ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ವಿಷ್ಕಂಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:36 ಗಂಟೆ, ರಾಹು ಕಾಲ ಮಧ್ಯಾಹ್ನ 03:33 ರಿಂದ ಸಂಜೆ 05:05, ಯಮಘಂಡ ಕಾಲ ಬೆಳಿಗ್ಗೆ 09:26 ರಿಂದ 10:58ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 02:01ರ ವರೆಗೆ.
ಮೇಷ ರಾಶಿ: ನಿಮ್ಮ ಮೇಲೆ ಯಾವುದಾದರೊಂದು ವಿಷಯ, ವ್ಯಕ್ತಿಗಳು ಪ್ರಭಾವ ಬೀರಬಹುದು. ಅಸ್ತಿಯ ಹಂಚಿಕೆಯ ವಿಚಾರದಲ್ಲಿ ಚರ್ಚೆಗಳು ಆಗಲಿದೆ. ನಿಮ್ಮ ಕೆಲಸಗಳಿಗೆ ವಿಘ್ನಗಳು ಬರಬಹುದು. ಸ್ವ ಉದ್ಯೋಗವು ಕೈ ಹಿಡಿಯುವುವುದು. ವ್ಯಾಪಾರವು ಅಭಿವೃದ್ಧಿಯಾಗಿ ಒಂದೊಂದೇ ಹಂತವನ್ನು ಏರುವಿರಿ. ಕುಟುಂಬವೂ ನಿರಾತಂಕವಾಗಿ ಜೀವನ ನಡೆಸುವುದು. ವಿದ್ಯಾರ್ಥಿಗಳಿಗೆ ಅವಶ್ಯಕವಾದ ಪ್ರೋತ್ಸಾಹದಿಂದ ಒಳ್ಳೆಯ ಫಲವನ್ನು ನಿರೀಕ್ಷಿಸಬಹುದು. ನಿಮ್ಮ ನಿರೀಕ್ಷೆಯ ಮಟ್ಟ ಕಡಿಮೆಯಾಗಲಿದೆ. ನಂಬಿಕೆಯ ಜೊತೆ ಪ್ರೀತಿಯನ್ನೂ ಕಳೆದುಕೊಳ್ಳಬಹುದು. ನಿಮ್ಮ ಬಗ್ಗೆ ಆಡಿಕೊಳ್ಳಲು ಏನಾದರೂ ಸಿಗಲಿದೆ. ಇದು ನಿಮಗೆ ಬೇಸರವನ್ನು ತರಿಸುವುದು. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ. ಮನಸ್ಸಿಗೆ ಬಾರದ ಕಾರ್ಯವನ್ನು ಮಾಡಲು ಧೈರ್ಯ ಸಾಲದು.
ವೃಷಭ ರಾಶಿ; ಯಾವುದನ್ನು ನಿಮ್ಮದೆಂದುಕೊಂಡಿದ್ದೀರೋ ಅದು ಉಳಿಯದು. ನೀವು ಕುಟುಂಬ ಮತ್ತು ನಿಮ್ಮ ಆಪ್ತರ ಜೊತೆ ಸಮಯ ಕಳೆಯುವುದರಿಂದ ಬಾಂಧವ್ಯ ಬೆಳೆಯುವುದು. ಬಂಧುಗಳ ಭೇಟಿಯಿಂದ ಚಿತ್ತವು ಉತ್ಸಾಹದಿಂದ ಇರವುದು. ಮಾಡಬೇಕಾದ ಕೆಲಸಗಳನ್ನು ವೇಗವಾಗಿ, ಎಚ್ಚರಿಕೆಯಿಂದ ಮಾಡಿ. ಸಹೋದರನ ಅನಿರೀಕ್ಷಿತ ಸಹಾಯವು ಸಂತಸವನ್ನು ತರುವುದು. ಉಪಕಾರಕ್ಕೆ ಪ್ರತ್ಯುಪಕಾರದ ಮನೋಭಾವ ಇರಲಿ. ನೀವು ಇಂದು ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಸಿಟ್ಟುಮಡಿಕೊಳ್ಳುವಿರಿ. ನಿಮ್ಮ ಬಗ್ಗೆ ಹೇಳಿಕೊಳ್ಳುವುದನ್ನು ಕಡಿಮೆ ಮಾಡಿ. ನಿಮ್ಮ ವಸ್ತುವನ್ನು ಇನ್ನೊಬ್ಬರು ಬಳಸಿಕೊಳ್ಳುವರು. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಸಹವಾಸದಿಂದ ನಿಮ್ಮ ಸ್ವಭಾವವು ಗೊತ್ತಾಗದೇ ಬದಲಾಗುವುದು. ನಿಮ್ಮ ಹೇಳಿಕೆಗಳು ಮಹತ್ತ್ವದ್ದಾಗಿರದು.
