Daily Horoscope: ನಿಮ್ಮ ಕಾರ್ಯಕ್ಕೆ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗುವ ಸಾಧ್ಯತೆ
ನೀವು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 17 ಸೋಮವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ/ದಕ್ಷಿಣಾಯನ, ಗ್ರೀಷ್ಮ ಋತು, ಮಿಥುನ/ಕರ್ಕಾಟಕ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಧ್ರುವ, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:49 ರಿಂದ 09:26ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 11:02 ರಿಂದ 12:38ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:15 ರಿಂದ 03:51ರ ವರೆಗೆ.
ಮೇಷ: ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ. ವಿವಾಹಕ್ಕೆ ಬೇಕಾದ ತಯಾರಿಯನ್ನು ನೀವು ಮಾಡಿಕೊಳ್ಳುವಿರಿ. ವಿರೋಧಿಗಳು ನಿಮ್ಮ ಬಗ್ಗೆ ಮಾತನಾಡಿಕೊಳ್ಳಬಹುದು. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮನ್ನು ಅರ್ಥಮಾಡಿಕೊಳ್ಳುವವರ ಬಗ್ಗೆ ನಿಮಗೆ ಒಲವು ಹೆಚ್ಚಾಗಲಿದೆ. ಕಛೇರಿಯಲ್ಲಿ ಉಂಟಾದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ನೀವು ಯತ್ನಿಸಬಹುದು. ನಮಗೆ ಬೇಕಾದುದಷ್ಟನ್ನೇ ಬಳಸಿಕೊಂಡು, ಇನ್ನೊಬ್ಬರ ವಸ್ತುವನ್ನು ಹಿಂದಿರುಗಿಸುವಿರಿ. ನಿಮ್ಮ ಆಲೋಚನೆಗಳು ಸರಿಯಾದ ದಿಕ್ಕಿನಲ್ಲಿ ಇರಲಿ. ಸಂಗಾತಿಯ ಆರೋಗ್ಯದ ಬಗ್ಗೆ ವಿಚಾರಿಸಿಕೊಳ್ಳಿ.
ವೃಷಭ: ನಿಮ್ಮ ಉದ್ಯೋಗದ ಕನಸು ನನಸಾಗಲಿದೆ. ಅಶಿಸ್ತಿನ ವ್ಯವಸ್ಥೆಯು ನಿಮಗೆ ಬೇಸರ ತರಿಸಬಹುದು. ವಿದೇಶದ ಕನಸು ಅಂಕುರಿಸಬಹುದು. ಗುರುವಿನ ದರ್ಶನವನ್ನು ಪಡೆದು ಖುಷಿಪಡುವಿರಿ. ನಿಮ್ಮ ಸಲಾರಾತ್ಮಕ ನಿಲುವು ಇಷ್ಟವಾಗುವುದು. ಕೆಲಸದಲ್ಲಿ ಪಾರದರ್ಶಕತೆಯನ್ನು ಇಷ್ಟಪಡುವಿರಿ. ಇಂದು ಎಂದಿಗಿಂತ ಹೆಚ್ಚು ಕಾರ್ಯವಾಗಲಿದೆ. ವ್ಯಾಪಾರವನ್ನು ವಿನಮ್ರತೆಯಿಂದ ಮಾಡಿ. ಆದಾಯವು ಹೆಚ್ಚಾಗಬಹುದು. ನಿಮಗೆ ಇಷ್ಟವಾದ ಕೊಡುಗೆಯು ಲಭ್ಯವಾಗಲಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯಾಲಯಕ್ಕೆ ಪ್ರಯತ್ನಿಸಿ ಸೋಲುವರು.
ಮಿಥುನ: ನಿಮ್ಮ ಕಾರ್ಯವನ್ನು ಪರಿಶೀಲಿಸಲು ಉನ್ನತ ಅಧಿಕಾರಿಗಳು ಬರಲಿದ್ದಾರೆ. ಪ್ರಶಂಸೆಯೂ ಸಿಗುವ ಸಾಧ್ಯತೆ ಇದೆ. ನಿಮ್ಮ ಏಳ್ಗೆಯನ್ನು ಕಂಡು ದಾಯಾದಿಗಳು ಅಸೂಯೆ ಪಡಬಹುದು. ಯಾವುದಾದರೂ ಒಂದು ಅಪವಾದಕ್ಕೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮೇಲೂ ನಿಮ್ಮವರ ಮೇಲೆ ನಂಬಿಕೆ ಇರಲಿ. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಗೊಂದಲವನ್ನು ಮಾಡಿಕೊಂಡು ಹಣವನ್ನು ಕಳೆದುಕೊಳ್ಳುವಿರಿ. ನೀವು ಉನ್ನತ ಸ್ಥಾನದ ಆಕಾಂಕ್ಷಿಗಳೂ ಆಗಿರುವಿರಿ.
