Daily Horoscope 11 August 2024: ಈ ರಾಶಿಯವರಿಗೆ ತಂದೆ-ತಾಯಿ ಸೇವೆ ಮಾಡುವ ಅವಕಾಶ ಸಿಗುವುದು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2024 | 12:02 AM

ಆಗಸ್ಟ್​ 11,​ 2024ರ​​ ನಿಮ್ಮ ರಾಶಿಭವಿಷ್ಯ: ನಿಮ್ಮ ಕೆಲಸದಿಂದ ಸಂತುಷ್ಟರಾಗಿರುವ ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಹಿರಿಯರು ಮತ್ತು ಆಡಳಿತ ಪಕ್ಷದವರೊಂದಿಗಿನ ನಿಕಟತೆ ಮತ್ತು ಒಡನಾಟದಿಂದ ನೀವು ಪ್ರಯೋಜನ ಪಡೆಯುತ್ತೀರಿ ಮತ್ತು ಅನೇಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಹಾಗಾದರೆ ಆಗಸ್ಟ್​ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 11 August 2024: ಈ ರಾಶಿಯವರಿಗೆ ತಂದೆ-ತಾಯಿ ಸೇವೆ ಮಾಡುವ ಅವಕಾಶ ಸಿಗುವುದು
ಈ ರಾಶಿಯವರಿಗೆ ತಂದೆ-ತಾಯಿ ಸೇವೆ ಮಾಡುವ ಅವಕಾಶ ಸಿಗುವುದು
Follow us on

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶುಭ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:56 ಗಂಟೆ, ರಾಹು ಕಾಲ ಸಂಜೆ 05:22 ರಿಂದ 06:56, ಯಮಘಂಡ ಕಾಲ ಮಧ್ಯಾಹ್ನ 12:38 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:47 ರಿಂದ 05:22ರ ವರೆಗೆ.

ಮೇಷ ರಾಶಿ: ಇಂದು ನಿಮಗೆ ಪ್ರತಿಭೆ, ಸಾಮರ್ಥ್ಯಗಳು ಇವೆ ಎಂದು ಅನ್ನಿಸದೇ ಹೋಗಬಹುದು. ಎಲ್ಲವೂ ಏಕಕಾಲಕ್ಕೆ ಪ್ರಕಟವಾಗದು. ಇಂದು ನೀವು ವೃತ್ತಿಜೀವನದ ಪ್ರಯೋಜನವನ್ನು ಪಡೆಯುವಿರಿ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗುತ್ತವೆ ಆದರೆ ಮಾನಸಿಕ ಗೊಂದಲದಿಂದಾಗಿ ನೀವು ಪ್ರಯೋಜನಗಳಿಂದ ವಂಚಿತರಾಗಬಹುದು. ಸ್ನೇಹಿತರೊಂದಿಗೆ ಎಲ್ಲೋ ಹೋಗುವ ಯೋಜನೆ ರೂಪಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ವಿಶೇಷ ಯಶಸ್ಸನ್ನು ಪಡೆಯುತ್ತಾರೆ. ಸಂಬಳ ವಿಳಂಬವು ದುಃಖಕರವಾಗಿರುತ್ತದೆ. ಇಂದಿನ ನಿಮ್ಮ ಸಮಯದ ವ್ಯತ್ಯಾಸದಿಂದ ಕೆಲವು ಕಾರ್ಯಗಳು ಬದಲಾವಣೆ ಆಗಬಹುದು. ಸಂಗಾತಿಯು ನಿಮ್ಮ ಗುಟ್ಟನ್ನು ಹೊರಹಾಕಬಹುದು. ಬಹಳ ದಿನಗಳಿಂದ ಕಾರ್ಮಿಕರ ವಿಚಾರದಲ್ಲಿ ನಿಮಗೆ ಅಸಮಾಧಾನವಿದ್ದು ಅದನ್ನು ತೋರ್ಪಡಿಸುವಿರಿ.

