Daily Horoscope 28 June: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಸಂಪತ್ತಿಗಾಗಿ ದುರ್ಮಾರ್ಗ ಹಿಡಿಯುವ ಸಾಧ್ಯತೆ ಇದೆ

ಇಂದಿನ (2023 ಜೂನ್​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Daily Horoscope 28 June: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಸಂಪತ್ತಿಗಾಗಿ ದುರ್ಮಾರ್ಗ ಹಿಡಿಯುವ ಸಾಧ್ಯತೆ ಇದೆ
ಇಂದಿನ ರಾಶಿಭವಿಷ್ಯImage Credit source: Getty Images
Follow us
TV9 Web
| Updated By: Rakesh Nayak Manchi

Updated on: Jun 28, 2023 | 12:01 AM

ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್​ 28) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದಶಮೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಶಿವ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 07 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:36 ರಿಂದ 02:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:45 ರಿಂದ 09:22ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ ಮಧ್ಯಾಹ್ನ 12:36ರ ವರೆಗೆ.

ಮೇಷ: ಧನವ್ಯವಹಾರವನ್ನು ಜಾಗರೂಕತೆಯಿಂದ ಮಾಡಿ. ವ್ಯಾಪರವು ಮಧ್ಯಮಫಲದಿಂದ ಇರಲಿದೆ. ಹೆಚ್ಚು ಪರಿಶ್ರಮದಿಂದ ನಿಮಗೆ ಆಯಾಸವಾದೀತು. ವಿಶ್ರಾಂತಿಯನ್ನು ಒಡೆದು ಮುಂದುವರಿಯುವುದು ಉತ್ತಮ. ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಖುಷಿಯಿಂದ ತೊಡಗಿಕೊಳ್ಳುವರು. ಎಲ್ಲವನ್ನೂ ನಿಮ್ಮ ಮೂಲಕವೇ ನಡೆಯಬೇಕು ಎಂಬ ಮಾನಸಿಕ ಸ್ಥಿತಿಯು ಒಳ್ಳೆಯದಲ್ಲ. ನಿಮ್ಮ ಜವಾಬ್ದಾರಿಯ‌ ಕೆಲಸಗಳು ಸರಿಯಾಗಿ ನಡೆತುತ್ತಿದೆಯೇ ಎಂಬುದನ್ನು ಗಮನಸಿ. ಸರ್ಕಾರಿ ಕೆಲಸವನ್ನು ಅಲ್ಲಿರುವ ಆಪ್ತರ ಮೂಲಕ ಮಾಡಿಸಿಕೊಳ್ಳುವಿರಿ. ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡಲಿದ್ದೀರಿ.

ವೃಷಭ: ಅಹಂಕಾರದಿಂದ ಕೂಡಿದ ಮನಸ್ಸಿನ ಜೊತೆ ಯಾರೂ ಬರುವುದಿಲ್ಲ. ನೀವು ಒಂಟಿಯಾಗುವಿರಿ. ಸರಿಯಾದ ವಿಚಾರವನ್ನು ತಿಳಿದು ಮಾತನಾಡುವುದು ಉತ್ತಮ. ಸ್ನೇಹಿತರನ್ನು ನೀವು ಕಳೆದುಕೊಳ್ಳುವಿರಿ. ಸುಖವಾಗಿರಬೇಕು ಎನ್ನುವ ಮನೋಭಾವವೇ ನಿಮ್ಮ ದೊಡ್ಡ ಶತ್ರುವಾಗಿ ನಿಮಗೆ ತೊಂದರೆಯನ್ನು ಕೊಡಬಹುದು. ಯಾವ ಕ್ಷಣವನ್ನೂ ನೀವು ಮನಸ್ಸು ಖಾಲಿಯಾಗದಂತೆ ನೋಡಿಕೊಳ್ಳಿ. ಆರ್ಥಿಕ ಸಹಾಯಕ್ಕೆ ಸಿಗುವವರು ನಿಮ್ಮಿಂದ ಮತ್ತೇನನ್ನೋ ಬಯಸುವರು. ನಿಮ್ಮ ಮಾತು ನೇರವಾಗಿರಲಿ. ಅರ್ಥವತ್ತಾಗಿರಲಿ. ಇಂದು ನಿಮ್ಮ ಆಪ್ತರನ್ನು ಕಡೆಗಣಿಸುವಿರಿ.

