Daily Horoscope 10 August 2024: ಆದಾಯ ಹೆಚ್ಚಳಕ್ಕೆ ಆಪ್ತರ ಸಲಹೆ ಪಡೆಯುವಿರಿ, ನಿಮ್ಮನ್ನು ಕಂಡು ಸಂಕಟಪಡುವರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 10, 2024 | 12:02 AM

ಆಗಸ್ಟ್​ 10,​​ 2024ರ​​ ನಿಮ್ಮ ರಾಶಿಭವಿಷ್ಯ: ಇಂದಿನ ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ. ನಿಮಗೆ ವಿವಾಹವನ್ನು ಮಾಡುವ ಸುದ್ದಿಯು ಆಕಸ್ಮಿಕವಾಗಿ ಕುಟುಂಬದಿಂದ ಕೇಳಿಬರಬಹುದು. ಪ್ರೇಮಿಗಳು ಇಂದು ಸುಖವಾಗಿ ಸುತ್ತಾಡಲಿದ್ದಾರೆ. ವಿದ್ಯಾರ್ಥಿಗಳು ಬಲವಂತಾಗಿ ಓದಲು ಕುಳಿತುಕೊಳ್ಳುವರು. ಹಾಗಾದರೆ ಆಗಸ್ಟ್​ 10ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 10 August 2024: ಆದಾಯ ಹೆಚ್ಚಳಕ್ಕೆ ಆಪ್ತರ ಸಲಹೆ ಪಡೆಯುವಿರಿ, ನಿಮ್ಮನ್ನು ಕಂಡು ಸಂಕಟಪಡುವರು
ಆದಾಯ ಹೆಚ್ಚಳಕ್ಕೆ ಆಪ್ತರ ಸಲಹೆ ಪಡೆಯುವಿರಿ, ನಿಮ್ಮನ್ನು ಕಂಡು ಸಂಕಟಪಡುವರು
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಆಗಸ್​​ 10) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ಸಾಧ್ಯ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:56 ಗಂಟೆ, ರಾಹು ಕಾಲ ಬೆಳಿಗ್ಗೆ 09:29 ರಿಂದ 11:03, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:47ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06:19 ರಿಂದ 05:54ರ ವರೆಗೆ.

ಮೇಷ ರಾಶಿ: ಅವಸರದಿಂದ ಇಂದಿನ ಕಾರ್ಯಗಳನ್ನು ಮಾಡಬೇಕಾಗಬಹುದು. ಆದಾಯಕ್ಕೆ ಯೋಗ್ಯವಾದ ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ‌. ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ವಿದೇಶೀ ವಸ್ತುಗಳ ಮೇಲೆ ವ್ಯಾಮೋಹ ಬರಬಹುದು. ಹಿರಿಯರಿಗೆ ಇಷ್ಟವಾಗದ ಕಾರ್ಯವನ್ನು ಮಾಡಿ, ಅವರನ್ನು ಬೇಸರಗೊಳಿಸುವಿರಿ. ಅಧ್ಯಾತ್ಮದ ಕಡೆ ನಿಮ್ಮ ಮನಸ್ಸು ಒಲಿಯಬಹುದು. ನಿಮ್ಮ ಜೀವನಕ್ಕೆ ಬೇಕಾದ ಅಂಶಗಳನ್ನು ನೀವು ಕಳೆದುಕೊಂಡು ಪುನಃ ಅನ್ವೇಷಣೆ ಮಾಡುವಿರಿ. ಹೊಸ ವ್ಯವಹಾರವನ್ನು ಮಾಡಲು ಉತ್ಸಾಹ ಕಡಿಮೆ‌ ಆಗಲಿದೆ. ಮಾನಸಿಕ ಏಕಾಗ್ರತೆಯನ್ನು ಸಾಧಿಸುವುದು ಕಷ್ಟವಾಗಲಿದೆ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ. ಇಂದೇ ಒಂದಕ್ಕಿಂತ ಹೆಚ್ಷು ಕಾರ್ಯಗಳನ್ನು ಒಟ್ಟಿಗೆ ಮಾಡಬೇಕಾಗಬಹುದು.

