ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ 05) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಮೂಲಾ, ಯೋಗ: ಧ್ರುವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 32 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 11:20 ರಿಂದ 12:47 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:13 ರಿಂದ 03:39ರ ವರೆಗೆ.
ಮೇಷ ರಾಶಿ : ಇಂದು ಸಂಗಾತಿಗೆ ನಿಮ್ಮ ಮೇಲೆ ಅಭಿಮಾನ ಬರಬಹುದು. ಅನಗತ್ಯ ಖರ್ಚನ್ನು ಸಂಗಾತಿಯು ತಡೆಯಬಹುದು. ಅವಿವಾಹಿತರು ವಿವಾಹದ ಬಗ್ಗೆ ಬಂಧುಗಳ ಜೊತೆ ಚರ್ಚಿಸುವಿರಿ. ಯಾರನ್ನೋ ಮೆಚ್ಚಿಸಲು ನೀವು ಯೋಜನೆಯನ್ನು ಹಾಕಿಕೊಳ್ಳುವಿರಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಅಶ್ರದ್ಧೆಯನ್ನು ಇತರರ ಎದುರು ಪ್ರಕಟಪಡಿಸುವುದು ಬೇಡ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಮಹಿಳೆಯರು ಯಾವುದೇ ಪಾಕದ ಉತ್ಪನ್ನದ ವ್ಯವಹಾರವನ್ನು ಆರಂಭಿಸಲು ಬಯಸುವಿರಿ. ಆರ್ಥಿಕ ಸಹಾಯಕ್ಕಾಗಿ ಯಾರದರೂ ನಿಮ್ಮನ್ನು ಪೀಡಿಸಬಹುದು.
ವೃಷಭ ರಾಶಿ : ಇಂದು ನೀವು ಯಾರದೋ ವಿರುದ್ಧವಾಗಿ ಹೋಗುವುದು ಬೇಡ. ಲೆಕ್ಕಪತ್ರವನ್ನು ಸರಿಯಾಗಿ ಇಟ್ಟುಕೊಳ್ಳಿ. ಕ್ರಿಯಾಶೀಲತೆಗೆ ನಿಮಗೆ ಯಾವುದೇ ಪ್ರಶಂಸೆ ಸಿಗದಿರುವುದು ನಿಮಗೆ ಕಷ್ಟವಾದೀತು. ಒತ್ತಡವು ನಿಮ್ಮ ಗಮನವನ್ನು ಬೇರೆಡೆಗೆ ಹಾಕಲು ಬಿಡದು. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ಯಾರನ್ನೋ ಸೋಲಿಸುವುದಕ್ಕೆ ನಿಮ್ಮ ಪ್ರಯತ್ನ ಬೇಡ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಉತ್ತಮ ಆರೋಗ್ಯದಿಂದ ಆನಂದಿಸುವಿರಿ. ನಿಮ್ಮವರ ಬಗ್ಗೆ ಸರಿಯಾದ ಭಾವನೆಯು ಇಲ್ಲದೇ ಇರಬಹುದು. ನಿಮ್ಮ ಈ ದಿನವು ಆತ್ಮವಿಶ್ವಾಸದಿಂದ ಇರುತ್ತದೆ. ಕುಟುಂಬದಲ್ಲಿ ನಿಮಗೆ ಪ್ರಾಮುಖ್ಯವು ಇಲ್ಲದೇ ಇರಬಹುದು.
