ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 12:29 ರಿಂದ ಸಂಜೆ 02:01, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:57 ರಿಂದ 12:29ರ ವರೆಗೆ.
ಮೇಷ ರಾಶಿ : ಇಂದು ನಿಮ್ಮ. ವ್ಯವಹಾರದಲ್ಲಿ ಅನಗತ್ಯ ಚರ್ಚೆಯನ್ನು ತಪ್ಪಿಸಿ. ಉದ್ಯೋಗಕ್ಕಾಗಿ ಇಲ್ಲಿಂದ ಅಲ್ಲಿಗೆ ಅಲೆಯಬೇಕಾಗುತ್ತದೆ. ಪರಿಚಿತರನ್ನು ಅತಿಯಾಗಿ ನಂಬುವುದೂ ಮಾರಕವಾಗಬಹುದು. ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುವ ಜನರು ತಮ್ಮ ಮೇಲಧಿಕಾರಿಯಿಂದ ಟೀಕೆಗೆ ಒಳಗಾಗಬಹುದು. ಪ್ರೇಮ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿ. ಸಣ್ಣಪುಟ್ಟ ಸಮಸ್ಯೆಗಳತ್ತ ಗಮನ ಹರಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗುವುದು. ಎಚ್ಚರಿಕೆಯಿಂದ ಯೋಚಿಸಿದ ಅನಂತರ ನಿಮ್ಮ ವ್ಯಾಪಾರ ಯೋಜನೆಯನ್ನು ರಹಸ್ಯವಾಗಿ ಕೈಗೊಳ್ಳಿ. ಯಾರು ಏನು ಹೇಳಿದರೂ ಕೇಳಬೇಡಿ. ಇಂದು ವಾಹನ ಖರೀದಿಸುವುದನ್ನು ತಪ್ಪಿಸಿ. ಹೊಸ ವ್ಯಕ್ತಿಗಳ ಪರಿಚಯವಾಗಲಿದ್ದು ಆಪ್ತತೆಯೂ ಬೆಳೆದು, ವಿನಾಕಾರಣ ದೂರವೂ ಆಗಬಹುದು. ಹಿರಿಯರ ಜೊತೆಗಿನ ಮಾತುಕತೆ ನಿಮಗೆ ಪ್ರಯೋಜನಕಾರಿಯಾಗಲಿದೆ.
ವೃಷಭ ರಾಶಿ : ಧಾರ್ಮಿಕ ಆಸಕ್ತಿಯಲ್ಲಿ ಕೊರತೆ ಕಾಣಿಸುವುದು. ಉದ್ಯಮ ಕ್ಷೇತ್ರದಲ್ಲಿ ಹೊಸ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ವ್ಯಾಪಾರದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಣದ ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಬಳಸಿ. ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಜನರು ಗಮನಾರ್ಹ ಯಶಸ್ಸು ಕಾಣುವರು. ಪ್ರೀತಿಯ ವಿಚಾರದಲ್ಲಿ ಪ್ರಾಮಾಣಿಕವಾಗಿರುವುದು ಮುಖ್ಯ. ಇಂದು ಅನುಪಯುಕ್ತ ವಿಷಯಗಳ ಬಗ್ಗೆ ಮಾತನಾಡುವುದು ಒಳ್ಳೆಯದಲ್ಲ.
ಕಚೇರಿಯ ಒತ್ತಡವನ್ನು ನಿಮ್ಮ ಮನೆಗೆ ತರುವುದು ಬೇಡ. ಇಂದು ನೀವು ನಿಮ್ಮ ಆಹಾರದ ಬಗ್ಗೆ ಜಾಗರೂಕರಾಗಿರಬೇಕು. ವಾಹನ ಸಂಚಾರದಲ್ಲಿ ಜಾಗರೂಕತೆ ಇದ್ದರೂ ಅಪಘಾತ ಸಾಧ್ಯತೆ ಇದೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಕೊರತೆಯಿಂದ ಹಿನ್ನಡೆ. ಕುಟುಂಬದಲ್ಲಿ ಕಲಹದ ಕಾರಣ ಕೆಲಸ ಕಾರ್ಯವು ವಿಳಂಬವಾಗುವುದು. ತಾಳ್ಮೆಯಿಂದ ಎಲ್ಲವನ್ನೂ ಮಾಡುವ ಅನಿವಾರ್ಯತೆಯೂ ಇರುವುದು.