ವೃಷಭ ರಾಶಿ: ಅಪರಿಚಿತರಿಂದ ಹಣಕ್ಕಾಗಿ ಒತ್ತಡ ಬರಬಹುದು. ನಿಮ್ಮವರ ಬಗ್ಗೆ ನಿಮಗೆ ಬಹಳ ಕಾಳಜಿ ಇರಲಿದೆ. ನಿಮಗೆ ಉಂಟಾದ ತೊಂದರೆಯನ್ನು ಮರೆತು ನೀವು ಮೊದಲಿನಂತೆ ಆಗುವಿರಿ. ವಿದ್ಯಾಭ್ಯಾಸಕ್ಕೆ ಬೇಕಾದ ವಾತಾವರಣ ಸಿಗದೇ ಕಷ್ಟವಾದೀತು. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ನೀವು ಖರೀದಿಸುವಿರಿ. ಧನನಷ್ಟವೆಂಬ ಭಾವವೂ ನಿಮ್ಮೊಳಗೆ ಅವ್ಯಕ್ತವಾಗಿ ಇರಲಿದೆ. ನಿಮಗೆ ಸಮ್ಮಾನಗಳು ಬರಬೇಕು ಎಂಬ ಬಯಕೆ ಇದ್ದರೂ ಸದ್ಯ ಅದು ಸಾಧ್ಯವಾಗದು. ಅನ್ಯರ ಮಾತುಗಳನ್ನು ಕೇಳುವ ವ್ಯವಧಾನವು ಕಡಿಮೆ ಇದ್ದೀತು. ಈ ದಿನವನ್ನು ಅನಾಯಾಸವಾಗಿ ಕಳೆಯುವಿರಿ. ತನ್ನವರು ಯಾರಿಲ್ಲ ಎಂಬ ಭಾವವು ನಿಮ್ಮೊಳಗೆ ಬರಬಹುದು. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಲು ಪ್ರಯತ್ನಶೀಲರಾಗುವಿರಿ. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನಿಮಗೆ ಯಾರಾದರೂ ಸುಳ್ಳುಹೇಳಬಹುದು.

ಮಿಥುನ ರಾಶಿ: ನಿಮ್ಮ ಒರಟು ಸ್ವಭಾವದಿಂದ ಎಲ್ಲರಿಂದ ದೂರಾಗುವಿರಿ. ಯಾರಾದರೂ ಆಮಿಷವನ್ನು ತೋರಿಸಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ಭವಿಷ್ಯದ ಬಗ್ಗೆ ನಿಮಗೆ ಸರಿಯಾದ ಕಲ್ಪನೆ ಸಿಗದೇಹೋಗಬಹುದು. ನಿಮ್ಮ ಇಚ್ಛಾಶಕ್ತಿಯಿಂದ ಬೇಕಾದುದನ್ನು ನೀವು ಪಡೆದುಕೊಳ್ಳುವಿರಿ. ಒತ್ತಾಯಕ್ಕೆ ಮಣಿದು ನಿಮ್ಮ ಕೆಲಸವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಆಪ್ತರ ಮಾತಿನಿಂದ ದುಃಖಿಸುವಿರಿ. ಆರೋಗ್ಯವು ನಿಮಗೆ ವರವಾಗಿರಲಿದೆ. ಅಧಿಕೃತವಾಗಿ ಬರುವ ವಿಚಾರಗಳನ್ನು ಮಾತ್ರ ನೀವು ನಂಬಿಕೆ. ಗಾಳಿ ಮಾತುಗಳಿಗೆ ಯಾವ ಬೆಲೆಯೂ ಇರದು. ಸಿಗಬೇಕಾದವರ ಭೇಟಿಯು ಬಹಳ ವಿಳಂಬವಾದೀತು. ಬರಬೇಕಾದ ಹಣದ ಬಗ್ಗೆ ತಿಳಿದಿರಲಿ. ಸಂಗಾತಿಯ ಸಹಕಾರ ನಿಮಗೆ ಸಿಗದೇ ಕಷ್ಟವಾಗುವುದು. ಇಂದು ನಿಮಗೆ ಆಹಾರದಿಂದ ತೊಂದರೆಯಾದೀತು.

