Daily Horoscope: ಈ ರಾಶಿಯ ರಾಜಕಾರಣಿಗಳು ಇಂದು ಗೆಲ್ಲುವ ತಂತ್ರವನ್ನು ಹೂಡುವರು

ಇಂದಿನ (2023 ಏಪ್ರಿಲ್​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಈ ರಾಶಿಯ ರಾಜಕಾರಣಿಗಳು ಇಂದು ಗೆಲ್ಲುವ ತಂತ್ರವನ್ನು ಹೂಡುವರು
ಇಂದಿನ ರಾಶಿ ಭವಿಷ್ಯImage Credit source: Freepik
Follow us
Rakesh Nayak Manchi
|

Updated on: Apr 11, 2023 | 5:00 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 11) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ : ಚೈತ್ರ, ಪಕ್ಷ : ಕೃಷ್ಣ, ವಾರ : ಮಂಗಳ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ವರಿಯಾನ್, ಕರಣ : ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 11:01ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 02:06ರ ವರೆಗೆ.

ಮೇಷ: ಇಂದು ನಿಮಗೆ ಹೊಸತನ್ನೇನಾದರೂ ಮಾಡುವ ಮನಸ್ಸಿದ್ದರೂ ಬೇಕಾದ ವ್ಯವಸ್ಥೆ, ಪರಿಸ್ಥಿತಿಗಳು ಇಲ್ಲದೇ ನಿಲ್ಲಿಸಬೇಕಾದೀತು. ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಗೊಂದಲಗಳು ಎದುರಾಗುವುದು. ಉದ್ಯೋಗದಲ್ಲಿ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ. ಗೊಂದಲಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ತೀರ್ಮಾನಕ್ಕೆ ಬರದೇ ಅನುಭವಿಸಬೇಕಾಗಬಹುದು. ಅನುಭವಿಗಳ ಮಾರ್ಗದರ್ಶನ ಪಡೆಯಿರಿ. ಹಣವನ್ನು ಉಳಿಸಲು ಯತ್ನಿಸುವಿರಿ. ಅದು ಬಂದರೂ ಗೊತ್ತಾಗದಂತೆ ಖಾಲಿಯಾಗುವುದು. ಮಾತನ್ನು ಹಿತವೂ ಮಿತವೂ ಆಗುವಂತೆ ಮಾಡಿ.

ವೃಷಭ: ಇಂದು ನ್ಯಾಯಾಲಯದಲ್ಲಿ ತೀರ್ಪು ಬರಲಿದೆ. ಎಂತಹದೇ ತೀರ್ಮಾನಬಂದರೂ ಸ್ವೀಕರಿಸಿ‌. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಅನಿವಾರ್ಯವಾಗಿ ಸಾಲವನ್ನು ಮಾಡಬೇಕಾಗಿಬರಬಹುದು. ಮನೆಯಿಂದ ದೂರವಿರುವ ನೀವು ಬೇಸರಗೊಳ್ಳುವಿರಿ. ನಿಮ್ಮ ಸ್ನೇಹಿತರು ನಿಮ್ಮ ಗುಟ್ಟನ್ನು ಹೊರಹಾಕಿಯಾರು. ಧಾರ್ಮಿಕವಾಗಿ ಆಸಕ್ತಿಯನ್ನು ಇಟ್ಟುಕೊಳ್ಳುವಿರಿ. ಕಾಲು ನೋವು ಕಾಣಿಸಿಕೊಂಡೀತು. ಹಿರಿಯರಿಂದ ಆಶೀರ್ವಾದವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಲಾಭಗಳಿಸಬಹುದಾಗಿದೆ‌. ಭೂವರಾಹಸ್ತೋತ್ರವನ್ನು ಪಠಿಸಿ.

ಮಿಥುನ: ಹಣಕಾಸಿನ ವಿಚಾರವಾಗಿ ದಾಂಪತ್ಯದಲ್ಲಿ ಸಣ್ಣ ಕಲಹವಾಗಬಹುದು. ಯಾರದೋ ಮಾತಿನ ಆಧಾರದ ಮೇಲೆ ನೀವು ನಿಮ್ಮವರನ್ನು ದ್ವೇಷಿಸಬಹುದು. ಉದ್ಯೋಗದಲ್ಲಿ ಒತ್ತಡವಿದ್ದು ಅದನ್ನು ನಿಭಾಯಿಸುವ ಕ್ರಮವನ್ನು ಕಲಿತುಕೊಳ್ಳಿ. ನಿಮ್ಮ ಕೆಲಸಕ್ಕೆ ಅಕಸ್ಮಾತ್ ತೊಂದರೆಗಳು ಬರಬಹುದು.‌ ಎಲ್ಲವನ್ನೂ ಸಮಾನಮನಸ್ಸಿನಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳುವಿರಿ. ಆಪ್ತರ ಜೊತೆ ಒಂದಿಷ್ಟು ಸಮಯವನ್ನು ಕಳೆಯಬಹುದು. ಕುಟುಂಬದಲ್ಲಿ ಭಿನ್ನಮತ ಇರಲಿದೆ‌.