ಮಿಥುನ ರಾಶಿ : ಇಂದು ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಆತ್ಮೀಯತೆ ಹೆಚ್ಚಾಗಬಹುದು. ಸರ್ಕಾರದಿಂದ ಆಗುವ ಕಾರ್ಯವು ಅಪೂರ್ಣವಾಗಿಯೇ ಇರುವುದು. ಕಳೆದು ಹೋದ ಬಗ್ಗೆ ಹೆಚ್ಚು ಯೋಚಿಸಿ ಮಾತನಾಡಬೇಡಿ. ಇದರಿಂದ ನಿಮ್ಮ ಸಂಗಾತಿಗೆ ನೋವಾಗಬಹುದು. ನಿಮ್ಮ ಸಂಗಾತಿಯನ್ನು ಯಾವುದೇ ಷರತ್ತುಗಳಿಲ್ಲದೇ ನೋಡಿಕೊಳ್ಳಿ. ಉದ್ಯೋಗಕ್ಕಾಗಿ ಅಲೆದಾಡುವ ಜನರಿಗೆ ಇಂದು ಉದ್ಯೋಗ ದೊರೆಯಲಿದೆ. ಭೂವ್ಯವಹಾರವು ರಾಜಕೀಯ ತಿರುವನ್ನು ಪಡೆಯಬಹುದು. ಚಾಂಚಲ್ಯದ ಸ್ವಭಾವವು ನಿಮ್ಮ ನಿಯಂತ್ರಣಕ್ಕೆ ಬರಬೇಕಿದೆ. ಉದ್ಯಮದಲ್ಲಿ ಹೊಸ ಸಹವರ್ತಿಗಳು ಸಿಗುವರು. ನೀವು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರವನ್ನು ಪಡೆಯುತ್ತೀರಿ. ವ್ಯಾಪಾರದಲ್ಲಿ ಅಲಂಕಾರದ ಬಗ್ಗೆ ಹೆಚ್ಚಿನ ಗಮನವಿರಲಿದೆ. ಜನರು ತಮ್ಮ ಮೇಲಧಿಕಾರಿಯಿಂದ ಪ್ರೋತ್ಸಾಹವನ್ನು ಪಡೆಯುವರು.
ಕರ್ಕಾಟಕ ರಾಶಿ : ಇಂದು ನಿರುದ್ಯೋಗಿಗಳಿಗೆ ಒಂದೊಂದೆ ಚಿಂತೆ ಕಾಡುವುದು. ವ್ಯಾಪಾರದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕಾಯುವಿರಿ. ಹೊಸ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದು. ಕಠಿಣ ಪರಿಶ್ರಮದಿಂದ ಹಿಂದೆ ಸರಿಯುವುದು ಅಪಮಾನವೆನಿಸಬಹುದು. ನಿಮ್ಮ ಒಳ್ಳೆಯ ಮತ್ತು ಕೆಟ್ಟ ಭಾವನೆಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಜೀವನ ಸಂಗಾತಿಯನ್ನು ಬೆಂಬಲಿಸಿ. ಸಾಧ್ಯವಾದಷ್ಟು. ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿ. ಇಂದು ನಿಮ್ಮ ಸಂಬಂಧವು ಪೋಷಕರ ಬೆಂಬಲವನ್ನು ಪಡೆಯಬಹುದು. ನೀವು ರಾಜಕೀಯದಲ್ಲಿ ಕೆಲವು ಪ್ರಮುಖ ಜವಾಬ್ದಾರಿಗಳನ್ನು ಪಡೆಯಬೇಕಾಗಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಬರುವುದು. ಸಮಾಜದಲ್ಲಿ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವಿರಿ.