ಮಿಥುನ: ಸರ್ಕಾರಿ ಕೆಲಸದಲ್ಲಿ ನಿಮಗೆ ಇಂದು ಹಿನ್ನಡೆಯಾಗಲಿದೆ. ಸೋಲನ್ನು ಒಪ್ಪಿಕೊಳ್ಳಲು ನೀವು ಹಿಂದೇಟು ಹಾಕುವಿರಿ. ದುರಭ್ಯಾಸವನ್ನು ನೀವು ಮಿತ್ರರಿಂದ ಪಡೆಯುವಿರಿ. ಎಲ್ಲರೆದುರು ಮಾತನಾಡುವ ಸಂದರ್ಭ ಬರಲಿದ್ದು ನೀವು ಮುಜಗರಗೊಳ್ಳುವಿರಿ. ನಿಮ್ಮ ನಿಲುವುಗಳಿಂದ ಮನೆಯಲ್ಲಿ ಗೊಂದಲವಾಗಬಹುದು. ನಿಮ್ಮ ಮೇಲೆ ಸಿಟ್ಟಾಗುವ ಸಾಧ್ಯತೆಯೂ ಇದೆ. ಹೆಚ್ಚಿನ ಸಮಯವನ್ನು ಇಂದು ಪ್ರಯಾಣದಲ್ಲಿಯೇ ಕಳೆಯುವಿರಿ. ಅಸ್ವಾಭಾವಿಕ‌ ನಡೆಗಳಿಂದ ನಿಮ್ಮವರಿಗೆ ಅನುಮಾನ ಬರಬಹುದು. ತಂದೆಯ ಮಾತನ್ನು ನೀವು ಖಂಡಿಸುವಿರಿ.

ಕಟಕ: ನಿಮ್ಮ ನಡತೆಯನ್ನು ನೀವೇ ಗಮನಿಸಿಕೊಂಡು ಸರಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಾರ್ಯ ವೈಫಲ್ಯಕ್ಕೆ ಇನ್ನೊಬ್ಬರನ್ನು ದೂರುವುದು ಸರಿಯಲ್ಲ. ನಿಮ್ಮ ಮಾತು ಔಚಿತ್ಯಪೂರ್ಣವಾಗಿ ಇರಲಿ. ಕಳೆದು ಕೊಂಡ ಮಾನವನ್ನು ಮರಳಿ ಪಡೆಯಲಾಗದು. ನಿಮ್ಮ ವೃತ್ತಿಯ ಕ್ಷೇತ್ರದಲ್ಲಿ ನಿಮಗೆ ಸ್ವಲ್ಪ ಅಗೌರವವೂ ಇರಬಹುದು. ಆರ್ಥಿಕತೆಯನ್ನು ನೀವು ಬೆಳೆಸಿಕೊಳ್ಳಲು ಹೆಚ್ಚು ಶ್ರಮವು ಅವಶ್ಯಕ. ಸಹೋದ್ಯೋಗಿಯನ್ನು ನೀವು ಮಿತ್ರರನ್ನಾಗಿ ಪಡೆಯುವಿರಿ. ಅವಸರಕ್ಕೆ ಒಳಗಾಗಿ ಏನನ್ನಾದರೂ ಮಾಡಿಕೊಂಡೀರ, ಜಾಗರೂಕರಾಗಿರಿ. ಸರಳ ಜೀವನವನ್ನು ನೀವು ಇಷ್ಟಪಡುವಿರಿ.

