Daily Horoscope: ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಫಲಾಫಲ ಹೀಗಿದೆ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಸೆಪ್ಟೆಂಬರ್ 11: ಇಂದು ನಿಮ್ಮ ಹಳೆಯ ನ್ಯಾಯಾಲಯದ ಪ್ರಕರಣಗಳಲ್ಲಿ ಜಯ. ಪ್ರಮುಖ ಕೆಲಸಗಳಿಗೆ ಹಣದ ಅವಶ್ಯಕತೆ ಕಾಣಿಸುತ್ತದೆ. ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ನಿಮ್ಮ ರಾಜಕೀಯದ ಮಹತ್ವಾಕಾಂಕ್ಷೆಗಳು ಈಡೇರಲಿವೆ. ಹಾಗಾದರೆ ಸೆಪ್ಟೆಂಬರ್ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಪೂರ್ವಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:35 ಗಂಟೆ, ರಾಹು ಕಾಲ ಬೆಳಿಗ್ಗೆ 12:29 ರಿಂದ ಸಂಜೆ 02:01, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:57 ರಿಂದ 12:29ರ ವರೆಗೆ.
ಸಿಂಹ ರಾಶಿ : ಇಂದು ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಒತ್ತಡವಿರುತ್ತದೆ. ವ್ಯಾಪಾರದಲ್ಲಿ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಕೆಲವು ಕೆಲಸಗಳಲ್ಲಿ ನೀವು ಅಂದಿಕೊಂಡಷ್ಟು ವೇಗದಲ್ಲಿ ಮುಗಿಯದೇ ಅಡಚಣೆ ಉಂಟಾಗುತ್ತದೆ. ಹಳೆಯ ಪ್ರೇಮಿಗಳ ವಿವಾಹ ನಿಶ್ಚಯವಾಗಬಹುದು. ಹೊಸ ಸಂಬಂಧಗಳು ಪೋಷಕರಿಂದ ಬೆಂಬಲವನ್ನು ಪಡೆಯುತ್ತದೆ. ಕೆಲವು ವಿಚಾರದಲ್ಲಿ ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾಗುವುದು. ನಿಮ್ಮ ದುರ್ಬಲತೆಯೇ ನಿಮಗೆ ಶತ್ರುವಾಗಬಹುದು. ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಜೊತೆ ಅನಗತ್ಯ ವಾದಗಳನ್ನು ಮಾಡುವುದು ಬೇಡ. ಪ್ರಯಾಣ ಮಾಡುವಾಗ ಜಾಗರೂಕರಾಗಿರಿ. ಕೆಲವು ಬೆಲೆಬಾಳುವ ವಸ್ತು ಕಳ್ಳತನವಾಗಬಹುದು. ಪ್ರಯಾಣಿಸುವಾಗ ಯಾವುದೇ ಅಪರಿಚಿತ ವ್ಯಕ್ತಿಯಿಂದ ದೂರವಿರಿ. ಇಲ್ಲದಿದ್ದರೆ ನೀವು ಮೋಸ ಹೋಗಬಹುದು. ಭೋಗಕ್ಕಾಗಿ ಸಾಕಷ್ಟು ಹಣ ವ್ಯಯವಾಗಲಿದೆ.
ಕನ್ಯಾ ರಾಶಿ : ಕುಟುಂಬದಲ್ಲಿ ಕೆಲವು ಶುಭ ಕಾರ್ಯಗಳು ನೆರವೇರಲಿವೆ. ಇದರಿಂದ ಕುಟುಂಬದಲ್ಲಿ ಸಂತೋಷ ಇರುತ್ತದೆ. ಸಿಕ್ಕ ಉದ್ಯೋಗವನ್ನು ಸರಿಯಾಗಿ ಮಾಡುವುದನ್ನು ಕಲಿಯಬೇಕಿದೆ. ನಿಮ್ಮ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳ ಜೊತೆ ನಿಮ್ಮ ಸಂಪರ್ಕಗಳು ಹೆಚ್ಚಾಗುತ್ತವೆ. ಕಾರ್ಯದ ಸ್ಥಳದಲ್ಲಿ ಹೆಚ್ಚಿನ ಗಮನ ನೀಡುವ ಅವಶ್ಯಕತೆಯಿದೆ. ನಿಮ್ಮ ಸಂಬಂಧದಲ್ಲಿ ಅಹಂಕಾರದ ಸಮಸ್ಯೆಗಳು ಬರಲು ಬಿಡಬೇಡಿ ನಿಮ್ಮ ಸಂಗಾತಿಯ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿರಿ. ನಿಮ್ಮ ಅಗತ್ಯಗಳನ್ನು ಆರ್ಥಿಕತೆಯ ಕಾರಣ ಸೀಮಿತವಾಗಿರಿಸಿಕೊಳ್ಳುವಿರಿ. ಸ್ನೇಹಿತರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳು ಬರಬಹುದು. ಕಲಾಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವರಿಗೆ ಯಶಸ್ಸು ಸಿಗುವುದು. ವ್ಯಾಪಾರದಲ್ಲಿ ಮಾಡಿದ ಹೊಸ ಬದಲಾವಣೆಗಳು ಲಾಭದಾಯಕವೆಂದು ಸಾಬೀತುಪಡಿಸುತ್ತದೆ. ಉದ್ಯಮದಲ್ಲಿ ಸಹವರ್ತಿಗಳು ರೂಪುಗೊಳ್ಳುವರು.
