ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ರೇವತಿ, ಯೋಗ : ಶುಕ್ಲ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 43 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:42 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:43 ರಿಂದ 11:13ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:42 ರಿಂದ 02:12ರ ವರೆಗೆ.
ಮೇಷ ರಾಶಿ: ನಿಮಗೆ ಇಂದು ಅಪರಿಮಿತ ಕರೆಗಳು ಬರಬಹುದು. ಸಹೋದರ ನಡುವಣ ಸಂಬಂಧವನ್ನು ಸರಿಮಾಡಿಕೊಳ್ಳುವಿರಿ. ಹಣವನ್ನು ಕಳೆದುಕೊಳ್ಳುವ ಸ್ಥಿತಿ ಬರಬಹುದು. ಗುರುಸೇವೆಯನ್ನು ಮಾಡುವ ಅವಕಾಶದಿಂದ ವಂಚಿತರಾಗುವುದು ಬೇಡ. ನಿಮ್ಮ ಪ್ರಾಮಾಣಿಕತೆಗೆ ಪ್ರಶಂಸೆಯು ಸಿಗುವುದು. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಮಾತನ್ನು ತಪ್ಪಿದ ಅಪವಾದವು ನಿಮಗೆ ಬರಬಹುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧನ ಚಿತ್ತದಿಂದ ಇರುವಿರಿ. ಅನಿರೀಕ್ಷಿತ ಘಟನೆಯಿಂದ ಸ್ತಬ್ಧವಾಗುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ರಾಜಕೀಯದಲ್ಲಿ ಅಸ್ವಾಭಾವಿಕ ಬೆಳೆವಣಿಗೆ ಇರುವುದು ಸ್ಪಷ್ಟವಾಗಿ ಗೊತ್ತಾಗುವುದು.
ವೃಷಭ ರಾಶಿ: ಇಂದು ಬಹಳ ಕಾರ್ಯದ ನಿಮಿತ್ತ ಕುಟುಂಬದ ಸೌಖ್ಯದಿಂದ ವಂಚಿತರಾಗಬಹುದು. ಸತ್ಯವು ನಿಮಗೆ ಕಹಿಯಾದೀತು. ವಿವಾದಗಳಿಂದ ದೂರವಿರಬೇಕು ಎನಿಸಿದರೂ ನಿಮ್ಮನ್ನೇ ಸುತ್ತಿಕೊಳ್ಳುವುದು. ಮಾತನ್ನು ಉಳಿಸಿಕೊಳ್ಳಲು ಸೋಲುಬಹುದು. ಚೋರ ಭಯವು ನೀವು ಹೊರಗೆ ಹೋದಾಗಕಾಡಬಹುದು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಕಛೇರಿಯಲ್ಲಿ ಸರಿಯಾದ ಕೆಲಸವನ್ನು ಮಾಡಲು ಸಾಧ್ಯವಾಗದೇ ಹೋಗಬಹುದು. ಯಾರದೋ ಮಾತಿಗೆ ಉದ್ಯೋಗಕ್ಕೆ ಸೇರಿಕೊಳ್ಳುವುದು ಬೇಡ. ನಿಮ್ಮಿಂದ ಆಗದ್ದನ್ನು ಇತರರೂ ಮಾಡಲಾರರು.
ಮಿಥುನ ರಾಶಿ: ನಿಮ್ಮ ವಿರೋಧಿಗಳ ತೊಂದರೆಯನ್ನು ನೀವು ಅಧಿಕಾರಿಗಳ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ಅನ್ಯ ಸ್ಥಳದಲ್ಲಿ ವಾಸ ಮಾಡುವ ಸ್ಥಿತಿಯನ್ನು ತಂದುಕೊಳ್ಳುವಿರಿ.
ಸ್ತ್ರೀಯರಿಂದ ಆದ ಲಾಭವನ್ನು ನೀವು ಒಪ್ಪಿಕೊಳ್ಳಲಾರಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಬಹುದು. ದೂರದ ಊರಿಗೆ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ಮೋಸದ ಜಾಲಕ್ಕೆ ಸಿಕ್ಕಬಹುದು, ಸಾಧ್ಯತೆ ಇದೆ. ಆಭರಣ ಖರೀದಿಯಿಂದ ಮುಂದಕ್ಕೆ ಬಳಕೆಯಾಗಬಹುದು. ಉತ್ತಮ ಆಹಾರವನ್ನು ಪಡೆಯಲು ಯತ್ನಿಸಿ. ಕಲಾವಿದರು ಅವಕಾಶದ ನಿರೀಕ್ಷೆಯಲ್ಲಿ ಇರುವರು. ಸಂಗಾತಿಗೆ ಕೆಲವು ವಿಚಾರವನ್ನು ತಿಳಿಸಲು ಇಷ್ಟಪಡಲಾರಿರಿ.
ಕಟಕ ರಾಶಿ: ಇಂದು ನಿಮ್ಮ ಕೆಲವು ಗುಣಗಳು ಕೆಲವರಿಗೆ ಇಷ್ಟವಾಗುವುದು. ಹಣಕಾಸಿನ ಖರ್ಚು ಬಹಳಷ್ಟು ಇದ್ದರೂ ನಿಮಗೆ ಸ್ಥಾನಮಾನದ ಪ್ರಶ್ನೆಯಾಗಿರುವುದು. ಮನಶ್ಶಾಂತಿಗೆ ದೂರಪ್ರಯಾಣವನ್ನು ಮಾಡುವಿರಿ. ಬಂಧುಗಳ ಆಗಮನದಿಂದ ಸಂತೋಷಗೊಳ್ಳುವಿರಿ. ಹಣಕಾಸಿನ ಹರಿವು ಸರಿಯಾದ ಮಾರ್ಗದಲ್ಲಿ ಬರವಂತೆ ನೋಡಿಕೊಳ್ಳಿ. ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಉದ್ಯಮದಲ್ಲಿ ನಿಮ್ಮ ದಾರಿಯನ್ನು ಯಾರಾದರೂ ತಪ್ಪಿಸಿಯಾರು. ಸಂಗಾತಿಯಿಂದ ಅವಮಾನವಾಗುವುದು. ಸಹೋದರನಿಂದ ಉಡುಗೊರೆಯು ಸಿಗಬಹುದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಕಾರ್ಯಸ್ಥಳದಲ್ಲಿ ನಿಮ್ಮ ಇರುವಿಕೆಯನ್ನು ತೋರ್ಪಡಿಸುವ ಅವಶ್ಯಕತೆ ಬರಬಹುದು.