Daily Devotional: ಇಂದು ಸ್ಕಂದ ಷಷ್ಠಿ ಸುಬ್ರಹ್ಮಣ್ಯ ಆರಾಧನೆ ಹೇಗೆ ಮಾಡಬೇಕು?
ಚಂಪಾ ಷಷ್ಠಿ ದಿನವು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಅತ್ಯಂತ ಪ್ರಶಸ್ತವಾಗಿದೆ. ಈ ಪರ್ವ ಕಾಲದಲ್ಲಿ ಸುಬ್ರಹ್ಮಣ್ಯನನ್ನು ವಿಗ್ರಹ ರೂಪದಲ್ಲಿ, ನಾಗನ ರೂಪದಲ್ಲಿ ಅಥವಾ ಹುತ್ತದಲ್ಲಿ ಪೂಜಿಸುವುದರಿಂದ ಸಂತಾನ ಪ್ರಾಪ್ತಿ, ಕುಜದೋಷ ನಿವಾರಣೆ ಮತ್ತು ಮಾನಸಿಕ ನೆಮ್ಮದಿ ದೊರೆಯುತ್ತದೆ. ಹಿಟ್ಟಿನ ದೀಪಗಳನ್ನು ಹಚ್ಚಿ ಓಂ ಶರವಣಭವಾಯ ನಮಃ ಮಂತ್ರ ಜಪಿಸುವುದು ವಿಶೇಷ ಫಲ ನೀಡುತ್ತದೆ.
ಬೆಂಗಳೂರು, ನವೆಂಬರ್ 26: ಚಂಪಾ ಷಷ್ಠಿ ಎಂಬುದು ಒಂದು ಮಹತ್ವದ ಪರ್ವ ಕಾಲವಾಗಿದ್ದು, ಇದನ್ನು ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ಮೀಸಲಾಗಿಡಲಾಗುತ್ತದೆ. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯನ್ನು ಚಂಪಾ ಷಷ್ಠಿ ಅಥವಾ ಸ್ಕಂದ ಷಷ್ಠಿ ಎಂದು ಕರೆಯಲಾಗುತ್ತದೆ. ಈ ದಿನದಂದು ಸುಬ್ರಹ್ಮಣ್ಯನನ್ನು ಪೂಜಿಸುವುದರಿಂದ ಮಾನಸಿಕ ತೃಪ್ತಿ, ಅನಾರೋಗ್ಯ ಸಮಸ್ಯೆಗಳ ನಿವಾರಣೆ, ಹಣಕಾಸಿನ ತೊಂದರೆಗಳಿಗೆ ಪರಿಹಾರ ಮತ್ತು ಕುಟುಂಬ ಕಲಹಗಳ ಅಂತ್ಯಕ್ಕೆ ಸಹಾಯಕವಾಗುತ್ತದೆ.
ಸುಬ್ರಹ್ಮಣ್ಯನ ಆರಾಧನೆಯು ವಿಶೇಷವಾಗಿ ಸಂತಾನ ಭಾಗ್ಯಕ್ಕಾಗಿ ಮತ್ತು ಕುಜದೋಷ ನಿವಾರಣೆಗಾಗಿ ಆಚರಿಸಲಾಗುತ್ತದೆ. ಈ ದಿನದಂದು ಹಿಟ್ಟಿನಿಂದ ಮಾಡಿದ ಜೋಡಿ ದೀಪಗಳನ್ನು ತುಪ್ಪ ಹಾಕಿ ಹಚ್ಚಿ ಪೂಜಿಸುವುದು ವಿಶೇಷ ಫಲಗಳನ್ನು ನೀಡುತ್ತದೆ. ರೋಗರುಜಿನಗಳು, ಚರ್ಮ ವ್ಯಾಧಿಗಳು ದೂರವಾಗಿ ಮನಸ್ಸು ನಿರ್ಮಲವಾಗುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.
Published on: Nov 26, 2025 07:15 AM