ವೃಷಭ ರಾಶಿ: ಇಂದು ವ್ಯಾವಹಾರಿಕವಾಗಿರುವ ಮನಶ್ಚಾಂಚಲ್ಯ ಅನೇಕ ವಿಧವಾಗಿ ನಿಮ್ಮನ್ನು ಕಾಡಬಹುದು.‌ ನಿಮ್ಮ ಆಶಯಗಳು ಈ ದಿನ ಈಡೇರಬಹುದು.‌ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಯತ್ನಗಳಲ್ಲಿ ಸೈದ್ಧಾಂತಿಕ ಯಶಸ್ಸು ಇರುತ್ತದೆ. ಮಕ್ಕಳ ಕಡೆಯಿಂದ ಸಮಾಧಾನಕರ ಸುದ್ದಿ ಸಿಗಲಿದೆ. ಯಾವುದೇ ಕಾನೂನು ವಿವಾದ ಅಥವಾ ವಿಷಯದಲ್ಲಿ ಗೆಲುವು ನಿಮಗೆ ಸಂತೋಷವನ್ನು ಉಂಟುಮಾಡಬಹುದು. ತಪ್ಪು ನಿರ್ಧಾರಗಳಿಂದ‌ ನಿಮಗೇ ತೊಂದರೆ ಉಂಟಾಗಲಿದೆ. ಕಾನೂನನ್ನು ಗೌರವಿಸಿ, ಪಾಲಿಸಿ. ವೈದ್ಯಕೀಯ ಚಿಕಿತ್ಸೆಗೆ ತೆರಳಬೇಕಾದೀತು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಮಾಡುವ ಅವಶ್ಯಕತೆ ಇದೆ. ನಿಮ್ಮ ವಿವಾಹದ ಮಾತುಕತೆಗಳು ನಿಮಗೆ ಖುಷಿ ಕೊಡಬಹುದು.

ಮಿಥುನ ರಾಶಿ: ಇಂದು ತಂದೆ ಹಾಗು ತಾಯಿಯರ ಸೇವೆಯನ್ನು ಮಾಡುವ ಅವಕಾಶವು ನಿಮಗೆ ಸಿಗುವುದು. ಇಂದು ಕುಟುಂಬದಲ್ಲಿ ಸಂತೋಷ ಇರಲಿದೆ. ಮಕ್ಕಳ ಜವಾಬ್ದಾರಿಯನ್ನು ಪೂರೈಸಬಹುದು. ಪ್ರಯಾಣವು ಆಹ್ಲಾದಕರ ಮತ್ತು ಪ್ರಯೋಜನಕಾರಿ. ನೀವು ಆತ್ಮೀಯರ ದರ್ಶನ ಮತ್ತು ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ. ತಂದೆ ಮತ್ತು ತಂದೆಯಂತಹ ಜನರಿಂದ ನೀವು ಬೆಂಬಲ ಮತ್ತು ಪ್ರಯೋಜನವನ್ನು ಪಡೆಯಬಹುದು. ಮೃದು ಸ್ವಭಾವವು ಗೌರವವನ್ನು ಹೆಚ್ಚಿಸುತ್ತದೆ. ಆಧ್ಯಾತ್ಮಿಕ, ಧ್ಯಾನ ಮತ್ತು ಯೋಗವು ಅಂತಃಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಕೆಲಸವು ಚೆನ್ನಾಗಿ, ಉತ್ಸಾಹದಿಂದ ನಡೆಯುವುದು. ನಿಮ್ಮ ವಿರುದ್ಧ ಮಾತನಾಡಿದವರಿಗೆ ಇಂದು ಕಾಲವೇ ಉತ್ತರಿಸುವುದು. ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗವಾಗುವ ಸಾಧ್ಯತೆ ಇದೆ. ಸುಮ್ಮನೇ ಎಲ್ಲಗಾದರೂ ಹೋಗಬೇಕು ಎಂದು ಅನ್ನಿಸುವುದು. ಜವಾಬ್ದಾರಿಯಿಂದ ತಲೆ ಭಾರವಾಗುವುದು.