ಮಿಥುನ ರಾಶಿ: ನಿಮ್ಮ ಮಾತನ್ನು ಯಾರೂ ಕೇಳರು ಎಂದು ಬೇಸರವಾಗುವುದು. ನೀವು ಇಂದು ಯಾರ ಸಹಾಯವನ್ನೂ ಪಡೆಯಲು ಇಚ್ಛಿಸುವುದಿಲ್ಲ. ಆಲಸ್ಯದಿಂದ ಕಛೇರಿಯ ಕೆಲಸವನ್ನು ಮಾಡಲು ಆಸಕ್ತಿ ತೋರಿಸುವುದಿಲ್ಲ. ಒಳ್ಳೆಯ ಅಭ್ಯಾಸಗಳು ನಿಮ್ಮನ್ನು ಆರೋಗ್ಯವಾಗಿ ಇಡುವುದು. ಹಿತಶತ್ರುಗಳನ್ನು ದೂರವಿಟ್ಟು ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಜೀವನ ಸಂಗಾತಿಯ ಜೊತೆ ಹೆಚ್ಚು ಮಾತನಾಡುವಿರಿ. ಸಾಮಾಜಿಕ ಕೆಲಸಗಳಿಂದ ಗೌರವಪ್ರಾಪ್ತಿಯಾಗಲಿದೆ. ಪ್ರಯೋಜನವಿಲ್ಲ ಎಂದು ತೆಗೆದಿಟ್ಟ ವಸ್ತುವಿನ ಅಥವಾ ವ್ಯಕ್ತಿಯ ಮರುಬಳಕೆ ಇಂದಾಗಲಿದೆ. ಹೊಸ ಮನೆಯ ಖರೀದಿಗೆ ಯೋಜನೆ ಸಿದ್ಧವಾಗುವುದು. ಮೋಸದ ಜಾಲಕ್ಕೆ ಸಿಕ್ಕಬಹುದು. ಕರೆಗಳನ್ನು ನಿರ್ಲಕ್ಷಿಸಿ. ಮನೆಗೆ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಸಮಯವನ್ನು ಯಾರಾದರೂ ವ್ಯರ್ಥಮಾಡಬಹುದು.
ಕರ್ಕಾಟಕ ರಾಶಿ: ಇಂದು ವೈಯಕ್ತಿಕ ಕಾರಣದಿಂದ ನಿಮ್ಮ ಉದ್ಯೋಗವನ್ನು ಬದಲಿಸಬೇಕಾಗುವುದು. ಪಡೆದ ಸಾಲವನ್ನು ತೀರಿಸುವಿರಿ. ಬಾಂಧವ್ಯವನ್ನು ಉಳಿಸಿಕೊಳ್ಳುವುದು ನಿಮಗೆ ಹಿಡಿಸದು. ಹೂಡಿಕೆ ಮಾಡಿದ ಹಣವನ್ನು ಪಡೆಯಲು ಓಡಾಟ ಮಾಡಬೇಕಾದೀತು. ಸಹೋದ್ಯೋಗಿಗಳ ಹಾದಿಯನ್ನು ಸೇರಿ ಮೇಲಧಿಕಾರಿಗಳಿಂದ ಬೈಗುಳ ತಿನ್ನುವಿರಿ. ಭಯವು ಅವಕಾಶಗಳಿಂದ ವಂಚಿನೆಯಾಗುವಂತೆ ಮಾಡುವುದು. ಇಂದು ದುಸ್ಸಾಹಸಕ್ಕೆ ತೊಡಗುವುದುಬೇಡ. ಪ್ರಯಾಣವನ್ನು ಅನಾರೋಗ್ಯದ ಕಾರಣ ಕಡಿಮೆ ಮಾಡುವಿರಿ. ಏಕಾಂತವನ್ನು ಇಷ್ಟಪಟ್ಟರು ಇರಲಾಗದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ಕಳೆದುಹೋದುದನ್ನು ಮರಳಿ ಪಡೆಯುವುದು ಕಷ್ಟ. ವಾಹನದಿಂದ ಆರ್ಥಿಕ ಮುಗ್ಗಟ್ಟು.