ಸಿಂಹ: ನಿಮ್ಮ ಅಂದಾಜನ್ನು‌ ಮೀರಿ ಹಣವು ಖರ್ಚಾಗಬಹುದು. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ವಿಷಯದಲ್ಲಿ ಗಮನಕೊಟ್ಟು ನೀವು ಯಾವುದನ್ನೂ ಸರಿಯಾಗಿ ನಿರ್ವಹಿಸಲಾಗದೇ ಒದ್ದಾಡುವಿರಿ. ಎಲ್ಲರ ಜೊತೆಗಿದ್ದರೂ ನಿಮಗೆ ಒಂಟಿತನವು ಕಾಡಬಹುದು. ನಿಮ್ಮ‌ ಹಾವಭಾವಗಳನ್ನು ಯಾರಾದರೂ ಗಮನಿಸಿ‌ ಪ್ರತಿಕ್ರಯಿಸಬಹುದು. ವಿದ್ಯಾರ್ಥಿಗಳಿಂದ‌ ನಿಮಗೆ ಆಶ್ಚರ್ಯ ಇರಲಿದೆ. ನಿಮ್ಮ ಬಗೆಗಿನ‌ ವಿಚಾರವನ್ನು ನೀವು ನಿರ್ಲಕ್ಷ್ಯ ಮಾಡುವಿರಿ. ಅಸಾಧ್ಯವಾದುದನ್ನು ಸಾಧಿಸುವ ಹುಂಬುತನ‌ ಬೇಡ. ನಿಮ್ಮ ದಾರಿಯು ಸರಿ ಇದೆಯೇ ಎಂಬ ಯೋಚನೆಗೆ ಬಂದು‌ ಅನಂತರ ಮುಂದುವರಿಯಿರಿ.

ಕನ್ಯಾ: ಅನವಶ್ಯಕ ವಸ್ತುಗಳನ್ನು ಖರೀದಿ ಮಾಡಿದ್ದಕ್ಕೆ ಮನೆಯಲ್ಲಿ ಸಂಗಾತಿಯ ಜೊತೆ ಕಲಹವಾಗಲಿದೆ. ಸಹೋದರರ ನಡುವೆ ಕಲಹವಾಗುವ ಸಾಧ್ಯತೆ ಇದೆ. ನೀವಿಬ್ಬರೂ ಕುಳಿತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಪುಣ್ಯಕ್ಷೇತ್ರ ಕುಟುಂಬ ಸಹಿತವಾಗಿ ಪ್ರಯಾಣ ಮಾಡುವಿರಿ. ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಬರುವ ತನಕ ತಾಳ್ಮೆಯಿಂದ ಕಾಯಬೇಕಾದೀತು. ನಿಮ್ಮಷ್ಟಕ್ಕೆ ನೀವು ಸಾಮಾಜಿಕ ಕಾರ್ಯದಲ್ಲಿ ಮಗ್ನರಾಗಿ. ಸದ್ಯ ಯಾವುದೇ ಫಲಾಪೇಕ್ಷೆ ಬೇಡ. ನಿಮ್ಮನ್ನು ಇಷ್ಟಪಡುವವರ ಜೊತೆ ಹೆಚ್ಚು ಕಾಲ ಇರುವಿರಿ. ಸಮಯವನ್ನು ನೋಡಿ ಹೇಳಬೇಕಾದ ವಿಚಾರವನ್ನು ಹೇಳಿ. ಇಲ್ಲವಾದರೆ ನಿಮ್ಮ‌ ಮಾತು ಬೇರೆ ಪರಿಣಾಮವನ್ನು ಕೊಟ್ಟೀತು.

ತುಲಾ: ವಿದೇಶದಲ್ಲಿ ಇದ್ದರೆ ನಿಮಗೆ ಕೆಲವು ಅನುಕೂಲತೆಗಳು ಇರಲಿವೆ. ಸಾಧ್ಯವಾದಷ್ಟು ನಿಮ್ಮ‌ ಕೆಲಸವನ್ನು ಸದ್ದಿಲ್ಲದೇ ಮಾಡಿ ಮುಗಿಸಿ. ಇಂದು ನೀವು ಮನೆಯಲ್ಲಿಯೇ ವಾಸ ಮಾಡಿ. ಅಧಿಕೃತ ಮಾಹಿತಿಯನ್ನು ಪಡೆದು ಮುಂದುವರಿಯುವುದು ಒಳ್ಳೆಯದು. ಇಂದು ನಿಮಗೆ ತುಂಬ ಕೆಲಸಗಳಿದ್ದರೂ ಮಾಡಲು ನಿಮಗೆ ಆದ್ಯತೆ ಎಂದು ಕೊಡಲು ಕಷ್ಟವಾದೀತು. ದಾಂಪತ್ಯದಲ್ಲಿ ನೀವು ಸುಖವನ್ನು ಅನುಭವಿಸುವಿರಿ. ಸಣ್ಣ ಪರಿಶ್ರಮಕ್ಕೂ ನಿಮಗೆ ಉತ್ತಮ ಫಲವಿರಲಿದೆ. ಸಂಗಾತಿಗೆ ಸಂತೋಷವನ್ನು ಕೊಡುವಿರಿ. ಯಾರದೋ ಮಾತಿಗೆ ನೀವು ಚಿಂತಿತರಾಗದೇ ನಿಮ್ಮ ಕೆಲಸದಲ್ಲಿ ಮಗ್ನರಾಗುವಿರಿ.

