AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಹವ್ವೂರ್ ರಾಣಾ ಪೌರತ್ವ ರದ್ದು, ಪ್ರಧಾನಿ ಕಾರ್ನಿ ಭಾರತ ಭೇಟಿಗೂ ಮುನ್ನ ಕೆನಡಾ ಸರ್ಕಾರದಿಂದ ಪ್ರಮುಖ ನಿರ್ಧಾರ

ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಎರಡು ದಿನಗಳ ನಂತರ ಫೆಬ್ರವರಿ 26 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅವರ ಭೇಟಿಗೂ ಮುನ್ನ, ಕೆನಡಾ ಸರ್ಕಾರ ತಹಾವ್ವೂರ್ ರಾಣಾ ವಿರುದ್ಧ ಮಹತ್ವದ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ತಹಾವೂರ್ ಹುಸೇನ್ ರಾಣಾ ಅವರ ಕೆನಡಾದ ಪೌರತ್ವವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಕೆನಡಾ ಸರ್ಕಾರ ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ತಹವ್ವೂರ್ ರಾಣಾ ಪೌರತ್ವ ರದ್ದು, ಪ್ರಧಾನಿ ಕಾರ್ನಿ ಭಾರತ ಭೇಟಿಗೂ ಮುನ್ನ ಕೆನಡಾ ಸರ್ಕಾರದಿಂದ ಪ್ರಮುಖ ನಿರ್ಧಾರ
ತಹವ್ವೂರ್ ರಾಣಾ Image Credit source: Newsbytes
ನಯನಾ ರಾಜೀವ್
|

Updated on: Feb 24, 2026 | 11:58 AM

Share

ನವದೆಹಲಿ, ಫೆಬ್ರವರಿ 24: 2008ರ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾ(Tahawwur Rana)ನ ಪೌರತ್ವವನ್ನು ರದ್ದುಗೊಳಿಸುವ ನಿರ್ಧಾರವನ್ನು ಕೆನಡಾ ಸರ್ಕಾರ ತೆಗೆದುಕೊಂಡಿದೆ. ರಾಣಾ ತಮ್ಮ ಪೌರತ್ವ ಅರ್ಜಿಯಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಕೆನಡಾ ಪ್ರಧಾನಿ ಮಾರ್ಕ್​ ಕಾರ್ನಿ ಭಾರತ ಭೇಟಿಗೂ ಮುನ್ನ ಕೆನಡಾ ಸರ್ಕಾರ ಈ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದೆ.

ಭಾರತ ಭೇಟಿಗೆ ಮುನ್ನ ಕೆನಡಾ ಸರ್ಕಾರ ಒಂದು ಪ್ರಮುಖ ಹೆಜ್ಜೆ ಇಟ್ಟಿದೆ. ಪಾಕಿಸ್ತಾನ ಮೂಲದ ಉದ್ಯಮಿ ತಹಾವ್ವೂರ್ ರಾಣಾ ಅವರ ಕೆನಡಾ ಪೌರತ್ವವನ್ನು ರದ್ದುಗೊಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ರಾಣಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

64 ವರ್ಷದ ರಾಣಾ 1997 ರಲ್ಲಿ ಕೆನಡಾಕ್ಕೆ ವಲಸೆ ಬಂದು 2001 ರಲ್ಲಿ ಕೆನಡಾದ ಪೌರತ್ವವನ್ನು ಪಡೆದಿದ್ದ. ಈತ 26/11 ದಾಳಿಯ ಮಾಸ್ಟರ್ ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅವರ ಆಪ್ತ ಸಹಚರ ಎಂದು ಹೇಳಲಾಗಿದೆ. ಆತನನ್ನು ಏಪ್ರಿಲ್ 2025 ರಲ್ಲಿ ಅಮೆರಿಕದಿಂದ ಭಾರತಕ್ಕೆ ಹಸ್ತಾಂತರಿಸಲಾಯಿತು. ನವದೆಹಲಿಗೆ ಆಗಮಿಸಿದ ನಂತರ, ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.