ಕಟಕ ರಾಶಿ: ಇಂದು ನೀವು ಯಾರನ್ನೂ ಲಘುವಾಗಿ ಕಾಣುವುದು ಬೇಡ. ನೀರೀಕ್ಷಿಸಿದ ವಸ್ತುಗಳು ಕೆಲವು ಸಿಗಲಿವೆ. ಮನಸ್ಸು ಸ್ವಲ್ಪ ಎಲ್ಲವನ್ನೂ ಮರೆತು ಹಗುರಾಗಬಹುದು. ಇಂದು ಬಹಳ ಸಂತೋಷದಾಯಕವಾಗಿರುತ್ತದೆ. ಕೈಯಲ್ಲಿ ಸಾಕಷ್ಟು ಹಣವನ್ನು ಹೊಂದಿರುವುದನ್ನು ಆನಂದಿಸಿ ಮತ್ತು ಹೂಡಿಕೆ ಯೋಜನೆಗಳನ್ನು ಸಹ ಮಾಡುತ್ತಾರೆ. ವಿರೋಧಿಗಳು ಸೋಲುತ್ತಾರೆ. ಪೋಷಕರ ಆಶೀರ್ವಾದ ಉಳಿಯುತ್ತದೆ. ಹೊಸ ನಿರೀಕ್ಷೆಗಳು ಸಂತೋಷವನ್ನು ತರುತ್ತವೆ. ಅಲ್ಪಾವಧಿಯ ಹೂಡಿಕೆಯಿಂದ ಲಾಭವಾಗುತ್ತದೆ. ಕಳೆದುಕೊಂಡದ್ದನ್ನು ಪಡೆಯಬೇಕು ಎಂಬ ಛಲವು ನಿಮ್ಮಲ್ಲಿ ಇರುವುದು. ಮನಸ್ತಾಪವನ್ನು ಮನಸ್ಸಿನೊಳಗೇ ಇಟ್ಟುಕೊಳ್ಳುವಿರಿ. ಆಸ್ತಿಯ ವಿಚಾರಕ್ಕೆ ನೆರೆಹೊರೆಯ ನಡುವೆ ಕಲಹವಾದೀತು. ನಿಮ್ಮ ಆರಾಮದ ದಿನಚರಿಯಲ್ಲಿಯೂ ನಿಮಗೆ ಇಂದು ಕಿರಿಕಿರಿ ಆಗುವುದು.

ಸಿಂಹ ರಾಶಿ: ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವಿದೇಶಕ್ಕೆ ಹೋಗಲು ಆಲೋಚನೆ ಮಾಡಿದ್ದರೆ ಹೊರಡಬಹುದು. ನಿಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ದಿನವು ಮಿಶ್ರವಾಗಿರುತ್ತದೆ. ಬುದ್ಧಿವಂತಿಕೆಯಿಂದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಿ. ನೀವು ಅಪಾಯಕಾರಿ ಕೆಲಸವನ್ನು ತಪ್ಪಿಸಬೇಕು. ಇಂದು ಸಂತೋಷವು ಕಡಿಮೆಯಿರಬಹುದು. ನಿಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ಹಲವು ಅವಕಾಶಗಳು ಸಿಗಲಿವೆ. ಸಹೋದ್ಯೋಗಿಯ ಸಲಹೆಯನ್ನು ಸ್ವೀಕರಿಸಿ. ಪೂರ್ವಾಪರ ಯೋಚಿಸಿ ನಿರ್ಧಾರ ಮಾಡಿ. ವೃತ್ತಿಜೀವನದಲ್ಲಿ ಸವಾಲುಗಳಿವೆ. ತಾಯಿಯ ಕಡೆಯ ಸಂಬಂಧಿಕರಿಂದ ಒತ್ತಡವಿರಬಹುದು. ಭೂಮಿಯನ್ನು ಮಾರಾಟಮಾಡುವ ಸ್ಥಿತಿಯು ಬರಲಿದೆ. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳನ್ನು ಕೇಳಬೇಕಾದೀತು.