ವೃಶ್ಚಿಕ: ಆರೋಗ್ಯದ ರಕ್ಷಣೆಗೆ ಸಂಬಂಧಿಸಿದ ವಸ್ತುಗಳನ್ನು ನೀವು ಖರೀದಿಸುವಿರಿ. ರಾಜಕೀಯ ವ್ಯಕ್ತಿಗಳು ಒತ್ತಡದ ಮೇಲೆ ಅಭಿವೃದ್ಧಿಗೆ ಗಮನ ಕೊಡುವರು. ನಿಮ್ಮ ಸ್ನೇಹಿತನ ಜೊತೆ ದೂರ ಪ್ರಯಾಣ ಮಾಡುವಿರಿ. ಅನಗತ್ಯ ವಿಷಯವನ್ನು ಚರ್ಚಿಸಿ ಕಾಲಹರಣ ಮಾಡುವಿರಿ. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಹೋಗಬೇಡಿ. ಎಲ್ಲದರಲ್ಲಿಯೂ ಇಂದು ನೀವು ನಕಾರಾತ್ಮಕ ವಿಷಯವನ್ನು ಹುಡುಕುವಿರಿ. ಮಾರಾಟದ ಪ್ರತಿನಿಧಿಯಾಗಿ ನೀವು ಊರನ್ನು ಸುತ್ತಿ ಸುಸ್ತಾಗುವಿರಿ. ಸಿಗಬೇಕಾದವರು ಇಂದು ಸಿಗದೇ ಹೋಗುವರು. ನಿಮ್ಮ ಮಾತಿಗೆ ಸಮಜಾಯಿಷಿ ಕೊಡಲು ಹೋಗುವ ಅವಶ್ಯಕತೆ ಇಲ್ಲ.

ಧನು: ಗಟ್ಟಿಯಾದ ನಿಯಮಗಳನ್ನು ಮಾಡದೇ ನಿಮ್ಮ ಉದ್ಯಮವನ್ನು ಸರಿದಾರಿಗೆ ತರುವುದು ಅಸಾಧ್ಯ. ‌ಈ ಕಾರಣಕ್ಕಾಗಿ ಕೆಲವರನ್ನು ಎದುರು ಹಾಕಿಕೊಳ್ಳಬೇಕಾದೀತು. ಕೃಷಿಯ ಚಟುವಟಿಕೆಯಲ್ಲಿ ಇಂದು ಆಸಕ್ತಿ ಕಡಿಮೆಯಾಗಿ ಮನೆಯಲ್ಲಿಯೇ ಇರುವಿರಿ. ಮೊಣಕಾಲಿನ ನೋವಿನಿಂದ ಸಂಕಟ ಪಡುವಿರಿ. ದಾಯಾದಿಗಳು ನಿಮ್ಮ ಅವನತಿಯನ್ನು ಕಾಯುತ್ತ ನಿಮ್ಮ ಹಿತಶತ್ರುಗಳಾಗಿರುವರು. ನಿಮ್ಮ ಉದ್ಯೋಗವನ್ನು ತಪ್ಪಿಸಲು ಶತ್ರುಗಳು ಪ್ರಯತ್ನಿಸುವರು. ನೀವು ಪ್ರಭಾವಿ ವ್ಯಕ್ತಿಗಳ ಮೂಲಕ ಗಟ್ಟಿ ಮಾಡಿಕೊಳ್ಳುವುದು ಉತ್ತಮ.