ಕರ್ಕಾಟಕ ರಾಶಿ: ಉದ್ಯೋಗಿಗಳಿಗೆ ಬೇಡಿಕೆಗ ತಕ್ಕ ಪೂರೈಕೆ ಕಷ್ಟವಾದೀತು. ನಿಮ್ಮ ವರ್ತನೆಯಿಂದ ಅಧಿಕಾರವು ತಪ್ಪಬಹುದು. ಆಸ್ತಿಯ ಬಗ್ಗೆ ಸರಿಯಾದ ದಾಖಲೆಗಳು ಇರಲಿ. ವಿಶ್ರಾಂತಿ ಇಲ್ಲದೇ ಮಾಡುವ ಕೆಲಸವು ನಿಮಗೆ ಆಯಾಸವನ್ನು ತಂದುಕೊಟ್ಟೀತು. ಹಿತಶತ್ರುಗಳ ತೊಂದರೆಯು ಅಧಿಕವಾಗಿ ಇರಲಿದೆ. ಸಾಧಿಸಲು ಅವಕಾಶಗಳು ಹಲವಿದ್ದರೂ ಸಾಗಿಸುವ ಬಗ್ಗೆ ನಿಮಗೆ ಪೂರ್ಣ ಕಲ್ಪನೆ ಇರದು. ಪುಣ್ಯಸ್ಥಳದಲ್ಲಿ ನಿಮಗೆ ಸಂಪತ್ತು ಲಭಿಸುವ ಸೂಚನೆ ಸಿಗಬಹುದು.‌ ಗಮನಿಸಿಕೊಳ್ಳುವುದು ಉತ್ತಮ. ದುರಭ್ಯಾಸದಿಂದ ವಿಮುಖರಾಗುವ ಮನಸ್ಸು ನಿಮ್ಮದಾಗಲಿದೆ. ಪ್ರತಿಕೂಲ ವಾತಾವರಣವನ್ನು ಅನುಕೂಲಕರವಾದ ವಾತಾವರಣವನ್ನು ಮಾಡಿಕೊಳ್ಳುವ ಕಲೆ ನಿಮಗೆ‌ ಸಿದ್ಧಿಸಲಿದೆ. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು. ಭೂಮಿಯ ಉತ್ಪನ್ನದಿಂದ ಲಾಭವಿದೆ.

ಸಿಂಹ ರಾಶಿ: ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಆಲೋಚಿಸಿ. ಸಂಬಂಧದಿಂದ ಭೂಮಿಯ ಲಾಭವು ಆಗುವುದಾದರೂ ಅದನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ಬೆಳಗ್ಗೆ ನಿಮಗೆ ಆತ್ಮವಿಶ್ವಾಸವೇ ಇಡೀ ದಿನದ ಕೆಲಸವನ್ನು ಸುಲಲಿತವಾಗಿ ಮುಗಿಸಿಕೊಡುವುದು. ನಿಮ್ಮ ನಿರ್ಧಾರವನ್ನು ಸುಲಭಕ್ಕೆ ಬದಲಿಸುವುದು ಬೇಡ.‌ ಬಲವಾದ ಕಾರಣವಿಲ್ಲದೇ ನೀವು ಸಾಲದ ಬಗ್ಗೆ ಚಿಂತಿಸುವುದು ಬೇಡ. ಬಹಳ ದಿನದ ಭೂಮಿಯ ವ್ಯವಹಾರದ ಕಲಹದಿಂದ ನಿಮಗೆ ಜಯವಾಗಬಹುದು. ಮಕ್ಕಳ ಮೇಲೆ ನಿಮಗೊಂದು ಕಣ್ಣಿರಲಿ. ಒಂಟಿತನ ಭಯವು ನಿಮ್ಮನ್ನು ಕಾಡಬಹುದು. ಅನಾರೋಗ್ಯದಿಂದ ಕಾರ್ಯದಲ್ಲಿ ಉತ್ಸಾಹ ಕಡಿಮೆಯಾಗುವುದು. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ಯಾರ‌ನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ಅನಿರೀಕ್ಷಿತ ಜನಪ್ರಿಯತೆ ಉಂಟಾಗಬಹುದು.