ಕರ್ಕ: ನಿಮ್ಮ ಮತ್ತು ಮೇಲಧಿಕಾರಿಗಳ ನಡುವೆ ಮನಸ್ತಾಪವುಂಟಾಗಬಹುದು. ಇದನ್ನು ಮಾತುಕತೆಯ ಮೂಲಕ ಸರಿ ಮಾಡಿಕೊಳ್ಳುವುದು ಉಚಿತ. ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಸಿಗಲಿದೆ. ಇಂದು ಬೇಸರಗೊಳ್ಳುವ ವಿಚಾರಗಳು ಬರಬಹುದು. ಸುಖ ಹಾಗೂ ದುಃಖವನ್ನು ಸಮವಾಗಿ ತೆಗರಲೆದುಕೊಳ್ಳಬೇಕಾದೀತು. ಅತಿಯಾದ ಸೌಖ್ಯವನ್ನು ಪಡೆತಲು ಹೋಗಿ ಅನಾಹುತವನ್ನು ಮಾಡಿಕೊಳ್ಳಬಹುದು. ಸಣ್ಣ ಸಮಸ್ಯೆಯನ್ನು ದೊಡ್ಡದುಮಾಡಿಕೊಳ್ಳಲಿದ್ದೀರಿ. ಬಂಧುಗಳು ನಿಮ್ಮ ಸಹಾಯಕ್ಕೆ ಬರಬಹುದು.

ಸಿಂಹ: ನಿಮಗೆ ಬರಬೇಕಾದ ಹಣದ ಕುರಿತು ಲೆಕ್ಕವಿರಲಿ. ಕೆಲಸದಲ್ಲಿ ಆಲಸ್ಯ ಮಾಡಿ ಬರಬೇಕಾದುದನ್ನು ಕಳೆದುಕೊಳ್ಳುವಿರಿ. ಯೋಗ್ಯರ ಜೊತೆ ನಿಮ್ಮ ಮಾತುಕತೆಗಳು ಇರಲಿ. ಇಲ್ಲದಿದ್ದರೆ ಅಪಮಾನವಾದೀತು. ಅಮೂಲ್ಯವಸ್ತುವೊಂದನ್ನು ನಷ್ಟಮಾಡಿಕೊಳ್ಳುವಿರಿ. ದುಃಖಿಸುವ ಅಗತ್ಯವಿಲ್ಲ. ಇನ್ನಷ್ಟು ಉತ್ತಮವಾದುದನ್ನು ನೀಡಲು ಸಂಭವಿಸಿರಬಹುದು ಎಂದು ಭಾವಿಸಿ. ಮನಸ್ಸಿನ ನೆಮ್ಮದಿಯು ಕೆಡಬಹುದು. ಆಗದೇ ಇರುವ ಕೆಲಸಕ್ಕೆ ಬೇಸರ ಬೇಡ.

ಕನ್ಯಾ: ವಾಹನ ಅಪಘಾತವು ಆಗಬಹುದು, ಜಾಗರೂಕತೆಯಿಂದ ಇರಿ. ಹೊರಗೆ ಆಹಾರವನ್ನು ಸ್ವೀಕರಿಸಬೇಕು ಎನ್ನುವ ಆಸೆಯು ನಿಮಗಿದ್ದರೂ ಆರೋಗ್ಯವನ್ನು ಗಮನಿಕೊಳ್ಳಬೇಕಾಗುವುದು. ಕೃಷಿಕರು ತಾವು ಬೆಳೆದ ಬೆಳೆಯಿಂದ ನಷ್ಟವನ್ನು ಅನುಭವಿಸುವಿರಿ. ನಿಮ್ಮನ್ನು ಹಾದಿ ತಪ್ಪಿಸಲು ಪ್ರಯತ್ನಿಸಿದ ವ್ಯಕ್ತಿಗಳು ನಿಮ್ಮ ಸಾಧನೆಯನ್ನು ಕಂಡು ಕೊರಗಬಹುದು. ನೀವೇ ನಿರ್ಮಿಸಿಕೊಂಡ ಯಶಸ್ಸಿನ ಮೆಟ್ಟಿಲನ್ನು ಅನಾಯಾಸದಿಂದ, ಆನಂದದಿಂದ ಇರುವಿರಿ. ಅಕಾರಣ ಸಿಟ್ಟು ನಿಮ್ಮ ದಿನವನ್ನು ಹಾಳು ಮಾಡುವುದು.