ಮಿಥುನ ರಾಶಿ : ಇಂದು ನಿಮ್ಮ ಪೂರ್ವಜರ, ಹಿರಿಯರ ಕಾರ್ಯಗಳನ್ನು ನೆನಪಿಸಿಕೊಳ್ಳುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಇರುವುದು. ಸಂಗಾತಿಯ ಜೊತೆ ಸಂತೋಷದಿಂದ ಸಮಯವನ್ನು ಕಳೆಯುವಿರಿ. ಹೊರಗೆ ಸುತ್ತಾಡಲೂ ನಿಮಗೆ ಅವಕಾಶ ಸಿಗಬಹುದು. ಗೊತ್ತಿಲ್ಲದೇ ಯಾರ ಬಗ್ಗೆಯೂ ನಿಮ್ಮ ಮಾತುಗಳನ್ನು ಹರಿ ಬಿಡುವುದು ಬೇಡ. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಈ ದಿನ ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಆರೋಗ್ಯದ ಆರೈಕೆಯ ಬಗ್ಗೆ ಗಮನವಿರಲಿ. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಸುಲಭದ ಕೆಲಸವನ್ನು ಮೊದಲು ಮಾಡಿ, ಯಾರದ್ದಾದರೂ ಸಹಕಾರವನ್ನು ಪಡೆದುಕೊಳ್ಳಿ. ನೀವು ಎಲ್ಲರ ಜೊತೆ ಸಭ್ಯತೆಯನ್ನು ಮೀರದೇ ಮಾತನಾಡಬೇಕು. ಯಾರದೋ ಮೇಲೆ ಸಿಟ್ಟ ಮಾಡಿಕೊಳ್ಳುವಿರಿ.
ಕಟಕ ರಾಶಿ : ಎಲ್ಲರ ಜೊತೆ ಸೌಹಾರ್ದದಿಂದ ಇರುವಿರಿ. ಅಧ್ಯಾತ್ಮದ ಚಿಂತನೆಯಿಂದ ನಿಮ್ಮ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಯಾರನ್ನೂ ನೀವು ಪೂರ್ಣವಾಗಿ ನಂಬಲಾರಿರಿ. ತೊಂದರೆಗಳನ್ನು ನೀವು ಯಾರ ಜೊತೆಗೂ ಹಂಚಿಕೊಳ್ಳುವ ಮನಸ್ಸಾಗದು. ಸಂಗಾತಿಯ ಬಗ್ಗೆ ಕುತೂಹಲವಿರಬಹುದು. ಖರೀದಿಯಲ್ಲಿ ಉತ್ಸಾಹವು ಹೆಚ್ಚಿರುವುದು. ಮಾತು ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ಬೆರೆಯುವಿಕೆಯು ಕಡಿಮೆ ಆಗಬಹುದು. ನಿಮ್ಮ ತಿಳುವಳಿಕೆ ಮತ್ತು ಸಭ್ಯತೆಯಿಂದ ಎಲ್ಲರೂ ಬಹಳ ಪ್ರಭಾವಿತರಾಗಬಹುದು. ನಿಮ್ಮ ಸಮಯವನ್ನು ಬೇಡದ ಕಾರ್ಯದಿಂದ ವ್ಯರ್ಥಮಾಡಿಕೊಳ್ಳುವಿರಿ. ಅಗತ್ಯ ಕಾರ್ಯಗಳ ಬಗ್ಗೆ ಆಲೋಚಿಸಿ.
ಸಿಂಹ ರಾಶಿ : ಇಂದು ನೀವು ಎಷ್ಟೇ ಪ್ರಯತ್ನಿಸಿದರೂ ಖರ್ಚನ್ನು ಕಡಿಮೆ ಮಾಡಿಕೊಳ್ಳಲಾಗದು. ನೀವು ಕೊಟ್ಟ ಹಣವು ಬರಬೇಕಾದ ಕಡೆಯಿಂದ ಬಾರದೇ ಇರಬಹುದು. ಮರೆವಿನ ಶಕ್ತಿ ಅತಿಯಾದಂತೆ ತೋರುವುದು. ಹೂಡಿಕೆಯಲ್ಲಿ ಆಸಕ್ತಿ ಹೆಚ್ಚಾಗಬಹುದು. ಉದ್ಯೋಗದಲ್ಲಿ ನಿಮ್ಮ ಚಟುವಟಿಕೆಯು ಅಧಿಕವಾಗಿ ಇರಬಹುದು. ಕೆಲವು ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಹೊಸ ಯೋಜನೆಯನ್ನು ಪಡೆದುಕೊಳ್ಳುವಿರಿ. ನೀವು ಇಂದು ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ಯಾರಮೇಲೂ ಅವಲಂಬಿತವಾಗುವುದು ನಿಮಗೆ ಇಷ್ಟವಾಗದು. ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ. ಉತ್ತಮ ಕಾರ್ಯಕ್ಕೆ ಎಲ್ಲ ಕಡೆಯಿಂದ ಅಭಿನಂದನೆಗಳು ಹರಿದುಬರಬಹುದು. ಸರ್ಕಾರಿ ಯೋಜನೆಗೆ ಹಣ ಹೂಡುವ ಸಾಧ್ಯತೆಗಳಿವೆ. ಹಣದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ.