ಮಕರ: ಇಂದು‌ ನೀವು ಸಣ್ಣ ವಿಚಾರವೆಂದು ಕಡೆಗಣಿಸಿದ್ದು ದೊಡ್ಡದಾಗಬಹುದು. ಸರಳವಿಧಾನವನ್ನು ಸಂಕೀರ್ಣ ಮಾಡಿಕೊಳ್ಳುವಿರಿ. ಇಂದಿನ ಹಣದ ಅವಶ್ಯಕತೆಯನ್ನು ಸಹೋದರನ ಮೂಲಕ ಪೂರೈಸಿಕೊಳ್ಳುವಿರಿ. ಬಳಕೆಯಾದ ವಾಹನವನ್ನು ನೀವು ಖರೀದಿಸುವ ಮನಸ್ಸನ್ನು ಮಾಡುವಿರಿ. ಆಪ್ತರು ಕೊಡಬೇಕಾದ ಹಣವನ್ನು ಕೊಡಲು ಸತಾಯಿಸಬಹುದು. ಆಸ್ತಿಯ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಬೇಕಾದೀತು. ಸರ್ಕಾರಿ ಕೆಲಸಗಳನ್ನು ಹಣದ ಮೂಲಕ ಬೇಗ ಮಾಡಿಸಿಕೊಳ್ಳುವಿರಿ. ಮಾತುಗಾರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಅವರು ಅವಕಾಶಗಳನ್ನು ಹುಡುಕುವರು. ನಿಮ್ಮವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು.

ಕುಂಭ: ಇಂದು ನೀವು ಕೆಲಸದಿಂದ ವಿಶ್ರಾಂತಿ ಪಡೆಯುವಿರಿ. ಮಕ್ಕಳು ನಿಮ್ಮ ಕೆಲಸಗಳನ್ನು ಮಾಡಿಕೊಡುವರು. ನಿಮ್ಮ ತಪ್ಪು ತಿಳಿವಳಿಕೆಯನ್ನು ನೀವು ಸರಿಮಾಡಿಕೊಳ್ಳುವಿರಿ. ನಿಮ್ಮ ವಿವಾಹವನ್ನು ಮಾಡಿಸಲು ಬಂಧುಗಳು ಮಾಡಿದ ಪ್ರಯತ್ನವು ನಿಷ್ಪ್ರಯೋಜಕಚಾದೀತು. ರಾಜಕಾರಿಣದಲ್ಲಿ ನಿಮ್ಮ ಪ್ರಭಾವ ಕಡಿಮೆಯಾದೀತು. ನಿಮ್ಮನ್ನು ಬೆಂಬಲಿಸುವರು ಕಡಿಮೆಯಾದರು. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು. ಸಂಪತ್ತಿಗಾಗಿ ದುರ್ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ. ಎಷ್ಟೋ ವಿಚಾರಗಳಿಗೆ ನೀವು ನಕಾರಾತ್ಮಕ ಪ್ರತಿಕ್ರಿಯೆ ನೀಡುವಿರಿ.

ಮೀನ: ನಿಮ್ಮ ಯೋಜನೆಗೆ ಹೊಂದಿಕೆಯಾಗುವಂತಹ ವ್ಯಕ್ತಿಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚಿನ ಚರ್ಚೆಗಳನ್ನು ಮಾಡುವಿರಿ. ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವರು. ನಿಮಗೆ ಕೊಟ್ಟ ಅಧಿಕಾರವನ್ನು ಸದುಪಯೋಗಿ ಮಾಡಿಕೊಂಡು ಎಲ್ಲರ ಪ್ರೀತಿಗೆ ಪಾತ್ರರಾಗಿ. ಸಿಟ್ಟುಗೊಳ್ಳದೇ ತಾಳ್ಮೆಯಿಂದ ಕಾರ್ಯವನ್ನು ಸಾಧಿಸಿ. ಅನೇಕ ದಿನಗಳಿಂದ ಮಾಡಬೇಕು ಎಂದುಕೊಂಡ ಕೆಲಸವನ್ನು ನೀವು ಆರಂಭಿಸುವಿರಿ. ದಾಂಪತ್ಯದಲ್ಲಿ ಸುಖವಾಗಿರಲು ಎಲ್ಲಿಗಾದರೂ ಹೋಗಿಬರುವುದು ಉತ್ತಮ.‌ ಹೊಸಪ್ರದೇಶದಿಂದ ನಿಮಗೆ ಉತ್ಸಾಹ ಬರಲಿದೆ.

-ಲೋಹಿತಶರ್ಮಾ (ವಾಟ್ಸ್​ಆ್ಯಪ್- 8762924271)

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