ಸಿಂಹ ರಾಶಿ: ಪಾಲುದಾರಿಕೆಯ ಭಿನ್ನಾಭಿಪ್ರಾಯವನ್ನು ನೀವೇ ಮೊದಲು ಮಾತನಾಡಿ ಸರಿ ಮಾಡಿಕೊಂಡರೆ ಮುಂದುವರಿಯುವುದು. ನಿಮ್ಮ ಉಪಯೋಗವನ್ನು ಪಡೆದುಕೊಳ್ಳಲು ಇಚ್ಛಿಸಬಹುದು. ಸ್ನೇಹಿತರ ಮಾತುಗಳು ನಿಮಗೆ ಉಪಯೋಗಬಹುದು. ಉದ್ಯಮವನ್ನು ನೀವು ಹೆಚ್ಚಿಸುವ ಯೋಚನೆ ಇರಲಿದೆ. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಅಳುಕು ಇರುವುದು. ನಿಮ್ಮ ಒತ್ತಡವನ್ನು ಕಡಿಮೆಮಾಡಿಕೊಳ್ಳಲು ಕೆಲಸವನ್ನು ಹಂಚುವಿರಿ. ನೀವು ಇಂದು ಹೋರಾಟದ ಮನೋಭಾವವನ್ನು ಇಟ್ಟಕೊಳ್ಳುವಿರಿ. ಸೌಂದರ್ಯ ವರ್ಧನೆಯನ್ನು ಹೆಚ್ಚು ಮಾಡಿಕೊಳ್ಳುವಿರಿ. ಇನ್ನೊಬ್ಬರ ಮೇಲೆ ಆಕರ್ಷಣೆ ಉಂಟಾಗಬಹುದು. ಸಮಾಜಸೇವಕರ ಭೇಟಿಯಾಗಿ ನಿಮ್ಮ ಸಮಸ್ಯೆಗೆ ಸಮಾಧಾನ ತಂದುಕೊಳ್ಳುವಿರಿ. ಧಾರ್ಮಿಕ ಆಚರಣೆಗಳನ್ನು ಮಾಡಲೂ ಚಿಂತಿಸುವಿರಿ. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಮಾಡಿ ಕೊಡಬಹುದು. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ಯಾವ ಸತ್ಯವನ್ನೂ ನೀವು ನಂಬುವ ಸ್ಥಿತಿಯಲ್ಲಿ ಇರುವುದಿಲ್ಲ.