ಕನ್ಯಾ ರಾಶಿ: ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ನೀವು ಒಂಟಿಯಾಗಿರುವುದನ್ನು ಯಾರಾದರೂ ತಪ್ಪಿಸಬಹುದು.‌ ಇದ್ದಕ್ಕಿದ್ದಂತೆ ನೀವು ಕೆಲವು ಪ್ರತಿಕೂಲವಾದ ಸುದ್ದಿಗಳನ್ನು ಕೇಳಬಹುದು, ನಂತರ ನೀವು ಹಠಾತ್ ಪ್ರಯಾಣಕ್ಕೆ ಹೋಗಬೇಕಾಗಬಹುದು. ನಿಮ್ಮ ಮಾತುಗಳು ಯಾರೊಂದಿಗಾದರೂ ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳಿಗೆ ಕಾರಣವಾಗಬಹುದು. ಆದ್ದರಿಂದ ನಿಮ್ಮ ಮಾತನ್ನು ನಿಯಂತ್ರಿಸಿ. ವೃತ್ತಿಕ್ಷೇತ್ರದಲ್ಲಿ ಸಿಗಬೇಕಾದ ಬೆಂಬಲ ಸಿಗಲಿದೆ. ಆರೋಗ್ಯವು ಮಧ್ಯಮವಾಗಿ ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಆರ್ಥಿಕ ವಹಿವಾಟಿನಲ್ಲಿ ಜಾಗರೂಕರಾಗಿರಿ. ಅರ್ಥವಿಲ್ಲದ ಚರ್ಚೆಯನ್ನು ತಪ್ಪಿಸಿ. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ. ನಿಮ್ಮ ಇಷ್ಟದವರು ನಿಮ್ಮ ಭೇಟಿಯಾಗಬಹುದು. ಸಣ್ಣ ಉಳಿತಾಯಕ್ಕೆ ಇಂದು ಬೆಲೆಯು ಬಂದಂತಾಗುವುದು. ಜೀವನದ ಲಕ್ಷ್ಯವು ಬೇರೆ ಕಡೆಗೆ ಬದಲಿಸಬಹುದು.

ತುಲಾ ರಾಶಿ; ಇಂದು ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ನೀವು ನಿಮ್ಮ ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ. ಮನೆಯವರ ಜೊತೆ ಖುಷಿಯಿಂದ ಕಾಲಕಳೆಯುವಿರಿ. ಈ ವಿವೇಕದಿಂದ ಮಾಡಿದ ಕೆಲಸದ ಬಗ್ಗೆ ನಿಮಗೆ ಮೆಚ್ಚುಗೆ ಸಿಗುತ್ತದೆ. ವೃತ್ತಿಜೀವನದಲ್ಲಿ ಗೌರವ ಸಿಗುತ್ತದೆ. ಹೊಸ ಉದ್ಯಮಗಳು ಅಭಿವೃದ್ಧಿ ಹೊಂದುತ್ತವೆ. ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ. ಪ್ರಮುಖ ಜನರೊಂದಿಗೆ ಸಂಬಂಧಗಳು ರೂಪುಗೊಳ್ಳುತ್ತವೆ. ಹತ್ತಿರದವರ ವಿಚಿತ್ರ ವರ್ತನೆಯು ಕೋಪವನ್ನು ಉಂಟುಮಾಡುವುದು. ನೀವು ಭೌತಿಕ ಸಂತೋಷವನ್ನು ಪಡೆಯುತ್ತೀರಿ. ಸ್ವಲ್ಪ ಪ್ರಯತ್ನದಿಂದ ನೀವು ದೊಡ್ಡ ಲಾಭವನ್ನು ಪಡೆಯಬಹುದಿ. ಮಗುವಿಗೆ ಸಂಬಂಧಿಸಿದ ಸುವಾರ್ತೆಯೊಂದಿಗೆ ಮನಸ್ಸು ಸಂತೋಷವಾಗುತ್ತದೆ. ಹಿರಿಯರ ಪ್ರೀತಿಯು ನಿಮಗೆ ಖುಷಿಕೊಡುವುದು. ವ್ಯವಹಾರದಲ್ಲಿ ಬರುವ ಸಮಸ್ಯೆಯನ್ನು ಮೊದಲೇ ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆಯಲ್ಲಿ ಮಾಡಿ. ನಿರೋದ್ಯೋಗ ಸಮಸ್ಯೆಯು ಕಾಡುವುದು.