ಕನ್ಯಾ ರಾಶಿ: ಮಹಿಳಾ ಕಲಾವಿದರಿಗೆ ಪ್ರಶಂಸೆ ಇರಲಿದೆ. ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಕುರುಡು ತನದಿಂದ ಎಲ್ಲಿಯೋ ಹೂಡಿಕೆ ಮಾಡುವುದನ್ನು ತಪ್ಪಿಸಿ. ಸ್ಫೂರ್ತಿದಾಯಕ ಸಂಗತಿಗಳು ನಿಮ್ಮನ್ನು ಇನ್ನಷ್ಟು ಬಲಗೊಳಿಸುವುವು. ಇಂದಿನ ಸಮಯವನ್ನು ಸುಮ್ಮನೇ ವ್ಯರ್ಥವಾಗಿ ಕಳೆಯುವಿರಿ. ನಿಮಗೆ ವಿವಾಹವನ್ನು ಮಾಡುವ ಸುದ್ದಿಯು ಆಕಸ್ಮಿಕವಾಗಿ ಕುಟುಂಬದಿಂದ ಕೇಳಿಬರಬಹುದು. ಪ್ರೇಮಿಗಳು ಇಂದು ಸುಖವಾಗಿ ಸುತ್ತಾಡಲಿದ್ದಾರೆ. ವಿದ್ಯಾರ್ಥಿಗಳು ಬಲವಂತಾಗಿ ಓದಲು ಕುಳಿತುಕೊಳ್ಳುವರು. ನಿಮ್ಮ ನೇರ ನುಡಿ ಎಲ್ಲ ಕಡೆಗೆ ಪ್ರಯೋಜನಕ್ಕೆ ಬಾರದು. ಸೃಜನಾತ್ಮಕ ಚಟುವಟಿಕೆಗಳ ಬಗ್ಗೆ ನೀವಿಂದು ಹೆಚ್ಚು ಗಮನಕೊಡುವಿರಿ. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು. ಆಹಾರವನ್ನು ಸರಿಯಾಗಿ ಸ್ವೀಕರಿಸಿ ಅದನ್ನು ಸರಿಮಾಡಿಕೊಳ್ಳಿ. ಯಾವುದನ್ನಾದರೂ ಆಯ್ಕೆ ಮಾಡುವಾಗ ನಿಮ್ಮನೇ ನೀವು ಕೇಳಿಕೊಳ್ಳುವುದು ಉತ್ತಮ.

ತುಲಾ ರಾಶಿ: ಹಿರಿಯರ ಮಾತನ್ನು ಕೇಳಿ, ತೊಂದರೆಯನ್ನು ತಪ್ಪಿಸಿಕೊಳ್ಳುವಿರಿ. ನಿಮ್ಮನ್ನು ಇಂದು ಭೇಟಿಯಾಗುವ ವ್ಯಕ್ತಿಗಳು ಸಾಮಾನ್ಯದವರಾಗಿರುವಿದಿಲ್ಲ. ಅವರಿಗೆ ಗೌರವ ಕೊಡಿ. ನಿಮ್ಮ ಎಂದಿನ ಬಿಮ್ಮನ್ನು ಬಿಡಬೇಕಾಗಬಹುದು. ನೀವು ಇಂದು ಇಚ್ಛಿಸಿದವರಿಗೆ ದಾನವನ್ನು ಕೊಡುವಿರಿ. ನಿಮ್ಮ‌ ನಿಯಮಗಳನ್ನು ಬಿಟ್ಟು ನೀವು ಹೋಗಲಾರಿರಿ. ಸಹೋದ್ಯೋಗಿಗಳು ನಿಮ್ಮ ನಕಾರಾತ್ಮಕ ಆಲೋಚನೆ ಉಳ್ಳವರಾಗುವರು. ನೀವು ಹಣ ಸಂಪಾದನೆಗೆ ಆರಿಸಿಕೊಂಡ‌ ಮಾರ್ಗವು ಸರಿಯೆನಿಸದೇ ಇರಬಹುದು. ಅಪಮಾನವನ್ನು ಸಹಿಸಿಕೊಳ್ಳಲು ನಿಮಗೆ ಕಷ್ಟವಾದೀತು. ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ. ಮನೋರಂಜನೆಯ ನಿಮಿತ್ತ ನೀವು ಇಂದು ಕಾಲವನ್ನು ಕಳೆಯಬಹುದು. ಹಣ ಸಂಪಾದನೆಗೆ ಉತ್ತಮವಾದ ಮಾರ್ಗವು ನಿಮಗೆ ಗೊತ್ತಾಗಲಿದೆ. ನಿಮ್ಮ ಅಮೂಲ್ಯ ವಸ್ತುಗಳು ನಷ್ಟವಾಗಬಹುದು. ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ.

