Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 11ರ ದಿನಭವಿಷ್ಯ 

|

Updated on: Apr 11, 2023 | 5:41 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 11ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 11ರ ದಿನಭವಿಷ್ಯ 
ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 11ರ ದಿನಭವಿಷ್ಯ 
Image Credit source: Parenting.Firstcry.Com
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 11ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಆಸ್ಪತ್ರೆಗಳಿಗೆ ಓಡಾಟ ಮಾಡಬೇಕಾಗುತ್ತದೆ. ಕೆಲವು ಗೊಂದಲಗಳು ಸಹ ಏರ್ಪಡಬಹುದು. ಸೋಷಿಯಲ್ ಮೀಡಿಯಾ ಹೆಚ್ಚಿಗೆ ಬಳಸುವವರಾಗಿದ್ದಲ್ಲಿ ಈ ದಿನ ಪೋಸ್ಟ್, ಕಾಮೆಂಟ್‌ಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಏಕಕಾಲಕ್ಕೆ ನಿಮ್ಮ ವಿರುದ್ಧ ಹಲವರು ವೈಯಕ್ತಿಕ ದಾಳಿಗೆ ಇಳಿಯಬಹುದು. ಎಲೆಕ್ಟ್ರಿಕಲ್ ಸ್ಕೂಟರ್, ಕಾರು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡುತ್ತೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಹಳೇ ಹೂಡಿಕೆಗಳು ಫಲ ನೀಡಲಿದೆ. ಶ್ರಮವನ್ನು ಇತರರು ಗುರುತಿಸಿ, ಮೆಚ್ಚುಗೆ ಸೂಚಿಸಲಿದ್ದಾರೆ. ವ್ಯಾಲೆಟ್‌, ಡಿಜಿಟಲ್ ಕರೆನ್ಸಿಗಳನ್ನು ಬಳಸುವವರು ಸೈಬರ್ ಸೆಕ್ಯೂರಿಟಿ ಬಗ್ಗೆ ಜಾಗ್ರತೆ ವಹಿಸಿ. ಡಯಟಿಷಿಯನ್ ವೃತ್ತಿಯಲ್ಲಿ ಇರುವವರಿಗೆ ಏಳ್ಗೆ ಇದೆ. ಹೋಟೆಲ್ ಉದ್ಯಮದಲ್ಲಿ ಇರುವವರಿಗೆ ಲಾಭದ ಪ್ರಮಾಣ ಕಡಿಮೆ ಆಗಲಿದೆ. ಟ್ರಾವೆಲ್‌ ಏಜೆಂಟ್‌ಗಳಿಗೆ ಹೊಸ ಜನರ ಸಂಪರ್ಕ ದೊರೆಯಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ, ಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು. ನೀವು ಅಂದುಕೊಂಡಂತೆ ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು ಇತ್ಯಾದಿ ಶುಭ ಫಲಗಳನ್ನು ಈ ದಿನ ಕಾಣಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹೊಸ ಯೋಜನೆಗಳು, ದೊಡ್ಡ ಮೊತ್ತದ ಹಣ ಹಾಕಿ ಮಾಡುವ ವ್ಯಾಪಾರ- ವ್ಯವಹಾರಗಳನ್ನು ಮಾಡದಿರಿ. ಸಂಸಾರದಲ್ಲಿ ಸಂತೋಷ, ನೆಮ್ಮದಿಯ ವಾತಾವರಣ ಇರುತ್ತದೆ. ಆಸ್ತಿ- ವಾಹನಗಳ ಖರೀದಿಗೆ ಅನುಕೂಲ, ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರುವವರ ಜತೆಗೆ ನಿಮ್ಮ ಸ್ನೇಹ- ಸಂಬಂಧ ವೃದ್ದಿ ಆಗುವುದು. ಇತರರ ವೈಯಕ್ತಿಕ ವಿಚಾರಗಳಿಗೆ ತಲೆ ಹಾಕಲು ಹೋಗಬೇಡಿ. ಒಂದು ವೇಳೆ ನೆರವು ಕೇಳಿ ಬಂದರೂ ಸನ್ನಿವೇಶವನ್ನು ಅಳೆದು- ತೂಗಿ ನಿರ್ಧಾರ ಕೈಗೊಳ್ಳಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಹೊಸ ವಿಷಯಗಳನ್ನು ಕಲಿತುಕೊಳ್ಳಲಿದ್ದೀರಿ. ವಸ್ತ್ರಾಭರಣ ಖರೀದಿಸಲಿದ್ದೀರಿ. ಗುರು- ಹಿರಿಯರ ಆಶೀರ್ವಾದ ಇರಲಿದೆ. ಸ್ನೇಹಿತರು- ಬಂಧುಗಳು ಹಣಕಾಸಿನ ನೆರವು ನೀಡಬಹುದು. ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಯಾರಿಗೂ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ. ಪಾರ್ಟಿಗಳಲ್ಲಿ ಭಾಗೀ ಆಗಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕೃತಕ ಗರ್ಭಧಾರಣೆ ಮೂಲಕ ಸಂತಾನಕ್ಕೆ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ತಹಬಂದಿಗೆ ಬರಲಿದೆ. ತೀರ್ಥಕ್ಷೇತ್ರಗಳನ್ನು ದರ್ಶನ ಮಾಡಬೇಕು ಎಂದುಕೊಂಡಿರುವವರು ಸ್ವಲ್ಪ ಮುಂದಕ್ಕೆ ಹಾಕಬೇಕಾದ ಸಂದರ್ಭ ಎದುರಾಗಬಹುದು. ಸ್ವಂತ ಉದ್ಯೋಗಗಳನ್ನು ಮಾಡುತ್ತಿರುವವರಿಗೆ ಕುಟುಂಬ ನಿರ್ವಹಣೆ- ಸಾಲ ಮರುಪಾವತಿಯಲ್ಲಿ ಸ್ವಲ್ಪ ಏರುಪೇರಾಗುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕ್ರೆಡಿಟ್ ಕಾರ್ಡ್ ಬಿಲ್, ಇಎಂಐಗಳನ್ನು ಸರಿಯಾದ ದಿನಾಂಕದಲ್ಲಿ ಪಾವತಿ ಮಾಡಿದ್ದೀರಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉನ್ನತ ಸ್ಥಾನಮಾನ, ಜವಾಬ್ದಾರಿಗಳನ್ನು ವಹಿಸಲಾಗುತ್ತದೆ. ಇನ್ನು ಹೋಮ್ ಲೋನ್, ವಾಹನ ಲೋನ್‌ಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಬ್ಯಾಂಕ್‌ಗಳಲ್ಲಿ ಸಾಲ ದೊರೆಯುವ ಸಾಧ್ಯತೆ ಇದೆ. ಮಹಿಳೆಯರು ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಗ್ಯಾಸ್ ಸಿಲಿಂಡರ್ ಬಳಕೆಯನ್ನು ಎಚ್ಚರಿಕೆಯಿಂದ ಮಾಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಒಂದಲ್ಲ ಒಂದು ಕೆಲಸದ ಪ್ರಗತಿ ಬಗ್ಗೆ ನಿಮ್ಮ ಬಳಿ ವಿಚಾರಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಅವಿವಾಹಿತರಿಗೆ ಸೂಕ್ತ ಸಂಬಂಧ ಒದಗಿ ಬರುವ ಅವಕಾಶ ಇದೆ. ಅನಿಸಿದ್ದನ್ನು ಹೇಳುತ್ತೀನಿ ಎಂಬ ಧೋರಣೆಯಿಂದ ಇತರರಿಗೆ ಬೇಸರ ಮಾಡದಿರಿ. ಮಹತ್ವ ಅಲ್ಲದ ವಿಚಾರವೊಂದನ್ನು ಮನಸ್ಸಿಗೆ ಹಚ್ಚಿಕೊಂಡು ಚಿಂತೆ ಪಡುತ್ತೀರಿ. ಧಾರ್ಮಿಕ ನಾಯಕರಿಗೆ ದೇಹಾಲಸ್ಯ ಆಗುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸೈನ್ಯ, ಆರಕ್ಷಕ ಇಲಾಖೆಯಲ್ಲಿ ಇರುವವರಿಗೆ ವರ್ಗಾವಣೆ ಬಗ್ಗೆ ಮುನ್ಸೂಚನೆ ದೊರೆಯಲಿದೆ. ಬೆಳವಣಿಗೆಗಳು ನಿಧಾನ ಆಗಲಿವೆ. ಕೆಲವು ಕೆಲಸಗಳು ಈಗಾಗಲೇ ಅರ್ಧ ಮುಗಿದಾಗಿದ್ದರೂ ಮೊದಲಿಂದ ಆರಂಭಿಸಬೇಕಾಗಬಹುದು. ಆದರೆ ಬೇಸರ ಆಗಬೇಡಿ, ನಿಮ್ಮ ಕೆಲಸದಲ್ಲಿ ಯಶಸ್ಸು, ಕೀರ್ತಿ ಹಾಗೂ ಲಾಭ ಮೂರು ಸಿಗುವ ಸಾಧ್ಯತೆ ಇದೆ. ಕಮಿಷನ್ ಆಧಾರದ ವೃತ್ತಿಯಲ್ಲಿ ಇರುವವರಿಗೆ ಸವಾಲಿನ ದಿನವಾಗಿರುತ್ತದೆ.

ಲೇಖನ- ಎನ್‌.ಕೆ.ಸ್ವಾತಿ