ಸಿಂಹ ರಾಶಿ : ಇಂದು ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ವ್ಯಾಪಾರದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಕೆಲವು ಕೆಲಸಗಳಲ್ಲಿ ನೀವು ಅಂದಿಕೊಂಡಷ್ಟು ವೇಗದಲ್ಲಿ ಮುಗಿಯದೇ ಅಡಚಣೆ ಉಂಟಾಗುತ್ತದೆ. ಹಳೆಯ ಪ್ರೇಮಿಗಳ ವಿವಾಹ ನಿಶ್ಚಯವಾಗಬಹುದು. ಹೊಸ ಸಂಬಂಧಗಳು ಪೋಷಕರಿಂದ ಬೆಂಬಲವನ್ನು ಪಡೆಯುತ್ತದೆ. ಕೆಲವು ವಿಚಾರದಲ್ಲಿ ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುವುದು. ನಿಮ್ಮ ದುರ್ಬಲತೆಯೇ ನಿಮಗೆ ಶತ್ರುವಾಗಬಹುದು. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಅನಗತ್ಯ ವಾದಗಳನ್ನು ಮಾಡುವುದು ಬೇಡ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಕೆಲವು ಬೆಲೆಬಾಳುವ ವಸ್ತು ಕಳ್ಳತನವಾಗಬಹುದು. ಪ್ರಯಾಣಿಸುವಾಗ ಯಾವುದೇ ಅಪರಿಚಿತ ವ್ಯಕ್ತಿಯಿಂದ ದೂರವಿರಿ. ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ಭೋಗಕ್ಕಾಗಿ ಸಾಕಷ್ಟು ಹಣ ವ್ಯಯವಾಗಲಿದೆ.
ಕನ್ಯಾ ರಾಶಿ : ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನೆರವೇರಲಿವೆ. ಇದರಿಂದ ಕುಟುಂಬದಲ್ಲಿ ಸಂತೋಷ ಇರುತ್ತದೆ. ಸಿಕ್ಕ ಉದ್ಯೋಗವನ್ನು ಸರಿಯಾಗಿ ಮಾಡುವುದನ್ನು ಕಲಿಯಬೇಕಿದೆ. ನಿಮ್ಮ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳ ಜೊತೆ ನಿಮ್ಮ ಸಂಪರ್ಕಗಳು ಹೆಚ್ಚಾಗುತ್ತವೆ. ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಗಮನ ನೀಡುವ ಅವಶ್ಯಕತೆಯಿದೆ. ನಿಮ್ಮ ಸಂಬಂಧದಲ್ಲಿ ಅಹಂಕಾರದ ಸಮಸ್ಯೆಗಳು ಬರಲು ಬಿಡಬೇಡಿ ನಿಮ್ಮ ಸಂಗಾತಿಯ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿರಿ. ನಿಮ್ಮ ಅಗತ್ಯಗಳನ್ನು ಆರ್ಥಿಕತೆಯ ಕಾರಣ ಸೀಮಿತವಾಗಿರಿಸಿಕೊಳ್ಳುವಿರಿ. ಸ್ನೇಹಿತರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಬರಬಹುದು. ಕಲಾಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವರಿಗೆ ಯಶಸ್ಸು ಸಿಗುವುದು. ವ್ಯಾಪಾರದಲ್ಲಿ ಮಾಡಿದ ಹೊಸ ಬದಲಾವಣೆಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಉದ್ಯಮದಲ್ಲಿ ಸಹವರ್ತಿಗಳು ರೂಪುಗೊಳ್ಳುವರು.
ತುಲಾ ರಾಶಿ : ನಿಮ್ಮ ವ್ಯಾಪಾರ ಯೋಜನೆಯಿಂದ ಯಶಸ್ಸು. ಅಪೂರ್ಣ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಿರೋದ್ಯೋಗದ ಕೊರಗಿಗೆ ಬಂಧುಗಳ ಕಡೆಯಿಂದ ಉದ್ಯೋಗ ದೊರೆಯಲಿದೆ. ಉನ್ನತ ಅಧಿಕಾರಿಗಳ ಜೊತೆಗೆ ನಿಕಟ ಸಂಪರ್ಕ ಇರುವುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಿರಿ. ನ್ಯಾಯಾಲಯದ ವಿಷಯದಲ್ಲಿ ಸೋಲಾಗುವ ಸಾಧ್ಯತೆ ಇದೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿದವರಿಗೆ ಅವಕಾಶಗಳು ಸಿಗುವುದು. ದೀರ್ಘಕಾಲದ ವಿದೇಶ ಪ್ರವಾಸಕ್ಕೆ ಯೋಜನೆಯನ್ನು ಮಾಡುವಿರಿ. ಹೊಸ ಉದ್ಯಮ ಆರಂಭಿಸುವ ಯೋಜನೆಯು ಕಾರ್ಯರೂಪಕ್ಕೆ ಬರುವುದು ವಿಳಂಬವಾದೀತು. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗದು. ನೀವು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸಬಹುದು. ಅನಿರೀಕ್ಷಿತ ವಾರ್ತೆಗಳಿಂದ ಉದ್ವೇಗವಾಗುವುದು ಸಹಜ.