ಕನ್ಯಾ ರಾಶಿ : ಇಂದು ನಿಮಗೆ ಭಯಗ್ರಸ್ತ ದಿನವಾಗಲಿದೆ. ಯಾವ ಕಾರ್ಯವನ್ನೂ ಪೂರ್ಣವಾದ ಮನಸ್ಸಿನಿಂದ ಮಾಡಲಾರಿರಿ. ನಿಮ್ಮ ಬಗ್ಗೆ ನಂಬಿಕೆ ಕಡಿಮೆ ಆಗಬಹುದು. ಕುಟುಂಬದ ಬಗ್ಗೆ ನಿಮಗೆ ಹೆಮ್ಮೆ ಎನಿಸಬಹುದು. ವಿನಾಕಾರಣ ವಾಗ್ವಾದದಿಂದ ನೀವು ಬೇಸರವಾಗಬಹುದು. ಹಳೆಯ ಬಂಧುಗಳನ್ನು ಭೇಟಿಯಿಂದ ನಿಮ್ಮಲ್ಲಿ ಉತ್ಸಾವಿರುವುದು. ನೀವು ಹೊಸ ಯೋಜನೆಯ ಬಗ್ಗೆ ಅಧಿಕ ಆಲೋಚನೆ ಇರಲಿದೆ. ಸಣ್ಣ ವ್ಯಾಪಾರಿಗಳು ಅಲ್ಪ ಲಾಭವನ್ನು ಗಳಿಸುವರು. ನೀವು ಕೆಲವು ವ್ಯಾವಹಾರಿಕ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಇಂದು ಪೂರ್ಣವಾಗಿ ಕಾರ್ಯದಲ್ಲಿಯೇ ಮಗ್ನರಾಗಿರುವಿರಿ. ನಿಮ್ಮ ವ್ಯಕ್ತಿತ್ವ ನಕಾರಾತ್ಮಕವಾಗಿ ಅಳೆಯುವರು.
ತುಲಾ ರಾಶಿ : ಉದ್ಯೋಗಕ್ಕೆ ಸಂಬಂಧಿಸಿದಂತೆ ನಿಮ್ಮ ಮಾತುಗಳಿಗೆ ಪ್ರಾಶಸ್ತ್ಯ ಸಿಗಬಹುದು. ಜಟಿಲ ಸಮಸ್ಯೆಗಳನ್ನು ಸರಳಗೊಳಿಸುವಿರಿ. ನಿಮ್ಮ ಶ್ರಮಕ್ಕೆ ಗೌರವ ಸಿಗಲಿದೆ, ಸಂತೃಪ್ತಿಯು ನಿಮ್ಮ ಮನಸ್ಸಿನಲ್ಲಿ ಇರುವುದು. ಆರ್ಥಿಕವಾದ ಕೆಲವು ವಿಚಾರಗಳಲ್ಲಿ ಗೌಪ್ಯತೆಯನ್ನು ಇಟ್ಟುಕೊಳ್ಳುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ಅನಿರೀಕ್ಷಿತವಾಗಿ ದೂರದ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಸಾಮರಸ್ಯ ಹೆಚ್ಚಾಗುತ್ತದೆ. ಎಂದೋ ಬರುವ ಸಮಸ್ಯೆಗಳಿಗೆ ಇಂದು ಚಿಂತೆಪಡುವಿರಿ. ಹಣದ ಹರಿವಿನಿಂದ ನಿಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವಿರಿ. ಸಾಮಾಜಿಕ ಮನ್ನಣೆಯು ನಿಮಗೆ ಸಿಗಲಿದೆ.
ವೃಶ್ಚಿಕ ರಾಶಿ : ಇಂದಿನ ನಿಮ್ಮಕಾರ್ಯಗಳ ಬಗ್ಗೆ ಸ್ಪಷ್ಟತೆ ಇರಲಿ. ಯಾವುದನ್ನೂ ಸಡಿಲ ಮಾಡಿಕೊಳ್ಳದೇ ಮುಗಿಸಿ. ಇಂದು ನಿಮ್ಮ ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗುವ ಘಟನೆ ನಡೆಯಬಹುದು.