ತುಲಾ ರಾಶಿ : ನಿಮ್ಮ ವ್ಯಾಪಾರ ಯೋಜನೆಯಿಂದ ಯಶಸ್ಸು. ಅಪೂರ್ಣ ಕಾರ್ಯಗಳಿಗೆ ಚಾಲನೆ ಸಿಗಲಿದೆ. ನಿರೋದ್ಯೋಗದ ಕೊರಗಿಗೆ ಬಂಧುಗಳ ಕಡೆಯಿಂದ ಉದ್ಯೋಗ ದೊರೆಯಲಿದೆ. ಉನ್ನತ ಅಧಿಕಾರಿಗಳ ಜೊತೆಗೆ ನಿಕಟ ಸಂಪರ್ಕ ಇರುವುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಿರಿ. ನ್ಯಾಯಾಲಯದ ವಿಷಯದಲ್ಲಿ ಸೋಲಾಗುವ ಸಾಧ್ಯತೆ ಇದೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿದವರಿಗೆ ಅವಕಾಶಗಳು ಸಿಗುವುದು. ದೀರ್ಘಕಾಲದ ವಿದೇಶ ಪ್ರವಾಸಕ್ಕೆ ಯೋಜನೆಯನ್ನು ಮಾಡುವಿರಿ. ಹೊಸ ಉದ್ಯಮ ಆರಂಭಿಸುವ ಯೋಜನೆಯು ಕಾರ್ಯರೂಪಕ್ಕೆ ಬರುವುದು ವಿಳಂಬವಾದೀತು. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗದು. ನೀವು ಕೆಲವು ಸಾಮಾಜಿಕ ಕಾರ್ಯಗಳಲ್ಲಿ ಕೈಜೋಡಿಸಬಹುದು. ಅನಿರೀಕ್ಷಿತ ವಾರ್ತೆಗಳಿಂದ ಉದ್ವೇಗವಾಗುವುದು ಸಹಜ.
ವೃಶ್ಚಿಕ ರಾಶಿ : ಇಂದು ನಿಮ್ಮ ಹಳೆಯ ನ್ಯಾಯಾಲಯದ ಪ್ರಕರಣಗಳಲ್ಲಿ ಜಯ. ಪ್ರಮುಖ ಕೆಲಸಗಳಿಗೆ ಹಣದ ಅವಶ್ಯಕತೆ ಕಾಣಿಸುತ್ತದೆ. ಕೆಲಸದ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ನಿಮ್ಮ ರಾಜಕೀಯದ ಮಹತ್ವಾಕಾಂಕ್ಷೆಗಳು ಈಡೇರಲಿವೆ. ಸರ್ಕಾರದ ಯೋಜನೆಗಳ ಲಾಭವನ್ನು ನೀವು ಪಡೆಯುವಿರಿ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಜನರು ದೂರ ಪ್ರಯಾಣ ಹೋಗಬೇಕಾದೀತು. ವ್ಯವಹಾರದಲ್ಲಿ ಹೊಸ ಒಪ್ಪಂದಗಳು ಆಗಲಿವೆ. ನಿಮ್ಮ ಸಂಬಂಧದಲ್ಲಿರುವ ಮೂರನೇ ವ್ಯಕ್ತಿ ನಿಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದು. ಅದು ನಿಮ್ಮ ಸಂಗಾತಿಯ ಜೊತೆ ಬಿರುಕು ಹೆಚ್ಚಿಸಬಹುದು. ರಾಜಕೀಯದಲ್ಲಿ ನಿಮ್ಮ ವಿರೋಧಿಗಳನ್ನು ಸೋಲಿಸುವ ಮೂಲಕ ನೀವು ಪ್ರಮುಖ ಸ್ಥಾನ ಅಥವಾ ಜವಾಬ್ದಾರಿಯನ್ನು ಸಿಗಬಹುದು. ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಅಪರಿಚಿತ ವ್ಯಕ್ತಿಯ ಮೇಲೆ ಅತಿಯಾದ ನಂಬಿಕೆ ಬೇಡವೆಂದರೂ ಕೇಳುವ ಸ್ಥಿತಿಯನ್ನು ದಾಟಿರುವಿರಿ.