ವೃಶ್ಚಿಕ ರಾಶಿ; ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ನಡೆ, ನುಡಿಗಳಲ್ಲಿ ಬಹಳ ಜಾಗರೂಕರಾಗಿರಿ. ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಮಾಡುವ ಪ್ರಯತ್ನಗಳು ನಿಮಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ. ಸರ್ಕಾರ ಮತ್ತು ಅಧಿಕಾರದ ನಡುವಿನ ಸಂಬಂಧದಿಂದ ಪ್ರಯೋಜನ ಪಡೆಯಬಹುದು, ಇದು ಅನೇಕ ಕಾರ್ಯಗಳನ್ನು ಸಾಧಿಸುತ್ತದೆ. ದುರಾಸೆಯಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ, ಇಲ್ಲದಿದ್ದರೆ ಮೋಸ ಹೋಗಬಹುದು. ಸಂಬಂಧಿಕರ ಜೊತೆ ಮನಸ್ತಾಪವಾಗುವ ಸಾಧ್ಯತೆಯಿದೆ. ವೃತ್ತಿಯಲ್ಲಿ ಆತಂಕವು ಇರಲಿದೆ. ಪ್ರಾಣಿಗಳಿಂದ ಭಯಗೊಳ್ಳುವ ಸಾಧ್ಯತೆ ಇದೆ. ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ. ನಿಮ್ಮ ಅನಾರೋಗ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರಿರಿ.

ಧನು ರಾಶಿ: ನೀವು ಪ್ರಯಾಣವನ್ನು ಅನಿವಾರ್ಯ ಕಾರಣಕ್ಕೆ ಮಾಡಬೇಕಾಗಬಹುದು. ಅನಿರೀಕ್ಷಿತ ಎದುರಾದ ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗುತ್ತವೆ. ನಿಮ್ಮ ಕೆಲಸದಿಂದ ಸಂತುಷ್ಟರಾಗಿರುವ ನಿಮ್ಮ ವಿರೋಧಿಗಳು ಸಹ ನಿಮ್ಮನ್ನು ಹೊಗಳುತ್ತಾರೆ. ಹಿರಿಯರು ಮತ್ತು ಆಡಳಿತ ಪಕ್ಷದವರೊಂದಿಗಿನ ನಿಕಟತೆ ಮತ್ತು ಒಡನಾಟದಿಂದ ನೀವು ಪ್ರಯೋಜನ ಪಡೆಯುತ್ತೀರಿ ಮತ್ತು ಅನೇಕ ಕಾರ್ಯಗಳು ಪೂರ್ಣಗೊಳ್ಳುತ್ತವೆ. ತಪ್ಪು ಲೆಕ್ಕಾಚಾರದಿಂದ ನಷ್ಟವಾಗುವ ಸಾಧ್ಯತೆಯಿದೆ. ನಿಮ್ಮವರ ಎದುರು ಅಹಂಕಾರವನ್ನು ತೋರಿಸಬೇಡಿ. ಮಕ್ಕಳೊಂದಿಗೆ ವಿವಾದಗಳು ಉಂಟಾಗಬಹುದು. ಸಣ್ಣ ಸಮಸ್ಯೆಯನ್ನು ದೊಡ್ಡ ಮಾಡಿಕೊಳ್ಳಲಿದ್ದೀರಿ. ಬಂಧುಗಳು ನಿಮ್ಮ ಸಹಾಯಕ್ಕೆ ಬರಬಹುದು. ಯಾರಾದರೂ ನಿಮ್ಮನ್ನು ಚೇಡಿಸಬಹುದು. ಸ್ನೇಹಿತರಿಗೆ ನಿಮ್ಮದಾದ ಕೆಲವು ಆಯ್ಕೆಗಳನ್ನು ಹೇಳಿ. ಧಾರ್ಮಿಕ ಆಚರಣೆಯು ನಿಮ್ಮ ಮನಸ್ಸಿಗೆ ಹಿತವೆನಿಸುವುದು.‌