ವೃಶ್ಚಿಕ ರಾಶಿ : ಇಂದು ನಿಮ್ಮ ಹಳೆಯ ನ್ಯಾಯಾಲಯದ ಪ್ರಕರಣಗಳಲ್ಲಿ ಜಯ. ಪ್ರಮುಖ ಕೆಲಸಗಳಿಗೆ ಹಣದ ಅವಶ್ಯಕತೆ ಕಾಣಿಸುತ್ತದೆ. ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ನಿಮ್ಮ ರಾಜಕೀಯದ ಮಹತ್ವಾಕಾಂಕ್ಷೆಗಳು ಈಡೇರಲಿವೆ. ಸರ್ಕಾರದ ಯೋಜನೆಗಳ ಲಾಭವನ್ನು ನೀವು ಪಡೆಯುವಿರಿ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರು ದೂರ ಪ್ರಯಾಣ ಹೋಗಬೇಕಾದೀತು. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಆಗಲಿವೆ. ನಿಮ್ಮ ಸಂಬಂಧದಲ್ಲಿರುವ ಮೂರನೇ ವ್ಯಕ್ತಿ ನಿಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಅದು ನಿಮ್ಮ ಸಂಗಾತಿಯ ಜೊತೆ ಬಿರುಕು ಹೆಚ್ಚಿಸಬಹುದು. ರಾಜಕೀಯದಲ್ಲಿ ನಿಮ್ಮ ವಿರೋಧಿಗಳನ್ನು ಸೋಲಿಸುವ ಮೂಲಕ ನೀವು ಪ್ರಮುಖ ಸ್ಥಾನ ಅಥವಾ ಜವಾಬ್ದಾರಿಯನ್ನು ಸಿಗಬಹುದು. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಅಪರಿಚಿತ ವ್ಯಕ್ತಿಯ ಮೇಲೆ ಅತಿಯಾದ ನಂಬಿಕೆ ಬೇಡವೆಂದರೂ ಕೇಳುವ ಸ್ಥಿತಿಯನ್ನು ದಾಟಿರುವಿರಿ.
ಧನು ರಾಶಿ : ಇಂದು ಅನಗತ್ಯ ಓಡಾಟದಿಂದ ಆರಂಭ. ನೀವು ಕೆಲವು ಅಹಿತಕರ ಸುದ್ದಿಗಳು ನಿಮ್ಮನ್ನು ಕುಗ್ಗಿಸಬಹುದು. ಕೆಲಸದ ಪ್ರದೇಶದಲ್ಲಿ ವಿಪರೀತ ಕಾರ್ಯದ ಒತ್ತಡವಿರುವುದು. ಯಾವುದೇ ಪ್ರಮುಖ ಕಾರ್ಯದಲ್ಲಿ ಅಡಚಣೆ ಆಗುವ ಸಾಧ್ಯತೆ ಇದೆ. ಕೆಲವರಿಗೆ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಸಿಗಬಹುದು. ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಯತ್ನಗಳು ಇಂದು ಪೂರ್ಣಗೊಳ್ಳಬಹುದು. ತಿರುಗಾಡುವ ಮೂಲಕ ನಿಮ್ಮ ವೃತ್ತಿಗೆ ಸ್ವಲ್ಪ ಆದಾಯ ಬರುವುದು. ಯಾರದೋ ತಂತ್ರಕ್ಕೆ ನೀವು ಬಲಿಯಾಗುವಿರಿ. ನಿಮಗೆ ಯಾವುದಾದರೂ ಕೆಟ್ಟದ್ದು ಎಂದು ಎನಿಸಿದರೆ ಅದರಿಂದ ದೂರವಿರಬೇಕು. ತಪ್ಪು ತಿಳುವಳಿಕೆಯನ್ನು ಪರಿಹರಿಸಲು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ.
ಮುಂಬರುವ ತೊಂದರೆಗೆ ನೀವೇ ತಲೆಕೊಡಬೇಕಾದೀತು.