ಕನ್ಯಾ ರಾಶಿ: ನಿಮ್ಮ ದೌರ್ಬಲ್ಯವು ಗೌರವವನ್ನು ಹರಣಮಾಡಬಹುದು. ದಾಂಪತ್ಯದಲ್ಲಿ ಸುಖವನ್ನು ಕಾಣುವಿರಿ. ಮನಸ್ಸು ಉದ್ವಿಗ್ನದಿಂದ ಹೊರಬರಲು ಮಾರ್ಗವನ್ನು ಹುಡುಕುವಿರಿ. ಕಿರಿಕಿರಿಯಿಂದ ದೂರವಿರಲು ಪ್ರಯತ್ನಿಸುವಿರಿ. ಬಹಳ ದಿನಗಳಿಂದ ನಡೆಯುತ್ತಿದ್ದ ಕೆಲಸವನ್ನೂ ಇಂದು ಮುಗಿಸಬೇಕೆಂಬ ನಿರ್ಧಾರವನ್ನು ಮಾಡುವಿರಿ. ಯಾವುದೇ ದೊಡ್ಡ ಮೊತ್ತದ ಖರೀದಿಯನ್ನು ಮಾಡುವಾಗ ಅವಶ್ಯಕತೆ ಅನಿವಾರ್ಯತೆಗಳ ಬಗ್ಗೆ ಗಮನವಿರಲಿ. ನಿಮ್ಮ ಅನಿರೀಕ್ಷಿತ ಲಾಭದಿಂದ ಸಂತೋಷವಾದರೂ ನಿಮಗೆ ಸಂದೇಹಗಳು ಇರಬಹುದು. ತಂದೆಯ ಬಳಿ ವಿವಾಹದ ಪ್ರಸ್ತಾಪವನ್ನು ಮಾಡುವಿರಿ. ನಿಮ್ಮ ವರ್ತನೆಯು ತೋರಿಕೆಯಂತೆ ಕಾಣಬಹುದು. ತಾಯಿಯ ಜೊತೆ ಕಲಹ ಮಾಡಿ ನಿಮಗೆ ಬೇಸರವಾಗಬಹುದು. ಉದ್ಯಮಿಗಳ ಭೇಟಿಯಾಗುವ ಸಾಧ್ಯತೆ ಇದೆ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ವೃತ್ತಿಯಲ್ಲಿ ನಿಮ್ಮ ಬಗ್ಗೆ ಬಣ್ಣದ ಮಾತುಗಳು ಬರಬಹುದು. ಇದಕ್ಕಾಗಿಯೇ ಉದ್ಯೋಗವು ಬೇಸರ ತರಿಸಬಹುದು.
ತುಲಾ ರಾಶಿ: ಇಂದು ಸಂಗಾತಿಯ ಜೊತೆಗಿನ ಬಾಂಧವ್ಯವನ್ನು ಗಟ್ಟಿ ಮಾಡಿಕೊಳ್ಳುವಿರಿ. ಪುಣ್ಯಸ್ಥಳಕ್ಕೆ ಅನಿರೀಕ್ಷಿತ ಭೇಟಿ ಹಾಗೂ ಸಮಾಧಾನ ಸಿಗಲಿದೆ. ಸಾಲವನ್ನು ಮರುಪಾವತಿ ಮಾಡಿ ನಿರಾಳವಾಗುವಿರಿ. ನಿಮ್ಮವರಿಗೆ ಆದ ಅಪಮಾನವನ್ನು ಸಹಿಸದೇ ಕೋಪಗೊಳ್ಳುವಿರಿ. ಯಾರದೋ ಸಿಟ್ಟನ್ನು ನಿಮ್ಮವರ ಮೇಲೆ ತೋರಿಸುವಿರಿ. ಅದೃಷ್ಟವನ್ನು ನಂಬಿ ಕೆಲಸವನ್ನು ಆರಂಭಿಸುವುದಕ್ಕಿಂತ ಸಾಮರ್ಥ್ಯವನ್ನು ಕಂಡುಕೊಂಡು ಮಾಡುವುದು ಒಳ್ಳೆಯದು. ರಾಜಕೀಯದಲ್ಲಿ ಪರಿವರ್ತನೆ ಆಗಲಿದ್ದು, ನಿಮಗೆ ಗೊಂದಲ ಹೆಚ್ಚಾಗುವುದು. ನಿಮ್ಮ ಮೇಲೆ ಯಾರಾದರೂ ಅಪವಾದವನ್ನು ಹಾಕಬಹುದು. ಇದು ನಿಮ್ಮನ್ನು ಉದ್ವೇಗಕ್ಕೆ ಒಳಗಾಗಿಸುವುದು. ಬಂದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಉತ್ತಮ. ಯಾವ ಸಂದರ್ಬದಲ್ಲಿಯೂ ಇಂದು ನಿಮ್ಮವರನ್ನು ಬಿಟ್ಟುಕೊಡಲಾರಿರಿ. ತಾಳ್ಮೆಯಿಂದ ವರ್ತಿಸಲು ನಿಮ್ಮವರಿಂದ ಸಲಹೆ ಸಿಗುವುದು. ವ್ಯಾಪಾರದಲ್ಲಿ ಪೈಪೋಟಿ ಇರಲಿದ್ದು, ಅದಕ್ಕೆ ಪ್ರತಿತಂತ್ರ ಹೂಡುವಿರಿ.