ಕರ್ಕಾಟಕ: ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯುವುದು ಉತ್ತಮ. ಶತ್ರುಗಳಿಂದ ತೊಂದರೆಯಾಗಬಹುದು. ಹೆಚ್ಚು ಪ್ರಯತ್ನದಿಂದ ಸ್ವಲ್ಪ ಫಲವನ್ನು ಪಡೆಯುವಿರಿ. ಅವಕಾಶದ ಕೊರತೆಯಿಂದ ದುಃಖಿಸುವಿರಿ. ನಿಮ್ಮ ಕಲ್ಪನೆಯಂತೆ ಎಲ್ಲವೂ ಆಗದು. ಯೋಜನೆಯನ್ನು ಮಾಡುವಾಗ ಸರಿಯಾಗಿ ಇರಲಿ. ಉದ್ವೇಗದಿಂದ ಏನನ್ನಾದರೂ ಹೇಳುವಿರಿ. ಒತ್ತಡಕ್ಕೆ ಅವಕಾಶವನ್ನು ಕೊಡದೇ ನೀವು ನೆಮ್ಮದಿಯಿಂದ ಇರುವಿರಿ. ನಿಮ್ಮನ್ನು ನೀವು ಸುಧಾರಿಸಿಕೊಳ್ಳಬೇಕು ಎಂದು ಅನ್ನಿಸಬಹುದು. ನಾಯಕತ್ವದಿಂದ ನಿಮಗೆ ಸಾಕಾಗಲಿದೆ. ಸ್ಥಾನವನ್ನು ನೀವೇ ಬಿಡುವಿರಿ. ವರ್ಗಾವಣೆಯ ಕಿರಿಕಿರಿ ನಿಮ್ಮ ತಲೆಯಲ್ಲಿ ಇರಲಿದೆ.
ಸಿಂಹ: ನಿಮ್ಮ ಆಸೆಯನ್ನು ಪ್ರಕಟಪಡಿಸಲು ಹಿಂಜರಿಯಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ವರ್ತಿಸುವಿರಿ. ನಿಮಗೆ ಅನಾದರೂ ಸಿಗಲಿದ್ದು, ಬೇಸರವಾಗುವ ಸಾಧ್ಯತೆ ಇದೆ. ದ್ವೇಷವು ನಿಮ್ಮ ಜೀವನವನ್ನು ಮಾರ್ಗಭ್ರಷ್ಟ ಮಾಡಬಹುದು. ಧನಾತ್ಮಕ ಚಿಂತನೆಯಿಂದ ಉತ್ಸಾಹವೂ ಇರಲಿದೆ. ಧೈರ್ಯದ ಕೊರತೆಯು ಕಾಣಿಸುವುದು. ಮುಖಂಡರ ಜೊತೆ ನೀವು ಸಾಮಾಜಿಕ ಕಾರ್ಯಗಳ ಬಗ್ಗೆ ಚರ್ಚಿಸುವಿರಿ. ಭೂಮಿಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡಿನಿಂದ ಅನುಕೂಲವಾಗಲಿದೆ. ಕಲಾವಿದರಿಗೆ ಹೆಚ್ಚಿನ ಅವಕಾಶ ಹಾಗೂ ಪ್ರಶಂಸೆ ಲಭ್ಯ.
ಕನ್ಯಾ: ದಾಯಾದಿ ಕಲಹವು ತಾರಕಕ್ಕೆ ಹೋಗಲಿದೆ. ನಿಮಗೆ ಬೆಂಬಲವು ಕಡಿಮೆ ಆಗಲಿದೆ. ಕಛೇರಿಯಲ್ಲಿ ನಿಮ್ಮ ಕೆಲಸವು ಮಂದಗತಿಯಲ್ಲಿ ಸಾಗಲಿದ್ದು ಸಹೋದ್ಯೋಗಿಗಳಿಂದ ದೂರು ಸಿಗಬಹುದು. ಧಾರ್ಮಿಕ ಆಚರಣೆಗಳಲ್ಲಿ ನಿರಾಸಕ್ತಿ ಇರಲಿದೆ. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗಿವ ಸಂಭವಿದೆ. ಹಠದ ಸ್ವಭಾವವನ್ನು ಬಿಟ್ಟರೆ ಸಂತೋಷದ ಸಂಗತಿಗಳನ್ನು ನೀವು ಪಡೆಯುವಿರಿ. ನಿಮ್ಮ ಪ್ರಯತ್ನವು ಫಲಿಸುವ ತನಕ ಸಹನೆ ಅತ್ಯವಶ್ಯಕ. ಪುಣ್ಯಕ್ಷೇತ್ರಕ್ಕೆ ಕುಟುಂಬ ಜೊತೆ ಹೋಗಲಿದ್ದೀರಿ. ನಡೆದಾಡುವಾಗ ಜಾಗರೂಕತೆ ಇರಲಿ.