Horoscope: ದಿನ ಭವಿಷ್ಯ; ಹಿತತ್ರುಗಳು ನಿಮ್ಮ ಸಂಪತ್ತನ್ನು ಬಳಸಿಕೊಳ್ಳಬಹುದು
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಏಪ್ರಿಲ್ 17 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಶೂಲಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 18 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:32 ರಿಂದ ಸಂಜೆ 02:06ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 07:52 ರಿಂದ 09:25 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 10:59 ರಿಂದ ಮಧ್ಯಾಹ್ನ 12:32ರ ವರೆಗೆ.
ಸಿಂಹ ರಾಶಿ : ಅಧಿಕಾರವನ್ನು ಅನ್ಯ ಕಾರಣಕ್ಕೆ ಬಳಸಿಕೊಳ್ಳಲು ಹೋಗುವುದು ಬೇಡ. ಆಭರಣವನ್ನು ತಡಗೆದುಕೊಳ್ಳುವ ಮನಸ್ಸು ಮಾಡುವಿರಿ. ಪ್ರಭಾವಿಗಳ ಸಹಾಯವನ್ನು ಉದ್ಯೋಗಕ್ಕೆ ಬಳಸಿಕೊಳ್ಳುವಿರಿ. ಆದಾಯ ಮತ್ತು ಖರ್ಚುಗಳ ಲೆಕ್ಕಾಚಾರವನ್ನು ಕಂಡಾಗ ನಿಮಗೆ ಆಶ್ಚರ್ಯವು ಕಾದಿರುತ್ತದೆ. ದುರಭ್ಯಾಸದಿಂದ ಎಲ್ಲ ಬಳಿ ಬೈಸಿಕೊಳ್ಳಬೇಕಾಗುವುದು. ನೌಕರರಿಗೆ ಉದ್ಯೋಗದಲ್ಲಿ ಇರಬೇಕಾದ ಪ್ರಾಮಾಣಿಕತೆ ಕಡಿಮೆಯಾಗುವುದು. ಸತ್ಯವನ್ನು ಹೇಳುವ ತೀರ್ಮಾನವನ್ನು ಮಾಡುವಿರಿ. ಅನಾರೋಗ್ಯದಿಂದ ಕುಗ್ಗುವಿರಿ. ಬಾಲ್ಯದ ಘಟನೆಗಳು ನಿಮ್ಮನ್ನು ಕಾಡಬಹುದು. ಇಂದು ನಿಮಗೆ ದಾನ ಮಾಡುವ ಮನಸ್ಸಾಗುವುದು. ಹಳೆಯ ಮಿತ್ರನ ಭೇಟಿಯಾಗಿದ್ದು ಅವರ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ಮೇಲೆ ನಂಬಿಕೆಯು ಕಡಿಮೆಯಾದೀತು. ಹೂಡಿಕೆಯ ವಿಚಾರದ ಬಗ್ಗೆ ಚರ್ಚೆ ನಡೆಸುವಿರಿ. ಕಛೇರಿಯಲ್ಲಿ ಒತ್ತಡದ ಕಾರ್ಯವನ್ನು ಮುಗಿಸಿದರೂ ನಿಮ್ಮಲ್ಲಿ ಉತ್ಸಾಹವು ಅಧಿಕವಾಗಿರುವುದು.
ಕನ್ಯಾ ರಾಶಿ : ಮಿತಿ ಮೀರಿದ ಕಾರ್ಯಗಳಿಂದ ದೇಹ ಮನಸ್ಸಿಗೆ ಹೆಚ್ಚು ಆಯಾಸವಾಗುವುದು. ದಾಯಾದಿ ಕಲಹವು ಇಂದು ನ್ಯಾಯಾಲಯಕ್ಕೆ ಹೋಗಲಿದೆ. ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಸಿಗಲಿದೆ. ಸಂಗಾತಿಯ ಜೊತೆ ಅನೌಪಚಾರಿಕ ಹರಟೆಯಿಂದ ಕಾಲವನ್ನು ಕಳೆಯುವಿರಿ. ಪ್ರವಾಸದ ಆಯಾಸವು ನಿಮ್ಮನ್ನು ಸೋಮಾರಿಗಳನ್ನಾಗಿ ಮಾಡಲಿದೆ. ಸಣ್ಣ ಉದ್ಯಮಿಗಳಿಗೆ ಲಾಭವಿದೆ. ಕಾರ್ಯದ ದಕ್ಷತೆಗೆ ಮೆಚ್ಚಗೆ ಸಿಗಬಹುದು. ವಾಹನವನ್ನು ಖರೀದಿಸುವ ಮನಸ್ಸಾಗುವುದು. ಸಮಸ್ಯೆಗೆ ವೇಗದಲ್ಲಿ ಸ್ಪಂದಿಸಿ ಎಡವಟ್ಟು ಮಾಡಿಕೊಳ್ಳುವಿರಿ. ಸಾವಧಾನದಿಂದ ಚಿಂತಿಸುವ ಅವಶ್ಯಕತೆ ಇರಲಿದೆ. ಎಲ್ಲದಕ್ಕೂ ತಂದೆ ತಾಯಿಗಳನ್ನು ದೂರುತ್ತ ಇರುವುದು ಬೇಡ. ಬಂಧುಗಳ ನಡುವೆ ವಾಗ್ವಾದವು ನಡೆದು ವೈಮನಸ್ಯ ಉಂಟಾಗಬಹುದು. ಕಾರ್ಯದ ಒತ್ತಡದಿಂದ ಸಂಗಾತಿಯು ನಿಮ್ಮ ಜೊತೆ ಸರಿಯಾಗಿ ಮಾತನಾಡದೇ ಇರಬಹುದು. ಬೇಸರಿಸದೇ ನೀವೇ ಮಾತನಾಡಿಸಿ.
