ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 27ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಸ್ನೇಹಿತರು ತರುವ ಪ್ರಾಜೆಕ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸಿ. ಮೇಲುನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನ ಅನುಕೂಲ ಇದರಿಂದ ಆಗಲಿದೆ. ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ. ತೀರ್ಥಕ್ಷೇತ್ರ ಪ್ರಯಾಣಗಳಿಗೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಹೋಟೆಲ್ ಉದ್ಯಮಿಗಳಿಗೆ ಬ್ಯಾಂಕಿಂಗ್ ವ್ಯವಹಾರಗಳು ಏನಾದರೂ ಇದ್ದಲ್ಲಿ ಅದು ಪೂರ್ಣಗೊಳ್ಳುವ ಅವಕಾಶ ಇದೆ.
ಆಂಜನೇಯ ಸ್ವಾಮಿ ಆರಾಧನೆ ಮಾಡುವುದರಿಂದ ನಿಮಗೆ ಈ ದಿನ ನೆಮ್ಮದಿ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಶುಭ ಕಾರ್ಯಗಳಿಗೆ ಹಣ ಹೊಂದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ವಾಹನ ಓಡಿಸುವಾಗ ಒಂದಿಷ್ಟು ಎಚ್ಚರ ವಹಿಸುವುದು ಮುಖ್ಯ. ಪಾಸ್ ವರ್ಡ್, ಎಟಿಎಂ ಪಿನ್ ಕೋಡ್ ಇಂಥವುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಏಕೆಂದರೆ ಇಂಥವುಗಳಿಂದಲೇ ಹಣವನ್ನು ನಷ್ಟ ಅನುಭವಿಸಬಹುದು.
ಪಬ್, ರೆಸ್ಟೋರೆಂಟ್‌ಗಳು, ಮಲ್ಟಿಪ್ಲೆಕ್ಸ್‌ಗಳು ಇಂಥ ಕಡೆ ಈ ದಿನ ನಿಮಗೆ ಖರ್ಚಾಗುವ ಯೋಗ ಇದೆ. ಇನ್ನು ಬಟ್ಟೆ ವಿಚಾರದಲ್ಲೂ ಒಂದಿಷ್ಟು ಧಾರಾಳವಾಗಿ ಖರ್ಚಾಗಬಹುದು. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ನಿಗಾ ಇಡಿ. ದಿನದ ದ್ವಿತೀಯಾರ್ಧದಲ್ಲಿ ಸೊಗಸಾದ ಆಹಾರ ತಿನಿಸುಗಳನ್ನು ಸವಿಯುವ ಯೋಗ ಇದೆ. ಹೊಸ ವಾಹನ ಖರೀದಿಗಾಗಿ ಅಡ್ವಾನ್ಸ್ ಮಾಡುವ ಅಥವಾ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವ ಯೋಗ ಇದೆ.
ಉದ್ಯೋಗ ಸ್ಥಳದಲ್ಲಿ ಈ ದಿನ ಸಣ್ಣ ಸುಳ್ಳನ್ನು ಸಹ ಹೇಳದಿರಿ. ಹೀಗೆ ಮಾಡಿದಲ್ಲಿ ಇದಕ್ಕೆ ಭಾರೀ ಬೆಲೆಯನ್ನು ತೆರಬೇಕಾಗುತ್ತದೆ. ಈ ದಿನ ಕಾಯುವಿಕೆ ನಿಮಗೆ ಬೇಸರ ತರಿಸಬಹುದು. ಇಂಥ ಸಮಯಕ್ಕೆ ಬರುತ್ತೀನಿ ಎಂದವರು ಬಾರದೇ ಇರಬಹುದು ಅಥವಾ ತಡವಾಗಬಹುದು. ಇನ್ನು ಉಪಾನ್ಯಾಸಕರು, ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಗೌರವ- ಸಮ್ಮಾನಗಳು ದೊರೆಯುವ ದಿನ ಇದಾಗಿರಲಿದೆ. ಬೆನ್ನು ನೋವಿನ ಸಮಸ್ಯೆ ಕಾಡಬಹುದು, ಎಚ್ಚರ ಇರಲಿ.
ಯಾವುದೋ ಹಳೆಯ ವಿಚಾರವೊಂದು ನಿಮ್ಮನ್ನು ಈ ದಿನ ವಿಪರೀತ ಕಾಡಲಿದೆ. ದಾಕ್ಷಿಣ್ಯಕ್ಕೆ ಸಿಲುಕಿ ಯಾರಿಗಾದರೂ ಜಾಮೀನು ನೀಡುವುದಾಗಿ ಮಾತು ನೀಡಬೇಡಿ. ಏಕೆಂದರೆ ಈ ಕಾರಣಕ್ಕೆ ನಿಮ್ಮ ಸ್ನೇಹಕ್ಕೆ ಅಥವಾ ಸಂಬಂಧಕ್ಕೆ ತಡೆಯಾಗಿ ಪರಿಣಮಿಸಬಹುದು. ಇನ್ನು ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ. ಜ್ಯೋತಿಷಿಗಳು, ಪುರೋಹಿತರಿಗೆ ದೂರ ಪ್ರಯಾಣದ ಯೋಗ ಇದ್ದು, ದಿಢೀರನೆ ಹೊರಡಬೇಕಾಗಿ ಬರುವುದರಿಂದ ಕೆಲವು ಕೆಲಸ- ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ.
ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಈ ದಿನ ಖರ್ಚು ಹಾಗೂ ಸಂತೋಷ ಎರಡೂ ಒಟ್ಟೊಟ್ಟಿಗೆ ಇದೆ. ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕ್ರಿಯೇಟಿವ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದಿಷ್ಟು ಒತ್ತಡ ಸೃಷ್ಟಿ ಆಗಬಹುದು. ಆದರೆ ಅದರಿಂದ ಬೇಜಾರಾಗಿ, ಅದರ ಪರಿಣಾಮ ನಿಮ್ಮ ಕೆಲಸದ ಮೇಲೆ ಆಗದಂತೆ ನೋಡಿಕೊಳ್ಳಿ. ಕ್ರೆಡಿಟ್ ಕಾರ್ಡ್ ಬಳಸುವವರು ಪಾವತಿ ದಿನಾಂಕವನ್ನು ಸರಿಯಾಗಿ ಗಮನಿಸಿಕೊಳ್ಳಿ.
ಎಲ್ಲವನ್ನೂ ಮುಂಚೆಯೇ ಹೇಳಿಬಿಟ್ಟಿದ್ದೀರೇನೋ ಎಂಬಂತೆ ನಿಮ್ಮ ಮನಸಿನ ಮಾತುಗಳನ್ನು ಆಪ್ತರು, ಹತ್ತಿರದವರು ನಡೆದುಕೊಳ್ಳಲಿದ್ದಾರೆ. ಕುಟುಂಬದವರೊಂದಿಗೆ ಒಟ್ಟಿಗೆ ಸಮಯ ಕಳೆಯಲಿದ್ದೀರಿ. ನೀವು ಬಳಸುವ ವಾಹನದ ಸರ್ವೀಸ್ ಬಗ್ಗೆ ಕಾಳಜಿ ನೀಡಿ, ಇಲ್ಲದಿದ್ದಲ್ಲಿ ಮುಖ್ಯವಾದ ಸಮಯದಲ್ಲೇ ಕೈ ಕೊಡಬಹುದು. ದೂರ ಪ್ರಯಾಣ ಮಾಡುವವರಿದ್ದಲ್ಲಿ ಸಿದ್ಧತೆ ಸರಿಯಾಗಿ ಮಾಡಿಕೊಳ್ಳುವುದು ಅಗತ್ಯ.
ಒಂದೇ ವಿಷಯದ ಬಗ್ಗೆ ನಿಮ್ಮ ಕುಟುಂಬಸ್ಥರು, ಸ್ನೇಹಿತರು ಪದೇ ಪದೇ ಮಾತನಾಡಿ ನಿಮಗೆ ಬೇಸರ ತರಬಹುದು. ಆದರೆ ಅವರನ್ನು ಬಯ್ಯುವುದೋ ಅಥವಾ ಕೋಪದಿಂದ ದೂರ ಮಾಡಿಕೊಳ್ಳುವುದೋ ಸರಿಯಲ್ಲ. ಬಾಡಿಗೆ ಮನೆಯಲ್ಲಿ ವಾಸವಿದ್ದು, ಅದನ್ನು ಬದಲಾವಣೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂಥ ವಾತಾವರಣ, ಮನೆ ದೊರೆಯಲಿದೆ. ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡಿ.
ಹೊಸದಾಗಿ ಕ್ರೆಡಿಟ್ ಕಾರ್ಡ್‌ಗೆ ಅಪ್ಲೈ ಮಾಡಬೇಕು ಎಂದು ಇದ್ದಲ್ಲಿ ಈ ದಿನದ ಮಟ್ಟಿಗೆ ಮುಂದೂಡಿ. ನಿಮ್ಮ ಮೊಬೈಲ್‌ನಲ್ಲಿ ಇರುವ ಡೇಟಾ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ. ನಿಮ್ಮ ವೈಯಕ್ತಿಕ ಡೇಟಾ, ಫೋಟೋ, ಮಾಹಿತಿಗಳನ್ನು ಯಾರೂ ಕಳುವು ಮಾಡದಂತೆ ನೋಡಿಕೊಳ್ಳಿ. ಅಪರಿಚಿತ ಮೆಸೇಜ್, ಮೇಲ್‌ಗಳನ್ನು ತೆರೆಯುವ ಮುನ್ನ, ನಿಮ್ಮ ಗ್ಯಾಜೆಟ್‌ಗಳನ್ನು ಬೇರೆಯವರಿಗೆ ಕೊಡುವವರಿದ್ದಲ್ಲಿ ಜಾಗ್ರತೆ.
ಲೇಖನ- ಎನ್.ಕೆ.ಸ್ವಾತಿ