ಮಕರ ರಾಶಿ : ನೀವು ವಿವಿಧ ಕಡೆಯಿಂದ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ವಿದೇಶದಿಂದ ಬಂದ ಬಂಧುಗಳಿಂದ ಉಡುಗೊರೆ ಸಿಗಲಿದೆ. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಆಪ್ತತೆ ಹೆಚ್ಚಾಗುತ್ತದೆ. ಕೆಲವರು ತಮ್ಮ ಕಠಿಣ ಪರಿಶ್ರಮಕ್ಕಾಗಿ ಪ್ರಶಂಸೆಯನ್ನು ಪಡೆಯಬಹುದು. ನಿಮ್ಮ ಸಂಬಂಧವನ್ನು ಬಲಪಡಿಸಲು ಇಂದು ಕ್ರಮಗಳನ್ನು ತೆಗೆದುಕೊಳ್ಳಿ. ಸಂವಹನದಲ್ಲಿ ದೃಢತೆ ಇರಲಿ. ವ್ಯಾಪಾರದಲ್ಲಿ ಹೊಸ ಗ್ರಾಹಕರ ಮೂಲಕ ಪರಿಸ್ಥಿತಿ ಸುಧಾರಣೆ ಕಾಣುತ್ತದೆ. ಸ್ನೇಹಿತರ ಜೊತೆ ಮನೋರಂಜನೆಯಲ್ಲಿ ತೊಡಗುವಿರಿ. ಉದ್ಯಮದಲ್ಲಿ ಸರ್ಕಾರದ ಸಹಾಯಕ್ಕೆ ಪ್ರಯತ್ನಿಸುವಿರಿ. ಕೆಲವು ಅಪೂರ್ಣ ಕೆಲಸಗಳು ಪೂರ್ಣಗೊಳ್ಳುವುದು. ರಾಜಕೀಯದ ನಾಯಕರಿಗೆ ಸಾರ್ವಜನಿಕ ಸಹಕಾರ ಮತ್ತು ಬೆಂಬಲ ಸಿಗುವುದು. ಯಾರ ನಕಾರಾತ್ಮಕ ಮಾತುಗಳೂ ನಿಮ್ಮ ಲೆಕ್ಕಕ್ಕೆ ಬಾರದು. ನಿರುದ್ಯೋಗಿಗಳಿಗೆ ಉದ್ಯೋಗದಲ್ಲಿ ಅವಕಾಶ ಪ್ರಾಪ್ತಿ. ಸಮಾಜಸೇವೆಯಲ್ಲಿ ತಾಳ್ಮೆಯಿಂದ ಚಿಂತನಶೀಲವಾಗಿ ವರ್ತಿಸಿ.
ಕುಂಭ ರಾಶಿ : ಯಾವುದೇ ವೃತ್ತಿಯಾಗಿದ್ದರೂ ಅವರ ಸಾಧನೆಗೆ ಗೌರವವು ಸಿಗಲಿದೆ ಇಂದು ಅನಗತ್ಯವಾಗಿ ಜಗಳಕ್ಕೆ ಇಳಿಯುವ ಸಂದರ್ಭ ಬರಬಹುದು. ನಿಮ್ಮ ಸ್ಥಾನ ಸಮಯ ಇವುಗಳನ್ನು ಯೋಚಿಸಿ ನಿಮ್ಮ ಕಾರ್ಯವನ್ನು ಮುಂದುವರಿಸಿ. ಮಧ್ಯವರ್ತಿಗಳ ಜೊತೆ ಎಚ್ಚರಿಕೆಯಿಂದ ವ್ಯಾಪಾರ ಮಾಡಿ. ನೀವು ಇಂದು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಮಯ ಕಳೆಯಬಹುದು. ಪ್ರಯಾಣ ಮಾಡುವವರಿಗೆ ಇಂದು ಉತ್ತಮ ದಿನ. ಯಾವುದೇ ರಿಸ್ಕ್ ಬೇಡ. ವೃತ್ತಿಯಲ್ಲಿ ನಿಮಗೆ ಗೊಂದಲ ಮತ್ತು ಆತಂಕದ ಸ್ಥಿತಿ ಬರುತ್ತದೆ. ನಿಮ್ಮ ನಿರ್ಧಾರವು ಪ್ರಬಲವಾಗಿರಲಿ. ಅದು ಜೀವನದಲ್ಲಿ ಬದಲಾವಣೆಯನ್ನೇ ತರಬಹುದು. ಪ್ರಮುಖ ಯೋಜನೆಗಳು ಅಜ್ಞಾತ ಕಾರಣಗಳಿಂದ ಮುಂದೂಡಬಹುದು. ಮಹಿಳೆಯರ ಸಮಯ ಹಾಸ್ಯದಲ್ಲಿ ಕಳೆಯಲಿದೆ. ಸ್ಪರ್ಧೆಯಲ್ಲಿ ಯಶಸ್ಸಿನ ಪೂರ್ಣ ಭರವಸೆ ಇದೆ. ಆದರೆ ಸಣ್ಣ ದೋಷವನ್ನೂ ಗಂಭೀರವಾಗಿ ಪಡೆದರೆ ಮಾತ್ರ ಸಾಧ್ಯವಾಗುವುದು. ಉನ್ನತ ಅಧಿಕಾರಿಗಳ ಮೇಲೆ ಸಿಟ್ಟು ಬಂದರೂ ಅದನ್ನು ಬೇರೆ ಕಡೆಯಲ್ಲಿ ಹೊರಹಾಕುವಿರಿ.
