AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಸಾಮರ್ಥ್ಯ ತೋರಿಸಲು ಹೋಗಬೇಡಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಸಾಮರ್ಥ್ಯ ತೋರಿಸಲು ಹೋಗಬೇಡಿ
ಇಂದಿನ ರಾಶಿಭವಿಷ್ಯImage Credit source: Getty Images
TV9 Web
| Updated By: Rakesh Nayak Manchi|

Updated on: Jun 28, 2023 | 12:30 AM

Share

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶಿವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:36 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:45 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ ಮಧ್ಯಾಹ್ನ 12:36ರ ವರೆಗೆ.

ಸಿಂಹ: ನಿಮ್ಮ ಅಂದಾಜನ್ನು‌ ಮೀರಿ ಹಣವು ಖರ್ಚಾಗಬಹುದು. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವಿಷಯದಲ್ಲಿ ಗಮನಕೊಟ್ಟು ನೀವು ಯಾವುದನ್ನೂ ಸರಿಯಾಗಿ ನಿರ್ವಹಿಸಲಾಗದೇ ಒದ್ದಾಡುವಿರಿ. ಎಲ್ಲರ ಜೊತೆಗಿದ್ದರೂ ನಿಮಗೆ ಒಂಟಿತನವು ಕಾಡಬಹುದು. ನಿಮ್ಮ‌ ಹಾವಭಾವಗಳನ್ನು ಯಾರಾದರೂ ಗಮನಿಸಿ‌ ಪ್ರತಿಕ್ರಯಿಸಬಹುದು. ವಿದ್ಯಾರ್ಥಿಗಳಿಂದ‌ ನಿಮಗೆ ಆಶ್ಚರ್ಯ ಇರಲಿದೆ. ನಿಮ್ಮ ಬಗೆಗಿನ‌ ವಿಚಾರವನ್ನು ನೀವು ನಿರ್ಲಕ್ಷ್ಯ ಮಾಡುವಿರಿ. ಅಸಾಧ್ಯವಾದುದನ್ನು ಸಾಧಿಸುವ ಹುಂಬುತನ‌ ಬೇಡ. ನಿಮ್ಮ ದಾರಿಯು ಸರಿ ಇದೆಯೇ ಎಂಬ ಯೋಚನೆಗೆ ಬಂದು‌ ಅನಂತರ ಮುಂದುವರಿಯಿರಿ.

ಕನ್ಯಾ: ಅನವಶ್ಯಕ ವಸ್ತುಗಳನ್ನು ಖರೀದಿ ಮಾಡಿದ್ದಕ್ಕೆ ಮನೆಯಲ್ಲಿ ಸಂಗಾತಿಯ ಜೊತೆ ಕಲಹವಾಗಲಿದೆ. ಸಹೋದರರ ನಡುವೆ ಕಲಹವಾಗುವ ಸಾಧ್ಯತೆ ಇದೆ. ನೀವಿಬ್ಬರೂ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಪುಣ್ಯಕ್ಷೇತ್ರ ಕುಟುಂಬ ಸಹಿತವಾಗಿ ಪ್ರಯಾಣ ಮಾಡುವಿರಿ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಬರುವ ತನಕ ತಾಳ್ಮೆಯಿಂದ ಕಾಯಬೇಕಾದೀತು. ನಿಮ್ಮಷ್ಟಕ್ಕೆ ನೀವು ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗಿ. ಸದ್ಯ ಯಾವುದೇ ಫಲಾಪೇಕ್ಷೆ ಬೇಡ. ನಿಮ್ಮನ್ನು ಇಷ್ಟಪಡುವವರ ಜೊತೆ ಹೆಚ್ಚು ಕಾಲ ಇರುವಿರಿ. ಸಮಯವನ್ನು ನೋಡಿ ಹೇಳಬೇಕಾದ ವಿಚಾರವನ್ನು ಹೇಳಿ. ಇಲ್ಲವಾದರೆ ನಿಮ್ಮ‌ ಮಾತು ಬೇರೆ ಪರಿಣಾಮವನ್ನು ಕೊಟ್ಟೀತು.

ತುಲಾ: ವಿದೇಶದಲ್ಲಿ ಇದ್ದರೆ ನಿಮಗೆ ಕೆಲವು ಅನುಕೂಲತೆಗಳು ಇರಲಿವೆ. ಸಾಧ್ಯವಾದಷ್ಟು ನಿಮ್ಮ‌ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿ. ಇಂದು ನೀವು ಮನೆಯಲ್ಲಿಯೇ ವಾಸ ಮಾಡಿ. ಅಧಿಕೃತ ಮಾಹಿತಿಯನ್ನು ಪಡೆದು ಮುಂದುವರಿಯುವುದು ಒಳ್ಳೆಯದು. ಇಂದು ನಿಮಗೆ ತುಂಬ ಕೆಲಸಗಳಿದ್ದರೂ ಮಾಡಲು ನಿಮಗೆ ಆದ್ಯತೆ ಎಂದು ಕೊಡಲು ಕಷ್ಟವಾದೀತು. ದಾಂಪತ್ಯದಲ್ಲಿ ನೀವು ಸುಖವನ್ನು ಅನುಭವಿಸುವಿರಿ. ಸಣ್ಣ ಪರಿಶ್ರಮಕ್ಕೂ ನಿಮಗೆ ಉತ್ತಮ ಫಲವಿರಲಿದೆ. ಸಂಗಾತಿಗೆ ಸಂತೋಷವನ್ನು ಕೊಡುವಿರಿ. ಯಾರದೋ ಮಾತಿಗೆ ನೀವು ಚಿಂತಿತರಾಗದೇ ನಿಮ್ಮ ಕೆಲಸದಲ್ಲಿ ಮಗ್ನರಾಗುವಿರಿ.

ವೃಶ್ಚಿಕ: ಆರೋಗ್ಯದ ರಕ್ಷಣೆಗೆ ಸಂಬಂಧಿಸಿದ ವಸ್ತುಗಳನ್ನು ನೀವು ಖರೀದಿಸುವಿರಿ. ರಾಜಕೀಯ ವ್ಯಕ್ತಿಗಳು ಒತ್ತಡದ ಮೇಲೆ ಅಭಿವೃದ್ಧಿಗೆ ಗಮನ ಕೊಡುವರು. ನಿಮ್ಮ ಸ್ನೇಹಿತನ ಜೊತೆ ದೂರ ಪ್ರಯಾಣ ಮಾಡುವಿರಿ. ಅನಗತ್ಯ ವಿಷಯವನ್ನು ಚರ್ಚಿಸಿ ಕಾಲಹರಣ ಮಾಡುವಿರಿ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹೋಗಬೇಡಿ. ಎಲ್ಲದರಲ್ಲಿಯೂ ಇಂದು ನೀವು ನಕಾರಾತ್ಮಕ ವಿಷಯವನ್ನು ಹುಡುಕುವಿರಿ. ಮಾರಾಟದ ಪ್ರತಿನಿಧಿಯಾಗಿ ನೀವು ಊರನ್ನು ಸುತ್ತಿ ಸುಸ್ತಾಗುವಿರಿ. ಸಿಗಬೇಕಾದವರು ಇಂದು ಸಿಗದೇ ಹೋಗುವರು. ನಿಮ್ಮ ಮಾತಿಗೆ ಸಮಜಾಯಿಷಿ ಕೊಡಲು ಹೋಗುವ ಅವಶ್ಯಕತೆ ಇಲ್ಲ.

-ಲೋಹಿತಶರ್ಮಾ

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್