ವೃಶ್ಚಿಕ ರಾಶಿ: ಇಂದು ನಿಮಗೆ ಸಿಗುವ ಪ್ರೀತಿ ಹಂಚಿಕೆಯಾಗಿ ನಿಮಗೆ ಕಷ್ಟವಾಗುವುದು. ನಿಮ್ಮ ವಸ್ತುವನ್ನು ಕಳೆದುಕೊಂಡು ಚಿಂತಾಮಗ್ನರಾಗುವಿರಿ. ಸ್ವಾವಲಂವನೆಯನ್ನು ನೀವು ಇಷ್ಟಪಡುವಿರಿ. ನಿಮಗೆ ವಹಸಿದ ಕೆಲಸವನ್ನು ನಿಷ್ಠೆಯಿಂದ ಮಾಡುವಿರಿ. ಅಶುಭವಾರ್ತೆಯು ನಿಮ್ಮನ್ನು ಕುಗ್ಗಿಸಬಹುದು. ನಿಮಗೆ ಅನ್ನಿಸಿದ್ದನ್ನು ಕೂಡಲೇ ಹೇಳಿದರೂ ಅನ್ಯ ಪರಿಣಾಮ ಬೀರದು. ನಿಮ್ಮ ನಡತೆಯ ಪರೀಕ್ಷೆಯೂ ನಡೆಯಲಿದೆ. ವೃಥಾ ಕಾಲಹರಣವನ್ನು ಮಾಡಿ ಸಂಪತ್ತನ್ನೂ ಕಳೆದುಕೊಳ್ಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಪಡೆಯುವಿರಿ. ಅಹಂಕಾರವನ್ನು ಎಲ್ಲರದುರು ಪ್ರದರ್ಶನ ಮಾಡಲು ಹೋಗುವುದು ಬೇಡ. ಅಗತ್ಯವಿದ್ದಷ್ಟು ಮಾತ್ರ ಮಾತನಾಡಿ. ನಿಮ್ಮ ನಿಲುವನ್ನು ಸಂಗಾತಿಯು ಪ್ರೋತ್ಸಾಹಿಸಬಹುದು. ಅತಿಯಾದ ಆತ್ಮವಿಶ್ವಾಸವನ್ನು ಇಟ್ಟುಕೊಳ್ಳುವುದರ ಜೊತೆ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದೂ ಉತ್ತಮ. ಇಂದು ಕಲಹವಾಗುವಾಗ ಅಪರಿಚಿತರ ಸಹಾಯವು ಸಿಗಲಿದೆ. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಹುಂಬುತನದಲ್ಲಿ ಪ್ರಯತ್ನಿಸುವಿರಿ.