ನೌಕರರ ವಿಚಾರದಲ್ಲಿ ಅಸಮಾಧಾನವು ಉಂಟಾಗಬಹುದು. ಚರಾಸ್ತಿಯನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚೆಗಳು ನಡೆಯಬಹುದು. ವೃತ್ತಿಯ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ಕೋಪವನ್ನು ನಿಯಂತ್ರಣ ಮಾಡಿಕೊಳ್ಳಬೇಕು. ಸಜ್ಜನರ ಕೂಟದಲ್ಲಿ ಭಾಗವಹಿಸುವಿರಿ. ಸಂಜೆಯ ವೇಳೆಗೆ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ. ಕಠಿಣ ಪರಿಶ್ರಮದ ಆಧಾರದ ಮೇಲೆ, ಕಷ್ಟಕರವಾದ ಕೆಲಸಗಳನ್ನು ಕೂಡ ಸುಲಭವಾಗಿ ಪೂರ್ಣಗೊಳಿಸುವಿರಿ. ಬೇಕಾದಷ್ಟೇ ಮಾತನಾಡಿ ಸುಮ್ಮನಾಗುವುದು ಉತ್ತಮ.
ಧನು ರಾಶಿ : ಇಂದು ನಿಮ್ಮ ಜವಾಬ್ದಾರಿಗಳ ಬಗ್ಗೆ ಕೂಲಂಕಷದ ಅಧ್ಯಯನವನ್ನು ಮೇಲಧಿಕಾರಿಗಳು ಮಾಡಿಯಾರು. ಇಂದು ನೀವು ಯಾವುದೇ ಪ್ರತ್ಯುಪಕಾರದ ನಿರೀಕ್ಷೆ ಇಲ್ಲದೇ ಸೇವೆಯನ್ನು ಮಾಡುವಿರಿ. ನಿಮ್ಮ ಯಶಸ್ಸಿಗೆ ತೊಂದರೆಯಾಗುವ ಕೆಲಸವನ್ನು ಯಾರಾದರೂ ಮಾಡಿಯಾರು. ನಂಬಿಕೆಯನ್ನು ಉಳಿಸಿಕೊಳ್ಳುವತ್ತ ನಿಮ್ಮ ಯೋಚನೆ ಇರಲಿದೆ. ಇಂದು ನಿಮಗೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎಂದು ಮನಸ್ಸು ಹೇಳುವುದು. ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಯಬಹುದು. ಮನಸ್ಸಿಗೆ ಅಧಿಕ ವಿಶ್ರಾಂತಿಯ ಅಗತ್ಯವಿರುವುದು. ಇಂದು ಮಹಿಳೆಯರಿಗೆ ಶುಭ ದಿನ. ಪ್ರಾರ್ಥನೆಯ ಪರಿಣಾಮ ನಿಮ್ಮ ಮನಸ್ಸು ಎಂದಿಗಿಂತ ನೆಮ್ಮದಿಯಿಂದ ಇರಲಿದೆ. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ. ಅತಿಯಾದ ಆತ್ಮವಿಶ್ವಾಸದಿಂದ ಏನನ್ನಾದರೂ ಕಳೆದುಕೊಳ್ಳುವಿರಿ.