ವೃಶ್ಚಿಕ ರಾಶಿ: ಇಂದು ಹಿತಶತ್ರುಗಳಿಂದ ಧನವು ನಷ್ಟವಾಗಲಿದೆ. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಹೊಸತನವನ್ನು ನೀವು ರೂಡಿಸಿಕೊಳ್ಳುವ ಹಂಬಲವನ್ನು ಆಪ್ತರ‌ ಜೊತೆ ಹಂಚಿಕೊಳ್ಳುವಿರಿ. ಕೇಳಿದವರಿಗೆ ಹಣವನ್ನು ನೀಡುವಿರಿ. ಸಂಪತ್ತಿನ ಹಿಂದೆ ನೀವು ಓಡಬೇಕಾಗಿಲ್ಲ.‌ ನಿಮ್ಮ ಕೆಲಸವೇ ಸಂಪತ್ತು ಬರುವಂತೆ ಮಾಡುವುದು. ಎಲ್ಲರನ್ನೂ ಆತ್ಮೀಯವಾಗಿ ಕಾಣುವಿರಿ. ನಿಮ್ಮನ್ನು ಕಂಡು ಸಂಕಟಪಡುವವರು ಇರುವರು. ಮಂದಗತಿಯಲ್ಲಿ ಕೆಲಸವು ಸಾಗಲಿದೆ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಇಂದು ಪೂರ್ಣ ನಿಮ್ಮ ದಿನವಾಗಲಾರದು. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು. ನಿಮ್ಮ ಮಾತು ಮಾತಿಗೇ ಉಳಿಯಬಹುದು.

ಧನು ರಾಶಿ: ಹೊಸ ಯೋಜನೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ನಿಮ್ಮನ್ನು ದ್ವೇಷಿಸಲು ಕಾರಣವಿಲ್ಲದಿದ್ದರೂ ದ್ವೇಷಿಸುವರು. ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಇದೆ. ಸಂಗಾತಿಯು ನಿಮ್ಮನ್ನು ಬೆಂಬಲಿಸುವರು. ಹಳೆಯದನ್ನು ನೆನಪಿಸಿಕೊಳ್ಳುವುದು ನಿಮಗೆ ಖುಷಿಯ ವಿಷಯ. ಮಕ್ಕಳ ಜೊತೆ ಕುಳಿತು ಹರಟೆ ಹೊಡೆಯುವುದು ನಿಮಗೆ ಖುಷಿ ಕೊಡಬಹುದು. ತಾಯಿಯ ಕಡೆಯಿಂದ ನಿಮಗೆ ಅಮೂಲ್ಯ ವಸ್ತುವು ಪ್ರಾಪ್ತವಾದೀತು. ನಿಮ್ಮ ವಿರುದ್ಧ ಮಾತನಾಡುವುದನ್ನು ಸಹಿಸಿಕೊಳ್ಳಲಾರಿರಿ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಪೂರ್ವ ತಯಾರಿ ಇಲ್ಲದೇ ಯಾವ ಕಾರ್ಯವನ್ನೂ ಮಾಡಬೇಡಿ. ನಿಮ್ಮ ಅಹಂಕಾರಕ್ಕೆ ಪಾಠ ಸಿಗಲಿದೆ.

ಮಕರ ರಾಶಿ: ಇಂದಿನ ವಿಫಲತೆಯು ನಿಮಗೆ ಛಲವನ್ನು ತರಬಹುದು. ಇಂದು ನಿಮ್ಮ ಹಳೆಯ ದಾಯಾದಿ ಕಲಹವು ಪುನಃ ಆರಂಭವಾಗಬಹುದು. ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ಸಹೋದರರಿಂದ‌ ನಿಮಗೆ ಬೇಕಾದ ಸಂಪತ್ತು ಸಿಗಲಿದೆ. ಸಮಯಕ್ಕೆ ಬೆಲೆ ಕೊಡಬೇಕಾದೀತು. ಮನೆಯಲ್ಲಿ ಧಾರ್ಮಿಕ ಕಾರ್ಯವನ್ನು ನೀವು ಇಂದು ಮಾಡಿಸುವಿರಿ. ಕಾಲಕ್ಕೆ ತಕ್ಕಂತೆ ಹೆಜ್ಜೆಹಾಕಬೇಕಾದ ಸ್ಥಿತಿ ಬರಲಿದೆ. ಆಯಾಸದಿಂದ ನಿಮಗೆ ಮುಕ್ತಿ ಸಿಗಬಹುದು. ಅನಧಿಕೃತ ವ್ಯವಹಾರವನ್ನು ನೀವು ಬೆಂಬಲಿಸುವುದು ಬೇಡ. ನೀವಿಂದು ಹೇಳುವ ಸುಳ್ಳು ಎಲ್ಲರಿಗೂ ಗೊತ್ತಾದೀತು. ಇಂದು ನೀವು ಉದ್ಯೋಗದಿಂದ ಸ್ವಲ್ಪ ವಿಶ್ರಾಂತಿ ಪಡೆಯುವಿರಿ. ವೈವಾಹಿಕ ಸಂಬಂಧಗಳನ್ನು ಬಂಧುಗಳಲ್ಲಿ ಬೆಳೆಸುವಿರಿ. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು.

