ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ 9ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಸಾವಧಾನವಾಗಿ ಆಗುತ್ತಿದ್ದ ಕೆಲಸಗಳಲ್ಲಿ ದಿಢೀರನೆ ಅಡೆತಡೆಗಳು ಎದುರಾಗಬಹುದು. ನಿಮ್ಮ ಕೆಲಸದ ವೇಗಕ್ಕೆ ತಡೆ ಆಗುವಂಥ ಸನ್ನಿವೇಶಗಳು ಸಹ ಎದುರಾಗಲಿವೆ. ಮೊದಲೇ ಹೇಳಿಟ್ಟಿದ್ದರೂ ಅಗತ್ಯ ಇರುವಷ್ಟು ಸಂಖ್ಯೆಯ ಕೆಲಸಗಾರರು ಬಾರದಿರಬಹುದು, ಅಥವಾ ಏನಾದರೂ ನೆಪವೊಡ್ಡಿ ಇಡೀ ತಂಡವೇ ಚಕ್ಕರ್ ಹಾಕಿಬಿಡಬಹುದು. ಆದ್ದರಿಂದ ಯಾವುದೇ ಯೋಜನೆಗಳಿದ್ದರೂ ಅದನ್ನು ಸರಿಯಾಗಿ ಜಾರಿ ಮಾಡುವುದಕ್ಕೆ ಬೇಕಾದ ಸಂಪನ್ಮೂಲಗಳನ್ನು ಸರಿಯಾಗಿ ಕ್ರೋಡೀಕರಿಸುವ ಬಗ್ಗೆ ನಿಮ್ಮ ಆದ್ಯತೆ ಇರಲಿ. ಕುಟುಂಬದಲ್ಲಿ ಒಂದು ಬಗೆಯ ಒತ್ತಡದ ವಾತಾವರಣ ಕಂಡುಬರುತ್ತದೆ. ಹಣಕಾಸಿನ ವಿಚಾರಕ್ಕೆ ಜೋರುಜೋರಿನ ಮಾತುಕತೆಗಳಾಗಬಹುದು. ತಾಳ್ಮೆಯಿಂದ ಇರುವುದು ಮುಖ್ಯವಾಗುತ್ತದೆ.
ಈಗ ಮಾಡುತ್ತಿರುವ ಉದ್ಯೋಗದ ಜತೆಗೆ ಹೆಚ್ಚುವರಿಯಾದ ಆದಾಯ ಮೂಲಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ಗಂಭೀರವಾದ ಪ್ರಯತ್ನವನ್ನು ಶುರು ಮಾಡಲಿದ್ದೀರಿ. ಸೈಕ್ಲಿಂಗ್, ವಾಕಿಂಗ್, ಯೋಗ ಮೊದಲಾದ ಆರೋಗ್ಯಕರ ಅಭ್ಯಾಸಗಳನ್ನು ಆರಂಭಿಸುವ ಅಥವಾ ಈಗಾಗಲೇ ಶುರು ಮಾಡಿದ್ದೀರಿ ಆದರೆ ಶಿಸ್ತಿನಿಂದ ಮಾಡುತ್ತಿಲ್ಲ ಎಂದಾದಲ್ಲಿ ಶಿಸ್ತನ್ನು ಪಾಲಿಸುವ ಕುರಿತು ನಿರ್ಧಾರವನ್ನು ಮಾಡಲಿದ್ದೀರಿ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ಉತ್ತಮವಾದ ಸಮಯ ಇದು. ನಿಮ್ಮ ಸಾಮಾಜಿಕ ಕಾಂಟ್ಯಾಕ್ಟ್ ಹೆಚ್ಚಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಹೂವಿನ ವ್ಯಾಪಾರಿಗಳಿಗೆ ಆದಾಯದಲ್ಲಿ ಇಳಿಕೆ ಆಗಿ, ಆತಂಕ ಎದುರಾಗಬಹುದು.