ಧನು ರಾಶಿ: ಇಂದು ನೀವು ಲಾಭವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೆಲಸ ಮಾಡಿದರೆ ನಿಮಗೆ ತೃಪ್ತಿ ಸಿಗದು. ಒಳ್ಳೆಯ ಸೇವೆಯಿಂದ ಯಶಸ್ಸು ಸಿಗುವುದು. ಏನು ಮಾಡುತ್ತಿದ್ದೇನೆ ಎಂಬುದು ಮರೆತುಹೋಗಲಿದೆ. ತಲೆಯ ನೋವು ಅತಿಯಾಗಬಹುದು. ಬೆರೆಯುವ ಒಳ್ಳೆಯ ಸ್ವಭಾವದಿಂದ ಅಪವಾದ ಬರಬಹುದು. ಸದಾ ಕಾಲ ಹೊಸತನ್ನು ನೀವು ಅಪೇಕ್ಷಿಸುವಿರಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಸಮಯವನ್ನು ಕಳೆಯಲು ಬಯಸುವಿರಿ. ಸ್ವಂತ ಉದ್ಯಮವು ಹೆಚ್ಚು ಸವಾಲಿನಿಂದ ಇರಬಹುದು. ಭೂಮಿಯ ಉತ್ಪನ್ನದಿಂದ ಲಾಭವಾಗಕಿದೆ. ನಿಮಗೆ ಇಂದು ಒಂದುಕಡೆ ಕುಳಿತು ಕೆಲಸ ಮಾಡಲು ಆಗದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಸ್ವಂತ ಕೆಲಸಕ್ಕೆ ಸಮಯವು ಸಿಗದೇ ಎಲ್ಲವನ್ನೂ ಉಳಿಸಿಕೊಳ್ಳುವಿರಿ. ಆರ್ಥಿಕ ವಿಚಾರದಲ್ಲಿ ಸರಿಯಾದ ಹೊಂದಾಣಿಕೆ ಸಿಗದೇ ಕಷ್ಟವಾಗಬಹುದು.
ಮಕರ ರಾಶಿ: ಇಂದು ನೀವು ಸಂಗಾತಿಯ ಮೇಲೆ ಕೋಪವನ್ನು ತೀರಿಸಿಕೊಂಡರೂ ಆ ಕಡೆಯಿಂದ ಯಾವ ಪ್ರತಿಕ್ರಿಯೆ ಬಾರದು. ಪ್ರೀತಿಯಿಂದ ನಿಮಗೆ ಖುಷಿ ಸಿಗಲಿದೆ. ನಿಮ್ಮ ಸಂಗಾತಿಗೆ ಅನ್ಯ ಸ್ಥಳವನ್ನು ನೋಡುವ ಬಯಕೆ ಉಂಟಾಗುವುದು. ಇಂದು ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಬಹುದು. ಪ್ರೇಮವನ್ನು ಹೇಳಿಕೊಳ್ಳುವಿರಿ. ಇದರಿಂದ ನಿಮಗೆ ಗೊಂದಲವು ಬರಬಹುದು. ಎಲ್ಲರನ್ನೂ ನಿಮ್ಮ ವಶದಲ್ಲಿ ಇಟ್ಟುಕೊಂಡು ಕಾರ್ಯವನ್ನು ಸಾಧಿಸುತ್ತೇನೆ ಎಂಬುದು ಕಷ್ಟವಾದೀತು. ಮನೆಯಬಕೆಲಸವನ್ನು ಬೇಗನೆ ಮುಕ್ತಾಗೊಳಿಸುವಿರಿ. ಸಂಗಾತಿಯ ಜೊತೆ ಕಛೇರಿಯಿಂದ ಬಂದವರೇ ಹೊರಗೆ ಹೋಗಲು ಇಚ್ಛಿಸುವಿರಿ. ಯಾರೂ ನಿಮ್ಮ ಆಜ್ಞೆಯನ್ನು ಮೀರದಂತೆ ನೋಡಿಕಳ್ಳಬಹುದು. ನಿದ್ರೆಯನ್ನು ಕಡಿಮೆ ಮಾಡುವಿರಿ. ಹಂಚಿಕೊಳ್ಳುವ ಬಗ್ಗೆ ಸಮಾಧಾನ ಇರದು. ಯೋಗ್ಯ ಸಂಬಂಧವನ್ನು ವಿವಾಹಕ್ಕೆ ಹುಡುಕಿಕೊಳ್ಳುವಿರಿ. ಎಲ್ಲವೂ ಇದ್ದರೂ ಅದನ್ನು ಬಳಸುವ ಕಲೆಯೂ ಗೊತ್ತಿರಬೇಕಾಗುವುದು.