ತುಲಾ ರಾಶಿ : ಹಿತತ್ರುಗಳು ನಿಮ್ಮ ಸಂಪತ್ತನ್ನು ಬಳಿಸಿಕೊಳ್ಳಬಹುದು. ಹೂಡಿಕೆಗೆ ಬೇಕಾದ ಆಲೋಚನೆಗಳನ್ನು ಮಾಡಬಹುದು. ಮನೆಯನ್ನು ಕಟ್ಟಲು ಸಾಲಮಾಡಬೇಕಾದ ಸ್ಥಿತಿಯು ಬರಬಹುದು. ಇಂದು ಮನೆಗೆಲಸಕ್ಕೆ ಸಹಾಯಮಾಡಲಿದ್ದೀರಿ. ವಿವಾಹಯೋಗವು ನಿಮಗೆ ಬರಲಿದೆ. ನಿಮ್ಮ ಬಂಧುಗಳಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಾದೀತು. ನಿಮ್ಮ ಕೆಲಸಕ್ಕೆ ತಂದೆಯಿಂದ ಆಕ್ಷೇಪ ಬರಬಹುದು. ಎಲ್ಲವನ್ನೂ ತಿಳಿದಿದ್ದೇನೆ ಎಂಬ ಮನೋಭಾವು ಎದ್ದು ತೋರುವುದು. ಹೂಡಿಕೆಯಲ್ಲಿ ವಿಶ್ವಾಸವು ಹೆಚ್ಚಾಗಲಿದೆ. ಸಾಲ ಕೊಟ್ಟವರು ನಿಮ್ಮನ್ನು ಕೇಳುವುದು ಹಿಂಸೆಯಾದೀತು. ಕೆಲಸದ ಸುಲಭ ಮಾರ್ಗವು ನಿಮಗೆ ಸೂಚಿಸದೇ ಇರಬಹುದು. ಮಕ್ಕಳ ವಿವಾಹವನ್ನು ನಿಶ್ಚಯಿಸಿ ನಿಶ್ಚಿಂತರಾಗುವಿರಿ. ಆದಾಯವನ್ನು ಹೆಚ್ಚು ಮಾಡಿಕೊಳ್ಳಲು ನಿಮಗೆ ಆಗದು. ಆಕಸ್ಮಿಕವಾಗಿ ಸಿಕ್ಕ ಉದ್ಯೋಗವನ್ನು ಸರಿಯಾಗಿ ಬಳಸಿಕೊಳ್ಳಿ. ಆರೋಗ್ಯದ ಏರಿಳಿತವನ್ನು ಯಾರ ಬಳಿಯಾದರೂ ಹೇಳಿ.
ವೃಶ್ಚಿಕ ರಾಶಿ : ನಿಮ್ಮ ಬುದ್ಧಿ, ಮನಸ್ಸುಗಳು ನಿಮ್ಮ ಹಿಡಿತದಲ್ಲಿ ಇರಲಿ. ಯಾವ ಸಂದರ್ಭದಲ್ಲಿ ಕೈಮೀರಿ ಹೋಗಿವ ಸನ್ನಿವೇಶವನ್ನು ತಂದುಕೊಳ್ಳಬೇಡಿ. ಕಲಾವಿದರಿಗೆ ಗಲಿಬಿಲಿಯ ಸನ್ನಿವೇಶವು ಬರಲಿದೆ. ಅನಾರೋಗ್ಯ ವಿಚಾರವಾಗಿ ಸ್ನೇಹಿತರ ಜೊತೆ ಮಾತನಾಡಿ. ನಿಮ್ಮ ಮೌನವು ಇತರರಿಗೆ ಕಷ್ಡವಾಗುವುದು. ಕೆಲವರ ಜೊತೆ ಮೊಂಡುತನವನ್ನು ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ಅನುಭವದ ಕೊರತೆ ಕಾಣಿಸಲಿದ್ದು, ಮಾರ್ಗದರ್ಶನದ ಅವಶ್ಯಕತೆ ಇರಲಿದೆ. ತಾಯಿಯ ಆರೋಗ್ಯಕ್ಕಾಗಿ ಹೆಚ್ಚು ಓಡಾಟ ಮಾಡಬೇಕಾದೀತು. ಹಿತಶತ್ರುಗಳ ವಂಚನೆಯಾಗಿರುವುದು ಸಮಯ ಸರಿದಂತೆ ಗೊತ್ತಾಗುತ್ತದೆ. ಸಂಬಂಧದಲ್ಲಿ ಸಕಾರಾತ್ಮಕ ಮಾತುಗಳು ಅಗತ್ಯ. ನೌಕರರು ನಿಮ್ಮಆಪ್ತರಾಗಿ ನಿಮ್ಮ ಕೆಲಸದಲ್ಲಿ ಭಾಗಿಯಾಗುವರು. ನಿಮ್ಮ ಸಂಪತ್ತನ್ನು ಸದುಪಯೋಗ ಮಾಡಿಕೊಳ್ಳುವ ದಾರಿಯನ್ನು ಕಂಡುಕೊಳ್ಳಿ. ಮಕ್ಕಳ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ.