಿಸಿ, ಅವುಗಳನ್ನು ಪೂರ್ಣಗೊಳಿಸಲು ನಿಮ್ಮ ಸಹಾಯವನ್ನು ಕೇಳಿಕೊಂಡು ಬರಬಹುದು. ವಿದ್ಯಾರ್ಥಿಗಳು ಐಪ್ಯಾಡ್ ನಂತಹ ಗ್ಯಾಜೆಟ್ ಗಳನ್ನು ಖರೀದಿಸುವ ಯೋಗ ಇದೆ. ನೀವು ಈ ತನಕ ಹುಡುಕಾಡುತ್ತಿರುವಂತಹ ಪ್ರಮುಖ ಕಾಗದ- ಪತ್ರ ದೊರೆಯುವ ಅವಕಾಶಗಳು ಹೆಚ್ಚಿವೆ.
ಸ್ನೇಹಿತರಿಗೆ ಸಹಾಯ ಮಾಡುವ ಸಲುವಾಗಿ ನಿಮಗೆ ಓಡಾಟ ಹೆಚ್ಚಾಗಲಿದೆ. ನಿಮ್ಮ ಹೆಸರಿನಲ್ಲಿ ಸಾಲ ಪಡೆದುಕೊಂಡು, ಇತರರಿಗೆ ನೀಡುವಂತಹ ಸಾಧ್ಯತೆಗಳು ಜಾಸ್ತಿ ಇವೆ. ಮನೆಯಲ್ಲಿ ಈಗಾಗಲೇ ಇಟ್ಟಿರುವಂತಹ ಬೆಲೆಬಾಳುವ ವಸ್ತುಗಳ ಕಡೆಗೆ ಮಾಮೂಲಿಗಿಂತ ಜಾಸ್ತಿ ನಿಗಾ ಇರಲಿ. ಈ ದಿನ ಏನಾದರೂ ಬ್ರಾಂಡೆಡ್ ವಸ್ತುಗಳನ್ನು ಖರೀದಿ ಮಾಡುತ್ತಿದ್ದೀರಿ ಎಂದಾದಲ್ಲಿ ಸಂಪೂರ್ಣವಾಗಿ ಪರಿಶೀಲಿಸಿ, ಪರೀಕ್ಷಿಸಿ ಆ ನಂತರ ಖರೀದಿ ಮಾಡುವುದು ಉತ್ತಮ. ನಿಮಗೆ ತುಂಬಾ ಚೆನ್ನಾಗಿ ಗೊತ್ತಿರುವ ಕೆಲಸ ಹಾಗೂ ಅದನ್ನು ಸುಲಭವಾಗಿ ಮಾಡಬಹುದು ಎಂದು ಅಂದುಕೊಂಡು ಯಾವುದನ್ನೂ ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಗಡುವಿನಲ್ಲಿ ಮುಗಿಯದ ಕೆಲಸವೊಂದರ ಹೊಣೆಯನ್ನು ನಿಮಗೆ ಕಟ್ಟುವ ಸಾಧ್ಯತೆಗಳಿವೆ.
ಈಗಾಗಲೇ ಕೃಷಿ ಜಮೀನು ಇರುವಂತಹವರು ಅಲ್ಲಿ ಕೆಲವು ಮುಖ್ಯವಾದ ಕೆಲಸಗಳನ್ನು ಮಾಡಿಸಲಿದ್ದೀರಿ. ಒಂದು ನಿಮ್ಮ ಕೈಯಿಂದ ಹಣವನ್ನು ಹಾಕಿ ಇದನ್ನು ಮಾಡಿಸುವ ಸಾಧ್ಯತೆ ಇದ್ದರೂ ಸ್ವಲ್ಪವಾದರೂ ಈ ಕೆಲಸಕ್ಕಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಹೇಗಿದ್ದರೂ ಸಾಲ ಮಾಡುತ್ತಿದ್ದೇನೆ ಅಥವಾ ಬಡ್ಡಿ ಕಡಿಮೆ ಇದೆ ಎಂಬ ಕಾರಣವೊಡ್ಡಿಕೊಂಡು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲವನ್ನು ಪಡೆದುಕೊಂಡರೆ ಆ ನಂತರ ಪರಿತಪಿಸುವಂತೆ ಆಗುತ್ತದೆ, ಜಾಗ್ರತೆ. ಹಳೆಯ ಸ್ನೇಹಿತರು ಹಣಕಾಸಿನ ನೆರವನ್ನು ಕೇಳಿಕೊಂಡು ಬರುವ ಯೋಗ ಇದೆ. ಒಟ್ಟಿನಲ್ಲಿ ಹೇಳಬೇಕು ಅಂದರೆ, ಈ ದಿನ ಹಣಕಾಸಿನ ವಿಚಾರದಲ್ಲಿ ನೀವು ಹೇಗೆ ನಡೆದುಕೊಳ್ಳುವಿರಿ ಎಂಬುದರ ಆಧಾರದಲ್ಲಿ ಭವಿಷ್ಯದ ನಿಮ್ಮ ನೆಮ್ಮದಿಯು ನಿಂತಿರುತ್ತದೆ
ಪ್ರೀತಿ ಪ್ರೇಮದಲ್ಲಿ ಇರುವಂತಹವರು ಈ ವಿಚಾರವನ್ನು ತಮ್ಮ ಮನೆಯಲ್ಲಿ ಹೇಳಿಕೊಳ್ಳುವ ಬಗ್ಗೆ ನಿರ್ಧಾರ ಮಾಡ ಬೇಕಾಗುತ್ತದೆ. ದ್ವಿಚಕ್ರವಾಹನ ಖರೀದಿಗಾಗಿ ಈ ದಿನ ನೀವು ಅಡ್ವಾನ್ಸ್ ನೀಡುವ ಸಾಧ್ಯತೆಗಳಿವೆ. ನೀವು ಈ ಹಿಂದೆ ಯಾರಿಗೆ ಸಹಾಯ ಮಾಡಿರುತ್ತೀರೋ ಅವರು ಈ ದಿನ ನಿಮ್ಮ ನೆರವಿಗೆ ಬರಲಿದ್ದಾರೆ. ಹಳೆ ಗ್ಯಾಜೆಟ್ ಅಥವಾ ವಾಹನ ಅಥವಾ ಪೀಠೋಪಕರಣಗಳನ್ನು ಮಾರಾಟ ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಅದನ್ನು ಖರೀದಿ ಮಾಡಲು ಕೆಲವರು ತಾವಾಗಿಯೇ ಮುಂದೆ ಬಂದು, ಉತ್ತಮ ಬೆಲೆಯು ನಿಮಗೆ ದೊರೆಯುವ ಸಾಧ್ಯತೆಗಳು ಕಾಣುತ್ತಿವೆ. ನಿಮಗಿಂತ ವಯಸ್ಸಿನಲ್ಲಿ ಸಣ್ಣವರ ವೈಯಕ್ತಿಕ ವಿಚಾರಗಳಿಗೆ ಯಾವುದೇ ಕಾರಣಕ್ಕೂ ತಲೆ ಹಾಕಲು ಹೋಗಬೇಡಿ.
ನೀವು ಈಗ ಇರುವಂತಹ ಸ್ಥಳದಿಂದ ಸ್ವಲ್ಪ ದೂರದಲ್ಲಿ ಅಥವಾ ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ದೂರದಲ್ಲಿ ಉದ್ಯೋಗ ದೊರೆಯುವಂತಹ ಅವಕಾಶಗಳಿವೆ. ನಿಮ್ಮ ಕೈಯಿಂದಲೇ ಹಣ ಹಾಕಿಕೊಂಡು ಮಾಡಿದಂತಹ ಕೆಲಸ ಅರ್ಧಕ್ಕೆ ನಿಂತು, ಒಂದು ಕಡೆ ಆ ಕೆಲಸವೂ ಪೂರ್ತಿಗೊಳ್ಳದೆ ಇನ್ನೊಂದು ಕಡೆ ನಿಮಗೆ ಬರಬೇಕಾದ ಹಣವು ಬಾರದೆ ಒಂದು ಬಗೆಯ ಆತಂಕ ಸೃಷ್ಟಿ ಆಗಲಿದೆ. ಮಹಿಳೆಯರಿದ್ದು, ಅದರಲ್ಲೂ ಮನೆಯಲ್ಲೇ ಇರುವಂತಹವರಿಗೆ ಕೆಲಸಕ್ಕೆ ಹೋಗುವಂತೆ ಸಂಗಾತಿ ಕಡೆಯಿಂದ ಒತ್ತಡವು ಹೆಚ್ಚಾಗಲಿದೆ. ಮಕ್ಕಳ ಸ್ವಭಾವದಲ್ಲಿ ದೊಡ್ಡ ಬದಲಾವಣೆಯನ್ನು ನೋಡುವುದಕ್ಕೆ ಸಿಗುತ್ತದೆ ಮತ್ತು ಈ ಕಾರಣಕ್ಕಾಗಿ ನೀವು ಅವರೊಂದಿಗೆ ಮಾತಿಗೆ ಮಾತನ್ನು ಬೆಳೆಸಿ, ವಾಗ್ವಾದವನ್ನು ಮಾಡಿಕೊಳ್ಳಲಿದ್ದೀರಿ.
ಲೇಖನ- ಎನ್.ಕೆ.ಸ್ವಾತಿ