ಕುಂಭ ರಾಶಿ: ಯಾರನ್ನೂ ನೀವು ಒಮ್ಮೆಲೆ ನಂಬುವುದು ಕಷ್ಟವಾದರೂ ಇಂದು ನಂಬಿಕೆ ಅನಿವಾರ್ಯ ಆದೀತು. ಇಂದು ನೀವು ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವಿರಿ. ಮನೆಯಲ್ಲಿಯೇ ಇದ್ದು ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ಕಾರ್ಯವು ಸಿದ್ಧಿಯಾಗುವ ತನಕವಾದರೂ ಮೌನವಾಗಿರುವುದು ಉತ್ತಮವೆಂದು ಹಿರಿಯರಿಂದ ಉಪದೇಶ ಸಿಗುವುದು.. ನೀವು ಅಸಾಧ್ಯವನ್ನು ಸಾಧ್ಯ ಮಾಡಿಕೊಳ್ಳಲು ಬಯಸುವಿರಿ. ಕೆಲವು ನಿಮಿತ್ತಗಳು ನಿಮಗೆ ಭವಿಷ್ಯದ ಸೂಚನೆಯನ್ನು ಕೊಡಬಹುದು. ಕುಟುಂಬದಲ್ಲಿ ಶಾಂತಿಯು ಕದಡಲು ನಿಮ್ಮ ಪಾತ್ರವೂ ಇರಬಹುದು. ಹಳೆಯ ಕಡತಗಳ ಪರಿಶೀಲನೆ ಮಾಡಿ ಅಮೂಲ್ಯ ದಾಖಲೆಯನ್ನು ಪಡೆಯುವಿರಿ. ಇನ್ನೊಬ್ಬರ ಇಚ್ಛೆಯಂತೆ ನಡೆಯಲಿದ್ದು ನೀವು ಎಲ್ಲದಕ್ಕೂ ಸಾಕ್ಷಿಯಾಗಿರುವಿರಿ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ. ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಾಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ.
ಮೀನ ರಾಶಿ: ಇಂದು ನೀವು ಯಾರಾದರೂ ಏನನ್ನಾದರೂ ಕೇಳಿದರೆ ಮಾತ್ರ ಹೇಳಬೇಕೇ ವಿನಹ ನಿಮಗೆ ಗೊತ್ತಿದೆ ಎಂದು ಮೂಗುತೂರಿಸಲು ಹೋಗಿ, ಮೂಗು ಜಜ್ಜಿಕೊಳ್ಳಬೇಕಾದೀತು. ಇಂದು ಕುಟುಂಬದಲ್ಲಿ ನಿಮ್ಮ ಯಶಸ್ಸಿಗೆ ಎಲ್ಲರೂ ಖುಷಿಪಡುವರು. ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಹಾಯವಾಗಬಹುದು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳುವಿರಿ. ಅತಿಯಾದ ಪ್ರಶಂಸೆಯಿಂದ ದಾರಿ ತಪ್ಪುತ್ತದೆ ಎಂದು ಗೊತ್ತಾಗುವ ಮೊದಲೇ ನಿಮ್ಮನ್ನು ದಾರಿ ತಪ್ಪಿಸಿ ಅನ್ಯ ಮಾರ್ಗವೇ ಇಲ್ಲದಂತೆ ಆಗುವುದು. ಇಂದು ಗೋವುಗಳ ಸಹವಾಸವನ್ನು ಮಾಡಲಿದ್ದೀರಿ. ಕೆಲವು ಸಮಯದ ಅಧ್ಯಾತ್ಮದ ಚಿಂತನೆಯನ್ನು ಮಾಡುವಿರಿ. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಹೆಸರನ್ನು ಗಳಿಸಲು ನಿಮಗೆ ನಾನಾ ದಾರಿಗಳು ಸಿಗಬಹುದು. ತಾಯಿಯ ಆರೋಗ್ಯವು ಸುಧಾರಿಸಬಹುದು. ಆಪ್ತರ ಜೊತೆಗಿದ್ದು ವ್ಯವಹಾರದ ಚಾತುರ್ಯವನ್ನು ನೀವು ಇಂದು ಅರಿತುಕೊಳ್ಳುವಿರಿ. ಯಾರದೋ ಬೇಸರವನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳುವಿರಿ. ಸುಮ್ಮನೇ ಆಪ್ತರ ಮೇಲೆ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ.
ಲೋಹಿತ ಹೆಬ್ಬಾರ್ – 8762924271 (what’s app only)