ತುಲಾ: ಸರ್ಕಾರದ ಕೆಲಸಗಳು ನಿಧಾನವಾಗಲಿದೆ. ಮತ್ತೆ ಮತ್ತೆ ಬರುವ ಸಂಕಷ್ಟಕ್ಕೆ ದೈವಕ್ಕೆ ಮೊರೆ ಹೋಗಬೇಕಾಗುವುದು. ಪ್ರತಿಕೂಲ ವಾತಾವರಣದಲ್ಲಿಯೂ ನಿಮಗೆ ಅನುಕೂಲಕರ ವಾತಾವರಣ ಇರಲಿದೆ. ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿ ಸಿಗುವ ದಿನ. ದಾಂಪತ್ಯದಲ್ಲಿ ಸುಖವಿರಲಿದೆ. ಖಾಸಗಿ ಉದ್ಯೋಗಿಗಳಿಗೆ ತೊಂದರೆಯಾಗಬಹುದು. ಕುಟುಂಬದಲ್ಲಿ ನಿಮ್ಮನ್ನು ಸರಿಯಾಗಿ ಮಾತನಾಡಿಸದೇ ಇರಬಹುದು. ಸುತ್ತಾಟದಿಂದ ಆಯಾಸವಾಗಬಹುದು. ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇರಲಿದೆ.

ವೃಶ್ಚಿಕ: ರಾಜಕಾರಣಿಗಳು ಗೆಲ್ಲುವ ತಂತ್ರವನ್ನು ಹೂಡುವರು. ನೂತನ ವಿದ್ಯುತ್ ಉಪಕರಣವನ್ನು ಖರೀದಿಸುವಿರಿ. ವಾಹನವು ರಿಪೇರಿಗೆ ಬರಲಿದೆ. ಹಣವೂ ನಷ್ಟವಾಗುವುದು. ನಿಮ್ಮದಲ್ಲದ ವಸ್ತುವಿಗೆ ಕೈ ಹಾಕುವುದನ್ನು ಬಿಡಿ. ಕಳ್ಳತನದ ಅಪವಾದವನ್ನು ಹೊತ್ತುಕೊಳ್ಳುವಿರಿ. ಸಂಗಾತಿಯ ಬೇಸರವನ್ನು ದೂರ ಮಾಡಲು ಎಲ್ಲಿಯಾದರೂ ದೂರ ಕರೆದುಕೊಂಡು ಹೋಗಿ. ಸುಂದರ ಸ್ಥಳಗಳನ್ನು ನೋಡಿಬನ್ನಿ. ನಿಮಗೆ ಇಂದಿನ ಕಾರ್ಯವು ಸಫಲವಾಗಬೇಕಿದ್ದರೆ ಪಶ್ಚಿಮದಿಕ್ಕಿಗೆ ಮುಖಮಾಡಿ ಹೊರಡಿ.

ಧನುಸ್ಸು: ಮಕ್ಕಳ ಮುಂದಿನ ವಿದ್ಯಾಭ್ಯಾಸದ ಚಿಂತೆ ಇರಲಿದೆ. ಒತ್ತಾಯ ಪೂರ್ವಕವಾಗಿ ನಿಮಗೆ ಇಚ್ಛೆಯಿರುವ ವಿಷಯವನ್ನು ಹೇರಬೇಡಿ. ಆಯ್ಕೆ ಮಾಡಲು ಅವರಿಗೆ ಸ್ವಾತಂತ್ರ್ಯವಿರಲಿ. ದೊಡ್ಡ ಸಮಾರಂಭಕ್ಕೆ ಭೇಟಿ ಕೊಡುವಿರಿ. ಅನವಶ್ಯಕವಾಗಿ ಖರೀದಿಸಿದ ವಿದ್ಯುದುಪಕರಣಗಳಿಂದ ಹಣವ್ಯಯವಾಗಲಿದೆ. ನಿಮ್ಮ ಬಗ್ಗೆ ನಿಮಗಾಗದವರು ಅಫ್ರಚಾರವನ್ನು ಮಾಡುವರು. ಇದರಿಂದ ನಿಮಗೆ ನಿರಾಸೆಯಾಗಲಿದೆ. ಬಹಳ ಬೇಸರಗೊಳ್ಳುವಿರಿ. ಹಣವೂ ನಷ್ಟ ಶ್ರಮವೂ ನಷ್ಟವಾಗಿ ದುಃಖಿಸುವಿರಿ.

