Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 6ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 6ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಆಗಸ್ಟ್ 6ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us
ಸ್ವಾತಿ ಎನ್​ಕೆ
| Updated By: Ganapathi Sharma

Updated on: Aug 06, 2023 | 1:00 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 6ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಸ್ನೇಹಿತರ ವಲಯದಲ್ಲಿ ಅವಮಾನ, ನಿಮ್ಮ ಮೇಲೆ ವೃಥಾ ಆರೋಪಗಳು, ವಾದ- ವಿವಾದ ಆಗುವಂಥ ಸಾಧ್ಯತೆಗಳು ಹೆಚ್ಚು. ಇನ್ನು ನಿಮ್ಮದೇ ವೃತ್ತಿಯಲ್ಲಿ ಇರುವವರು ಮತ್ಸರ ಸಾಧಿಸುವ ಸಾಧ್ಯತೆಗಳಿವೆ. ಅವರು ನಿಮ್ಮ ಮೇಲೆ ನಿಂದೆ, ಆರೋಪ ಹೊರಿಸಬಹುದು. ನಿಮ್ಮಲ್ಲಿ ಕೆಲವರು ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದೆ. ನೀವು ಯುವಜನರಾಗಿದ್ದಲ್ಲಿ ಪೋಷಕರ ಬಳಿ ದೂರುಗಳು ಹೇಳುವವರ ಸಂಖ್ಯೆ ಹೆಚ್ಚಾಗಲಿವೆ. ದುರಭ್ಯಾಸಗಳು ಇವೆ ಅಂತಲೋ ದುಷ್ಟ ಜನರ ಸಹವಾಸ ಮಾಡುತ್ತಿದ್ದಾರೆ ಅಂತಲೋ ದೂರುಗಳು ಹೇಳುತ್ತಾರೆ. ನೀವೇನೂ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವಷ್ಟರಲ್ಲಿ ಹೈರಾಣಾಗುತ್ತೀರಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವಿವಿಧ ಮಾರ್ಗಗಳು ದೊರೆಯುತ್ತವೆ. ಆರೋಗ್ಯದಲ್ಲೂ ಸ್ವಲ್ಪ ಚೇತರಿಕೆ ಕಂಡು, ಕೆಲಸ- ಕಾರ್ಯಗಳಲ್ಲಿ ಉತ್ಸಾಹ ಮೂಡುತ್ತದೆ. ಹಿಡಿದ ಕೆಲಸ ಯಶಸ್ವಿಯಾಗಿ ಮುಗಿಯಲಿದೆ. ನಿಮ್ಮ ಕೆಲಸಕ್ಕೆ ಅಡೆತಡೆ ಮಾಡಬೇಕು ಎಂಬ ಉದ್ದೇಶ ಇರಿಸಿಕೊಂಡವರೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದಾರೆ. ಹಣಕಾಸಿನ ಅನುಕೂಲ ಒದಗಿಬರಲಿದೆ. ಈಗ ಮಾಡುತ್ತಿರುವ ಉಳಿತಾಯದಿಂದ ಹೆಚ್ಚಿನ ಪ್ರತಿಫಲ ಸಿಗಲಿದೆ. ಚೀಟಿ ಹಾಕಿಕೊಂಡಿರುವವರು, ಆಭರಣ ಖರೀದಿಗೆ ಹಣ ಉಳಿಸುತ್ತಿರುವವರಿಗೆ ಉತ್ತಮ ಲಾಭ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಈಗಾಗಲೇ ಅಂಥ ಸಮಸ್ಯೆಗಳು ಇದ್ದಲ್ಲಿ ಉಲ್ಬಣ ಆಗಲಿದೆ. ಯಾವುದೇ ಕೆಲಸ ಮಾಡುವಾಗ ಗಾಬರಿ ಗಾಬರಿ ಆಗುತ್ತದೆ. ಮುಖ್ಯ ಮಾಹಿತಿಯನ್ನು ನೀವೇ ಮಿಸ್ ಮಾಡಿಕೊಂಡು ಬಯ್ಯಿಸಿಕೊಳ್ಳುವ, ನಿಮ್ಮ ಕೈಯಿಂದಲೇ ಹಣ ಕಳೆದುಕೊಳ್ಳುವ ಯೋಗ ಸಹ ಇದೆ. ನಿಮ್ಮ ಅರಿವಿಗೆ ಬಾರದಂತೆಯೇ ಕೆಟ್ಟ ಬೈಗುಳ ಬಂದು, ಇತರರಿಗೆ ನಿಮ್ಮ ಬಗ್ಗೆ ಗೌರವ ಹೋಗಬಹುದು. ಸ್ನೇಹಿತರ ಜತೆಗೆ ಜಗಳ- ಕದನಗಳಾಗಿ, ಸ್ನೇಹ ಕಳೆದುಕೊಳ್ಳುವ ಯೋಗ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಕೆಲವು ತೀರ್ಮಾನಗಳನ್ನು ಮಾಡುವುದಕ್ಕೆ ನಿಮ್ಮ ಮನಸ್ಸಲ್ಲಿ ಆತಂಕ ಕಾಡಬಹುದು. ಕುಟುಂಬದಲ್ಲಿ ಸಣ್ಣ- ಪುಟ್ಟ ಮನಸ್ತಾಪಗಳು ಕೂಡ ನಿಮಗೆ ದೊಡ್ಡ ಮಟ್ಟದಲ್ಲಿ ಚಿಂತೆಗೆ ಗುರಿ ಮಾಡುತ್ತವೆ. ಉದ್ಯಮ- ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹೊಸದಾಗಿ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡು, ಹೆಚ್ಚಿನ ಹೂಡಿಕೆ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಈ ದಿನ ಅಸಹಾಯಕರು, ಅಶಕ್ತರಿಗೆ ಊಟ ಕೊಡಿಸುವುದರಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ರಾತ್ರಿ ಪ್ರಯಾಣ ಮಾಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ಮುಂದೂಡಿ. ಸಿಹಿ ಪದಾರ್ಥಗಳ ಸೇವನೆಯಿಂದ ದೂರ ಇರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಅರ್ಹತೆ, ತಾಕತ್ತನ್ನೂ ಮೀರಿದಂಥ ಕೆಲಸ ಹುಡುಕಿಕೊಂಡು ಬರುವಂಥ ಸಾಧ್ಯತೆಗಳಿವೆ. ಹಣದ ಅಥವಾ ಹುದ್ದೆಯ ಕಾರಣಕ್ಕೆ ಅದನ್ನು ಒಪ್ಪಿಕೊಂಡಲ್ಲಿ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಂತೆ ಆಗುತ್ತದೆ. ವೈಯಕ್ತಿಕವಾಗಿ ನಿಮಗೆ ಅವಕಾಶಗಳು ಆಕರ್ಷಕ ಅಂತೆನಿಸಿದರೂ ಭವಿಷ್ಯ ಹಾಗೂ ನಿಮ್ಮ ಸಾಮರ್ಥ್ಯ ಎರಡರ ಬಗ್ಗೆಯೂ ಆಲೋಚನೆಯನ್ನು ಮಾಡಿ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ. ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಒತ್ತಡದ ಸನ್ನಿವೇಶ ಸೃಷ್ಟಿ ಆಗಲಿದೆ. ಹಣಕಾಸಿನ ವಿಚಾರ ಅಂತ ಬಂದಲ್ಲಿ ದಿಢೀರ್ ನಿರ್ಧಾರ ಬೇಡ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನೀವು ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳಿಂದ ಹೊರಬರುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಸ್ವಂತ ಕಚೇರಿಯನ್ನು ಆರಂಭಿಸುವ ಬಗ್ಗೆ ಸ್ನೇಹಿತರು- ಆಪ್ತರ ಜತೆಗೆ ಚರ್ಚೆ ನಡೆಸಲಿದ್ದೀರಿ. ಕೆಲಸದ ಒತ್ತಡದ ನಡುವೆ ಕುಟುಂಬದ ಅಗತ್ಯಗಳಿಗೆ ಸಮಯ ಮೀಸಲಿಡುವುದು ಸವಾಲಾಗಿ ಪರಿಣಮಿಸಲಿದೆ. ಒಂದೇ ಸಲಕ್ಕೆ ಹಲವು ಕೆಲಸಗಳನ್ನು ಮಾಡುವುದಕ್ಕೆ ಹೋಗದಿರಿ, ಇದರಿಂದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಲಿದೆ. ಬಡ್ಡಿ ವ್ಯವಹಾರವನ್ನು ಮಾಡುತ್ತಿರುವವರು ಒಂದಿಷ್ಟು ಮೊತ್ತವನ್ನು ವಾಪಸ್ ಪಡೆದು, ಸುರಕ್ಷಿತವಾದ ವಿಧಾನದಲ್ಲಿ ಉಳಿತಾಯ ಮಾಡುವುದು ಒಳಿತು ಎಂದೆನಿಸುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಒತ್ತಡದ ಕಾರಣಕ್ಕೆ ಕೆಲವು ಮುಖ್ಯ ಸಂಗತಿಗಳನ್ನು ಮರೆಯುವಂಥ ಸಾಧ್ಯತೆಗಳಿವೆ. ಯಾವುದೋ ಒಂದು ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡುವ ಪ್ರಯತ್ನದಲ್ಲಿ ಕೆಲವು ಡೆಡ್ ಲೈನ್ ಗಳನ್ನು ಮೀರುವಂಥ ಸಾಧ್ಯತೆಗಳಿವೆ. ಹೆಣ್ಣುಮಕ್ಕಳ ಜತೆಗೆ ಹೆಚ್ಚು ಸಲುಗೆಯಿಂದ ವರ್ತಿಸದಿರುವುದು ಉತ್ತಮ. ಬೆಳ್ಳಿ ಅಥವಾ ಬಂಗಾರದಲ್ಲಿ ಹೂಡಿಕೆ ಮಾಡುವಂಥ ವ್ಯವಹಾರದವರು ಇದ್ದಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಲಾಭವಾಗುವ ಅವಕಾಶಗಳಿವೆ. ದೂರ ಪ್ರಯಾಣ ಮಾಡಬೇಕು ಎಂದು ಆಲೋಚಿಸುತ್ತಿರುವವರು ಸರಿಯಾದ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಗಮನ ಕೊಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಧಾರ್ಮಿಕ ನಂಬಿಕೆಗಳು ನೆರವಿಗೆ ಬರಲಿವೆ. ನಿರೀಕ್ಷೆಯೇ ಮಾಡದ ರೀತಿಯಲ್ಲಿ ಇತರರ ನೆರವು ನಿಮ್ಮ ಪಾಲಿಗೆ ಒದಗಿ ಬರಲಿವೆ. ನಿಮ್ಮಲ್ಲಿ ಕೆಲವರು ಹೊಸದಾಗಿ ಚಿನ್ನದ ಚೀಟಿಗೆ ಹಣ ಕಟ್ಟುವುದಕ್ಕೆ ಆರಂಭಿಸುವ ಯೋಗ ಇದೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಗುರಿಯನ್ನು ತಲುಪುವುದು ಸಲೀಸಾಗಲಿದೆ. ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿದ್ದು, ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಕೆಲ ಸಮಯ ಬಿಡುವು ತೆಗೆದುಕೊಳ್ಳಬೇಕು ಎಂದು ಬಲವಾಗಿ ಅನಿಸುವುದಕ್ಕೆ ಆರಂಭಿಸುತ್ತದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ವ್ಯಾಪಾರ- ವ್ಯವಹಾರಸ್ಥರು ಬರಬೇಕಾದ ಹಣವನ್ನು ವಸೂಲಿ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಶ್ರಮ ಹಾಕಿದರೆ ಬಾಕಿ ವಾಪಸ್ ಬರುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಬುದ್ಧಿವಂತಿಕೆಯಿಂದ ಶತ್ರುಗಳು ಬಹಳ ಗೊಂದಲಕ್ಕೆ ಗುರಿ ಆಗುವಂತೆ ಮಾಡುತ್ತೀರಿ. ಹೊಸ ವಸ್ತ್ರ, ಬ್ರ್ಯಾಂಡೆಡ್ ವಾಚ್, ಶೂ, ಗ್ಯಾಜೆಟ್ ಗಳನ್ನು ಪಡೆಯುವ ಯೋಗ ಇದೆ. ವಿದೇಶಗಳಿಂದ, ದೂರದ ಊರುಗಳಿಂದ ಉಡುಗೊರೆ ಸಹ ದೊರೆಯಬಹುದು. ಕೂಡಿಟ್ಟುಕೊಂಡಿದ್ದ ಹಣ ಒಳ್ಳೆ ಉದ್ದೇಶಕ್ಕೆ ಬಳಕೆ ಅಥವಾ ಸರಿಯಾದ ಕಡೆಗೆ ಹೂಡಿಕೆ ಆಗುತ್ತದೆ. ಅಥವಾ ನಿಮ್ಮಲ್ಲಿ ಕೆಲವರು ಚಿನ್ನಾಭರಣಗಳನ್ನು ಖರೀದಿಸಲಿದ್ದೀರಿ. ನೀವು ಬಹಳ ಸಮಯದಿಂದ ಇಷ್ಟಪಡುತ್ತಿದ್ದ ವಸ್ತುಗಳನ್ನು ಕೊಳ್ಳಲಿದ್ದೀರಿ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್