ಮಕರ ರಾಶಿ: ನೀವು ಹಿರಿಯರ ಜೊತೆ ಗೌರವಯುತವಾಗಿ ವರ್ತಿಸಿ. ಕಾರ್ಯಗಳು ಶೀಘ್ರವಾಗಿ ಫಲಿಸದೇ ಇರುವುದು ನಿಮಗೆ ಬೇಸರ ತಂದೀತು. ವಿವಾಹಿತರು ತಮ್ಮ ಸಂಗಾತಿಯ ಬೆಂಬಲವನ್ನು ಪಡೆಯುತ್ತಾರೆ. ಮಗುವಿನಿಂದ ನಿರಾಶಾದಾಯಕ ಸುದ್ದಿಗಳನ್ನು ಸ್ವೀಕರಿಸಬಹುದು, ಇದರಿಂದಾಗಿ ಮನಸ್ಸು ಹಾಳಾಗಬಹುದು. ಸಂಜೆ ಕೆಲವು ಕೆಲಸಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಲಾಭ ಪಡೆಯಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗುವುದು. ಮಿತ್ರರ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಮಾತಿನಲ್ಲಿ ಕಠೋರತೆ ಬೇಡ. ವಿವೇಚನೆಯನ್ನು ಬಳಸಿ. ಆಪ್ತರ ಜೊತೆ ಒಂದಿಷ್ಟು ಸಮಯವನ್ನು ಕಳೆಯಬಹುದು. ಕುಟುಂಬದಲ್ಲಿ ಭಿನ್ನಮತ ಇರಲಿದೆ‌. ಸಮಾಜದಿಂದ ಸಿಗುವ ಗೌರವವು ನಿಮಗೆ ಬಂಧನದಂತೆ ಅನ್ನಿಸಬಹುದು. ಇಂದು ನಿಮ್ಮ ಸಹಾಯದಿಂದ ಕುಟುಂಬವು ಸಂತೋಷಗೊಳ್ಳುವುದು.