ಯೂಟ್ಯೂಬರ್ ಗಳು, ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳು, ಆನ್ ಲೈನ್ ಮೀಡಿಯಾಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯಲಿವೆ. ಒಂದು ವೇಳೆ ಈಗ ಮಾಡುತ್ತಿರುವ ಕೆಲಸಗಳಲ್ಲಿ ಅಂದುಕೊಂಡಂತೆ ಫಲಿತಾಂಶ ಬರುತ್ತಿಲ್ಲ ಎಂಬ ಆತಂಕ ಕಾಡುತ್ತಿದ್ದಲ್ಲಿ ಅದು ದೂರವಾಗುವ ನಿಟ್ಟಿನಲ್ಲಿ ಪಾಸಿಟಿವ್ ಆದಂಥ ಬೆಳವಣಿಗೆಗಳು ಆಗಲಿವೆ. ಫ್ಯಾಷನ್ ಡಿಸೈನ್ ಗೆ ಸಂಬಂಧಿಸಿದ ಕೋರ್ಸ್ ಗಳನ್ನು ಮಾಡುತ್ತಿರುವವರಿಗೆ ಉನ್ನತ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ಮಾಡುವ ಅಥವಾ ಅಂಥ ಸಂಸ್ಥೆಗಳಿಂದ ನಿಮಗೆ ವಿಶೇಷ ತರಬೇತಿ ಪಡೆದುಕೊಳ್ಳುವಂಥ ಅವಕಾಶ ದೊರಕಬಹುದು. ಹಣಕಾಸು ಸಂಗತಿಗಳಲ್ಲಿ ಕುಟುಂಬದವರ ಬೆಂಬಲ ದೊರೆಯಲಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಭವಿಷ್ಯದಲ್ಲಿ ದೊರೆಯಬಹುದಾದ ದೊಡ್ಡ ಹುದ್ದೆಯ ಬಗ್ಗೆ ಸುಳಿವು ದೊರೆಯಲಿದೆ. ಗ್ಯಾಜೆಟ್ ಗಳನ್ನು ಖರೀದಿಸುವುದಕ್ಕಾಗಿ ಹಣವನ್ನು ಖರ್ಚು ಮಾಡಲಿದ್ದೀರಿ. ತಂದೆ- ತಾಯಿಗಳಿಗೆ ತೀರ್ಥಕ್ಷೇತ್ರಗಳ ದರ್ಶನ ಮಾಡಿಸುವ ಸಲುವಾಗಿ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಹೊಸ ಬಟ್ಟೆ- ಚಿನ್ನಾಭರಣಗಳನ್ನು ಖರೀದಿ ಮಾಡುವುದಕ್ಕೆ ಕ್ರೆಡಿಟ್ ಕಾರ್ಡ್ ಬಳಸುವ ಸಾಧ್ಯತೆಗಳಿವೆ. ಹಳೇ ಸ್ನೇಹಿತರನ್ನು ಭೇಟಿ ಆಗಲಿದ್ದೀರಿ. ಜತೆಗೆ ಪ್ರವಾಸಕ್ಕೆ ತೆರಳುವುದಕ್ಕೆ ಯೋಜನೆ ರೂಪಿಸಲಿದ್ದೀರಿ. ನಿಮಗೆ ಬರಬೇಕಾದ ಹಣದ ಬಾಕಿಯಿದ್ದಲ್ಲಿ ಗಟ್ಟಿಯಾಗಿ ಪ್ರಯತ್ನವನ್ನು ಮಾಡಿದಲ್ಲಿ ಹಣ ಬರುವ ಅವಕಾಶಗಳು ಹೆಚ್ಚಿವೆ.
ತಂದೆ- ತಾಯಿ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ನವ ದಂಪತಿಗೆ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುವಂಥ ಬೆಳವಣಿಗೆಗಳು ಆಗಲಿವೆ. ಮಾತಿನ ಮೂಲಕ ಬಗೆಹರಿಸುವಂಥ ವಿಚಾರಗಳು ಇದ್ದಲ್ಲಿ ಅದನ್ನು ಮಾಡಲಿದ್ದೀರಿ. ಮನೆಯ ಅಲಂಕಾರಕ್ಕಾಗಿ ಕೆಲವು ವಸ್ತುಗಳನ್ನು ಖರೀದಿ ಮಾಡುವಂಥ ಅವಕಾಶಗಳಿವೆ. ನಿಮ್ಮಷ್ಟಕ್ಕೆ ನೀವಿದ್ದರೂ ಈ ದಿನ ರಾಜೀ- ಸಂಧಾನಗಳಿಗಾಗಿ ಬರುವಂತೆ ಕೇಳಬಹುದು. ರೈಲ್ವೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಒತ್ತಡದ ಸನ್ನಿವೇಶ ಇರಲಿದೆ. ಕೆಲಸದ ಒತ್ತಡದಿಂದಾಗಿ ತಪ್ಪುಗಳನ್ನು ಮಾಡುವ ಸಾಧ್ಯತೆ ಇದ್ದು, ಈ ದಿನ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಲಕ್ಷ್ಯ ವಹಿಸಿ, ಕೆಲಸ ಮಾಡಿ.
ಬೆಳ್ಳಿ ವಸ್ತುಗಳು ಅಥವಾ ಒಡವೆಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗಿದೆ. ಇನ್ನು ನಿಮ್ಮಲ್ಲಿ ಕೆಲವರು ದಾನ- ಧರ್ಮ ಕಾರ್ಯಗಳನ್ನು ಮಾಡಲಿದ್ದೀರಿ. ತೆರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವಂತಹ ಅನುಗ್ರಹ ಆಗಲಿದೆ. ಹಿರಿಯರ ಆಶೀರ್ವಾದ ಬಲ ನಿಮ್ಮ ಮೇಲೆ ಇರಲಿದ್ದು, ಸಂಘ- ಸಂಸ್ಥೆಗಳಲ್ಲಿ ಪ್ರಮುಖವಾದ ಹುದ್ದೆಯೊಂದು ದೊರೆಯಬಹುದು. ಕನಿಷ್ಠ ಪಕ್ಷ ಪ್ರಭಾರಿಯಾಗಿಯಾದರೂ ಹುದ್ದೆಯನ್ನು ವಹಿಸಿಕೊಳ್ಳ ಬೇಕಾಗಬಹುದು. ಸ್ವಂತ ಉದ್ಯಮ ನಡೆಸುತ್ತಿರುವವರು ಹೊಸ ವ್ಯವಹಾರವನ್ನು ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಿರ್ಧಾರ ಅಂತಿಮಗೊಳಿಸಲಿದ್ದೀರಿ.
ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ನಾನಾ ರೀತಿಯಲ್ಲಿ ಯೋಜನೆ, ಆಲೋಚನೆ ಶುರು ಆಗಲಿದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ಅದಕ್ಕೆ ಬೇಡಿಕೆ ಹೆಚ್ಚಾಗುವಂಥ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಕೆಲವರು ಬಾಡಿಗೆ ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಮನೆಯನ್ನೋ ಮಳಿಗೆಯನ್ನೋ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ದುರ್ಗಾದೇವಿ ಆರಾಧನೆ ಮಾಡುವುದರಿಂದ ಹಾಗೂ ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡುವುದರಿಂದ ಆಲೋಚನೆಯಲ್ಲಿ ಸ್ಪಷ್ಟತೆ ಇರಲಿದೆ. ಅದೇ ವೇಳೆ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ. ಫೋಟೋಗ್ರಫಿಯನ್ನೇ ವೃತ್ತಿ ಮಾಡಿಕೊಂಡಿರುವವರಿಗೆ ಹೊಸ ಹೊಸ ಅವಕಾಶಗಳು ದೊರೆಯುವ ಸಾಧ್ಯತೆಗಳಿವೆ.
ನೀವು ಅಂದುಕೊಂಡ ಮೊತ್ತಕ್ಕೆ, ನಿರೀಕ್ಷೆ ಮಾಡಿದ್ದ ರೀತಿಯಲ್ಲಿ ಸಮಯಕ್ಕೆ ವ್ಯವಹಾರ ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಹೊಸದಾಗಿ ಪರಿಚಯ ಆದವರ ಮೇಲೆ ವಿಪರೀತವಾದ ಅವಲಂಬನೆ ಬೇಡ. ನಿಮಗೆ ಗೊತ್ತಿಲ್ಲದ ವಿಚಾರಗಳು ಏನಾದರೂ ಇದ್ದಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ಬಗ್ಗೆ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದುಬಿಡಬಹುದು. ಭಾರವಾದ ವಸ್ತುಗಳನ್ನು ಎತ್ತುವಾಗ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ. ನಿರ್ಲಕ್ಷ್ಯ ಮಾಡಿದಲ್ಲಿ ಕಾಲು, ಬೆನ್ನಿನ ಹುರಿಗೆ ತೊಂದರೆ ಆಗಬಹುದು.
ಮ್ಯಾನೇಜ್ ಮೆಂಟ್ ಜತೆಗೆ ಅಥವಾ ಹತ್ತಿರದಲ್ಲಿ ಕೆಲಸ ಮಾಡುವಂಥ, ನಾಯಕತ್ವ ಸ್ಥಾನದಲ್ಲಿ ಇರುವಂಥವರಿಗೆ ಕಠಿಣವಾದ ಕೆಲಸಗಳನ್ನು ವಹಿಸಬಹುದು. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ತುಂಬ ಕಟ್ಟುನಿಟ್ಟಿನಿಂದ ಮಾತನಾಡಲೇ ಬೇಕಾದ ಸನ್ನಿವೇಶ ಎದುರಾಗಲಿದೆ. ಇದರಿಂದ ಸ್ವತಃ ನಿಮ್ಮ ಮನಸ್ಸಿಗೆ ಬೇಸರ ಎನಿಸಲಿದೆ. ಮನೆ ಅಥವಾ ಸೈಟು- ಜಮೀನುಗಳ ದಲ್ಲಾಳಿಗಳಾಗಿ ಇರುವಂಥವರಿಗೆ ಇನ್ನೇನು ಎಲ್ಲ ಕೆಲಸವೂ ಮುಗಿದೇ ಹೋಯಿತು ಅಂದುಕೊಳ್ಳುವ ಹೊತ್ತಿಗೆ ವ್ಯವಹಾರ ಮುರಿದುಹೋಗಬಹುದು. ಆದ್ದರಿಂದ ಇನ್ನೂ ನಿಮ್ಮ ಕೈ ಸೇರದ ಹಣದ ವಿಚಾರದಲ್ಲಿ ಯಾರಿಗೂ ಮಾತು ನೀಡುವುದಕ್ಕೆ ಹೋಗದಿರಿ.