ಮೀನ ರಾಶಿ : ನಿಮ್ಮ ತಪ್ಪುಗಳಿಂದ ಪಶ್ಚಾತ್ತಾಪವಾಗಬೇಕೇ ಹೊರತೆ, ಅದನ್ನು ಸಮರ್ಥಿಸಿಕೊಂಡು ದೊಡ್ಡವರಾಗುವುದಿಲ್ಲ. ಇಂದು ಕೆಲಸದ ಸ್ಥಳದಲ್ಲಿ ಅನಗತ್ಯ ಓಡಾಟವನ್ನು ಮಾಡಬೇಕಾದೀತು. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಯಾವುದನ್ನೂ ನಿಮಗೆ ಗೊತ್ತಿಲ್ಲವೆಂದು ತೋರಿಸಿಕೊಳ್ಳಲಾರಿರಿ. ನಿಮ್ಮ ಸುಪರ್ದಿಯಲ್ಲಿರುವ ಬೆಲೆಬಾಳುವ ವಸ್ತು ಕಳ್ಳತನವಾಗುವ ಭಯವಿರುತ್ತದೆ. ವ್ಯವಹಾರದಲ್ಲಿ ನಿಮ್ಮ ವಿಶ್ವಾಸಾರ್ಹ ವ್ಯಕ್ತಿಯೇ ಮೋಸ ಮಾಡಬಹುದು. ನೀವು ಪ್ರೀತಿಪಾತ್ರರಿಂದ ದೂರ ಹೋಗಬೇಕಾಗಿ ಬರಬಹುದು. ಅನಪೇಕ್ಷಿತ ಪ್ರಯಾಣವನ್ನು ಕೈಗೊಳ್ಳುವಿರಿ. ರಾಜಕೀಯ ಕ್ಷೇತ್ರದಲ್ಲಿ ತೊಡಗುವ ಆಸಕ್ತಿ ತೋರುವಿರಿ. ಪ್ರಯಾಣದಲ್ಲಿ ಸ್ವಲ್ಪ ಒತ್ತಡವನ್ನು ಉಂಟುಮಾಡಬಹುದು. ಸ್ವಯಂ ಸ್ಫೂರ್ತಿಯಿಂದ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಉದ್ಯೋಗ ಪಡೆಯುವ ನಿಮ್ಮ ಪ್ರಯತ್ನಗಳಲ್ಲಿ ವಿಫಲವಾದರೆ ನಿಮಗೆ ದುಃಖವಾಗುತ್ತದೆ. ವಿದೇಶ ಪ್ರವಾಸ ಹೋಗುವ ಅವಕಾಶವಿರುತ್ತದೆ. ನಿಮ್ಮ ಕೆಲಸದಲ್ಲಿ ನಿಮ್ಮ ಮೇಲಧಿಕಾರಿಯ ಕೋಪಕ್ಕೆ ನೀವು ಬಲಿಯಾಗಬಹುದು.
-ಲೋಹಿತ ಹೆಬ್ಬಾರ್-8762924271 (what’s app only)