Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 17ರ ದಿನಭವಿಷ್ಯ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 17, 2023 | 1:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 17ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜುಲೈ 17ರ ದಿನಭವಿಷ್ಯ
ಪ್ರಾತಿನಿಧಿಕ ಚಿತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜುಲೈ 17ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಎಲೆಕ್ಟ್ರಿಕಲ್ ವಾಹನವನ್ನೋ ಅಥವಾ ಗೃಹಬಳಕೆ ವಸ್ತುಗಳನ್ನೋ ಖರೀದಿಸುವುದಕ್ಕೆ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಒಂದಿ ವೇಳೆ ಖರೀದಿಯ ಉದ್ದೇಶವೇ ಇಲ್ಲದಿದ್ದರೂ ಆಫರ್ ಗಳು ಇದೆ ಎಂಬ ಕಾರಣಕ್ಕೆ ಕೊಂಡುಕೊಳ್ಳುವ ಸಾಧ್ಯತೆಗಳಿವೆ. ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದೀರಿ ಎಂದಾದರೆ ಕೆಲವರ ಮಾತುಗಳಿಂದ ನಿರುತ್ಸಾಹ ಆಗಬಹುದು. ಅಂಥವರಿಂದ ಅಂತರವನ್ನು ಕಾಯ್ದುಕೊಳ್ಳಿ. ಈ ದಿನ ಸಾಧ್ಯವಾದಷ್ಟೂ ತಾಜಾ- ಬಿಸಿಯಾದ ಆಹಾರ ಸೇವನೆ ಮಾಡುವುದಕ್ಕೇ ಆದ್ಯತೆಯನ್ನು ನೀಡಿ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ನಿಮ್ಮ ಕೆಲಸಗಳು ವೇಗವನ್ನು ಪಡೆದುಕೊಳ್ಳಲಿವೆ. ನಿರ್ಧಾರ ಮಾಡಿಕೊಂಡು, ಎಲ್ಲ ವಿಚಾರಗಳಲ್ಲೂ ಬಿಗಿ ಪಟ್ಟನ್ನು ಹಾಕಲಿದ್ದೀರಿ. ನಿಮ್ಮ ತಂತ್ರಗಾರಿಕೆ, ಆಲೋಚನೆಗಳು ಫಲ ನೀಡಲಿವೆ. ಆನ್ ಲೈನ್ ವ್ಯವಹಾರಗಳಲ್ಲಿ ತೊಡಗಿರುವವರು, ಯೂ ಟ್ಯೂಬರ್ ಗಳು, ಟ್ಯಾಟೂ ಹಾಕುವಂಥವರು, ಮನೆಗಳಿಗೆ ತೆರಳಿ ಸೌಂದರ್ಯ ವರ್ಧಕಕ್ಕೆ ಬೇಕಾದ ಸೇವೆಗಳನ್ನು ನೀಡುವಂಥವರು ಇವರಿಗೆಲ್ಲ ಆದಾಯದಲ್ಲಿ ಏರಿಕೆ ಆಗಲಿದೆ. ವೃತ್ತಿನಿರತರಾಗಿದ್ದಲ್ಲಿ ಸ್ವಂತ ಕಚೇರಿ ಮಾಡುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಇತರರು ತಮ್ಮ ಅನಿಸಿಕೆಗಳನ್ನು ನಿಮ್ಮ ಮೇಲೆ ಹೇರುತ್ತಿದ್ದಾರೆ ಎಂಬ ಬಲವಾಗಿ ಅನಿಸುತ್ತದೆ. ನವವಿವಾಹಿತರಿಗೆ ಸಂಗಾತಿ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಈ ದಿನ ನಿಮ್ಮ ಹಣೆ ಅಥವಾ ತಲೆಯ ಭಾಗಕ್ಕೆ ಪೆಟ್ಟಾಗುವಂಥ ಸಾಧ್ಯತೆಗಳು ಕಂಡುಬರುತ್ತಿದೆ. ಆದ್ದರಿಂದ ಮೆಟ್ಟಿಲು ಹತ್ತುವಾಗ, ಇಳಿಯುವಾಗ ಅಥವಾ ವೇಗವಾಗಿ ಕೆಲಸ ಮಾಡುತ್ತಿದ್ದೀರಿ ಎಂದಾಗ ಜಾಗ್ರತೆ ಇರಿಸಿಕೊಳ್ಳಿ. ನನಗೆ ಎಲ್ಲ ಗೊತ್ತು ಎಂದು ಹೇಳುತ್ತಿರುವ ಗೆಳೆಯರೋ ಅಥವಾ ಇತರರೋ ಅಂಥವರ ಜತೆಗೆ ವಾದಕ್ಕೆ ಇಳಿಯದಿರುವುದು ಉತ್ತಮ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಹಣಕಾಸಿನ ವಿಚಾರದಲ್ಲಿ ಗುರಿ ಇಟ್ಟುಕೊಂಡು ಕೆಲಸ ಆರಂಭಿಸುವ ಸಾಧ್ಯತೆಗಳಿವೆ. ದಂಪತಿ ಮಧ್ಯೆ ಲೈಂಗಿಕ ವಿಚಾರಕ್ಕೆ ಮನಸ್ತಾಪಗಳು ಎದುರಾಗಬಹುದು. ಕುಟುಂಬದ ಸದಸ್ಯರೊಬ್ಬರಿಗೆ ನಿಮ್ಮಿಂದ ಸಹಾಯ ಮಾಡಲೇಬೇಕು ಎಂಬ ಸ್ಥಿತಿ ಉದ್ಭವಿಸಲಿದೆ. ಈ ಹಿಂದೆ ನೀವೇ ಮರೆತು ಸುಮ್ಮನಾದಂಥ ಹಣವೊಂದು ಈಗ ಬರುವಂತಹ ಸಾಧ್ಯತೆಗಳಿವೆ. ಇತರರ ಖಾಸಗಿ ವಿಷಯಗಳನ್ನು ಮಾತನಾಡದಿರುವುದು ಒಳ್ಳೆಯದು. ನಿಮ್ಮ ವರ್ಚಸ್ಸಿಗೆ ಧಕ್ಕೆ ಮಾಡಬೇಕು ಎಂದು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಇನ್ ಟ್ಯೂಷನ್ ಈ ದಿನ ಬಹಳ ಜಾಗೃತವಾಗಿರುತ್ತದೆ. ಯಾವ ವ್ಯಕ್ತಿ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ, ತೀರ್ಮಾನವನ್ನು ಕೈಗೊಳ್ಳಿ. ಗೆಳೆಯರೋ ಅಥವಾ ಸಂಬಂಧಿಕರೋ ಮನೆಗೆ ಊಟವೋ ತಿಂಡಿಗಾಗಿ ಆಹ್ವಾನ ನೀಡಲಿದ್ದಾರೆ. ಸಣ್ಣದಾಗಿ ಆರಂಭಿಸುವ ವ್ಯವಹಾರದ ಬಗೆಗಿನ ಮಾತು ದೊಡ್ಡ ಮಟ್ಟದಲ್ಲಿ ತಿರುವು ಪಡೆದುಕೊಂಡು, ಭವಿಷ್ಯದಲ್ಲಿ ಅನುಕೂಲವಾಗಿ ಮಾರ್ಪಡಬಹುದು. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವಂಥವರು ಲಾಗಿನ್ ಐಡಿ, ಪಾಸ್ ವರ್ಡ್ ಜೋಪಾನವಾಗಿ ಇರಿಸಿಕೊಳ್ಳಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕೆಲಸ ಮಾಡುವ ಸಂಸ್ಥೆಯವರು, ಕಂಪನಿಯ ಟಾಪ್ ಮ್ಯಾನೇಜ್ ಮೆಂಟ್ ನವರು ನಿಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಅಗಾಧವಾದದ್ದು ಎಂಬುದು ಈ ದಿನ ನಿಮ್ಮ ಗಮನಕ್ಕೆ ಬರಲಿದೆ. ಶಿಫಾರಸು ಅಥವಾ ರೆಫರೆನ್ಸ್ ಮೂಲಕವಾಗಿ ಇತರರಿಗೆ ಕೆಲಸ ಕೊಡಿಸುವಂಥ ಸಾಧ್ಯತೆಗಳಿವೆ. ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮಗೆ ನೀವೇ ಇದು ಸಾಮಾನ್ಯವಾದ ಸಮಸ್ಯೆ ಎಂದೇನಾದರೂ ನಿರ್ಲಕ್ಷ್ಯವನ್ನು ಮಾಡಿದಲ್ಲಿ ದೊಡ್ಡ ಬೆಲೆ ತೆರಬೇಕಾದೀತು. ಒತ್ತಡದ ಕೆಲಸಗಳನ್ನು ಮಾಡದಿರುವುದು ಉತ್ತಮ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನಿಮ್ಮ ಸಂಬಂಧಿಕರೋ ಅಥವಾ ಸ್ನೇಹಿತರೋ ಹಿಂದೆ ಯಾವಾಗಲೋ ಆಡಿದ ಮಾತಿನಿಂದ ಬೇಸರವಾಗಿದ್ದಲ್ಲಿ ಅದನ್ನು ಈ ದಿನ ಪ್ರತೀಕಾರ ಎಂಬಂತೆ ತೀರಿಸಿಕೊಳ್ಳಲಿದ್ದೀರಿ. ಹಾಲಿನ ವ್ಯಾಪಾರ ಮಾಡುವಂಥವರಿಗೆ ಆದಾಯದಲ್ಲಿ ಇಳಿಕೆ ಆಗುವ ಸಂಭವ ಇದೆ. ಲೆಕ್ಕಾಚಾರ ಹಾಕಿಕೊಳ್ಳದೆಯೇ ಹಣಕಾಸಿನ ವಿಚಾರದಲ್ಲಿ ಯಾವುದೇ ಮಾತನ್ನು ನೀಡಲಿಕ್ಕೆ ಹೋಗದಿರಿ. ನಿಮ್ಮಷ್ಟಕ್ಕೆ ನೀವು ಎಂದಿದ್ದರೂ ಯಾವುದಾದರೂ ವ್ಯಾಜ್ಯಕ್ಕೆ ಇತರರು ಎಳೆದು ತರುವ ಸಾಧ್ಯತೆ ಇದೆ. ಸಾರ್ವಜನಿಕ ಬದುಕಿನಲ್ಲಿ ಇರುವವರು ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಅನಿರೀಕ್ಷಿತವಾಗಿ ಆದಾಯದ ಮೂಲ ಹೆಚ್ಚಳ ಆಗುವ ಸಾಧ್ಯತೆ ಇದೆ. ನಿಮ್ಮ ನಿಷ್ಠೆ, ಪರಿಶ್ರಮ, ಸಾಮರ್ಥ್ಯದ ಆಧಾರದ ಮೇಲೆ ಹೊಸ ಅವಕಾಶವೊಂದು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಅದನ್ನು ಮಾಡುವುದಕ್ಕೆ ನಿಮ್ಮಿಂದ ಆದೀತೆ ಎಂದು ಅನುಮಾನ ಪಡಬೇಡಿ. ಟೂರ್ ಆಪರೇಟರ್ ಗಳಾಗಿ ಕಾರ್ಯ ನಿರ್ವಹಿಸುವವರಿಗೆ ಹಳೇ ಬಾಕಿಗಳು ಮತ್ತೆ ಕೈ ಸೇರುವಂಥ ಅವಕಾಶಗಳು ಸೃಷ್ಟಿ ಆಗಲಿವೆ. ಪ್ರಾಣಿಗಳ ಕಡಿತದಿಂದ ಸಮಸ್ಯೆ ಮಾಡಿಕೊಳ್ಳಬಹುದು ಎಂಬ ಸೂಚನೆಗಳಿದ್ದು, ಈ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಲೋಕಾರೂಢಿಗೆ ನೀವಾಡಿದ ಮಾತು ನಿಮಗೆ ಸಮಸ್ಯೆಯಾಗಿ ಸುತ್ತಿಕೊಳ್ಳಬಹುದು. ಸಂಗಾತಿಯ ಜತೆಗೆ ಪಾರದರ್ಶಕವಾಗಿ ಇರುವುದು ಉತ್ತಮ. ನಿಮಗೆ ಗೊತ್ತಿರುವ ಸಂಗತಿಯೇ ಆದರೂ ಮಿತಿಯನ್ನು ಅರಿತು, ವರ್ತಿಸುವುದು ಮುಖ್ಯವಾಗುತ್ತದೆ. ಹತ್ತಾರು ಜನರು ಇರುವ ಜಾಗದಲ್ಲಿ ಮಾತಿನ ಭರಾಟೆಯಲ್ಲಿ ಹೇಳಿಕೊಂಡ ವಿಷಯಗಳಿಗೆ ದೊಡ್ಡದಾಗಿ ಬೆಲೆ ಕಟ್ಟುವಂಥ ಸನ್ನಿವೇಶ ಎದುರಾಗಬಹುದು. ರಾಜಕಾರಣದಲ್ಲಿ ಆಸಕ್ತಿ ಇರುವಂಥವರು ಸೋಷಿಯಲ್ ಮೀಡಿಯಾಗಳಲ್ಲಿ ಏನನ್ನಾದರೂ ಪೋಸ್ಟ್ ಮಾಡುತ್ತಿದ್ದಲ್ಲಿ ಅದರ ಪರಿಣಾಮದ ಕಡೆಗೂ ಗಮನ ಕೊಡಿ.