ಕುಂಭ ರಾಶಿ: ನಿಮ್ಮ ವ್ಯಾಪಾರದಲ್ಲಿ ಲಾಭವು ಕಡಿಮೆ ಕಾಣಿಸುವುದು. ನೀವು ಇಂದು ಅಧಿಕಾರಗಳ ಜೊತೆ ವಾಗ್ವಾದ ಮಾಡುವಿರಿ. ಇಂದಿನ ಹಣಕಾಸಿನ‌ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಕಡಿಮೆ ಶ್ರಮದಿಂದ ಹೆಚ್ಚು ಗಳಿಸುವ ಬಗ್ಗೆ ಚಿಂತಿಸುವಿರಿ. ‌ಯಾರನ್ನೂ ದ್ವೇಷಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುವುದು ಬೇಡ.‌ ಸ್ಥಾನಮಾನದ ಬಗ್ಗೆ ಹೆಮ್ಮೆ ಇರುವುದು. ನಿಮ್ಮ ಕಾರ್ಯಗಳು ಇಂದು ಮುಕ್ತಾಯಗೊಳ್ಳಬಹುದು. ಆಪ್ತರು ನಿಮ್ಮನ್ನು ಮತ್ತಷು ಇಷ್ಟಪಡುವರು. ಓದಿನ ಬಗ್ಗೆ ಸ್ವಲ್ಪ ಗಮನವು ಕಡಿಮೆ ಆಗಲಿದೆ. ತಿಳಿವಳಿಕೆಯ ಕೊರತೆಯು ನಿಮ್ಮನ್ನು ಅತಿಯಾಗಿ ಕಾಡಬಹುದು. ಸಮಯವನ್ನು ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ಉದ್ಯೋಗದಲ್ಲಿ ಅಭಿವೃದ್ಧಿ ಕಾಣಿಸುವುದು.

ಮೀನ ರಾಶಿ: ಇಂದು ನಿಮಗೆ ಲಾಭ ನಷ್ಟಗಳ ವಿವೇಚನೆ ಅಧಿಕವಾಗಿರುವುದು. ಇಂದು ನೀವೊಬ್ಬರೇ ಯತ್ನಿಸಿದರೂ ಕಾರ್ಯದಲ್ಲಿ ಜಯವು ಸಿಗುವುದು. ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ನಿಮ್ಮ ಜವಾಬ್ದಾರಿಯು ಮುಕ್ತಾಯ ಆಗಬಹುದು. ತಂದೆಯಿಂದ ಸಂಪತ್ತನ್ನು ಅಪೇಕ್ಷಿಸುವಿರಿ. ಸರ್ಕಾರದ ಕಾರ್ಯದಲ್ಲಿ ಅಡೆತಡೆಗಳು ಅಧಿಕವಾಗಿ ಕಾಣಿಸುವುದು. ಸಂದರ್ಭೋಚಿತ ನಿಮ್ಮ ವರ್ತನೆಯು ಅಪಾರ್ಥವನ್ನು ಕೊಡಬಹುದು. ಸ್ನೇಹಿತರಿಗೆ ಮಾಡಿದ ಸಹಾಯಕ್ಕೆ ಕೃತಜ್ಞತೆಯನ್ನು ಅರ್ಪಿಸುವಿರಿ. ದೇವರನ್ನು ನೀವು ಬಲವಾಗಿ ನಂಬಿ ಕೆಲಸದಲ್ಲಿ ಆಸಕ್ತಿಯನ್ನು ಇಟ್ಟುಕೊಳ್ಳಿ. ಉತ್ತಮ ಗತಿಯೂ ಸಿಕ್ಕೀತು. ನಿರ್ಧಾರಗಳು ಅಸ್ಪಷ್ಟವಾಗಿ ಇರುವುದು ಬೇಡ. ಅನಗತ್ಯ ಹಸ್ತಕ್ಷೇಪದಿಂದ ನಿಮ್ಮ ಗೌರವ ಕಡಿಮೆ ಆಗಬಹುದು. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು.

ಲೋಹಿತ ಹೆಬ್ಬಾರ್-8762924271 (what’s app only)