ಕೆನಡಾದ ವಲಸೆ ಇಲಾಖೆಯು ರಾಣಾನ ಪೌರತ್ವವನ್ನು ರದ್ದುಗೊಳಿಸಲಾಗುತ್ತಿರುವುದು ಭಯೋತ್ಪಾದನಾ ಆರೋಪಗಳಿಂದಲ್ಲ, ಬದಲಾಗಿ ಅವರು ಸುಳ್ಳು ಮಾಹಿತಿ ನೀಡಿದ್ದರಿಂದ ಎಂದು ಸ್ಪಷ್ಟಪಡಿಸಿದೆ. ಇಲಾಖೆಯ ಪ್ರಕಾರ, ರಾಣಾ ತಮ್ಮ ಅರ್ಜಿಯಲ್ಲಿ ಸುಳ್ಳು ಹೇಳಿದ್ದಾರೆ. ಅವರು ಒಟ್ಟಾವಾ ಮತ್ತು ಟೊರೊಂಟೊದಲ್ಲಿ ನಾಲ್ಕು ವರ್ಷಗಳ ಕಾಲ ವಾಸಿಸುತ್ತಿದ್ದರು ಮತ್ತು ಕೇವಲ ಆರು ದಿನಗಳ ಕಾಲ ದೇಶದಿಂದ ಹೊರಗಿದ್ದೆ ಎಂದು ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಭಾರತಕ್ಕೆ ಬರಲಿರುವ ಉಗ್ರ ತಹವ್ವೂರ್ ರಾಣಾ; ಮುಂಬೈ ದಾಳಿಯಲ್ಲಿ ಈತನ ಪಾತ್ರವೇನು?

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ನಡೆಸಿದ ತನಿಖೆಯಲ್ಲಿ ರಾಣಾ ಆ ಅವಧಿಯಲ್ಲಿ ಹೆಚ್ಚಿನ ಸಮಯ ಚಿಕಾಗೋದಲ್ಲಿದ್ದರು ಎಂದು ತಿಳಿದುಬಂದಿದೆ. ಆತ ಅಲ್ಲಿ ಹಲವಾರು ವ್ಯವಹಾರಗಳು ಮತ್ತು ಆಸ್ತಿಗಳನ್ನು ಹೊಂದಿದ್ದರು. ಈ ಸುಳ್ಳು ಮಾಹಿತಿಯು ಆತ ಅರ್ಹರಲ್ಲದಿದ್ದರೂ ಪೌರತ್ವವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಇಲಾಖೆ ಹೇಳಿದೆ.

ಪೌರತ್ವವನ್ನು ರದ್ದುಗೊಳಿಸುವುದು ಸುಲಭದ ನಿರ್ಧಾರವಲ್ಲ, ಆದರೆ ಕಾನೂನಿನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ ಎಂದು ವಲಸೆ ಇಲಾಖೆ ಹೇಳಿದೆ. ಈಗ, ರಾಣಾ ಮೋಸದಿಂದ ಪೌರತ್ವವನ್ನು ಪಡೆದಿದ್ದಾರೆಯೇ ಎಂದು ಫೆಡರಲ್ ನ್ಯಾಯಾಲಯ ನಿರ್ಧರಿಸುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
Live: ಧಾರವಾಡದಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ಬೆಂಗಳೂರು: ಸೈರನ್​ನಿಂದ ತಪ್ಪಿತು ಕೆನರಾ ಬ್ಯಾಂಕ್ ಕಳ್ಳತನ ಯತ್ನ!
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ಎಡವಟ್ಟು?
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಕೃತಿ ಸನೋನ್ ಮನಗೆದ್ದ ನಾಲ್ಕು ಸಾವಿರ ಕೋಟಿ ಒಡೆಯ; ಧೋನಿಗೆ ಅತ್ಯಾಪ್ತ
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!
ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ!
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ಇಂದು ಈ ರಾಶಿಯವರ ವ್ಯಾಪಾರದಲ್ಲಿ ಯಶಸ್ಸು
ವಿಂಡೀಸ್ ದಾಂಡಿಗರ ಆರ್ಭಟ... 6 ರನ್​ಗಳಿಂದ ವಿಶ್ವ ದಾಖಲೆ ಮಿಸ್
ವಿಂಡೀಸ್ ದಾಂಡಿಗರ ಆರ್ಭಟ... 6 ರನ್​ಗಳಿಂದ ವಿಶ್ವ ದಾಖಲೆ ಮಿಸ್
ಶಿವಮೊಗ್ಗ: ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಭೀಕರ ಕೊಲೆ
ಶಿವಮೊಗ್ಗ: ಎಸ್​ಎಸ್​ಎಲ್​ಸಿ ವಿದ್ಯಾರ್ಥಿಯ ಭೀಕರ ಕೊಲೆ
ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಸಂತಸ
ರಾಯರ ಸನ್ನಿಧಿಯಲ್ಲಿ ತಂದೆಗೆ ಗೌರವ ಡಾಕ್ಟರೇಟ್: ಯುವ ರಾಜ್​ಕುಮಾರ್ ಸಂತಸ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ಜ್ಯುವೆಲರಿ ಶಾಪ್‌ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