Kannada News Horoscope Daily horoscope based on numerology predictions of June 28 according to number of birth dates as per numerology in Kannada
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 28ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 28ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 28ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗ ಗೋಚರ ಆಗಲಿದೆ. ಬಹಳ ಸಮಯದಿಂದ ಕಾಡುತ್ತಿದ್ದ ದೈಹಿಕ ಬಾಧೆಗಳು ನಿವಾರಣೆ ಆಗುವುದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ. ಪೌರ ಕಾರ್ಮಿಕರು, ಸಲೂನ್ ನಡೆಸುತ್ತಿರುವವರು, ಕನ್ಸಲ್ಟೆನ್ಸಿ ಏಜೆನ್ಸಿ ನಡೆಸುತ್ತಿರುವವರು, ಕಮಿಷನ್ ವ್ಯವಹಾರ ಮಾಡುತ್ತಿರುವವರು ಇವರಿಗೆಲ್ಲ ಈ ದಿನ ಬಹಳ ಉತ್ತಮವಾದ ಬೆಳವಣಿಗೆ ಇದೆ. ಹಳದಿ ಬಟ್ಟೆಯನ್ನು ನಿಮ್ಮ ಬಳಿ ಇಟ್ಟುಕೊಂಡಲ್ಲಿ ಒಳ್ಳೆಯದು.
ಭವಿಷ್ಯದ ಅತಿ ಮುಖ್ಯವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದೀರಿ. ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿನ ಬೆಳವಣಿಗೆಯಿಂದ ಮನಸ್ಸಿಗೆ ಬೇಸರ ಉಂಟಾಗಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕವಾಗಿ ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಗ್ಯಾಜೆಟ್ ಅಥವಾ ಮೊಬೈಲ್ ಫೋನ್ ಅನ್ನು ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಇಎಂಐ ಮೂಲಕವಾಗಿ ಖರೀದಿಸುವಂಥ ಯೋಗ ಇದೆ. ಈ ದಿನ ಕೆಂಪು ಬಟ್ಟೆಯನ್ನು ಧರಿಸದಿರುವುದು ಕ್ಷೇಮ, ಶ್ರೇಯಸ್ಸು.
ವಾಹನಗಳ ಖರೀದಿಗಾಗಿ ಹಣಕಾಸು ಮತ್ತಿತರ ವಿವರಗಳನ್ನು ಕಲೆಹಾಕಲಿದ್ದೀರಿ. ಜಂಕ್ ಫುಡ್ ಗಳ ಸೇವನೆಯಿಂದ ಉಂಟಾಗುವ ಅನಾರೋಗ್ಯ ಸಮಸ್ಯೆಗೆ ಈ ದಿನ ನೀವು ಗುರಿ ಆಗಲಿದ್ದೀರಿ. ಇನ್ನು ತಿಂಡಿ, ಊಟ, ನಿದ್ರೆಯನ್ನು ಸರಿಯಾದ ಸಮಯಕ್ಕೆ ಮಾಡುವುದರ ಕಡೆಗೆ ಲಕ್ಷ್ಯ ನೀಡಿ. ನೀವು ಬರಲಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವ ಸಾಧ್ಯತೆಗಳಿವೆ. ಸಂಪೂರ್ಣವಾಗಿ ಬರುತ್ತದೆ ಅಂತಲ್ಲದಿದ್ದರೂ ಸ್ವಲ್ಪವಾದರೂ ದೊರೆಯಬಹುದು. ಭಾವನಾತ್ಮಕ ಸಂಗತಿಗಳನ್ನು ಸರಿಯಾಗಿ ನಿರ್ವಹಿಸಿ.
ನಿಮಗೆ ಸರಿ ಎನಿಸಿದ್ದನ್ನು ಖಂಡಿತವಾಗಿಯೂ ಈ ದಿನ ಅನುಸರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅದರಿಂದ ದೀರ್ಘಾವಧಿಯಲ್ಲಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸಂಸಾರದ ಅಥವಾ ವೈಯಕ್ತಿಕ ವಿಚಾರವನ್ನು ಯಾರ ಜತೆಗೆ ಹಂಚಿಕೊಳ್ಳುತ್ತಿದ್ದೀರಿ ಎಂಬ ಬಗ್ಗೆ ಜಾಗ್ರತೆಯಿಂದ ಇರಬೇಕಾಗುತ್ತದೆ. ನಿಮ್ಮ ಹೆಸರನ್ನು ಇತರರು ದುರುಪಯೋಗ ಮಾಡಿಕೊಳ್ಳಬಹುದು, ಆದ್ದರಿಂದ ಇದಕ್ಕೆ ಅವಕಾಶ ಆಗುವಂಥ ಸನ್ನಿವೇಶ ಸೃಷ್ಟಿ ಮಾಡಿಕೊಳ್ಳದಿರಿ.
ನೀವು ಕಂಡಿದ್ದು ನಿಜ ಎಂದುಕೊಂಡು ಅಭಿಪ್ರಾಯವನ್ನು ಹೇಳಲು ಮುಂದಾದರೆ ವೈಯಕ್ತಿಕವಾಗಿ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಪರಿಸ್ಥಿತಿಯನ್ನು ಅವಲೋಕಿಸಿ, ನಿಮ್ಮ ಅಭಿಪ್ರಾಯವನ್ನು ಹೇಳಿದರೆ ಉತ್ತಮ. ಬೇಕಾದ ಸ್ಥಳಕ್ಕೆ ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಪ್ರಭಾವಿಗಳ ಶಿಫಾರಸು ನಿಮ್ಮ ಪಾಲಿಗೆ ದೊರೆಯಲಿದೆ. ಕ್ರೀಡಾ ಕ್ಷೇತ್ರದಲ್ಲಿ ಇದ್ದು, ಪ್ರಾಯೋಜಕರಿಗಾಗಿ ಹುಡುಕಾಟ ನಡೆಸುತ್ತಿದ್ದಲ್ಲಿ ಅದು ದೊರೆಯುವ ಅವಕಾಶಗಳು ಹೆಚ್ಚಿದೆ. ನೀವು ತಲುಪಬೇಕಾದ ಸ್ಥಳಕ್ಕೆ ಸ್ವಲ್ಪ ಮುಂಚಿತವಾಗಿಯೇ ಇರುವುದು ಒಳ್ಳೆಯದು
ನಿಮ್ಮ ಮೇಲೆ ಕುಟುಂಬದಲ್ಲಿ, ಉದ್ಯೋಗ- ವೃತ್ತಿ ನಡೆಸುವಂಥ ಜಾಗದಲ್ಲಿ ಗೌರವ ಹೆಚ್ಚಾಗಲಿದೆ. ನೀವು ನೀಡಿದ ಸಲಹೆಗಳಂತೆ ನಡೆದುಕೊಂಡವರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ವೇದ ಪಂಡಿತರಿಗೆ, ಜ್ಯೋತಿಷಿಗಳಿಗೆ, ಪ್ರವಚನಕಾರರಿಗೆ ಸನ್ಮಾನಗಳು ಆಗುವಂಥ ಯೋಗ ಇದೆ. ವಿದೇಶಕ್ಕೆ ತೆರಳಬೇಕು ಎಂದು ಪ್ರಯತ್ನಿಸುತ್ತಿರುವವರಿಗೆ ಅಗತ್ಯ ನೆರವು ದೊರೆಯಲಿದ್ದು, ಹಣಕಾಸು ಸಮಸ್ಯೆಗಳು ಇದ್ದವರಿಗೆ ಅದು ನಿವಾರಣೆ ಮಾಡಿಕೊಳ್ಳಲು ಸೂಕ್ತ ಮಾರ್ಗೋಪಾಯಗಳು ದೊರೆಯಲಿವೆ.
ಮನೆಯಲ್ಲಿ ಹಿರಿಯರೊಂದಿಗೆ ಅಥವಾ ಕುಟುಂಬದ ಹಿರಿಯ ಸದಸ್ಯರ ಜತೆಗೆ ಹಣಕಾಸಿನ ವಿಚಾರಕ್ಕೆ ಭಿನ್ನಾಭಿಪ್ರಾಯಗಳು ತಲೆದೋರಬಹುದು. ಸಾಧ್ಯವಾದಷ್ಟೂ ಕುಟುಂಬದಲ್ಲಿ ಒಮ್ಮತದ ತೀರ್ಮಾನಕ್ಕೆ ಬರುವುದಕ್ಕೆ ಸಾಧ್ಯತೆ ಇದೆಯೇ ಎಂಬುದರ ಕಡೆಗೆ ಲಕ್ಷ್ಯವನ್ನು ನೀಡಿ. ಸರ್ಕಾರಿ ಯೋಜನೆಗಳ ಮೂಲಕ ಬರಬೇಕಾದ ಹಣ ತಡವಾಗಬಹುದು ಎಂಬ ಸೂಚನೆ ದೊರೆಯಲಿದೆ. ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚು ಹಣವನ್ನು ಮೀಸಲಿಡಬೇಕಾಗುತ್ತದೆ ಎಂಬ ಸುಳಿವು ದೊರೆಯಲಿದೆ.
ಈ ದಿನ ಮೋಹಕ್ಕೆ ಬಿದ್ದು, ಸ್ತ್ರೀಯರಿದ್ದಲ್ಲಿ ಪುರುಷರೆಡೆಗೆ ಹಾಗೂ ಪುರುಷರು ಸ್ತ್ರೀಯರೆಡೆಗೆ ಆಕರ್ಷಿತರಾಗಬಹುದು. ಆದರೆ ಸಾಮಾಜಿಕವಾಗಿ ಎಷ್ಟು ಸರಿ ಎಂಬುದನ್ನು ಪ್ರಶ್ನೆ ಕೇಳಿಕೊಳ್ಳುವುದು ಮುಖ್ಯವಾಗುತ್ತದೆ. ಏನನ್ನಾದರೂ ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ತೋರಿಸಿದಲ್ಲಿ ಸಮಸ್ಯೆಗೆ ಗುರಿ ಆಗುತ್ತೀರಿ. ಕಟ್ಟಡ ನಿರ್ಮಾಣ ಕಾರ್ಯ ನಡೆಯುವ ಕಡೆಗೆ ಕೆಲಸ ಮಾಡುತ್ತಿರುವವರು ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ಸಣ್ಣದಾದರೂ ಅಪಘಾತ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಂಚನೆಯಿಂದ ನಿರ್ವಹಿಸಿ.
ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಸ್ವಯಂ ವೈದ್ಯ ಮಾಡಿಕೊಂಡು, ಏನಾದರೂ ನಿರ್ಲಕ್ಷ್ಯ ಮಾಡಿದಲ್ಲಿ ಪರಿಸ್ಥಿತಿ ಬಿಗಡಾಯಿಸಬಹುದು. ಆದ್ದರಿಂದ ಸೂಕ್ತ ವೈದ್ಯರಲ್ಲಿ ಕೂಡಲೇ ಔಷಧೋಪಚಾರ ಮಾಡಿಕೊಳ್ಳುವುದು ಒಳಿತು. ಇತರರ ವೈಯಕ್ತಿಕ ವಿಚಾರದಲ್ಲಿ ಮೂಗು ತೂರಿಸಿದಲ್ಲಿ ಅವಮಾನಕ್ಕೆ ಗುರಿ ಆಗುತ್ತೀರಿ. ದಿಢೀರ್ ಎಂಬಂತೆ ಯಾರಾದರೂ ಪ್ರಯಾಣಕ್ಕೆ ಜತೆಗೆ ಬರುವಂತೆ ಕರೆದಲ್ಲಿ ಅನಿವಾರ್ಯ ಅಲ್ಲ ಅಂತಾದರೆ ನೀವು ಹೋಗದಿರುವುದು ಉತ್ತಮವಾಗುತ್ತದೆ.