ಮಕರ ರಾಶಿ : ಇಂದು ನಿಮ್ಮ ದೇಹಕ್ಕೆ ಪೀಡೆಯು ಅಧಿಕವಾದಂತೆ ತೋರುವುದು. ಏನನ್ನೂ ಮಾಡಲಾಗದ ಸ್ಥಿತಿಯಲ್ಲಿ ನೀವು ಇರುವಿರಿ. ನಿಮ್ಮವರಿಂದ ನಿಮಗೆ ನೆಮ್ಮದಿ ಸಿಗದೇಹೋಗಬಹುದು. ಸಂಗಾತಿಯನ್ನು ಜೊತೆ ಹೊಸ ಉದ್ಯಮವನ್ನು ಆರಂಭಿಸುವ ಹುನ್ನಾರ ನಡೆಯಲಿದೆ. ದೈಹಿಕವಾಗಿ ಸದೃಢವಾಗಿರಲು ನಿಮ್ಮ ಪ್ರಯತ್ನ ಅತಿ ಮುಖ್ಯ. ಆದಾಯದಲ್ಲಿಯೂ ನಿಮಗೇ ಪೂರ್ಣತೃಪ್ತಿ ಇರದು. ಸಂಗಾತಿಯ ಸೂಕ್ಷ್ಮ ಭಾವಕ್ಕೆ ಪೆಟ್ಟು ಬೀಳಬಹುದು. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಬಾಕಿ ಇರುವ ಕೆಲಸದ ಕಡೆ ನಿಮ್ಮ ಗಮನ ಅವಶ್ಯಕ. ಗುರಿಯನ್ನು ಆದಷ್ಟು ಬೇಗ ಮುಟ್ಟಿ. ನಿಮ್ಮ ತಪ್ಪನ್ನು ಯಾರ ಮೇಲೋ ಹಾಕುವಿರಿ. ನೀವು ಉತ್ತಮ ಆರ್ಥಿಕ ಯೋಜನೆಯನ್ನು ಮಾಡಬಹುದು. ನಿರುದ್ಯೋಗವು ನಿಮ್ಮನ್ನು ಕಾಡಬಹುದು.
ಕುಂಭ ರಾಶಿ : ನಿಮ್ಮ ಸ್ವಂತಿಕೆಯನ್ನು ಬಿಟ್ಟುಕೊಡಲು ಹೋಗುವುದು ಬೇಡ. ಏನೇ ಆದರೂ ನಿಮ್ಮ ಸ್ಥಾನದಲ್ಲಿ ನೀವಿರಿ. ಉದ್ಯೋಗದಲ್ಲಿ ಕೆಲವು ಸವಾಲುಗಳು ಬರಬಹುದು. ಇಂದಿನ ಹಣದ ಅಗತ್ಯತೆಯನ್ನು ಸ್ನೇಹಿತರ ಮೂಲಕ ಪಡೆದುಕೊಳ್ಳುವಿರಿ. ಸ್ವಂತ ವ್ಯಾಪಾರದಲ್ಲಿ ಅಧಿಕ ಆದಾಯವಿದ್ದರೂ ಹಿನ್ನಡೆಯಂತೆ ತೋರುವುದು. ಆಹಾರದಲ್ಲಿ ಕ್ರಮವನ್ನು ಇಟ್ಟುಕೊಂಡು ಆರೋಗ್ಯವನ್ನು ವೃದ್ಧಿಸಿಕೊಳ್ಳುವಿರಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ. ಅಸಾಧ್ಯವನ್ನು ನೀವು ಸಾಧಿಸುವ ಪ್ರಯತ್ನ ಮಾಡುವಿರಿ. ಸ್ತ್ರೀಸಂಬಂಧವಾಗಿ ಜಾಗರೂಕತೆಯಿಂದ ಇರಿ.
ಮೀನ ರಾಶಿ : ಇಂದು ನಿಮ್ಮ ಮಾತಿಗೆ ಅಪರಿಚಿತರೂ ಮೂಕವಿಸ್ಮತರಾದಾರು. ಮಕ್ಕಳ ವ್ಯವಹಾರಕ್ಕೆ ಬೇಕಾದ ಹಣಕಾಸು ನೆರವನ್ನು ನಿಜವು ನೀಡುವಿರಿ. ಹಳೆಯ ವಾಹನಗಳ ಮಾರಾಟದ ಚಿಂತನೆ ಮಾಡುವಿರಿ. ಹೂಡಿಕೆಯಲ್ಲಿ ಆದ ಲಾಭವನ್ನು ನೀವು ಪಡೆಯುವಿರಿ. ಕೈ ತಪ್ಪಿ ಹೋಗಿದೆ ಎಂದುಕೊಂಡಿದ್ದ ಯೋಜನೆಗಳು ಸಿಗಬಹುದು. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ಅತಿಯಾದ ಓಡಾಟವನ್ನು ನಿಲ್ಲಿಸಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ. ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬಹುದು. ಎಲ್ಲೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು. ಈ ದಿನವು ನಿಮಗೆ ಆಲಸ್ಯದಂತೆ ತೋರುವುದು.