ಮಕರ: ವಿಧಿಯನ್ನು ಹಳಿದು ನಿಮಗೆ ಸಮಾಧಾನವನ್ನು ತಂದುಕೊಳ್ಳುವಿರಿ. ನಿಮ್ಮ ಮಾತುಗಳಿಂದ ಕೆಲವರು ಪ್ರೇರಣೆ ಪಡೆದರೆ, ಕೆಲವರು ನಿಮ್ಮ ಮಾತನ್ನೇ ಆಡಿಕೊಳ್ಳುವರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತಲ್ಲೀನರಾಗಿ ಹೊರ ಜಗತ್ತನ್ನು ಮರೆಯುವರು. ಸ್ವಲ್ಪ ವಿಶ್ರಾಂತಿಯನ್ನು ಕೊಟ್ಟು ಓದುವುದು ಯೋಗ್ಯ. ಮನೆ ಮತ್ತು ಉದ್ಯೋಗವೆಂದು ಅಲೆಯುತ್ತಿದ್ದರೆ ಸ್ವಲ್ಪ ದಿನ ವಿರಾಮ ಪಡೆದು ಆಮೇಲೆ ಹೋಗಿ. ಕೆಲಸವು ಚೆನ್ನಾಗಿ, ಉತ್ಸಾಹದಿಂದ ನಡೆಯುವುದು. ನಿಮ್ಮ ವಿರುದ್ಧ ಮಾತನಾಡಿದವರಿಗೆ ಇಂದು ಕಾಲವೇ ಉತ್ತರಿಸುವುದು.

ಕುಂಭ: ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ತೆಗೆದುಹಾಕಿ. ಧನಾತ್ಮಕ ಅಂಶಗಳನ್ನು ಹುಡುಕಿ ಮುನ್ನಡೆಯಿರಿ. ದಾರಿ ತಾನಾಗಿಯೇ ತೆರದುಕೊಳ್ಳುವುದು. ಆಸ್ತಿಯ ವಿಚಾರವಾಗಿ ಮಾತುಗಳು ನಡೆಯುವುದು. ನಿಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡಿ, ಆದರೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಕಲಾವಿದರಿಗೆ ತಿಳಿವಳಿಕಯಿಂದ‌ ಕೂಡಿದ ನಿಮ್ಮ ಜೀವನ ಸುಗಮವಾಗಲಿದೆ. ನೀವು ಸಹಾಯ ಮಾಡುತ್ತೀರೆಂಬ ನಂಬಿಕೆಯಿಂದ ಜನರು ನಿಮ್ಮ ಬಳಿ ಕೇಳುವರು. ಶನೈಶ್ಚರನು ನಿಮಗೆ ಇಂತಹ ಸಂದರ್ಭವನ್ನೂ ತರುವನು. ಅದನ್ನು ಸರಿಯಾಗಿ ನಿಭಾಯಿಸಿ.

ಮೀನ: ಭವಿಷ್ಯಕ್ಕೆ ಕೂಡಿಟ್ಟ ಹಣವು ಇಂದು ನಿಮ್ಮ ಸಮಯಕ್ಕೆ ಸರಿಯಾಗಿ ಸಿಗುವುದು. ನಿಮ್ಮಿಂದ ಪ್ರೀತಿಯನ್ನು ಬಯಸುವವರಿಗೆ ಪ್ರೀತಿಯನ್ನು ಕೊಡಿ. ನಿರೀಕ್ಷಿತ ವ್ಯಕ್ತಿಗಳ ಭೇಟಿಯಿಂದ ಸಂತಸವಾಗಲಿದೆ. ಅವರ ಜೊತೆ ನಿಮ್ಮ ಕನಸನ್ನು ಹಂಚಿಕೊಳ್ಳುವಿರಿ. ನಿಮ್ಮ ಕೆಲಸವು ನಿಧಾನವಾಗಿ ಸಾಗುವುದು. ಇಂದಿನ ಸನ್ನಿವೇಶವನ್ನು ನಿಭಾಯಿಸುವ ಸಾಮರ್ಥ್ಯವು ಕಂಡು ಸಹೋದ್ಯೋಗಿಗಳು ಆಶ್ಚರ್ಯಪಡುವರು. ವಿದ್ಯಾಭ್ಯಾಸವನ್ನು ಮುಗಿಸಿದ ನಿಮಗೆ ಕೆಲಸವೂ ಶೀಘ್ರವಾಗಿ ಸಿಗಲಿದೆ.

-ಲೋಹಿತಶರ್ಮಾ ಇಡುವಾಣಿ