ಕುಂಭ ರಾಶಿ; ಇಂದು ಅಧಿಕ ಸಂಪತ್ತಿನ ವ್ಯಯ ಆಗುವುದು. ಕಾರ್ಯ ಮಾಡುವ ಧೈರ್ಯವಿದ್ದರೂ ಕಾರ್ಯದಲ್ಲಿ ನಿರಾಸಕ್ತಿಯೂ ಕಾಣಿಸಬಹುದು. ದಾಂಪತ್ಯ ಜೀವನದಲ್ಲಿ ಹಲವು ದಿನಗಳಿಂದ ಇದ್ದ ತೊಂದರೆಗಳು ಕೊನೆಗೊಂಡು ಬಾಂಧವ್ಯ ಮಧುರವಾಗಿರುತ್ತದೆ. ಇಂದು ಸಂಬಂಧಿಕರ ಜೊತೆಗೆ ಅನುಚಿತವಾಗಿ ವರ್ತಿಸಬೇಡಿ. ಸಂಬಂಧದಲ್ಲಿ ಹದಗೆಡುವ ಸಾಧ್ಯತೆಯಿದೆ. ಸಮಾಜದಲ್ಲಿ ನಿಮ್ಮ ಹೆಸರೂ ಕೂಡ ಹಾಳಾಗಬಹುದು. ಕೆಲವು ಉತ್ತಮ ಪ್ರಯೋಜನಗಳ ಯೋಗವಿದೆ. ನಿಮ್ಮ ಕಠಿಣ ಪರಿಶ್ರಮವು ಫಲವನ್ನು ನೀಡುತ್ತದೆ. ಯಾವುದೇ ಸೂಕ್ತ ನಿರ್ಧಾರವು ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಮಕ್ಕಳ ಅಜಾಗರೂಕತೆಯಿಂದ ಒತ್ತಡ ಹೆಚ್ಚಾಗುತ್ತದೆ. ಧನಲಾಭವಾದರೂ ಮನಸ್ಸಿನಲ್ಲಿ ನೆಮ್ಮದಿ ಕೊರತೆ ಕಾಣುವುದು. ಭೂಮಿಯ ವ್ಯವಹಾರವನ್ನು ಮಾಡಲು ನಿಮಗೆ ಒತ್ತಡ ಬರಬಹುದು. ಇಂದಿನ ಆದಾಯದಿಂದ ನಿಮ್ಮ ಪಡೆಯಬೇಕಾದುದನ್ನು ಪಡೆಯುವಿರಿ.

ಮೀನ ರಾಶಿ: ಇಂದು ಮನಸ್ಸಿನ ಕಿರಿಕಿರಿಯನ್ನು ಅನುಭವಿಸದೇ ಅನ್ಯ ಮಾರ್ಗವಿರದು. ಸ್ವಬುದ್ಧಿಯಿಂದ ಕಾರ್ಯಗಳನ್ನು ಮಾಡುವಿರಿ. ನಿಮ್ಮ ಪ್ರೇಮವು ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗದು. ಇಂದು ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಮನೆಯ ಹೊರಗೆ ವಿಚಾರಣೆ ಇರುತ್ತದೆ. ಹಣ ಪಡೆಯುವುದು ಸುಲಭವಾಗುತ್ತದೆ. ಸಂತೋಷ ಇರುತ್ತದೆ. ಭೂಮಿ ಮತ್ತು ವಸತಿ ಸಮಸ್ಯೆ ಇರಬಹುದು. ಯಾವುದೇ ರೀತಿಯ ಜಗಳ ಮತ್ತು ವಾದಗಳಿಗೆ ಒಳಗಾಗಬೇಡಿ. ಯಾವುದೇ ರೀತಿಯ ಆರ್ಥಿಕ ಅಪಾಯವನ್ನು ತೆಗೆದುಕೊಳ್ಳಬೇಡಿ. ಮೃದು ಮಾತು ಕ್ಷೇತ್ರದಲ್ಲಿ ಪ್ರಯೋಜನವನ್ನು ನೀಡುತ್ತದೆ ಕಠಿಣ ಮಾತುಗಳು ಕ್ಷಣಿಕವಾಗಬಹುದು. ಬಂಧುಗಳ ಜೊತೆ ವಿವಾದವು ಏರ್ಪಡಲಿದ್ದು ನಿಮ್ಮ ಬಗ್ಗೆ ನಕಾರಾತ್ಮಕ ಅಭಿಪ್ರಾಯವೂ ಬರಬಹುದು. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಯಶಸ್ಸನ್ನು ಗಳಿಸಲು ಬಹಳ ಪ್ರಯತ್ನಶೀಲರಾಗುವರು.

ಲೋಹಿತ ಹೆಬ್ಬಾರ್ – 8762924271 (what’s app only)